ಬೊಗಳೆ ರಗಳೆ

header ads

About

ಇದು ಕರುನಾಟಕವೆಂಬ ಸಾಮ್ರಾಜ್ಯದ ರಾಜಧಾನಿ ಬೊಗಳೂರಿನಿಂದ ಪ್ರಕಟವಾಗುತ್ತಿರುವ ಏಕೈಕ ವರದ್ದಿ-ಪತ್ರಿಕೆಯಾಗಿದೆ. ರಾಜ್ಯದ ನಾನಾ ಮೂಲೆಗಳಲ್ಲಿರುವ ಹಲವು ಬ್ಯುರೋಗಳಲ್ಲಿ ಈ ಬೊಗಳೆ-ರಗಳೆ ಪತ್ರಿಕೆಯ ಕಾರಸ್ಥಾನವಿದೆ. ಹೀಗಾಗಿ ಒಂದೊಂದು ಬ್ಯುರೋಗಳ ಸಿಬ್ಬಂದಿ ಒಮ್ಮೊಮ್ಮೆ ಎರಡೆರಡು ಬಾರಿಯೂ ವರದ್ದಿ ತಂದು ಸುರುವಬಹುದಾಗಿದೆ. ಪ್ರತಿ ಬ್ಯುರೋ ಕೂಡ ಏಕಸದಸ್ಯ ಬ್ಯುರೋ ಆಗಿದ್ದು, ಬೊಗಳೆ-ರಗಳೆ ಮಾಧ್ಯಮ ಕಂಪನಿಯೇ ಏಕಸದಸ್ಯ ಬ್ಯುರೋಗಳನ್ನೊಳಗೊಂಡ ಏಕಸದಸ್ಯ ಬ್ಯುರೋ ಆಗಿದೆ.

ವಿಜಯ ಕರ್ನಾಟಕ, ಪ್ರಜಾವಾಣಿ, ಕನ್ನಡಪ್ರಭ, ವಿಜಯವಾಣಿ, ವಿಶ್ವವಾಣಿ ಮುಂತಾದ ಪತ್ರಿಕೆಗಳೊಂದಿಗೆ ಪೈಪೋಟಿಗಿಳಿದಿರುವ ಈ ಏಕಸದಸ್ಯ ಬ್ಯುರೋ, ಜಗತ್ತಿನಾದ್ಯಂತ ಏಕೈಕ ಓದುಗರನ್ನು ಹೊಂದಿದ ಏಕೈಕ ಪತ್ರಿಕೆ ಎಂಬ ಅಗ್ಗಳಿಕೆಗೂ ಕಾರಣವಾಗಿದೆ.

ಇಲ್ಲಿ ಪ್ರತಿ ದಿನವೂ ಅಸತ್ಯದ ಅನ್ವೇಷಣೆ ಮಾಡುತ್ತಾ ವರದ್ದಿ ತಂದು ಸುರುವಲು ಶ್ರಮಿಸುತ್ತಿರುವವರು ನೂರಾರು ಪತ್ರಿಕೆಗಳಲ್ಲಿ ಕೆಲಸ ಮಾಡಿ ಅನುಭವವಿರುವ ಅಸತ್ಯಾನ್ವೇಷಿ. ಕ್ಯೂಟಾಗಿ ಅನ್ವೇಷಿ ಎಂಬ ಮೂರ್ನಾಮದಿಂದ ಕರೆಯಲಾಗುತ್ತದೆ. ಅನ್ವೇಷಿಯೇ ಈ ಬೊಗಳೆ ಬ್ಯುರೋದ ಪ್ರಕಾಶಕ, ಸಂಪಾದಕ, ವರದಿಗಾರ, ಓದುಗ, ಪತ್ರಿಕಾ ವಿತರಕ ಜೊತೆಗೆ ಇದೇ ಬ್ಯುರೋದಲ್ಲಿ ಸಿಇಒ, ಸಿಒಒ, ಎಂಡಿ, ಡೀ... ಮುಂತಾದ ಹಲವು ಹುದ್ದೆಗಳನ್ನು ಏಕಕಾಲದಲ್ಲಿ ನಿಭಾಯಿಸಬಲ್ಲ ಅಸಮರ್ಥ ಸುದ್ದಿಜೀವಿ.

ಬನ್ನಿ, ಬಾಯಗಲಿಸಿ, ಹಲ್ಲು ತೋರಿಸಿ, ಖುಷಿಯಾದರೆ ಅದನ್ನೂ ಹಂಚಿಕೊಳ್ಳಿ.

ಎಚ್ಚರಿಕೆ: ಇದು ಕೇವಲ ಮನರಂಜನೆಗಾಗಿ ಇರುವ ಜಾಲತಾಣ. A Satire Website. ಇದನ್ನು ಓದಿ ಯಾರಾದರೂ ಕಣ್ಣೀರು ಸುರಿಸಿದರೆ, ತಮ್ಮತಮ್ಮೊಳಗೇ ನಕ್ಕರೆ, ಕೆರಳಿದರೆ, ಸೊರಗಿದರೆ ನಾವು ಜವಾಬ್ದಾರರಲ್ಲ.
-ಸದಾ ಅಸತ್ಯದ ಅನ್ವೇಷಣೆಯಲ್ಲಿ....

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು