[ಸೋಂಕಿತರ ಬ್ಯುರೋದಿಂದ]
ಬೊಗಳೂರು: 'ಮೇಡ್ ಇನ್ ಚೀನಾ' ಕೊರೊನಾ ವೈರಸ್ ಜಗತ್ತಿನಾದ್ಯಂತ ಹಾರಾಡಿ, ಹರಡಿ ಬೊಗಳೂರಿಗೆ ಕಾಲಿಟ್ಟಿದ್ದು ಇತಿಹಾಸಕ್ಕೆ ಸೇರಿದೆ. ಆದರೆ, ಇಲ್ಲಿನ ಜನ ಕೊರೊನಾ ರಣಕೇಕೆಗೆ ಸ್ಪಂದಿಸಿದ ವಿಚಾರ ಮಾತ್ರ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ, ಪೊಲೀಸರು ಕೂಡ ಬಿದ್ದು ಬಿದ್ದು ನಕ್ಕಿದ್ದಾರೆ ಮತ್ತು ಅಪಹಾಸ್ಯಕ್ಕೂ ಕಾರಣವಾಗಿದೆ. ಆದರೆ, ಕೊರೊನಾ ವೈರಸ್ ನಿಮ್ಹಾನ್ಸ್‌ಗೂ ವಕ್ಕರಿಸಿದೆ ಎಂಬ ವರದ್ದಿಯ ಹಿಂದೆ ಬಿದ್ದ ಬೊಗಳೆ ಬ್ಯುರೋ, ಇದರ ಹಿಂದಿರುವ ಕಾರಣವನ್ನು ಪತ್ತೆ ಮಾಡಿ ರಣಕೇಕೆ ಹಾಕಿದೆ.ಬೊಗಳೂರಿನೆಲ್ಲೆಡೆ ಸಾಮಾನ್ಯ ದಿನಗಳಲ್ಲಿ ಸರಿಯಾಗಿಯೇ ಇದ್ದ ಜನತೆ, ಲಾಕ್‌ಡೌನ್ ಆದಾಗ ಮಾತ್ರವಲ್ಲ, ಸೀಲ್‌ಡೌನ್ ಆದಾಗ ತಮ್ಮ ಚಟುವಟಿಕೆಯ ವೇಗವನ್ನು ಹೆಚ್ಚಿಸಿಕೊಂಡಿದ್ದರು. ಬೊಗಳೂರಿನ ಸೋಂಕುರಾಯನಪುರದಲ್ಲಂತೂ ಸೀಲ್‌ಡೌನ್ ಮಾಡಿದ್ದರೂ, ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ ಈ ಜನರು ರಣಕೇಕೆ ಹಾಕಿದ್ದರು. ಸೀಲ್‌ಡೌನ್ ಮಾಡಿದ್ದ ಕೋಟೆ ಕೊತ್ತಳಗಳನ್ನೆಲ್ಲಾ ಸೀಳು ಮಾಡಿದ್ದರು. ಇದನ್ನು ಕಂಡು ಆಕ್ರೋಶಗೊಂಡ ಕೊರೊನಾ ವೈರಸ್ ಕೂಡ, ತನ್ನ ರಣಕೇಕೆಯನ್ನು ಹೆಚ್ಚಿಸಿಕೊಂಡಿತು. ಯಾರನ್ನೂ ಬಿಡದೆ ಬಹುತೇಕರನ್ನು ಹಗ್ ಮಾಡಿ, ಕಿಸ್ ಮಾಡಿ ಕಳುಹಿಸಿತು.
ಸೋಂಕುರಾಯನ ಪುರದ ಕಾರ್ಪೊರೇಟರನ್ನೇ ಹಗ್ ಮಾಡಿದ ಕೊರೊನಾ, ಆತ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿತು. ಆದರೆ ಈ ಸಂದರ್ಭದಲ್ಲೂ ಕೊರೊನಾಗೆ ಸೆಡ್ಡು ಹೊಡೆದ ಈ ವಾರ್ಡ್‌ನ ಜನರು ತಮ್ಮ ನಾಯಕನನ್ನು ಯುದ್ಧಕ್ಕೆ ಕಳುಹಿಸುವ ಮಾದರಿಯಲ್ಲಿ ಅಂತರ ಕಾಯ್ದುಕೊಳ್ಳದೆ, ರಣಕೇಕೆ ಹಾಕುತ್ತಾ, ಆರತಿ ಎತ್ತಿ, ಮೆರವಣಿಗೆಯಲ್ಲೇ ಕಳುಹಿಸಿಕೊಟ್ಟಿದ್ದರು. ಈ ಸಂದರ್ಭ ಈ ಜನರು ಹಾಗೂ ಕೊರೊನಾ ವೈರಸ್ ಮಧ್ಯೆ ಭೀಕರ ಯುದ್ಧ ನಡೆದು, ಹಲವರು ಕೋವಿಡ್-19 ಮೆತ್ತಿಕೊಂಡು ಆಸ್ಪತ್ರೆ ಸೇರಿದ್ದರೆ, ಇನ್ನು ಕೆಲವರು ಮನೆಯೊಳಗೇ ಅಡಗಿ ಕುಳಿತಿದ್ದರು.
ಸೀಲ್‌ಡೌನ್ ಮಾಡಲಾದ ಪ್ರದೇಶಗಳಲ್ಲಿ ಮಕ್ಕಳು, ಮಹಿಳೆಯರೆನ್ನದೆ ಕಾಂಪೌಂಡ್ ಹಾರಿಯೂ ಹೊರ ಪ್ರದೇಶಗಳಿಗೆ ಹೋಗಿ, ಊರೆಲ್ಲಾ ಆರಾಮವಾಗಿ ಪಾರ್ಕ್, ಶಾಪಿಂಗ್ ಅಂತ ಸುತ್ತಾಡಿದ್ದರು. ಆದರೆ ಈ ಕೊರೊನಾ ವೈರಸ್ ಮಾತ್ರ ವೇಷ ಮರೆಸಿಕೊಂಡು, ಇವರ ಜೊತೆಗೂ ಸುತ್ತಾಡಲಾರಂಭಿಸಿತ್ತು. ಕಾಂಪೌಂಡ್ ಹಾರಿ ಸೀರೆ, ಡ್ರೆಸ್ ಖರೀದಿಗೆ, ಪಾನಿಪುರಿ-ಗೋಬಿ ಮಂಚೂರಿ ತಿನ್ನಲು, ಶಾಪಿಂಗ್ ಮಾಲುಗಳಿಗೆ ತೆರಳಿದ್ದ ಈ ಮಂದಿ, ತಮಗರಿವಿಲ್ಲದಂತೆಯೇ ಕೋವಿಡ್ ಪ್ರಸಾದವನ್ನೂ ಹಂಚಿಬಿಟ್ಟಿದ್ದರು.
ಲಾಕ್‌ಡೌನ್ ಇಲ್ಲದಿರುವ ಅವಧಿಯಲ್ಲೇ ಗರಿಷ್ಠ ಓಡಾಟ, ಸುತ್ತಾಟ, ತಿನ್ನಾಟ, ಕಿತ್ತಾಟ, ಊಟ-ಆಟದಲ್ಲಿ ತೊಡಗಿದ್ದ ಇಂಥಾ ಜನರ ಪರಿಸ್ಥಿತಿ ಕಂಡು ಇದೀಗ ಕಳವಳಗೊಂಡು, ಗೊಂದಲಕ್ಕೀಡಾಗಿ, ಏನು ಮಾಡಬೇಕೆಂದೆಲ್ಲಾ ತಿಳಿಯದೆ ಕೊರೊನಾ ವೈರಸ್, ಕೊನೆಗೆ ಮಾನಸಿಕ ಅಸ್ವಸ್ಥಗೊಂಡು, ಖಿನ್ನತೆಯಿಂದ ಬೊಗಳೂರಿನ ಪ್ರಸಿದ್ಧ ಮಾನಸಿಕ ರೋಗ ಆಸ್ಪತ್ರೆಯಾಗಿರುವ ನಿಮ್ಹಾನ್ಸ್‌ಗೆ ಸ್ವಯಂಪ್ರೇರಣೆಯಿಂದ ದಾಖಲಾಗಿದೆ ಎಂದು ಬೊಗಳೆಯ ಏಕಸದಸ್ಯ ಬ್ಯುರೋದ ಮುಖ್ಯಸ್ಥ ಅನ್ವೇಷಿ ನೇತೃತ್ವದ ರದ್ದಿಗಾರರ ತಂಡವು ಪತ್ತೆ ಹಚ್ಚಿದೆ.
1 ಕಾಮೆಂಟ್‌ಗಳು
Casinos Near Harrah's Casino & Racetrack - Mapyro
ಪ್ರತ್ಯುತ್ತರಅಳಿಸಿ› harrahs-casino › find-a-ne › harrahs-casino › find-a-ne Best Casinos Near Harrah's Casino & Racetrack in Chester, PA near Harrah's Casino & 통영 출장샵 Racetrack, 청주 출장샵 Chester, PA 영주 출장마사지 Use our map to find all of 경상남도 출장마사지 the 대전광역 출장안마 casinos, hotel and RV parking
ಏನಾದ್ರೂ ಹೇಳ್ರಪಾ :-D