ಬೊಗಳೆ ರಗಳೆ

header ads

ಸೂಪಿನೊಳಗೆ ಬಿದ್ದು ಈಜಾಡಿದ ಮಂತ್ರಿ ಕೇಸು ದಾಖರ್!


[ಬೊಗಳೂರು ವೈರಾಣು ಬ್ಯುರೋದಿಂದ]
ಬೊಗಳೂರು: ಕೊರೊನಾ ವೈರಸ್ ವ್ಯಾಪಕವಾಗಿ ವ್ಯಾಪಿಸುತ್ತಿರುವುದರ ಪರಿಣಾಮವಾಗಿ ಕರ್ನಾಟಕದ ಮಂತ್ರಿ, ಮಾಗಧ, ಶಾಸಕರೆಲ್ಲ ತಮ್ಮಿಂದ ಮಾಡುವ ಕೆಲಸ ಏನೂ ಇಲ್ಲ ಎಂಬ ಕಾರಣಕ್ಕಾಗಿ ವಿಭಿನ್ನವಾದ, ವಿಶಿಷ್ಟವಾದ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ, ಮನೆಯೊಳಗೇ ಬಂಧಿಯಾಗಿಬಿಟ್ಟಿರುವ ಜನರನ್ನು ರಂಜಿಸಲು ಹೊರಟಿದ್ದಾರೆ.

ಅವರಲ್ಲೊಬ್ಬರು ಈಗ ಸೂಪ್ ಮಾಡಿ, ಅದರೊಳಗೆ ಧುಮುಕಿ ಈಜಾಡುತ್ತಾ, ವೈರಾಣು ಅವಧಿಯಲ್ಲಿ ವೈರಲ್ ಆಗಿಬಿಟ್ಟಿದ್ದಾರೆ. ಈ ಕುರಿತು ವರದ್ದಿ ಮಾಡಿರುವ ನಮ್ಮ ಪ್ರತಿಸ್ಫರ್ಧಿ ಪತ್ರಿಕೆಯು ಕೆಲವೊಂದು ಅಸತ್ಯಗಳನ್ನು ಬಚ್ಚಿಟ್ಟಿರುವುದಾಗಿ ನಮ್ಮ ಸೂಪ್ ಬಾತ್-ಮೀದಾರರು ವರದ್ದಿ ತಂದು ಸುರುವಿದ್ದಾರೆ.

ಈ ಕುರಿತು, ಬೊಗಳೂರು ಅಸತ್ಯಾನ್ವೇಷಿಗೆ ಮೂಗು ಮುಚ್ಚಿಕೊಂಡು ವಿಶೇಷ ಸಂದರ್ಶನ ನೀಡಿರುವ ಮಾನ್ಯ ಮಹಾಸಚಿವರಾದ ಕೇಸು ದಾಖರ್ ಅವರು, ನಾವು ಬಾತ್ ಟಬ್ಬಿಗೆ ನೀರೇ ಸುರಿದರೂ, ಅದು ಸೂಪ್ ಹೇಗಾಯಿತು ಎಂಬುದು ತಮಗೆ ಗೊತ್ತಾಗಿಲ್ಲ. ಇದು ಕೂಡ ವೈರಾಣುಗಳು ಉಂಟು ಮಾಡುವ ದ್ರವದ ಉಪದ್ರವ ಇರಬಹುದು ಎಂದು ತರ್ಕಿಸಿದ್ದಾರೆ.

ಹಾಗಿದ್ದರೆ, ಈ ಸೂಪ್‌ನೊಳಕ್ಕೆ ನೀವೇಕೆ ಧುಮುಕಿದಿರಿ ಎಂಬ ಪ್ರಶ್ನೆಗೆ, 'ಅದು ಸೂಪೋ ಅಥವಾ ಪ್ರತಿಪಕ್ಷಗಳ Coup ಓ ಎಂದು ಸ್ಪಷ್ಟಪಡಿಸಿಕೊಳ್ಳಲು ಹಾರಿದೆವು' ಎಂದು ಸ್ಪಷ್ಟಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಕರೋನಾ ಸೂಪಿನಲ್ಲಿ ಧುಮುಕಿದ ಮಂತ್ರಿಗಳ ಬಗೆಗಿನ ನಿಮ್ಮ ವರದ್ದಿಗೆ ಖುಶಿಯಾದ ನಾವು ನಿಮಗೆ ‘ವರದ್ದಿ ಭಯಂಕರ’ ಎನ್ನುವ ಬಿರುದು ಕೊಡಲಿದ್ದೇವೆ. ದಯವಿಟ್ಟು ಸ್ವೀಕರಿಸಿರಿ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನೀವು ತೊಟ್ಟ ಬಿದಿರನ್ನು ಇವತ್ತೇ ಸ್ವೀಕರಿಸಲು ಬರಬೇಕೆಂದಿರುವಾಗ, ಲಾಕ್ ಗೇಟ್ ಓಪನ್ ಆದ ಕಾರಣ, ಮದಿರಾ ಪ್ರವಾಹದಲ್ಲಿ ಈಜಾಡುವ ದುಸ್ಸಾಹಸ ಮಾಡುತ್ತಿಲ್ಲವೆಂದು ಈ ಮೂಲಕ ಸ್ಪಷ್ಟಪಡಿಸಲಾಗುತ್ತಿದೆ ಅಂತ ಹೇಳಲಾಗುತ್ತಿದೆ ಎಂದು ಟೀವೀನಾಯಿನ್ ವರದ್ದಿ ಮಾಡಿದೆ.

      ಅಳಿಸಿ

ಏನಾದ್ರೂ ಹೇಳ್ರಪಾ :-D