ಬೊಗಳೆ ರಗಳೆ

header ads

ರಾಹುಲ್ ಕರೆ ಬಳಿಕ ಸ್ಪಿರಿಟ್ ದರ ಏರಿಕೆ

[ಬೊಗಳೂರು ಸ್ಪಿರಿಟ್ ಬ್ಯುರೋದಿಂದ]
ಬೊಗಳೂರು: ಇತ್ತೀಚೆಗೆ ಸ್ಪಿರಿಟ್‌ನ ಬೇಡಿಕೆಯೂ, ದರವೂ ಏರಿಕೆಯಾದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಅಮರೇಂದ್ರ ನೋಡಿ ಅವರನ್ನೇ ಹೊಣೆಯಾಗಿಸುವ ಯತ್ನಗಳ ಹಿನ್ನೆಲೆಯಲ್ಲಿ ಬೊಗಳೆ ರಗಳೆಯ ಏಕಸದಸ್ಯ ಬ್ಯುರೋ ತನಿಖೆ ನಡೆಸಿತು.

ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಕಾರ್ಯಕ್ರಮವೊಂದರ ಬಳಿಕ ಸ್ಪಿರಿಟ್ ಬೇಡಿಕೆ ಮತ್ತು ದರ ಏರಿಕೆಯಾಗಿತ್ತು. ಆದರೆ, ಅಬಕಾರಿ ಇಲಾಖೆಯ ಬದಲು ತೆರಿಗೆ ಇಲಾಖೆ ಅಧಿಕಾರಿಗಳ ಕ್ರೀಡಾಕೂಟದಲ್ಲಿ ಸ್ಪಿರಿಟ್ ಬಗ್ಗೆ ಹೆಚ್ಚು ಚರ್ಚೆಯಾಗಿರುವುದರಿಂದ, ಈ ಪ್ರಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು.

ಯುವಜನರ ಆರಾಧ್ಯ ದೈವವಾಗಿರುವ ರಾಹುಲ್ ದ್ರಾವಿಡ್ ಅವರೇ ತಂಡ ತಂಡವಾಗಿ ಸ್ಪಿರಿಟ್ ಸೇವಿಸಬೇಕು, ಟೀಂ ಸ್ಪಿರಿಟ್ ಅತ್ಯಂತ ಅಗತ್ಯ ಎಂದು ಭಾಷಣದ ವೇಳೆ ಹೇಳಿರುವುದರಿಂದಾಗಿ ಜನ ಹುಚ್ಚೆದ್ದು ಸ್ಪಿರಿಟ್ ಮೊರೆ ಹೋಗಿದ್ದರು ಎಂದು ಬೊಗಳೆ-ರಗಳೆ ಏಕಸದಸ್ಯ ಬ್ಯುರೋದ ಸರ್ವ ಸಿಬ್ಬಂದಿಗಳು ಏಕಕಾಲದಲ್ಲಿ ವರದಿ ಮಾಡಿದ್ದಾರೆ.

ಇತ್ತೀಚೆಗೆ ಎಲ್ಲ ಕಡೆ ಸ್ಪಿರಿಟ್‌ಗೆ ಕೂಡ ಬೆಲೆ ಏರಿಕೆಯಾಗುತ್ತಿದೆ. ಹೀಗಾಗಿ ಇದಕ್ಕೂ ಕಾರಣ ರಾಹುಲ್ ಅವರ ಕರೆಯೇ ಎಂದು ಪತ್ತೆ ಹಚ್ಚಲಾಗಿದೆ. ಸ್ಪಿರಿಟ್‌ಗೆ ಬೇಡಿಕೆ ಹೆಚ್ಚಾಗಲು ದ್ರಾವಿಡ್ ಕಾರಣ, ಇದರಿಂದಾಗಿ ಮಾರುವವರು ದರ ಏರಿಸಿದ್ದಾರೆ ಎಂಬುದು ಬಾಟ್ಲೇಶ್ ಅವರ ಪ್ರತಿಕ್ರಿಯೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

3 ಕಾಮೆಂಟ್‌ಗಳು

  1. ಹೌದು, ಅನ್ವೇಷಿಗಳೆ. Spiritual ಆಗಬೇಕಾದರೆ, spirit ಅತ್ಯಗತ್ಯ ಅಂತ ಅನೇಕ ಸ್ವಾಮೀಜಿಗಳೂ ಸಹ ಹೇಳಿದ್ದಾರೆ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಸುನಾಥರೇ, ನೀವಂತೂ ಹೀಗೆ ಹೇಳಿಯೇ ಧರ್ಮ ಒಡೆಯುವ ಜಾರಕಾರಣಕ್ಕೆ ಕೈಯಿಕ್ಕಿದ್ದೀರಿ. ಸ್ಪಿರಿಟ್ ಇಲ್ಲದಿದ್ದರ ಚುವಲ್ (tual) ಮಾತ್ರ ಉಳಿಯುತ್ತದೆ ಅಂತ ರಾಜಕೀಯ ಸ್ವಾಮೀಜಿಗಳ ಮೊದಲೇ ಬೊಗಳೆಯ ಏಕಸದಸ್ಯ ಬ್ಯುರೋಗೂ ಗೊತ್ತಿತ್ತು. ಆದರೂ ಸ್ಪಿರಿ ಹಾಗೂ ಚುವಲ್ ಧರ್ಮ ಸ್ಥಾಪಿಸುವ ಪ್ರಯತ್ನ ಮಾಡಿದರೆ ಎಂಬ ಆತಂಕದಿಂದ ಹೇಳಿರಲಿಲ್ಲ. ಈಗ ನೀವು ಬಹಿರಂಗಪಡಿಸಿದ್ದೀರಿ. ಏನಾಗ್ತದೋ ಗೊತ್ತಿಲ್ಲ.

      ಅಳಿಸಿ
  2. Is Baccarat a scam? - FBCASINO
    Baccarat is one of 바카라 the most popular casino games in casinos around the world. It's one of the most popular and very popular games 제왕카지노 in the casino. 샌즈카지노

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D