[ಬೊಗಳೂರು ತಾಂತ್ರಿಕಜ್ಞಾನ ಬ್ಯುರೋದಿಂದ]
ಬೊಗಳೂರು, ಜೂ.17- ಭಾರತದ ಮೋಡಿ ಸರಕಾರವು ಪ್ರೇಮಿಗಳ ಸ್ವರ್ಗಲೋಕ ಎಂದೇ ಪರಿಗಣಿಸಲ್ಪಟ್ಟ ಆಗ್ರಾದ ತಾಜಮಹಲ್ ತಾಣದಲ್ಲಿ ಉಚಿತವಾಗಿ ವೈಫ್ ಒದಗಿಸುವ ಕುರಿತ ಸುದ್ದಿ ಕೇಳಿ ಬೊಗಳೂರು ಏಕಸದಸ್ಯ ಬ್ಯುರೋದ ಸರ್ವರೂ ದಿಢೀರನೇ ಎಚ್ಚೆತ್ತುಕೊಂಡಿದ್ದಾರೆ.ಈ ಹಾರ್ಟ್ ಬ್ರೇಕಿಂಗ್ ಸುದ್ದಿಯ ಬೆಂಬತ್ತಿ ಹೋದ ಬೊಗಳೂರು ಬ್ಯುರೋದ ಸಿಬ್ಬಂದಿಗೆ, ತಾಜ್ ಮಹಲಿನ ಸುತ್ತ ಮುತ್ತ ವೈಫಿಗಳು ಉಚಿತವಾಗಿ ಓಡಾಡುತ್ತಿರುವುದನ್ನು ಕಂಡು ಭಾರತದ ಪ್ರೇಮಿಗಳೆಲ್ಲರೂ, ವಿಶೇಷವಾಗಿ ವಿಫಲ ಪ್ರೇಮಿಗಳು ಆನಂದ ತುಂದಿಲರಾಗಿದ್ದಾರೆ.
ಒಂದೆಡೆ, ಮದುವೆಯಾಗಬೇಕಿದ್ದರೆ ವೈಫ್‌ಗಳೇ ಸಿಗುತ್ತಿಲ್ಲ. ಸ್ತ್ರೀಯರ ಜನಸಂಖ್ಯೆ ಕಡಿಮೆಯಾಗಿರುವುದರಿಂದ ಈ ಸಂಕಷ್ಟ ಎದುರಾಗಿದ್ದು, ಇದಕ್ಕಾಗಿ ಕಾಶ್ಮೀರಿ ಪಂಡಿತೆಯರನ್ನು ಮದುವೆಯಾಗುವ ಪ್ರಯತ್ನಗಳು ನಡೆಯುತ್ತಿರುವ ಹಂತದಲ್ಲೇ, ಉಚಿತ ವೈಫಿ ಒದಗಿಸುವ ಮೋಡಿ ಸರಕಾರದ ಕ್ರಮವನ್ನು ವಾಟ್ಸಾಪ್, ಫೇಸ್‌ಬುಕ್ ಬಳಕೆ ವಯಸ್ಸಿಗೆ ಪಬಂದ ಎಲ್ಲ ಗಂಡುಗಳು ಸ್ವಾಗತಿಸಿದ್ದಾರೆ.
ಜೋರಾಗಿಯೇ ಸ್ವಾಗತಿಸಿರುವ ಅವರು ತಾಜ್‌ಮಹಲ್ ಸುತ್ತಮುತ್ತಲೇ ತಮ್ಮ ಕ್ಯಾಂಪ್ ನಿರ್ಮಿಸಿಕೊಂಡಿದ್ದು, ಯಾವಾಗ ಸಿಗುತ್ತದೆ ಎಂದು ಠಿಕಾಣಿ ಹಾಕಿ ಕೂತಿದ್ದಾರೆ.
ಮೋಡಿ ಸರಕಾರದ ಈ ಘೋಷಣೆಯನ್ನು ಕೇಳಿದಾಗಲಂತೂ ಷಹಜಹಾನ್ ಕೂಡ, ನನಗೂ ಈ ವ್ಯವಸ್ಥೆ ದೊರೆಯಬಾರದಾಗಿತ್ತೇ? ವಾಟ್ಸಾಪ್‌ನಲ್ಲಿ, ಗೂಗಲ್ ಹ್ಯಾಂಗೌಟ್ಸ್ ಹಾಗೂ ಫೇಸ್‌ಬುಕ್ ಮೆಸೆಂಜರಿನಲ್ಲಿ ಮುಮ್ತಾಜ್ ಜತೆಗೆ ಚಾಟಿಂಗ್ ಮಾಡಬಹುದಿತ್ತು, ಸೆಲ್ಫೀ ಕಳುಹಿಸಬಹುದಿತ್ತು ಎಂದು ಹಿರಿಹಿರಿ ಕುಗ್ಗಿದ್ದಾರೆಂದು ನಮ್ಮ ಪರಲೋಕದ ಪ್ರತಿನಿಧಿ ಅಲ್ಲಿಂದಲೇ ವರದ್ದಿಸಿದ್ದಾರೆ.
2 ಕಾಮೆಂಟ್‌ಗಳು
ಈ ಪುಕ್ಕಟೆ wif(e)y ಕೇವಲ ಒಂದು ಗಂಟೆಗೆ ಮಾತ್ರ ಅಂತ? ತಾತ್ಪೂರ್ತಿಕ ಸೌಲಭ್ಯ!
ಪ್ರತ್ಯುತ್ತರಅಳಿಸಿಕನೆಕ್ಷನ್ ಕಟ್ಟಾದರೆ ಮತ್ತೊಂದಕ್ಕೆ ಸಂಪರ್ಕಿಸುವ ಸೌಲಭ್ಯವಿದೆಯಂತೆ
ಅಳಿಸಿಏನಾದ್ರೂ ಹೇಳ್ರಪಾ :-D