ಬೊಗಳೆ ರಗಳೆ

header ads

1-1-11ರಂದೇ ಹೊಸ ವರ್ಷ: ದೇಶಾದ್ಯಂತ ಹಾಯ್ ಅಲರ್ಟ್


ಹೊಸ ವರ್ಷವು ಈ ಬಾರಿ 1-1-11ರಂದೇ ಶುರುವಾಗುವ ಹಿನ್ನೆಲೆಯಲ್ಲಿ ದೇಶಾದ್ಯಂತ ಹಾಯ್ ಅಲರ್ಟ್ ಘೋಷಿಸಲಾಗಿದೆ. ಹತ್ತು ವರ್ಷಗಳ ಹಿಂದೆ ವೈ2ಕೆ ವೈರಸ್ ಬಂದಿದ್ದಾಗ, ಈ ಆನ್‌ಲೈನ್‌ನಲ್ಲಿ ಈ ಹಾಯ್-ಬಾಯ್‌ಗಳ ಜ್ವರವು ನಿಧಾನವಾಗಿತ್ತು. ಇದೀಗ ವೈ2ಕೆ2 ಇರುವಾಗಲಂತೂ, ಎದುರಿಗೆ ಸಿಕ್ಕಾಗ ಮಾತನಾಡಿಸದ ನಾವು ಎಸ್ಎಂಎಸ್ ಮೂಲಕವೋ, ಇ-ಮೇಲ್ ಮೂಲಕವೋ, ಐಎಂ ಮೂಲಕವೋ ಹಾಯ್ ಬಾಯ್ ಎಂದು ಹೇಳುತ್ತೇವೆ. ಎದುರಿಗೆ ಬಂದಾಗ ಇಲ್ಲದಿರುವ ಕಾಳಜಿ, ಪ್ರೀತಿಗಳೆಲ್ಲಾ ತುಂಡು ತುಂಡಾದ ಪದಗಳ hi, Lol, ILU, bzy, cm, h r u. ಎಂಬಿತ್ಯಾದಿಗಳ ಮೂಲಕ ಭರಪೂರ ಹರಿದಾಡುತ್ತಿರುತ್ತವೆ.

ಇದು ಅಸತ್ಯವಲ್ಲದಿದ್ದರೂ ಅಷ್ಟೇ ನಿಜ. ಅಲ್ಲಲ್ಲ, ನಿಜವಾದರೂ ಅಷ್ಟೇ ಸುಳ್ಳಲ್ಲದ ಸಂಗತಿಯಿದು. ಅರ್ಥ ಮಾಡಿಕೊಳ್ಳಿ, ಅಪಾರ್ಥ ಮಾಡಿಕೊಳ್ಳಬೇಡಿ, ಅನರ್ಥವಂತೂ ಮಾಡಿಕೊಳ್ಳಲೇಬೇಡಿ ಎಂಬ ಬೊಗಳೂರಿನ ಏಕಸದಸ್ಯ ಬೊಗಳೆ ರಗಳೆ ಬ್ಯುರೋ ಸಂದೇಶದೊಂದಿಗೆ, ಈ ವರ್ಷದ ನಮ್ಮ ಕಥೆಯನ್ನು ಮುಗಿಸುತ್ತಿದ್ದೇವೆ. ಇನ್ನೇನಿದ್ದರೂ ಎರಡು ಕೋಲುಗಳು ಮಾತ್ರ - ಅದುವೇ 11ರಲ್ಲಿ ಭೇಟಿ.

ಎಲ್ಲ ಓದುಗರಿಗೆ, ಬೊಗಳೂರು ಬಿಟ್ಟೋಡುಗರಿಗೆ, ಓದದವರಿಗೆ, ಶುಭ ಹಾರೈಸಿದವರಿಗೆ, ಹಾರೈಸದವರಿಗೆ ಮತ್ತು ವಿಶೇಷವಾಗಿ ಇಂಟರ್ನೆಟ್‌ನಲ್ಲಿ ಇಲ್ಲದ ವಿಶಾಲ ಪ್ರಪಂಚದಲ್ಲಿ ಹರಡಿಕೊಂಡಿರುವ ಬೊಗಳೆ ರಗಳೆ ಪತ್ರಿಕೆಯ ಅಸಂಖ್ಯಾತ ಮತ್ತು ಅಲ್ಪ ಸಂಖ್ಯಾತರಾದ ಓದುಗರಿಗೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು.

ನನಸು ಕನಸಾಗದಿರಲಿ. ನೆನಕೆ ನನಸಾಗಲಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. ಅಸತ್ಯಿಗಳಿಗೆ ಏಕಸದಸ್ಯ ಸಿಬ್ಬಂದಿಗೆ ಹೊಸ ವರ್ಷದ ಶುಭಾಶಯಗಳು !

    ಪ್ರತ್ಯುತ್ತರಅಳಿಸಿ
  2. ಭಾರತಮಾತೆಯ ತನುಜಾತೆಯಾದ ಕರ್ನಾಟಕದಲ್ಲಿ ಸತ್ಯ ಹೇಳುವವರ ಸಂಖ್ಯೆ ಹೆಚ್ಚುತ್ತಿದೆ ಎನ್ನುವ ಘೋರ ವದಂತಿ ನಮ್ಮ ಕಿವುಡು ಕಿವಿಗಳ ಮೇಲೆ ಬಿದ್ದಿದೆ. ೨೦೧೦ನೆಯ ವರ್ಷದಲ್ಲಿ ನೀವು ಇಂಥವರನ್ನು ಸರಿಯಾಗಿ ತ(ಕ)ರಾಟೆಗೆ ತೆಗೆದುಕೊಂಡಿದ್ದೀರಿ. ೨೦೧೧ರಲ್ಲಿಯೂ ಸಹ ಸುಳ್ಳಿನ ಬೆನ್ನನ್ನು ಬಿಡಬೇಡಿರಿ.
    ಹೊಸ ವರ್ಷದ ಶುಭಾಶಯಗಳು!

    ಪ್ರತ್ಯುತ್ತರಅಳಿಸಿ
  3. ಚುಕ್ಕಿ ಚಿತ್ತಾರರೇ,
    ನೀವು ಹೇಳುವ ಮೊದಲೇ ನಾವು ಶುಭಾಶಯ ತೆಗೆದುಕೊಂಡಾಗಿದೆ. ನಿಮಗೂ ಶುಭವಾಗಲಿ.

    ಪ್ರತ್ಯುತ್ತರಅಳಿಸಿ
  4. ಪಾತರಗಿತ್ತಿಯವರೇ,
    ನಿಮಗೂ ನಮಗಿಂತ ಹೆಚ್ಚು ಶುಭಾಶಯಗಳು...

    ಪ್ರತ್ಯುತ್ತರಅಳಿಸಿ
  5. ಸುನಾಥರೇ,
    10 ಕಳೆದು 11 ಬಂದರೂ ನಮ್ಮ ಅಸತ್ಯದ ಶೋಧ ಮುಂದುವರಿಯಲು ನೀವೆಲ್ಲರೂ ಕಾರಣ. ನಿಮಗೆ ಒಂದಕ್ಕೆರಡು ಶುಭಾಶಯಗಳು.

    ಪ್ರತ್ಯುತ್ತರಅಳಿಸಿ
  6. ಅಸತ್ಯದ ಅನ್ವೇಷಣೆಗಳನ್ನು ಮುಂದುವರೆಸಿ ಸತ್ಯವನ್ನು ಮುಚ್ಚಿಟ್ಟು ಅಸತ್ಯವನ್ನು ಬಿಚ್ಚಿಟ್ಟು
    ಬೊಗಳೂರಿನಲ್ಲಿ ರಗಳೆ ಮಾಡಿ ಬೊಗಳೆ ಬ್ಯುರೋ ಪ್ರಖ್ಯಾತಿಗೆ ಕಾರಣರಾದ ಬ್ಯುರೋದ ಏಕಮಾತ್ರ ಸದಸ್ಯಪೀಠದ ಕಾರ್ಯಕಾರಿ ಸದಸ್ಯರೇ.......
    ನಿಮ್ಮ ಅನ್ವೇಷ ಹೀಗೆ ಮುಂದುವರೆಯಲಿ.
    ಈ ಬಾರಿ ಹೊಸ ವರ್ಷ 1-1-11 ರಂದೇ ಬಂದಿರುವುದಕ್ಕೆ ನಮಗೆಲ್ಲಾ ಖೇದವಿದೆ!
    ಹೊಸವರ್ಷದ ಶುಭಾಶಯಗಳು.

    ಪ್ರತ್ಯುತ್ತರಅಳಿಸಿ
  7. ಆಳದಿಂದ ಬಂದವರೇ,
    ನಿಮ್ಮ ಮನದಾಳದ ಶುಭಾಶಯಕ್ಕೆ ನಮ್ಮದೂ ಒಂದಿಷ್ಟು ಸೇರಿಸಿಕೊಂಡುಬಿಡಿ. 11-11-11ರಂದು ಮಾತ್ರ ನಮ್ಮನ್ನು ಮರೆಯಬೇಡಿ.... ಯಾಕೆಂದರೆ ಅದು ಕನ್ನಡ ರಾಜ್ಯೋತ್ಸವ ಆಚರಿಸುವ ಪರ್ವ ಕಾಲ!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D