(ಬೊಗಳೂರು ರದ್ದಿ ಸಹೋದರರ ಬ್ಯುರೋದಿಂದ)
ಬೊಗಳೂರು, ಜು. 02- ಬಳ್ಳಾರಿ ಗಣಿಗಾರಿಕೆಗೆ ಸಂಬಂಧಿಸಿದಂತೆ ಕಳೆದ ಅರುವತ್ತು ವರ್ಷಗಳಿಂದ ತೀವ್ರವಾಗಿ ಭೂಮಿ ಕೊರೆದು ಕೊರೆದು ದುಡ್ಡು ಮಾಡಿಕೊಂಡವರೆಲ್ಲಾ ಇದೀಗ ಪರಸ್ಪರ ಸಗಣಿ ಎರಚಾಡುತ್ತಿರುವ ಹಿನ್ನೆಲೆಯಲ್ಲಿ ಸಗಣಿಗಾರಿಕೆಯನ್ನು ಅಕ್ರಮಗೊಳಿಸಬೇಕು ಎಂದು ಬೊಗಳೂರು ಜನತೆ ಆಗ್ರಹಪಡಿಸಿದ್ದಾರೆ.ಅವರು ಕಾಲಿನಲ್ಲಿ ನಡೆದು ನಡೆದು ಚಪ್ಪಲಿ ಸವೆಸಿದ್ದಕ್ಕೆ ಇವರು ತಲೆ ಬೋಳಿಸಿಕೊಂಡಿದ್ದಾರೆ. ಅವರು ಸಾಧನಾ ಸಮಾವೇಶ ಮಾಡಿದರೆ, ಇವರು ವೇದನಾ ಸಮಾವೇಶ ಮಾಡುತ್ತಾರೆ. ಅವರು ಉಗಿದದ್ದಕ್ಕೆ ಇವರು ನಾಲಿಗೆಯನ್ನೇ ಸಡಿಲಬಿಟ್ಟಿದ್ದಾರೆ. ಅವರು ತೊಡೆ ತಟ್ಟಿದ್ದಕ್ಕೆ ಇವರು ತೋಳು ತಟ್ಟುತ್ತಿದ್ದಾರೆ. ಹೀಗಿರುವಾಗ ರಾಜ್ಯದ ಅರಾಜಕೀಯ ಪರಿಸ್ಥಿತಿಯೇ ಅಲ್ಲೋಲಕಲ್ಲೋಲವಾಗುತ್ತಿರುವುದರಿಂದಾಗಿ ಎಚ್ಚೆತ್ತ ಜನರು ಈ ಪ್ರಯತ್ನಕ್ಕೆ ಕೈಹಚ್ಚಿದ್ದಾರೆ ಎಂದು ಯಾವುದೇ ಮೂಲಗಳು ತಿಳಿಸದಿದ್ದರೂ ಬೊಗಳೂರು ಪತ್ರಿಕೆ ವರದ್ದಿ ಮಾಡಿದೆ.
ನಡೆದು ನಡೆದು ಕಾಲು ನೋವಾದಾಗ ಮತ್ತು ಬೊಜ್ಜು ಕರಗಿಸಿಕೊಳ್ಳುವ ನಿಟ್ಟಿನಲ್ಲಿ ಮಾತ್ರವೇ ಅಲ್ಲದೆ ಕರ್ನಾಟಕದ ಜಾನಪದ ಕಲೆಗಳನ್ನು ಇಡೀ ಲೋಕಮುಖಕ್ಕೆ ತೋರ್ಪಡಿಸಿಕೊಳ್ಳುವ ಪ್ರಯತ್ನವಾಗಿ ಈ ಆಪಾದಮಸ್ತಕ ಯಾತ್ರೆಯನ್ನು ಮಾಡಲಾಗುತ್ತಿದೆ ಎಂದು ಕೂಡ ಒಂದು ಕಡೆಯ ಮೂಲಗಳು ನಮ್ಮ ರದ್ದಿಗಾರರಿಗೆ ತಿಳಿಸಿದ್ದಾರೆ.
ಆದರೆ, ಇದರಿಂದಾಗಿ ಕರ್ನಾಟಕದ ಅರಾಜಕೀಯ ಸಂಸ್ಕೃತಿಯೇ ಲೋಕದಲ್ಲಿ ಬಟಾಬಯಲಾಗಿದೆ. ಹೀಗಾಗಿ ಇನ್‌ಕ್ರೆಡಿಬಲ್ ಕರ್ನಾಟಕ ಎಂಬ ಜಾಹೀರಾತನ್ನು ವಿದೇಶದಲ್ಲೆಲ್ಲಾ ಹಾಕಲು ನೆರವಾಗುತ್ತದೆ ಎಂದು ಕೂಡ ಆ ಕಡೆಯವರು ಸಮರ್ಥಿಸಿಕೊಂಡಿದ್ದಾರೆ.
ಈ ಕಡೆಯವರು ಮಾತನಾಡಿ, ರಾಜ್ಯದಲ್ಲಿ ಹಬ್ಬಿಕೊಂಡಿರುವ ಗಿಡವನ್ನು ಬೇರು ಸಹಿತ ಕಿತ್ತು ಹಾಕುತ್ತೇವೆ ಎಂದಿದ್ದರೆ, ಆ ಕಡೆಯವರು ನಾವು ಬುಡವನ್ನೇ ಅಲುಗಾಡಿಸಿ ಉದುರಿಸುತ್ತೇವೆ ಎಂದಿದ್ದಾರೆ. ಇಲ್ಲಿಗೀ ಕಥೆ ಮುಗಿಯಲಿಲ್ಲ. ಮುಂದುವರಿಯುತ್ತಿದೆ.
7 ಕಾಮೆಂಟ್‌ಗಳು
ಛೆ... ಪಾಪ.. ಅವರೇನೊ ಭೂಮಿ ಕೊರೆದು ”ಸ್ವಲ್ಪ ” ಏನೋ ಮಾಡ್ಕೊ೦ಡ್ರೆ ನಿಮಗೇನ್ ಸ೦ಕಟ ಅ೦ತ.. ಅವರೇನ್ ನಿಮ್ ತಲೆ ಕೊರೆದ್ರಾ.....?
ಪ್ರತ್ಯುತ್ತರಅಳಿಸಿಮುಂದಿನ ಭಾಗಕ್ಕೆ ಕಾಯುತ್ತಿದ್ದೇವೆ !.
ಪ್ರತ್ಯುತ್ತರಅಳಿಸಿಗುರುವೇ....,
ಪ್ರತ್ಯುತ್ತರಅಳಿಸಿಡೇಟ್ಲೈನು ಕನ್‌ಫ್ಯೂಶನ್ನೂ....
ಸಗಣಿಗಾರಿಕೆ ಎಂಬ ಪದಪ್ರಯೋಗದಿಂದ ವಿಸಿಕಸಿಗೊಂಡಿರುವ ತೆಗಳೂರ ಗೋವುಗಳು ಪ್ರತಿಭಟನೆಗೆ ಸಜ್ಜಾಗಿದ್ದು, ಬೊಗಳೂರ ಮಂದಿ ಸಿಕ್ಕ ಸಿಕ್ಕಲ್ಲಿ ಹಾದು, ಒದೆಯುವ ನಿರ್ಧಾರಕ್ಕೆ ಬಂದಿವೆ ಎಂದು ನಂಬಲರ್ಹ/ನಂಬಲನರ್ಹ ಮೂಲಗಳು ತಿಳಿಸಿವೆ ಎಂಬುವುದನ್ನು ನಾವು ನಿಮಗೆ ತಿಳಿಸಲಾರೆವು.
ವಿಧಾನಸೌಧದ ಬಾವಿಯಲ್ಲಿ ಸಗಣಿಯ ರಾಶಿ! ಸಾವಯವ ಗೊಬ್ಬರ ಬೇಕಾದವರು ಲಂಚ ಕೊಡದೇ ಒಯ್ಯಬಹುದು!!
ಪ್ರತ್ಯುತ್ತರಅಳಿಸಿ(ಹೆಚ್ಚಿನ ಮಾಹಿತಿಗಾಗಿ ಅಸತ್ಯ ಅನ್ವೇಶಿಯವರನ್ನು ಸಂಪರ್ಕಿಸಿರಿ.)
ayyoo.. maataadade irodu olleyadu.....
ಪ್ರತ್ಯುತ್ತರಅಳಿಸಿThere are only three Rowdys (Anti-Karnataka elements) in BJP from Bellary, but in Congress there are many more Anti-Kannada, Anti Karnataka elements. We should BAN "Ganigarike" in Karnataka. These anti-Karnataka elements are killing Kannadigas everyday. All are Useless Bastards in these political parties, they do not care for the common man.
ಪ್ರತ್ಯುತ್ತರಅಳಿಸಿCentral Govt. is ANTI-POOR party and Pro-Muslim, Pro-LET...they are not thinking about the middle class people in India. Just sieze the Swiss Bank account and distribute the amount to all 100 crore people...you know...each one will get 1 crore each. Everybody will become Crorepatis in INDIA.
ANTI-NATIONAL Elements are ruling this INDIA. Let us unite and kick these elements out of India.
ಚುಕ್ಕಿ ಚಿತ್ತಾರ ಅವರೇ,
ಪ್ರತ್ಯುತ್ತರಅಳಿಸಿನಮ್ ತಲೆ ಕೊರೆದಿರುವುದು ಖಂಡಿತ. ಯಾಕೆಂದರೆ ಇತ್ತೀಚೆಗೆ ತಲೆಯೇ ಇಲ್ಲದಂತಹಾ ಗಾತ್ರಕ್ಕೆ ಕುಸಿದಿದೆ ನಮ್ಮ ಬೊಗಳೂರು ವರದ್ದಿಗಾರರ ತಲೆ!
ಸುಬ್ರಹ್ಮಣ್ಯ ಅವರೇ,
ಮುಂದಿನ ಭಾಗಕ್ಕೆ ಕಾದು ಸುಸ್ತಾಗದೇ ಇರುವುದಕ್ಕೆ ಧನ್ಯವಾದ. ಗಣಿ ಧಣಿಗಳಿಂದ ಬೆದರಿಕೆಯಿಂದಾಗಿ ನಾವು ತಲೆಮರೆಸಿಕೊಂಡಿದ್ದೆವು.
ಶನಿ ಅವರೇ... ಅಲ್ಲಲ್ಲ ಶಾನಿ ಅವರೇ,
ನೀವು ತಿಳಿಸದೇ ಇದ್ರೂ ನಿಮ್ಮ ಬಾಯಿಯ ಅಲುಗಾಟ ನೋಡಿಯೇ ನಮ್ಮ ವರದ್ದಿಗಾರರು ವರದ್ದಿ ತಯಾರಿಸಿ ಸುರಿಯುವುದರಲ್ಲಿ ನಿಸ್ಸೀಮರು ಅಂತ ನಾವು ನಿಮಗೆ ತಿಳಿಸಲು ಇಚ್ಛಿಸುವುದಿಲ್ಲ.
ಸುನಾಥರೇ,
ನಿಮ್ಮ ಜಾಹೀರಾತು ಸಿಕ್ಕಾಪಟ್ಟೆ ಫಲ ಕೊಟ್ಟಿದ್ದು, ಸೆಗಣಿಯ ರಾಶಿಯಿಂದೆದ್ದು ಬರಲು ಕಷ್ಟವಾಗಿ, ತಡವಾಯಿತು...
ದಿನಕರ ಅವರೇ,
ಬೊಗಳೂರಿಗೆ ಸ್ವಾಗತವು ನಿಮಗೆ....
ಮಾತು ಒಡೆದರೆ ಹೋಯಿತು, ಮುತ್ತು ಆಡಿದರೆ ಕಳೆದು ಹೋಯಿತು ಅಂತ ಬೊಗಳೂರಿನ ಗಾದೆಯೇ ಇದೆಯಲ್ಲಾ...
ಗುರುಗಳೇ,
ಇಲ್ಲಿ ಸತ್ಯವನ್ನು ಹೇಳುವುದನ್ನು ನಿಷೇಧಿಸಲಾಗಿದೆ. ಆದರೂ ಕಿಕ್ ಔಟ್ ಮಾಡಲು ಫುಟ್ಬಾಲ್ ಕಿಕ್ಕಿಗರನ್ನು ಕರೆದುತಂದರೆ ಒಂದಿಷ್ಟು ಪ್ರಯೋಜನವಾದೀತೇನೋ...
ಏನಾದ್ರೂ ಹೇಳ್ರಪಾ :-D