ಬೊಗಳೆ ರಗಳೆ

header ads

ಟಾಯ್ಲೆಟ್ ಪೇಪರ್ ಕೊರತೆ ನೀಗಿಸಲು ಪಾಕಿಗೆ ಸಾಕ್ಷ್ಯಾಧಾರ!

[ಬೊಗಳೂರು Dossier ಬ್ಯುರೋದಿಂದ]
ಬೊಗಳೂರು, ಜೂ.21- ಪಾಕಿಸ್ತಾನಕ್ಕೆ ಭಾರತವು ಪದೇ ಪದೇ ಇಂಗ್ಲಿಷಿನಲ್ಲಿ ದೋಸೆಗಳು ಎಂದು ಕರೆಯಲಾಗುತ್ತಿರುವ ಸಾಕ್ಷ್ಯಾಧಾರ ದಾಖಲೆ ಪತ್ರಗಳನ್ನು ಕಳುಹಿಸುತ್ತಿರುವುದಕ್ಕೆ ಹಾಗೂ ಅದು ಕೂಡ ಪದೇ ಪದೇ "ಇದು ಸಾಲುತ್ತಿಲ್ಲ, ಇದು ಸಾಲುತ್ತಿಲ್ಲ" ಎಂದೆಲ್ಲಾ ಬೊಬ್ಬೆ ಹೊಡೆಯುತ್ತಿರುವುದಕ್ಕೆ ಕಾರಣವೇನೆಂಬುದನ್ನು ಪತ್ತೆ ಹಚ್ಚಲಾಗಿದೆ.

ಪಾತಕಿಸ್ತಾನದಲ್ಲಿ ಉಗ್ರಗಾಮಿ ಜನಾಂಗೀಯರ ಹಾವಳಿ ಹೆಚ್ಚಾಗಿರುವುದರಿಂದ ಅಲ್ಲಿ ಮನುಷ್ಯ ಜನಾಂಗೀಯರನ್ನು ಹುಡುಕುವುದೇ ಕಷ್ಟವಾಗಿಬಿಟ್ಟಿದೆ. ಅಲ್ಲಿರುವವರೆಲ್ಲರೂ ಶಿಲಾಯುಗದ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಅವರಿಗೆ ನಿಸರ್ಗದ ಕರೆ ಬರುವುದು ಕೂಡ ಹೆಚ್ಚಾಗುತ್ತಿದೆ. ಪರಿಸರ ಪರಿಶುದ್ಧತೆಗಾಗಿ ನೀರಿನ ಕೊರತೆಯೂ ಇದೆ. ಹೀಗಾಗಿ ಅವರಿಗೆಲ್ಲರಿಗೂ ಟಾಯ್ಲೆಟ್ ಪೇಪರುಗಳು ಲೋಡುಗಟ್ಟಲೆ ಭಾರೀ ಪ್ರಮಾಣದಲ್ಲಿ ಬೇಕಾಗಿದೆ ಎಂಬುದನ್ನು ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಳ್ಳಲಾಗಿದೆ.

ಪ್ರಾಥಮಿಕದ ಬಳಿಕ ದ್ವಿತೀಯ ಹಂತದ ತನಿಖೆ ಕೈಗೊಳ್ಳಲಾಯಿತು. ಈ ಟಾಯ್ಲೆಟ್ ಪೇಪರ್ ಕೊರತೆಗೂ, ಭಾರತವು ರಾಶಿ ರಾಶಿ ದಾಖಲೆ ಪತ್ರಗಳನ್ನು ಕಳುಹಿಸುತ್ತಿರುವುದಕ್ಕೂ ಏನಾದರೂ ಸಂಬಂಧವಿದೆಯೇ ಎಂಬುದು ಈ ತನಿಖೆಯ ಹಿಂದಿನ ಉದ್ದೇಶವಾಗಿತ್ತು. ಹೌದು! ಸಂಬಂಧ ಇದೆ ಎಂಬುದು ಬ್ರೇಕ್ ಆಗಿರುವ ಸುದ್ದಿ ಮತ್ತು ರದ್ದಿಯೂ ಹೌದು.

ಭಾರತಕ್ಕೆ ಕನಿಕರ ಯಾವಾಗಲೂ ಜಾಸ್ತಿಯೇ. ಪಾಕಿಸ್ತಾನವು ಕಳೆದ ಹಲವಾರು ವರ್ಷಗಳಿಂದ ಮತ್ತು ಅದಕ್ಕೂ ಮೊದಲಿನಿಂದಲೇ, "ಸಾಕ್ಷ್ಯಾಧಾರ ಕೊಡಿ ಕೊಡಿ" ಅಂತ ಕೇಳುತ್ತಲೇ ಇದೆ... ಪಾಪ, ಅಲ್ಲಿನ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಬೇಕು. ಅಲ್ಲಿಗೆ ಕಳುಹಿಸಿದ ದಾಖಲೆಗಳು ಹೇಗೂ ಟಾಯ್ಲೆಟ್ ಪೇಪರ್ ರೂಪದಲ್ಲೇ ಬಳಕೆಯಾಗುತ್ತಿವೆ. ಹೀಗಾಗಿ ಅದು ಕೇಳುತ್ತಲೇ ಇರುವಾಗ, ನಾವು ಕೂಡ ಕೊಡುತ್ತಲೇ ಇರೋಣ ಎಂಬ ಮಾನವೀಯ ದೃಷ್ಟಿಕೋನದಿಂದಾಗಿ ಈ ದಾಖಲೆ ವರದ್ದಿಗಳನ್ನು ಕಳುಹಿಸಲಾಗುತ್ತಿದೆ ಎಂದು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿ ಬಿಟ್ಟಿದೆ.

ಮುಂಬೈ ಮೇಲೆ ದಾಳಿ ಮಾಡಿದ ಮತ್ತು ಈಗಲೂ ದೇಶಾದ್ಯಂತ ಅಲ್ಲಲ್ಲಿ ವಿಧ್ವಂಸಕ ಕೃತ್ಯಗಳನ್ನು ಮಾಡುತ್ತಲೇ ಇರುವವರ ಮೇಲೆ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನದ ಮೇಲೆ ಒತ್ತಡ ಹೇರಲು ವಿಫಲವಾದರೂ, ಅಲ್ಲಿಗೆ ರಾಶಿರಾಶಿಗಟ್ಟಲೆ ಲಾರಿಗಳಲ್ಲಿ, ರೈಲುಗಳಲ್ಲಿ ಕಳುಹಿಸುತ್ತಿರುವ ದಾಖಲೆಯ ದೋಸೆಯರ್(dossier)ಗಳನ್ನು ಹೇರಿ ಹೇರಿ ಒಂದಿಷ್ಟು ಒತ್ತಡ ಹೇರಬಹುದು ಎಂಬುದು ನಮ್ಮವರ ಲೆಕ್ಕಾಚಾರವಾಗಿತ್ತು ಎಂದು ನಮ್ಮ ಬಲ್ಲ ಮೂಲಗಳು ತಿಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ದೋಸೆಯ ಜೊತೆಗೆ ಒಂದಷ್ಟು ಚಟ್ನಿಯನ್ನೂ ಕಳುಹಿಸಿದರೆ ಆರಾಮವಾಗಿ ತಿಂದು ಮತ್ತಷ್ಟು ದೋಸೆಗಳನ್ನು(ಡೊಸೈರ್) ಕಳುಹಿಸಿ ಎಂದು ಕೇಳಲು ಅವರಿಗೆ ಅನುಕೂಲವಾಗುತ್ತದೆ. ಹೊಟ್ಟೆ ಬಿರಿಯುವಷ್ಟು ದೋಸೆ ತಿಂದಮೇಲೆ "ದಾಖಲೆ" ಗಾಗಿ ಟಾಯ್ಲೆಟ್ ಪೇಪರ್ ನ ಅವಶ್ಯಕತೆ ಇದ್ದೇ ಇದೆ. ದಾಖಲೆಗಳನ್ನು ಟಾಯ್ಲೆಟ್ ಪೇಪರ್ ರೂಪದಲ್ಲಿ ಕಳುಹಿಸುವುದೇ ಸೂಕ್ತ !.

    ಪ್ರತ್ಯುತ್ತರಅಳಿಸಿ
  2. ‘ಭಾರತವು ಪಾತಕಿಸ್ತಾನದ ಮೇಲೆ toilet paper warಅನ್ನು ಮಾಡುತ್ತಿದೆ’ ಎನ್ನುವ ಆರೋಪವನ್ನು ಇನ್ನು ಮೇಲೆ UNOದಲ್ಲಿ ಕೇಳಬಹುದೆ?

    ಪ್ರತ್ಯುತ್ತರಅಳಿಸಿ
  3. ಸುಬ್ರಹ್ಮಣ್ಯರೇ,
    ಇದರಲ್ಲಿ ಯಾವುದು ದಾಖಲೆ ಆಗುತ್ತದೆ (ದಾಖಲೆ ಕೊಡುವುದು, ದಾಖಲೆ ಪಡೆಯುವುದು, ಅದನ್ನು ತಿನ್ನುವುದು, ತಿಂದ ಬಳಿಕ ವಿಸರ್ಜಿಸುವುದು.... ಓಹ್... ಇನ್ನೂ ತುಂಬಾ ಇವೆ...) ಎಂಬುದರ ಬಗೆಗೆ ನಮಗೇ ಗೊಂದಲ ಮೂಡಿಸಿ, ನಮ್ಮನ್ನು ಎಚ್ಚೆತ್ತುಕೊಳ್ಳದಂತೆ ಮಾಡಿದ್ದಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  4. ಸುನಾಥರೇ,
    ನೀವು ಹೇಳಿದ್ದು UNO ದಲ್ಲಿ ಅಲ್ಲದಿದ್ದರೂ, UFO (Unidentified Flying Objects)ದಲ್ಲಿ ಖಂಡಿತಾ ಬರಲಿದೆ. ಇದಕ್ಕೆ ಲದ್ದಿಜೀವಿಗಳ ಆಕ್ಷೇಪವೂ ಶೀಘ್ರದಲ್ಲೇ ಬರಲಿದೆ ಎಂಬುದು ಪತ್ತೆಯಾಗಿದೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D