ಬೊಗಳೆ ರಗಳೆ

header ads

ಗೊರಿಲ್ಲಾಗೆ ಏಡ್ಸ್ ಹೆಗ್ಗಳಿಕೆ: ಮಾನವರ ಪ್ರತಿಭಟನೆ

(ಬೊಗಳೂರು ಸಂಚೋದನಾ ಬ್ಯುರೋದಿಂದ)
ಬೊಗಳೂರು, ಆ.3- ಈ ವರದಿಗೆ ಮಾತ್ರ ನಮ್ಮ ಬೊಗಳೂರಿನ ಸಮಸ್ತರು ತೀವ್ರ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಇದುವರೆಗೆ ಎಲ್ಲ ಹೆಗ್ಗಳಿಕೆಗಳೂ ಮಾನವರಿಗೇ ದೊರೆಯುತ್ತಿದ್ದವು. ಯಾಕೆಂದರೆ ಅವರಿಗೆ ತಲೆಯೊಳಗೆ ಮೆದುಳಿನಂತಹ ಅಂಗವೊಂದು ಇದೆ ಎಂಬುದನ್ನು ವಿಜ್ಞಾನಿಗಳು ಸಾಬೀತು ಮಾಡಿದ್ದರು.

ಆದರೆ ಈಗ ನೋಡಿದರೆ, ಏಡ್ಸ್ ಎಂಬ ರೋಗಕ್ಕೆ ಗೊರಿಲ್ಲಾಗಳು ಕಾರಣ ಎಂದು ಆ ಹೆಗ್ಗಳಿಕೆಯನ್ನೂ ಕಿತ್ತುಕೊಂಡು, ಮಾನವನನ್ನು ಮೆದುಳಿಲ್ಲದ ಪ್ರಾಣಿ ಎಂದು ಸಾಬೀತುಪಡಿಸಲು ಹೊರಟಿರುವ ವಿಜ್ಞಾನಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಹಾಗಿದ್ದರೆ, ವಾಷಿಂಗ್ಟನ್ನಿನಲ್ಲಿ ಪತ್ತೆಯಾದಂತೆ, ಮಹಿಳೆಯ ದೇಹದೊಳಗೆ ಗೊರಿಲ್ಲಾದಿಂದ ಬಂದಿರುವ ಏಡ್ಸ್ ಪತ್ತೆಯಾಗಿದ್ದು ಹೇಗೆ ಎಂಬುದು ಬೊಗಳೂರು ಜನತೆಯ ಶಂಕೆಯ ಬೆಂಕಿಗೆ ತುಪ್ಪ ಎರೆದ ವಿಷಯವಾಗಿದೆ. ಯಾಕೆಂದರೆ, ಈ ಮಹಿಳೆಯು ಖಂಡಿತವಾಗಿಯೂ ಗೊರಿಲ್ಲಾ ಆಗಿರಲಿಲ್ಲ ಎಂದು ಸಂಚೋದಕರು ಪತ್ತೆ ಹಚ್ಚಿದ್ದಾರೆ.

ಆದರೆ, ತೀರಾ ಸಂಚೋದನೆ ಮಾಡಲು ಹೋಗುವುದರಲ್ಲಿರುವಾಗ ದೊರೆತ ಅಂಶವೆಂದರೆ, ಮಾನವರ ತಲೆಯೊಳಗಿರುವ ಮೆದುಳನ್ನು ಗೊರಿಲ್ಲಾಗಳಿಗೆ ಇರಿಸಿದ್ದೇ ಕಾರಣವಿರಬಹುದು. ಯಾಕೆಂದರೆ ಇತ್ತೀಚೆಗೆ ತಂದೆಯಿಂದ ಮಗಳ ಮೇಲೆ ಅತ್ಯಾಚಾರ, ವಿದ್ಯಾರ್ಥಿನಿ ಮೇಲೆ ಶಿಕ್ಷಕರಿಂದ ಅತ್ಯಾಚಾರ ಮುಂತಾದ ಪ್ರಕರಣಗಳು ಹೆಚ್ಚು ಹೆಚ್ಚು ಆಗುತ್ತಿರುವುದರಿಂದ, ಮಾನವರ ಮೆದುಳನ್ನು ಗೊರಿಲ್ಲಾಗಳ ತಲೆಯೊಳಗೆ ಅದಲುಬದಲು ಮಾಡಿಕೊಂಡಿರುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಬೊಗಳೂರಿನ ಮಂದಿ ಆಮ ಶಂಕೆ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಇದರಲ್ಲಿ ಆಶ್ಚರ್ಯವೇನೂ ಇಲ್ಲ, ಸೊಂಪಾದಕರೆ.
    ಪ್ರತಿಯೊಬ್ಬ ಮಾನವ ಜೀವಿಯಲ್ಲಿ, ಒಂದು ಪ್ರಾಣಿಯ ಅಂಶ ಇದ್ದೇ ಇರುತ್ತದೆ.
    ಕೆಲವರಲ್ಲಿ ಕತ್ತೆಯ ಅಂಶ(ಉದಾ:ವೇದೇಗೌಡ), ಕೆಲವರಲ್ಲಿ ಕೋತಿಯ ಅಂಶ(ಉದಾ:ವೇರಣ್ಣ) ಇದ್ದಂತೆ,ಈ ಮಹಿಳೆಯಲ್ಲಿ ಗೋರಿಲ್ಲಾದ ಸಹಾಯಧನಗಳ(=aids)ಅಂಶ ಇದೆಯಷ್ಟೇ!

    ಪ್ರತ್ಯುತ್ತರಅಳಿಸಿ
  2. ಸುನಾಥರೆ,
    ನಿಷ್ಠಾವಂತ ಮತ್ತು ಕೊಟ್ಟ ಮಾತಿಗೆ ತಪ್ಪದ ವಚನಭ್ರಷ್ಟವಾಗಿರುವ ಶ್ವಾನ ದಳದ ಅಂಶ ಯಾರಲ್ಲಿದೆ? ಅಂತ ಕೆದಕಿ ನೋಡೋಣವೇ?

    ಪ್ರತ್ಯುತ್ತರಅಳಿಸಿ
  3. ಸಾಗರದಾಚೆಯಿಂದ ಬಂದವರೇ,
    ಈ ಸಹಾಯಧನ (aids) ಅಂಶವು ಖಂಡಿತಾ ಚೆನ್ನೈಯಾಗಿಲ್ಲ ಅಂತ ಪ್ರಮಾಣೀಕರಿಸುತ್ತೇವೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D