(ಬೊಗಳೂರು ತಾಪಮಾನಾಪಮಾನ ಬ್ಯುರೋದಿಂದ)
ಬೊಗಳೂರು, ಜು.20- ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣ ಪತ್ತೆ ಹಚ್ಚಲಾಗುತ್ತಿರುವಾಗಲೇ ವಿಷಯ ಎಲ್ಲ ಗೊತ್ತಾಗಿಬಿಟ್ಟಿದೆ. ಇದಕ್ಕೆಲ್ಲಾ ಕಾರಣ ಬಾಲಿವುಡ್ ನಟೀಮಣಿಯರು!!
ಬಾಲಿವುಡ್ ನಟೀಮಣಿಯರು ಉಡುತ್ತಿರುವ ಬಟ್ಟೆಯ ಪ್ರಮಾಣ ಕಡಿಮೆಯಾಗುತ್ತಿರುವುದರಿಂದಲೇ ಜಾಗತಿಕವಾಗಿ ತಾಪಮಾನ ಹೆಚ್ಚಾಗುತ್ತಿದೆ ಎಂಬುದನ್ನು ಬೊಗಳೂರು ಬ್ಯುರೋ ಕಂಡುಕೊಳ್ಳಲು ಹೊರಟಿತ್ತು.ಇದೀಗ ಮೋಸ್ಟ್ ಗೂಗಲ್ಡ್ ಸೆಕ್ಸೀ ನಟಿ ಕತ್ರಿನಾ ಕೈಫ್ "ಬಟ್ಟೆಗೂ ಕತ್ರೀನಾ?" ಎಂದು ಹುಬ್ಬೇರಿಸುವಷ್ಟರ ಮಟ್ಟಿಗೆ ಮೆರೆದಾಡಿದರೂ, ಜಾಗತಿಕ ತಾಪಮಾನದ ಬಗ್ಗೆ ಇಲ್ಲಿ ಕಳವಳ ವ್ಯಕ್ತಪಡಿಸಿರುವುದು ಬಾಲಿವುಡ್ ಪ್ರಿಯರ ಕಳವಳಕ್ಕೂ ಕಾರಣವಾಗಿದೆ.
ಮೂರು ವರ್ಷಗಳ ಹಿಂದೆಯೇ ತಾಪಮಾನ ಹೆಚ್ಚಳಕ್ಕೆ ಮತ್ತೊಂದು ಕಾರಣವನ್ನೂ ಬೊಗಳೆ ರಗಳೆ ಇಲ್ಲಿ ಪತ್ತೆ ಮಾಡಿತ್ತು.
ಇದೀಗ ಕಿಲರಿ ಹ್ಲಿಂಟನ್ ಅವರು ಕೂಡ ಜಾಗತಿಕ ತಾಪಮಾನಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದು ಬೊಂಬಾಯಿಯೊಂದಿಗೆ ಮುಂಬಯಿಗೆ ಬಂದು, ಬಾಲಿವುಡ್ ನಟೀಮಣಿಯರಿರುವ ತಾಣದಲ್ಲೇ ಹೇಳಿರುವುದರ ಹಿಂದಿನ ಮರ್ಮವೇನು ಎಂಬ ಬಗ್ಗೆ ಸಂಚೋದನೆ ನಡೆಯುತ್ತಿದೆ.
ಇತ್ತೀಚೆಗೆ ನಟೀಮಣಿಯರು ಪುಟ್ಟ ಬೆಂಕಿ ಪೆಟ್ಟಿಗೆಯೊಳಗೆ ಮಡಚಿ ಇರಿಸಬಹುದಾದಷ್ಟು ಭಾರೀ ಗಾತ್ರದ ಉಡುಗೆ ತೊಡುವ, ಅಥವಾ ಆ ಉಡುಗೆಯನ್ನು ದೇಹಕ್ಕೆ "ಸ್ಯಾಂಪಲ್' ಆಗಿ ತೋರಿಸುವ ಪ್ರವೃತ್ತಿ ಹೆಚ್ಚಿಸುತ್ತಾ ಪ್ರಸಿದ್ಧಿ ಪಡೆಯಲು ಹರಸಾಹಸ ಮಾಡುತ್ತಿರುವುದರಿಂದ, ದೇಹದ ಮತ್ತು ದೇಶದ ತಾಪಮಾನ ಹೆಚ್ಚಾಗುತ್ತಿದೆ ಎಂದು ತಿಳಿದುಬಂದಿದೆ.
ಇದೀಗ ತಾಪಮಾನ ತಗ್ಗಿಸಲು ಎಲ್ಲರೂ ಹರ ಸಾಹಸ ಮಾಡುತ್ತಿರುವದರಿಂದ ದೇಶದೆಲ್ಲೆಡೆ ಕಳವಳವೂ ಬಿಸಿಬಿಸಿಯಾಗಿ ಏರತೊಡಗಿದೆ. ರೆ ಕತ್ರಿನಾ ಸೇರಿದಂತೆ ಬಾಲಿವುಡ್ ನಟೀಮಣಿಯರೇನಾದರೂ ಜಾಗತಿಕ ತಾಪಮಾನ ಕಡಿಮೆ ಮಾಡಲು ಪಣ ತೊಟ್ಟರೆ ಎಂಬ ಆತಂಕವೇ ಇದಕ್ಕೆ ಕಾರಣ ಎಂದು ಸಂಚೋದಿಸಲಾಗಿದೆ.
4 ಕಾಮೆಂಟ್‌ಗಳು
ಬಟ್ಟೆಗೆ ಕತ್ತರಿನಾ? ಅಥವಾ ಕತ್ತರಿಗೆ ಬಟ್ಟೆಯಾ? ಈ ಲಲಲಲಾಮಣಿಯರ ಬಟ್ಟೆ ಕತ್ತರಿಗೆ ಸಿಗುವಷ್ಟು ದೊಡ್ಡದಿರುತ್ತದೆಯಾ ಅಥವಾ ಅವರಲ್ಲಿರುವ ಬಟ್ಟೆಯನ್ನು ಕತ್ತರಿಯ ಹತ್ತಿರಕ್ಕೆ ಒಯ್ದು ತಾಪಮಾನವನ್ನು ಕಡಿಮೆ ಮಾಡುವ ಸಂಚು ಮಾಡಬೇಕಾ? ಈ ಸಂದಿಗ್ಧದಲ್ಲಿ ನಮ್ಮ ಮಂಡೆಯ ತಾಪಮಾನ ಹೆಚ್ಚಾಗ್ತಿದೆ ಮಾರಾಯ್ರೇ!
ಪ್ರತ್ಯುತ್ತರಅಳಿಸಿಅಂದ ಹಾಗೆ ಕತ್ತರಿ, ಕರಿಮಣಿ, ಭಾವ ಅಂತ ಏನೇನೋ ಪ್ರಯೋಗಗಳು ಇವೆಯಲ್ಲ, ಅವುಗಳಿಗೂ ಈ ಸಂಚೋದನೆಗೂ ಏನಾದರೂ ಸಂಬಂಧವಿದೆಯಾ?
ನಿಮ್ಮಿಂದ ಸೂಕ್ತ ಉತ್ತರ ದೊರೆಯಲಾಗದಿದ್ದರೆ, ತಕ್ಷಣ ತಿಳಿಸಿ, ನಮ್ಮೂರಲ್ಲೊಬ್ಬ ಸಾಲಮನ್ನ ಎಂಬುವನೊಬ್ಬ ಇದ್ದಾನೆ - ಅವನ ಸಹಾಯ ಕೇಳುವೆವು
ಕುರುಕುರೇ,
ಪ್ರತ್ಯುತ್ತರಅಳಿಸಿಕತ್ತರಿ-ಕರಿಮಣಿ-ಭಾವ ಇತ್ಯಾದಿಗಳಿಗೆ ಖಂಡಿತಾ ಸಂಬಂಧವಿದೆ. ಕರಿಮಣಿಗೆ ಕತ್ತರಿ ಹಾಕಿದವನು ಮಾವನ ಮನೆಗೆ ಸೇರಿ ಕಂಬಿಗಳ ಲೆಕ್ಕಾಚಾರದಲ್ಲಿ ತೊಡಗುವಾಗ ಅಲ್ಲಿರುವ ಪೊಲೀಸಣ್ಣ (ಭಾವ) ಇವನನ್ನು ಚೆನ್ನಾಗಿ ನೋಡಿಕೊಳ್ಳುತ್ತಾನಲ್ಲ...
ಇದುವೇ ಸೂಕ್ತ ಉತ್ತರ ಅಂತ ತಿಳಿದು ಸುಮ್ಮನಾಗುತ್ತಿದ್ದೇವೆ.
"ಲಂಗೋಟಿ ಬಲು ಒಳ್ಳೇದಣ್ಣಾ!" ಎಂದು ಪುರಂದರದಾಸರು ಹಾಡಿದ್ದಾರೆ. ಬಾಲಿವುಡ್ ಬೆಡಗಿಯರೆಲ್ಲಾ ಈಗ ದಾಸಪಂಥಕ್ಕೆ ಸೇರಿರಬಹುದು.
ಪ್ರತ್ಯುತ್ತರಅಳಿಸಿಸುನಾಥರೆ,
ಪ್ರತ್ಯುತ್ತರಅಳಿಸಿಇಲ್ಲ, ಇಲ್ಲ, ಲಂಗೋಟಿಗಿಂತಲೂ ಕಿರಿದಾದದ್ದು ಏನಾದರೂ ಇದ್ದರೆ ಹೇಳಿ... ಅದು ಬಲು ಒಳ್ಳೇದಣ್ಣಾ ಅಂತ ನಟೀಮಣಿಯರು ಹಾಡ್ತಾರಂತೆ...
ಏನಾದ್ರೂ ಹೇಳ್ರಪಾ :-D