(ಬೊಗಳೂರು ಬಾಲ್ಯ ವಿವಾದ ಬ್ಯುರೋದಿಂದ)
ಬೊಗಳೂರು, ಏ.9- ವಿಚ್ಛೇದನವಾಗುವುದು ಮಕ್ಕಳ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಇಲ್ಲಿ ವರದಿಯಾಗಿರುವುದರಿಂದ ಬೊಗಳೂರು ಬಾಲ-ಕರುಗಳ ಸಂಘದ ಸದಸ್ಯರೆಲ್ಲರೂ ವಿಚ್ಛೇದನೆ ನೀಡದಿರಲು ನಿರ್ಧರಿಸಿದ್ದಾರೆ.
ವಿಚ್ಛೇದನವು ಮಕ್ಕಳಿಗೆ ಮಾರಕ ಎಂದು ವರದಿ ಮಾಡಲಾಗಿದೆ. ಇದರಲ್ಲಿ ಬೊಗಳೂರು ಬ್ಯುರೋದ ಕೈವಾಡವಿಲ್ಲ ಎಂದು ಈ ಬಾಲ-ಕರುಗಳ ಸಂಘಕ್ಕೆ ಮನವರಿಕೆ ಮಾಡಲಾಯಿತಾದರೂ, ಈ ವರದ್ದಿಯು ತಮ್ಮ ಒಳಿತಿಗೇ ಆಗಿರುವುದರಿಂದ ಆ ಕುರಿತು ತನಿಖೆ ಮಾಡದಿರಲು ನಿರ್ಧರಿಸಿದ್ದಾರವರು.
ಈ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಸಭೆ ನಡೆಸಿದ ಬಾಲ-ಕರುಗಳ ಮಕ್ಕಳ ಸಂಘವು, ಈ ವಿಚ್ಛೇದನೆ ಏನು ಎಂಬುದರ ಕುರಿತು ಮೊತ್ತ ಮೊದಲು ತನಿಖೆ ನಡೆಸಲು ತೀರ್ಮಾನಿಸಿತಾದರೂ, ಸಭೆಯ ಮಧ್ಯದಿಂದ ನನಗೊತ್ತಿದೆ ನನಗೊತ್ತಿದೆ ಎಂಬ ಕೆಲವು ಶಬ್ದಗಳು ಅಂದರೆ ಅಕ್ಷರಶಃ ತೊದಲು ನುಡಿಗಳು ಕೇಳಿಬಂದವು ಎಂದು ನಮ್ಮ ವರದ್ದಿಗಾರರು ತಿಳಿಸಿದ್ದಾರೆ.
ಅವರಲ್ಲೊಬ್ಬ ಎದ್ದು ನಿಂತು, ಬೋರ್ಡಿನಲ್ಲಿ ಅದು ಬರೇ ವಿಚ್ಛೇದನ ಅಲ್ಲ, ವಿವಾದ ವಿಚ್ಛೇದನ ಎಂದು ಬರೆದು ತೋರಿಸಿದನೆನ್ನಲಾಗಿದೆ. ಅಲ್ಲ, ಅಲ್ಲ ಅದು ವಿವಾ'ಹ' ಆಗಿರಬಹುದು ಎಂದು ಮತ್ತೆ ಕೆಲವರು ತಮ್ಮ ವಾದವನ್ನು ಕುಣಿಕುಣಿದಾಡುತ್ತಲೇ ಮಂಡಿಸುತ್ತಿದ್ದುದು ಕಂಡುಬಂದಿತ್ತು.
ಕೊಟ್ಟ ಕೊನೆಗೆ, ಅದು ನಿಜವಾಗಿ ಏನು ಅಂತ ಸರಿಯಾಗಿ ತಿಳಿದುಕೊಳ್ಳುವಷ್ಟು ತಾವು ಶಾಲೆಗೆ ಹೋಗಿ ಅಕ್ಷರಗಳನ್ನು, ಮಾತ್ರೆಗಳನ್ನು, ಶಬ್ದಗಳನ್ನು ಕಲಿತಿಲ್ಲವಾದುದರಿಂದ, ಈ ಕುರಿತು ಅಂತಿಮ ತೀರ್ಮಾನವನ್ನು ದೊಡ್ಡವಾರದ ಬಳಿಕ ತೆಗೆದುಕೊಳ್ಳುವುದಾಗಿಯೂ, ಅದುವರೆಗೆ ವಿಚ್ಛೇದನ ಎಂಬುದು ಎಲ್ಲಿಯಾದರೂ ಕಂಡುಬಂದರೆ, ಅದಕ್ಕೆ ನಕಾರ ಸೂಚಿಸಲೂ ನಿರ್ಣಯಿಸಲಾಯಿತು.
8 ಕಾಮೆಂಟ್‌ಗಳು
funny, keep writing
ಪ್ರತ್ಯುತ್ತರಅಳಿಸಿಈ ಡೈವೋರ್ಸ್ ಎಂಬುದು ಇತ್ತೀಚೆಗೆ ಭಾರತದಲ್ಲಿ ಒಂದು ಸಾಮಾನ್ಯ ಅಂಶವಾಗಿದೆ. ಏಕೆಂದರೆ ಇಲ್ಲಿನ ಮಹಿಳೆಯರೂ ಕೂಡಾ ಪುರುಷನ ಸಮಾನ ಬರಲು ಪ್ರಯತ್ನಿಸುತ್ತಿರುವುದರಿಂದ ಇಬ್ಬರ ನಡುವೆ ವೈಮನಸ್ಯ ಹೆಚ್ಚಿ, ಅವರ ನಡುವಿನ ಸಂಬಂಧ ಹಳಸುವುದು ಸಾಮಾನ್ಯವಾಗಿದೆ. ಆದರೆ ಇಲ್ಲಿ ವಿಚ್ಚೇದನ ಪುರುಷ-ಪುರುಷರಿಗೋ ಅಥವಾ ಪುರುಷ-ಮಹಿಳೆಗೋ ಎಂಬುದು ಇಲ್ಲಿ ಚರ್ಚಾರ್ಹ ವಿಷಯ.
ಪ್ರತ್ಯುತ್ತರಅಳಿಸಿಸರ್,
ಪ್ರತ್ಯುತ್ತರಅಳಿಸಿಈ ಡೈವರ್ಸ್ ವಿಚಾರವನ್ನು ಇಷ್ಟೋಂದು ತಮಾಷೆಯಾಗಿ ಬರೆದಿರುವುದು ನನಗೆ ಖುಷಿಯಾಯಿತು...
ಮುಂದುವರಿಸಿ...
ಧನ್ಯವಾದಗಳು...
ಮೊದಲು ಮಕ್ಕಳನ್ನೇ ಡೈವೋರ್ಸ್ ಮಾಡಿದ್ರೆ ತೊಂದರೆಯೇ ಇರೋಲ್ಲ ಅಲ್ವಾ? :o
ಪ್ರತ್ಯುತ್ತರಅಳಿಸಿಸಾಗರದಾಚೆಯ ಇಂಚರರೆ,
ಪ್ರತ್ಯುತ್ತರಅಳಿಸಿನೀವು ನಮ್ಮನ್ನು ಫನ್ನಿ ಎಂದು ಕರೆದಿದ್ದು ಸಖೇದಾಶ್ಚರ್ಯಕ್ಕೆ ಕಾರಣವಾಗಿದೆ. ಧನ್ಯವಾದ.
ಗುರುಗಳೆ,
ಪ್ರತ್ಯುತ್ತರಅಳಿಸಿಇದು ಜೀವನದಲ್ಲಿ ಆಗಾಗ ಡೈವ್ ಹೊಡೆಯುವ ಪ್ರಯತ್ನ ಎಂದು ಕಂಡುಕೊಳ್ಳಲಾಗಿದೆ.
ಶಿವು ಅವರೆ,
ಪ್ರತ್ಯುತ್ತರಅಳಿಸಿಡೈವರ್ಸನ್ನು ಇಷ್ಟು ಚೆನ್ನಾಗಿ ಬರೆದು ಕೊಟ್ಟಿರುವುದು ಖುಷಿಯಾಯಿತೇ?
ಇಲ್ಲ, ಇಲ್ಲ, ನಾವು ಕೊಟ್ಟೇ ಇಲ್ಲ ಅಂತ ಖಡಾಖಂಡಿತವಾಗಿ ಹೇಳುತ್ತಿದ್ದೇವೆ.
ಶ್ರೀನಿವಾಸರೆ,
ಪ್ರತ್ಯುತ್ತರಅಳಿಸಿಮಕ್ಕಳು ಅವರವರೇ ಆಗಾಗ ಟೂ ಬಿಡುತ್ತಿರುತ್ತಾರಲ್ಲ... ಅದೇ ಸಾಕು ಅವರಿಗೆ...
ಏನಾದ್ರೂ ಹೇಳ್ರಪಾ :-D