(ಬೊಗಳೂರು ನಕಲಿ ಮತದಾರ ಬ್ಯುರೋದಿಂದ)
ಬೊಗಳೂರು, ಮಾ.30- ದೇಶದಲ್ಲಿ ಚುನಾವಣೆಯ ಕಾವು ಏರತೊಡಗಿ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿ ಬಿಡುಡೆಗೆ ತಡವರಿಸುತ್ತಿರುವಂತೆಯೇ, ಚುನಾವಣಾ ಆಯೋಗವು ಅಕ್ರಮ ಮತದಾರರು, ನಕಲಿ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿರುವ ಅಕ್ರಮ ಮತದಾರರು, ನಕಲಿ ಮತದಾರರ ಸಂಘವೊಂದನ್ನು ಕಟ್ಟಿಕೊಂಡು, ತಮಗೂ ಮತದಾನದ ಹಕ್ಕು ನೀಡಬೇಕೆಂದು ಒತ್ತಾಯಿಸತೊಡಗಿದ್ದಾರೆ.ಇಷ್ಟಕ್ಕೆಲ್ಲಾ ಪ್ರಧಾನ ಕಾರಣವಾಗಿರುವುದೆಂದರೆ, ದೇಶದ ಜನಸಂಖ್ಯೆ 100 ಕೋಟಿ ದಾಟಿ, ಹೆಚ್ಚಿನ ಮಕ್ಕಳು ಬಲು ಬೇಗನೇ ಮತದಾನಕ್ಕೆ ಪ್ರಾಪ್ತ ವಯಸ್ಕರಾಗುತ್ತಿದ್ದರೂ, ತಮಿಳುಕಾಡಿನಲ್ಲಿ ಮತದಾರರ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗಿದೆ. ಅಂದರೆ ಈ ಬಾರಿ 53 ಲಕ್ಷ ಮತದಾರರು ಪಟ್ಟಿಯಿಂದ ಹೊರಕ್ಕೆಸೆಯಲ್ಪಟ್ಟಿದ್ದಾರೆ ಎಂಬುದು ನಕಲಿ ಮತದಾರರ ಆರೋಪ.
53 ಲಕ್ಷ ನಕಲಿ ಮತದಾರರು ಇದೀಗ ನಿರುದ್ಯೋಗಿಗಳಾಗಿದ್ದು, ಓಟು ಹಾಕಲು ಇದುವರೆಗೆ ಹಣವಾದರೂ ಸಿಗುತ್ತಿತ್ತು. ಈ ಆರ್ಥಿಕ ಹಿಂಜರಿತದ ಸ್ಥಿತಿಯಲ್ಲಿ ಇನ್ನುಮುಂದೆ ಜೀವನ ನಡೆಸುವುದೇ ದುಸ್ತರವಾಗಿದೆ ಎಂದಿರುವ ನಕಲಿ ಮತದಾರರ ಸಂಘದ ಅಧ್ಯಕ್ಷ ನಕಲೇಶ್ ಅವರು, ಈ ಬಗ್ಗೆ ಸುಪ್ರೀಂಕೋರ್ಟಿನ ಮೊರೆ ಹೋಗುವುದಾಗಿ ಹೇಳಿದ್ದಾರೆ.
ತಾವು ಕೂಡ ಈ ದೇಶದಲ್ಲೇ ಹುಟ್ಟಿದವರು. ತಲೆ ತಲಾಂತರದಿಂದಲೂ ತಮಗೆ ಮತ ಚಲಾಯಿಸುವುದೇ ಉದ್ಯೋಗವಾಗಿತ್ತು. ವಾಸ್ತವವಾಗಿ ನಾವು ಹುಟ್ಟುವ ಮೊದಲೇ ಮತ ಚಲಾಯಿಸಲು ಆರಂಭಿಸಿದ್ದೆವು ಎಂದಿರುವ ಅವರು, ಇದೀಗ ತಮ್ಮ ಜನ್ಮಜಾತ ಹಕ್ಕನ್ನು ಕಿತ್ತುಕೊಳ್ಳಲಾಗಿದೆ ಎಂದು ಅಲವತ್ತುಕೊಂಡಿದ್ದಾರೆ.
ನಮ್ಮ ಸಮುದಾಯದಲ್ಲಿ, ಇನ್ನೂ ಹುಟ್ಟದವರು, ಈಗಾಗಲೇ ಜಾರಕಾರಣಿಗಳ ಭರವಸೆಯ ಮಹಾಪೂರದಲ್ಲಿ ಕೊಚ್ಚಿಹೋಗಿ ಪರಲೋಕಕ್ಕೆ ಯಾತ್ರೆ ಬೆಳೆಸಿದವರು, ಕಳ್ಳರು, ಸುಳ್ಳರು, ಮಳ್ಳರು, ಅಧಮರು, ಅತ್ಯಾಚಾರಿಗಳು, ಕ್ರಿಮಿನಲ್‌ಗಳು... ಹೀಗೆ ವಿವಿಧ ಪಂಗಡಗಳಿವೆ. ಅಸಲಿ ಮತದಾರರಿಗಿಂತ ನಮ್ಮ ಸಂಖ್ಯೆ ಕಡಿಮೆ ಇದೆ (ಕೆಲವು ಏರಿಯಾಗಳನ್ನು ಹೊರತುಪಡಿಸಿ). ಹೀಗಾಗಿ ನಮ್ಮನ್ನು ಕೂಡ ಅಲ್ಪಸಂಖ್ಯಾತರು ಎಂದು ಪರಿಗಣಿಸಿ ನಮಗೂ ಮೀಸಲಾತಿ ಕಲ್ಪಿಸುವಂತೆ ಅಲ್ಪಸಂಖ್ಯಾತರ ರಕ್ಷಣೆ ಮಾಡುವ ಏಕೈಕ ಪಕ್ಷವಾಗಿರುವ ಕಾಂಗ್ರೆಸ್‌ನ ಮೊರೆ ಹೋಗುವುದಾಗಿ ನಕಲೇಶ್ ಸ್ಪಷ್ಟಪಡಿಸಿದ್ದಾರೆ.
ಇದಲ್ಲದೆ, ವರ್ಷ ವರ್ಷ ಮತದಾರರ ಸಂಖ್ಯೆ ಹೆಚ್ಚಾಗುತ್ತಿರಬೇಕು. ಆದರೆ ಈ ಬಾರಿ ಮತದಾರರ ಸಂಖ್ಯೆ 53 ಲಕ್ಷದಷ್ಟು ಕಡಿಮೆಯಾಗುವುದೆಂದರೆ ಅದು ಪ್ರಜಾಪ್ರಭುತ್ವಕ್ಕೇ ಕಳಂಕ ಎಂದೂ ಅವರು ಎತ್ತಿ ಎತ್ತಿ ತೋರಿಸಿದ್ದಾರೆ.
6 ಕಾಮೆಂಟ್‌ಗಳು
Congrats on moving to own domain (hope it is not nakli...)
ಪ್ರತ್ಯುತ್ತರಅಳಿಸಿಎಲ್ಲೆಲ್ಲೂ ಈಗ ಅಕ್ರಮ-ಸಕ್ರಮ ನಡೀತಾ ಇದೆ. ಅಕ್ರಮ ನಿವೇಶನಗಳು, ನಳ ಜೋಡಣೆ ಹಾಗೂ ಅಕ್ರಮ ಸಂತಾನ ಎಲ್ಲವೂ
ಪ್ರತ್ಯುತ್ತರಅಳಿಸಿಈಗ ಸಕ್ರಮ. ಆದುದರಿಂದ ಅಕ್ರಮ ಮತದಾರರನ್ನು ಸಕ್ರಮಗೊಳಿಸುವದು ಯೋಗ್ಯವಾಗಿದೆ. ನಿಮ್ಮ ವರದ್ದಿಯಿಂದ
ಅಕ್ರಮ ಮತಬ್ಯಾಂಕಿನ ಪಕ್ಷ Con-guessಗೆ ತುಂಬಾ ಪ್ರಯೋಜನವಾಗಿದೆ ಎಂದು ಹೇಳಲು ಸಂತೋಷಿಸುತ್ತೇನೆ.
ಶ್ರೀನಿಧಿ ಅವರೆ,
ಪ್ರತ್ಯುತ್ತರಅಳಿಸಿನೀವೇ ನಮಗೆ ಪ್ರೇರಣೆ... ಖಂಡಿತವಾಗಿಯೂ ನಕಲಿ ಅಲ್ಲ :)
Thanks a lot...Actually I wanted to get your help. Still I tried, tried and tried...
ಸುನಾಥರೆ,
ಪ್ರತ್ಯುತ್ತರಅಳಿಸಿಹೌದು. con-manಗಳನ್ನು ಗೆಸ್ ಮಾಡೋ ಪಕ್ಷ ಈಗಾಗಲೇ ನಮ್ಮನ್ನು ಸಂಪರ್ಕಿಸಿ ಬೆನ್ನಿಗೆ ಗುದ್ದಿ, ಎನ್ಎಸ್ಎ ನಮ್ಮ ಮೇಲೂ ಪ್ರಯೋಗಿಸಲು ನಿರ್ಧರಿಸಿ ಶಹಭಾಸ್ ಹೇಳಿದೆ.
ಅಂದಹಾಗೆ, ನಾವು ಕೂಡ ನಮ್ಮ ಬ್ಲಾಗು ತಾಣವನ್ನು ಅಕ್ರಮ-ಸಕ್ರಮ ಮಾಡಿಕೊಂಡಿದ್ದೇವೆ.
You're welcome anytime. Assume you have my email ID.
ಪ್ರತ್ಯುತ್ತರಅಳಿಸಿGuess you need help with new template and stuff? mail me if there's anything I can help you with
yes Shrinidhi,
ಪ್ರತ್ಯುತ್ತರಅಳಿಸಿI have your ID and will seek your help soon.
Thank you very much in advance for your help.
ಏನಾದ್ರೂ ಹೇಳ್ರಪಾ :-D