(ಬೊಗಳೂರು ಬ್ರೇಕಿಂಗ್ ಬ್ಯುರೋದಿಂದ)
ಬೊಗಳೂರು, ಮಾ.9- ಇದು ನಿಜವಾದ ಬ್ರೇಕಿಂಗ್ ನ್ಯೂಸ್! ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ರಜಾಕಾರಣಿಗಳಿಂದ ಒಡಗೂಡಿದ ಮಜಾಕೀಯ ಪಕ್ಷಗಳು ಹೇಗಾದರೂ ಮಾಡಿ ಒಂದೆರಡು ಸೀಟು ಗಿಟ್ಟಿಸಿಕೊಳ್ಳಬೇಕೆಂಬ ಕಸರತ್ತಿನಲ್ಲಿ ಇದ್ದ ಮೈತ್ರಿಯನ್ನು ಮುರಿದುಕೊಂಡು ಹೊಸ ಮೈತ್ರಿ ಬೆಸೆದುಕೊಂಡೋ, ಅಥವಾ ಚಿರ ವಿರಹಿಯಂತೆಯೋ ಮುಂದುವರಿಯಲು ಸಿದ್ಧವಾಗಿದ್ದಾರೆ.
ಒರಿಸ್ಸಾದಲ್ಲಿಯೂ ಬ್ರೇಕಿಂಗ್ ನ್ಯೂಸ್, ತತ್ತರ ಪ್ರದೇಶದಲ್ಲಂತೂ ಆಗಾಗ್ಗೆ ಬ್ರೇಕ್ ಆಗುತ್ತಲೇ ಇರುವ ನ್ಯೂಸ್, ಇನ್ನೊಂದೆಡೆ ಮಹಾರಾಷ್ಟ್ರದಲ್ಲಿಯೂ ತೇಪೆ ಹಚ್ಚಲು ಪ್ರಯತ್ನಿಸಲಾಗುತ್ತಿರುವ ಬ್ರೇಕಿಂಗ್ ನ್ಯೂಸ್ ಕೇಳಿಬರುತ್ತಿದೆ.
ಈ ಬ್ರೇಕಿಂಗ್ ಸುದ್ದಿಗಳಿಂದಾಗಿ ಒಂದೊಂದು ಸರಕಾರವೇ ಬ್ರೇಕ್ ಆಗತೊಡಗಿರುವುದರಿಂದ, ಇದಕ್ಕೆಲ್ಲಾ ಸುದ್ದಿ ಚಾನೆಲ್‌ಗಳು ಮತ್ತು ಸುದ್ದಿ ಚಾನೆಲ್, ಪತ್ರಿಕೆ, ಆನ್‌ಲೈನ್ ಮಾಧ್ಯಮ ಎಂದೆಲ್ಲಾ ಬೊಗಳೆ ಬಿಟ್ಟುಕೊಳ್ಳುತ್ತಿರುವ ಬೊಗಳೂರು ಬ್ಯುರೋ ಕೂಡ ಆಗಾಗ್ಗೆ Breaking news ಹಾಗೂ Barking news ನೀಡುತ್ತಿರುವುದೇ ಕಾರಣ ಎಂಬ ಎದುರಾಳಿಗಳ ಸಂಶೋಧನೆಯೊಂದು ಏಕದಸದಸ್ಯ ಬೊಗಳೆ ಬ್ಯುರೋದ ಸಮಸ್ತ ಸಿಬ್ಬಂದಿಗಳು ಗಹಗಹಿಸಿ ಅಳುವುದಕ್ಕೆ ಮತ್ತು ಬಿಕ್ಕಿ ಬಿಕ್ಕಿ ನಗುವುದಕ್ಕೆ ಕಾರಣವಾಗಿದೆ.
ಈ ಬ್ರೇಕಿಂಗ್ ನ್ಯೂಸ್‌ಗಳೆಲ್ಲಾ ಬ್ರೇಕ್ ಫೇಲ್ ಆದ ಗಾಡಿಗಳಿಗಿಂತಲೂ ಹೆಚ್ಚು ವೇಗದಲ್ಲಿ ಕಡಿದಾದ, ತಿರುವು ಮುರುವುಗಳುಳ್ಳ ಚುನಾವಣಾ ರಸ್ತೆಯಲ್ಲಿ ಧಾವಿಸುತ್ತಿರುವ ಮಧ್ಯೆ, ಬ್ರೇಕ್ ಹಾಕುವ ಸುದ್ದಿಯೊಂದು ಅಪರೂಪವಾಗಿ ಬಂದಿದೆ. ದಾಂಪತ್ಯ ಬ್ರೇಕಿಂಗ್ ಆಗುವ ಸಂಗತಿಗೆ ನ್ಯಾಯಾಲಯವು ಬ್ರೇಕ್ ಹಾಕಿದೆ.
ಇಷ್ಟೇ ಆದರೆ ಸುಮ್ಮನಿರಬಹುದಿತ್ತು. ಇತ್ತೀಚೆಗೆ ಸ್ಲಮ್ಮು ಡಾಗು ಕೂಡ ರೆಕಾರ್ಡ್ ಬ್ರೇಕ್ ಮಾಡಿ ಆಸ್ಕರ್ ತಂದಿದೆ. ಅದರೊಂದಿಗೆ ನಿನ್ನೆಯಷ್ಟೇ ಸಿಡಿಲಮರಿ ಸಚಿನ್ ತೆಂಡುಲ್ಕರ್ ಸಹಿತ ಟೀಂ ಇಂಡಿಯಾ ಕೂಡ ಸಾಕಷ್ಟು ರೆಕಾರ್ಡ್ ಬ್ರೇಕ್ ಮಾಡಿವೆ.
ಈ ಎಲ್ಲ ಕಾರಣಗಳಿಗಾಗಿ ಶೀಘ್ರದಲ್ಲೇ ಬೊಗಳೂರು ಬ್ಯುರೋದಿಂದ ಎಲ್ಲ ಸುದ್ದಿ ಚಾನೆಲ್ಲುಗಳಿಗೆ, ಪತ್ರಿಕೆಗಳಿಗೆ ಬ್ರೇಕಿಂಗ್ ನ್ಯೂಸ್ ಪೂರೈಸಬಲ್ಲ ವಿಶಿಷ್ಟ ಚಾನೆಲ್ ಅಥವಾ ಏಜೆನ್ಸಿಯೊಂದನ್ನು ಆರಂಭಿಸಲು ನಿರ್ಧರಿಸಲಾಗಿದೆ. ಆದರೆ ಇಲ್ಲಿ ಯಾವುದೇ ಬಾಟಲಿ ಬ್ರೇಕಿಂಗ್ ಅಥವಾ ತಲೆ ಬ್ರೇಕಿಂಗ್ ನ್ಯೂಸ್ ಇರಲಾರದು ಎಂದು ಶಂಕಿಸಲಾಗುತ್ತಿದೆ.
4 ಕಾಮೆಂಟ್‌ಗಳು
India is shining ಅನ್ನೋ ಘೋಷಣೆಯನ್ನು
ಪ್ರತ್ಯುತ್ತರಅಳಿಸಿIndia is breaking ಅನ್ನೋ ಘೋಷಣೆಗೆ ಬದಲಾಯಿಸ್ಕೋಬಹುದು!
India is fully breaking..!!
ಪ್ರತ್ಯುತ್ತರಅಳಿಸಿಸುನಾಥರೆ,
ಪ್ರತ್ಯುತ್ತರಅಳಿಸಿಈಗ ಚುನಾವಣೆ ಬಂದಿದೆ... ಇನ್ನು ಇಂಡಿಯಾ wineಇಂಗ್!!!!
ಶಿವು ಅವರೆ,
ಪ್ರತ್ಯುತ್ತರಅಳಿಸಿಹೌದು ಹೌದು... ಬಾಟಲಿ ಬ್ರೇಕಿಂಗ್ ಮತ್ತು ಕುಡಿವ ದಾಖಲೆಯ ಬ್ರೇಕಿಂಗೂ ಕೆಲವೆಡೆ ಈಗಾಗ್ಲೇ ಆರಂಭವಾಗಿದೆ...
ಏನಾದ್ರೂ ಹೇಳ್ರಪಾ :-D