(ಬೊಗಳೂರು ತಡವಾಗಿ ಬ್ರೇಕ್ ಆದ ಸುದ್ದಿ ಬ್ಯುರೋದಿಂದ)
ಬೊಗಳೂರು, ಜ.23- ಲಫಡಾನಿಸ್ತಾದಲ್ಲಿ ಗಡ್ಡ ಬೋಳಿಸಬಾರದು ಎಂದು ಬೇತಾಳೀಬಾನ್‌ಗಳು ಆದೇಶ ಹೊರಡಿಸಿರುವ ಹಿಂದಿನ ಉದ್ದೇಶವನ್ನು ಬೊಗಳೂರಿನ ಬ್ಯುರೋ ಇದೀಗ ಬಂದ ಸುದ್ದಿ ಪ್ರಕಾರ ಪತ್ತೆ ಹಚ್ಚಿದೆ. ಗಡ್ಡವನ್ನು ಎಳೆದವನಿಗೆ ಮಿಠಾಯಿ ಎಂಬುದು ಕೂಡ ಒಂದು ಕಾರಣವಾಗಿದ್ದರೂ, ಪ್ರಧಾನ ಕಾರಣ ಬೇರೆಯೇ ಇತ್ತು. ಅದನ್ನು ಇಲ್ಲಿ ನಿಧಾನವಾಗಿ, ಮತ್ತು ಶೀಘ್ರವೇ ಬ್ರೇಕಿಂಗ್ ನ್ಯೂಸ್ ವಿಭಾಗದಲ್ಲಿ ಪ್ರಕಟಿಸಲು ನಿರ್ಧರಿಸಲಾಗಿದೆ.
ಪ್ರಧಾನ ಕಾರಣವನ್ನು ಬ್ರೇಕ್ ಆಗುವ ನ್ಯೂಸ್ ಎಂದು ತಿಳಿದುಕೊಂಡು ಈ ರೀತಿ ಓದಬಹುದು:
ಬಾರ್ಕಿಂಗ್ ನ್ಯೂಸ್: ಅಫ್ಘಾನಿಸ್ತಾನದಲ್ಲಿ ಗಡ್ಡ ಎಳೆಯುವುದು ನಿಷೇಧ
ಬಾರ್ಕಿಂಗ್ ನ್ಯೂಸ್: ಗಡ್ಡ ಬೋಳಿಸಿದರೆ ಭೀಕರ ದಂಡ, ಗಡ್ಡ ಎಳೆದರೆ ಮಿಠಾಯಿ
ಇವಿಷ್ಟು ಬೆಳಗ್ಗಿನಿಂದ ಸಂಜೆಯವರೆಗೂ ಬಾರ್ಕ್ ಆಗುತ್ತಲೇ ಇರುತ್ತಾ, ಆ ಬಳಿಕ ನಿಧಾನವಾಗಿ ಬರುವ ಮುಖ್ಯ ಸುದ್ದಿಯ ಸಾರಾಂಶವೆಂದರೆ, ಅಲ್ಲಿ ಯಾಕೆ ಗಡ್ಡ ಬೋಳಿಸಬಾರದು ಎಂದು ಆದೇಶ ನೀಡಲಾಗಿದೆ ಎಂಬುದು. ಅದನ್ನು ಮತ್ತೆ ಮತ್ತೆ ಸಂಶೋಧಿಸಿದಾಗ ದೊರೆತ ಏಕೈಕ ಫಲಿತಾಂಶವೆಂದರೆ, ಗಡ್ಡ ಬೋಳಿಸಿದರೆ, ಅದರೊಳಗೆ ಬಾಂಬುಗಳನ್ನು ಅಡಗಿಸಿಟ್ಟುಕೊಂಡು ಅಲ್ಲಲ್ಲಿ ದಾಳಿ ಮಾಡುವುದಾದರೂ ಹೇಗೆ? ಹೀಗಾಗಿ ಗಡ್ಡ ಬಂದ ತಕ್ಷಣವೇ ಪೊದೆಯಂತೆ ಅದನ್ನು ಉಳಿಸಿಕೊಂಡು ಬಾಂಬುಗಳನ್ನು ನೇತು ಹಾಕಿಕೊಳ್ಳಲು ಸುಲಭವಾಗುತ್ತದೆ.
6 ಕಾಮೆಂಟ್‌ಗಳು
ತಾಲಿಬಾನಿನವನ ಗಡ್ಡ
ಪ್ರತ್ಯುತ್ತರಅಳಿಸಿಆಯ್ತು ಬಾಂಬಿಗೆ ಅಡ್ಡಾ
ಗಡ್ಡ ಬೋಳಿಸಿದವ ದಡ್ಡ !
ಅಯ್ಯೋ ಕವಿತೆ ಆಗೋಯ್ತಲ್ಲ...ಆದ್ರೂ ಇರ್ಲಿ ಬಿಡಿ.ಅಲ್ವಾ ?
ಹೆಂಗಸರಾದರೆ ತಮ್ಮ ಚವರಿಯಿಂದಲೇ ಗಾಳಿ ಬೀಸಿಕೊಳ್ಳುತ್ತಾರೆ; ಗಂಡಸಿರಿಗೆ ಗಾಳಿ ಬೀಸಿಕೊಳ್ಳಲು (ಅಥವಾ ನೊಣ ಓಡಿಸಲು)
ಪ್ರತ್ಯುತ್ತರಅಳಿಸಿಕೊನೇ ಪಕ್ಷ ಉದ್ದನೆಯ ಗಡ್ಡವಾದರೂ ಇರಲಿ ಎನ್ನುವದು ತಾಲಿಬಾನಿಗಳ ಅಂತರಂಗದ ಉದ್ದೇಶ!
ಲಕ್ಷ್ಮಿ ಅವರೆ,
ಪ್ರತ್ಯುತ್ತರಅಳಿಸಿನೀವಿಲ್ಲಿ ಹಾಕಿರೋ ಕವಿ-ತೆಗಳನ್ನು ನಮ್ಮ ಕಾಪಿರೈಟ್‌ನಡಿ ಪ್ರಕಟಿಸ್ತೀವಿ ಎಂದ ತಕ್ಷಣ ರದ್ದಿ ಚಾನೆಲುಗಳಿಗೆ ಮತ್ತೊಂದು ಬಾರ್ಕಿಂಗ್ ನ್ಯೂಸ್ ಸಿಕ್ಕಂತಾಗುತ್ತೆ... ಆದ್ರೂ ಇರ್ಲಿ ಇಂತ ನಾವು ಕೂಡ ಹೇಳ್ತೀವಿ...
ಸುನಾಥರೆ,
ಪ್ರತ್ಯುತ್ತರಅಳಿಸಿತಾಲಿಬಾನಿಗಳ ಗಡ್ಡ ಆ ರೀತಿ ಗುಂಗುರು ಗುಂಗುರಾಗಿರುವುದಕ್ಕೆ ಕಾರಣವೆಂದ್ರೆ, ಗಡ್ಡ ಎಳೆದವಗೆ ಮಿಠಾಯೀನು ಕೊಡ್ತಿದ್ರು... ಅದನ್ನು ತಿನ್ನಲು ಬಂದ ಇರುವೆಗಳನ್ನು ಅವರೆಲ್ಲರೂ ಮನುಷ್ಯರನ್ನು ಕೊಂದಂತೆ ಅತ್ಯಂತ ಸುಲಭವಾಗಿ ಹೊಸಕಿ ಹಾಕ್ತಾ ಇದ್ರು... ಹೊಸಕುವಾಗ ಗಡ್ಡ ಗುಂಗುರಾಗುತ್ತಿತ್ತಂತೆ.
ಗಡ್ಡ ಬಿಟ್ಟವರೆಲ್ಲಾ ತಾಲಿಬಾನಿಗಳಲ್ಲ....
ಪ್ರತ್ಯುತ್ತರಅಳಿಸಿಕುರಾನ್ ಓದುವವರೆಲ್ಲಾ ಉಗ್ರಗಾಮಿಗಳಲ್ಲ...
ಮಸೀದಿಗೆ ಹೋಗುವವರೆಲ್ಲಾ ಮುಸ್ಲಿಮರಲ್ಲ....
ಚರ್ಚಿಗೆ ಹೋಗುವವರೆಲ್ಲಾ ಕ್ರಿಶ್ಚಿಯನ್ನರಲ್ಲ....
ದೇವಸ್ಥಾನಕ್ಕೆ ಹೋಗುವವರು ಮಾತ್ರ ಹಿಂದುಗಳು...
ಈ ದೇಶವನ್ನು ಪ್ರೀತಿಸುವವರು ದೇಶದ್ರೋಹಿಗಳು...
ಎಂದನಯ್ಯ ಒಬ್ಬ ಅಪ್ಪಟ ಕಾಂಗ್ರೆಜೆಡಿಸಿಪಿಐಎಂಎಐಡಿಎಂಕೆಎಸ್ಪಿಬಿಎಸ್ಪಿ ಸಂಸದ....
ಗುರುಗಳೇ,
ಪ್ರತ್ಯುತ್ತರಅಳಿಸಿನೀವು ಹೇಳಿದ ಎಲ್ಲ 'ಅಲ್ಲ, ಅಲ್ಲ'ಗಳ ಬದರು ಹೌದು ಹೌದು ಅಂತಾದರೆ ಮಾತ್ರ ಅವರು ಹಿಂದುಗಳು, ಕೋಮುವಾದಿಗಳು..
ಮತ್ತೆ ನೀವು ಹುಟ್ಟು ಹಾಕಿದ ಹೊಸ ಅರಾಜಕೀಯ ಪಕ್ಷ ಚೆನ್ನಾಗಿದೆ.
ಏನಾದ್ರೂ ಹೇಳ್ರಪಾ :-D