(ಬೊಗಳೂರು ತನಿಖಾ ವರದ್ದಿ ಬ್ಯುರೋದಿಂದ)
ಬೊಗಳೂರು, ಜ.7- 2008 ಮುಗಿಯತೊಡಗಿದಾಗಲೇ ಭಾರತ ಮತ್ತು ಪಾತಕಿಸ್ತಾನ ನಡುವಿನ ಬಾಂಧವ್ಯವು ದಿಢೀರ್ ಆಗಿ ಸೆನ್ಸೆಕ್ಸ್ನಂತೆ ಮೇಲಕ್ಕೆ ಹೋಗಿ, ಉಭಯ ದೇಶಗಳ ಗಡಿಯಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗುತ್ತಿರುವ ಲಕ್ಷಣಗಳು ಗೋಚರಿಸತೊಡಗಿದ್ದವು. ಹೀಗಾಗಿ ಗಡಿಭಾಗದಲ್ಲಿ ಭಾರೀ ಸರಕುಗಳನ್ನು ಹೊತ್ತ ಟ್ರಕ್ಕುಗಳು ಅತ್ತಿಂದ ಇತ್ತ, ಇತ್ತಲಿಂದ ಅತ್ತ ಚಲಿಸುತ್ತಿರುವುದನ್ನು ಬೊಗಳೂರು ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ.
ಇದರ ಹಿಂದೆ ಏನೋ ಇದೆ ಎಂದು ಸಂಚೋದನೆಗೆ ಹೊರಟಾಗ ಚೋದ್ಯ ಸಂಗತಿಯೊಂದು ಬಲವಾಗಿ ಬಯಲಾಗಿದೆ. ಗಡಿಭಾಗದಲ್ಲಿ ಸಂಚೋದನೆ ಮಾಡುತ್ತಿದ್ದಾಗ, ಭಾರತದ ಕಡೆಯಿಂದ ಲೋಡುಗಟ್ಟಲೆ ಟ್ರಕ್ಕುಗಳು ಹೋಗುತ್ತಿದ್ದರೆ, ಅದಕ್ಕಿಂತಲೂ ಹೆಚ್ಚು ಟ್ರಕ್ಕುಗಳು ಭಾರೀ ತೂಕದ ಸರಕು ಹೊತ್ತು ಭಾರತದತ್ತ ಬರುತ್ತಿದ್ದವು. ಇದರಲ್ಲಿ ಉಗ್ರಗಾಮಿಗಳು, ಅವುಗಳ ಬಾಂಬುಗಳು, ಎ.ಕೆ.47 ಎಲ್ಲ ಇದ್ದಿರಬಹುದೆಂಬ ಸಂಶಯವು ಎಲ್ಲರಿಗೂ ಕಾಡಿದಂತೆ ಬೊಗಳೂರು ಸಿಬ್ಬಂದಿಗೂ ಕಾಡಿತ್ತು.
Sooooo, ಕಣ್ಣಿಗೆ ಎಣ್ಣೆ ಹಾಕಿಕೊಂಡು, ಕೆಲವೊಮ್ಮೆ ಗೊತ್ತಾಗದಂತೆ ಹೊಟ್ಟೆಗೂ ಎಣ್ಣೆ ಹಾಕಿಕೊಂಡು ಕಾದು ಕುಳಿತು ಏನಾಗುತ್ತದೆ, ಟ್ರಕ್ಕುಗಳಲ್ಲಿ ಸಾಗುತ್ತಿರುವುದೇನು ಎಂದು ಪತ್ತೆ ಹಚ್ಚಲು ಶುರುವಾಯಿತು. ಭಾರತದಿಂದ ಅತ್ತ ಕಡೆ ಹೋಗುತ್ತಿರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅತ್ತ ಕಡೆಯಿಂದ ಬರುತ್ತಿರುವ ಸರಕಾರದರೂ ಏನು ಎಂದು ಚೋದಿಸಿದಾಗ ಬಯಲಾದ ಅಂಶವು ಬೊಗಳೂರಿನ ಸಮಸ್ತ ಓದುಗರನ್ನು ಪೇಚಿನಲ್ಲಿ ಸಿಲುಕಿಸಿದೆಯಾದರೂ ಅದು ಮಾಮೂಲಿ ಎಂಬಂತಹ ಮುಖಭಾವ ಪ್ರದರ್ಶಿಸಿದ್ದು ತಿಳಿಯಿತು.
ಹಾಗಿದ್ದರೆ ಅಂಥದ್ದೇನಿತ್ತು ಆ ಟ್ರಕ್ಕುಗಳಲ್ಲಿ?
ಹೌದು...
ಭಾರತದಿಂದ ಹೋಗುತ್ತಿರುವ ಟ್ರಕ್ಕುಗಳಲ್ಲಿ ಇದ್ದದ್ದು : ಮುಂಬಯಿ ದಾಳಿಯಲ್ಲಿ ಪಾತಕಿಸ್ತಾನಿ ಉಗ್ರರ ಕೈವಾಡವಿರುವ ಕುರಿತಾದ ಸಾಕ್ಷ್ಯಾಧಾರಗಳ ಮೂಟೆಗಳು.
ಅದಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಪಾತಕಿಸ್ತಾನದಿಂದ ಬರುತ್ತಿದ್ದುದೇನು?: ಇಲ್ಲ, ಇಲ್ಲ, ಗೊತ್ತಿಲ್ಲ, ಹಾಗೆ ಹೇಳೇ ಇಲ್ಲ, ಉಗ್ರರೇ ಅಲ್ಲ, ನಾವಲ್ಲ, ಅವರಲ್ಲ ಎಂಬಿತ್ಯಾದಿ ಅಲ್ಲಗಳೇ ಇರುತ್ತಿರುವ ನಿರಾಕರಣೆಯ ಹೇಳಿಕೆಗಳ ರಾಶಿ ರಾಶಿ ಮೂಟೆ!!!
8 ಕಾಮೆಂಟ್ಗಳು
ನೀವು customs department ನಲ್ಲಿ binoculars ಮತ್ತ ಭೂತಗಾಜು ಹಿಡಿದು ಕೂತು, ಸಂಚೋದನೆಯ ಜೊತೆ ಸಂಪಾದನೆಯನ್ನೂ ಮಾಡಬಹುದಿತ್ತು...ಅನ್ಯಾಯ, ಚಾನ್ಸ್ ಮಿಸ್ ಆಗೋಯ್ತು ನೋಡಿ.
ಪ್ರತ್ಯುತ್ತರಅಳಿಸಿನಿಜ..ನಿಜ.. ಆ ಕಡೆಯಿಂದ ರಾಶಿ ರಾಶಿ "ಅಲ್ಲ","ಅಲ್ಲ" ಗಳು ಬರುತ್ತಿವೆ...
ಪ್ರತ್ಯುತ್ತರಅಳಿಸಿಭಾರತ ಸರಕಾರದ ಸಹನೆ ಎಷ್ಟಿದೆ ಎಂದು ಪರೀಕ್ಷೆ ಮಾಡುತ್ತಿದ್ದಾರೆ ಅಷ್ಟೆ. ಆದರೆ ನಾವೇನೂ ಸೋಲುವವರಲ್ಲ ಬಿಡಿ :)
ಪ್ರತ್ಯುತ್ತರಅಳಿಸಿಭಾರತ, ಪಾಕಿಸ್ತಾನ ಎರಡೂ ದೊ(ದ)ಡ್ಡ ಪ್ರಜಾಪ್ರಭುತ್ವ ದೇಶಗಳೆಂಬುದು ಇಂತಹ exchangeದಿಂದ ಸಾಬೀತಾಗುತ್ತದೆ,
ಪ್ರತ್ಯುತ್ತರಅಳಿಸಿಅಲ್ಲವೆ?
ಲಕ್ಷ್ಮಿ ಅವರೆ,
ಪ್ರತ್ಯುತ್ತರಅಳಿಸಿಲಕ್ಷ್ಮಿ ಅವರೆ,
ಚಾನ್ಸ್ ಮಿಸ್ ಆಗಿದ್ದೇ ಅನ್ಯಾಯ ಅಂತ ಹೇಳಬಾರದು. ಅದೇ ನ್ಯಾಯ. ಮತ್ತೆ ಹೇಗೂ ಕಸ್ಟಮೈಸ್ ಡಿಪಾರ್ಟ್-ಮೆಂಟಲ್ ಸ್ಟೋರ್ನಲ್ಲಿ ಈಗಾಗ್ಲೇ ಸುದ್ದಿ ಸಂಪಾದನೆ ಮಾಡುತ್ತಲೇ ಇದ್ದೇವಲ್ಲ.
ಗಿರಿ ಅವರೆ,
ಪ್ರತ್ಯುತ್ತರಅಳಿಸಿಬೊಗಳೂರಿಗೆ ಸ್ವಾಗತ.
ನೀವು ಕೂಡ ಸುಳ್ಳಿನ ತಲೆ ಮೇಲೆ ಹೊಡೆದಂತೆ, ನಮಗೆ ಅಪ್ರಿಯವಾದ "ನಿಜ ನಿಜ" ಹೇಳುತ್ತಿದ್ದೀರಿ. ಈ ರೀತಿಯ ನಿಜಗಳನ್ನು ಮೆಲ್ಲ ಹೇಳದಿದ್ದರೆ ಕೋಮುವಾದಿಗಳು ಎಂಬ ಹಣೆ ಪಟ್ಟಿಯೂ ಅಂಟಿಸಿಬಿಟ್ಟಾರು.
ಬರ್ತಾ ಇರಿ.
ಶ್ರೀತ್ರಿ ಅವರೆ,
ಪ್ರತ್ಯುತ್ತರಅಳಿಸಿನಮ್ಮ ನಿಧಾನಿಗಳೇ ಬರೆದಿದ್ದು ತಾಳುವಿಕೆಗಿಂತನ್ಯ ತಪವು ಇಲ್ಲ ಎಂಬ ಪದವನ್ನು. ಅದನ್ನು ದಾಸರೇ ಬರೆದದ್ದಲ್ಲ ಎಂಬುದು ಜಾರಕಾರಣಿಗಳ ಸಮರ್ಥನೆ.
ಸುನಾಥರೆ,
ಪ್ರತ್ಯುತ್ತರಅಳಿಸಿಪಾತಕಿಸ್ತಾನವಂತೂ ನಮಗಿಂತ ಒಂದು ಹೆಜ್ಜೆ ಮುಂದೆಯೇ ಇದೆ. ಅಲ್ಲಿ ಉಗ್ರಪ್ರಭುತ್ವವೇ ಇದೆ.
ಏನಾದ್ರೂ ಹೇಳ್ರಪಾ :-D