(ಸೊಂಪಾದಕೀಯ)
ಮುಂಬಯಿ ಸ್ಫೋಟ ಪ್ರಕರಣಗಳಿಗೆ ಸಂಬಂಧಿ'ಸ'ದಂತೆ ಕೇಂದ್ರದ, ರಾಜ್ಯದ ಗೃಹ ಸಚಿವರು, ಮುಖ್ಯಮಂತ್ರಿಗಳು, ಅವರು, ಇವರು ಮತ್ತಿತರರು ರಾಜೀನಾಮೆ ನೀಡಿರುವುದನ್ನು ಬೊಗಳೂರು ಬ್ಯುರೋ ಗಹಗಹಿಸಿ ಖಂಡಿಸುತ್ತದೆ.ಇದಕ್ಕೆ ಪ್ರಧಾನ ಕಾರಣವೆಂದರೆ ಕೇಂದ್ರದ ಸಚಿವರು ರಾಜೀನಾಮೆ ನೀಡುವ ಅಗತ್ಯವೇ ಇರಲಿಲ್ಲ. ಕಳೆದ ನಾಲ್ಕಾರು ವರ್ಷಗಳಿಂದ ಅವರಿರುವಾಗ ಅದೆಷ್ಟೋ ಭಯೋತ್ಪಾದಕ ಘಟನೆಗಳು ನಡೆಯುತ್ತಿರಲಿಲ್ಲವೇ? ಅವರಿರುವಾಗಲೂ ಸಾಕಷ್ಟು ನಡೆದಿದೆ. ಇನ್ನು ಅವರಿಲ್ಲದಿದ್ದರೆ ಕಡಿಮೆಯಾಗುವ ಸಾಧ್ಯತೆ ಇದೆಯೇ? ಎಂಬ ಮೂಲ ಭೂತ ಪ್ರಶ್ನೆ.
ಅವರು ಆ ಪದವಿಯಲ್ಲಿರುವಾಗಲೂ ಯಾವುದೇ ಭಯೋತ್ಪಾದನಾ ಕೃತ್ಯಗಳನ್ನು ಬಲವಾಗಿಯೇ, ಒತ್ತಿ ಒತ್ತಿಯೇ ಖಂಡಿಸುತ್ತಿದ್ದರು. ಮುಂದೆಯೂ ಖಂಡಿಸುತ್ತಾರೆ. ಇಷ್ಟಕ್ಕೂ ಮಿಗಿಲಾಗಿ, ಬೊಗಳೆ ಬ್ಯುರೋದ ಈ ಖಂಡನೆಗೆ ಪ್ರಧಾನ ಕಾರಣವೆಂದರೆ, ಅವರು ಗೃಹ ಸಚಿವರಾಗಿದ್ದರು ಎಂಬುದು ಯಾವುದೇ ಹಂತದಲ್ಲಿಯೂ ಯಾರಿಗೂ ತಿಳಿದಿರಲಿಲ್ಲ. ದೊಡ್ಡ ದೊಡ್ಡ ವಿಧ್ವಂಸಕಾರಿ ಕೃತ್ಯಗಳು ನಡೆದಾಗ ಖಂಡಿಸುವ ಸಂದರ್ಭದಲ್ಲಿ ಮಾತ್ರವೇ ನಮ್ಮ ಗೃಹ ಸಚಿವರು ಅವರಾಗಿದ್ದರು ಎಂದಷ್ಟೇ ಗೊತ್ತಾಗುತ್ತಿತ್ತು.
ಉಳಿದ ಸಂದರ್ಭಗಳಲ್ಲೆಲ್ಲಾ, ಅವರಿದ್ದರು ಎಂಬುದಕ್ಕೆ ಪುರಾವೆಯೇ ದೊರೆತಿರಲಿಲ್ಲ. ಇದೂ ಅಲ್ಲದೆ, ಇಷ್ಟು ಭೀಕರ ಕೃತ್ಯಕ್ಕೆ ಕೇಂದ್ರಕ್ಕೊಂದು ಬಲಿಪಶು ಬೇಕಾಗಿತ್ತು. ಅದನ್ನು ದೊಡ್ಡ -ಜವಾಬ್ದಾರಿಯುತ ಪದವಿಯ ಸಣ್ಣ ವ್ಯಕ್ತಿಯ ತಲೆಗೆ ಹೊರಿಸಿ, ಮುಂಬರುವ ಚುನಾವಣೆಗಳಲ್ಲಿ "ನಾವು ಮತ್ತೊಂದು ತ್ಯಾಗ, ಬಲಿದಾನ ಮಾಡಿದ್ದೇವೆ" ಎಂದು ಹೇಳಿಕೊಳ್ಳುವ ಅಸ್ತ್ರವನ್ನಾಗಿಯೇ ಬಳಸಲಾಗುತ್ತಿರುವುದರಿಂದ ಇದು ದೇಶದ ಪ್ರಜೆಗಳಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುದು ಖಚಿತವಾಗಿದೆ.
ಈಗಾಗಲೇ ಜನರು ಎಚ್ಚೆತ್ತುಕೊಂಡಿದ್ದು, ಭಯೋತ್ಪಾದನೆಯಲ್ಲೂ ರಾಜಕೀಯ ಮಾಡುವವರು ಈಗಾಗಲೇ After-shock ಗಳ ಕೊಡುಗೆ ಪಡೆಯುತ್ತಿದ್ದಾರೆ. ಮೋದಿಗೆ ಹೇಮಂತ ಕರ್ಕರೆ ಪತ್ನಿ, ಕೇರಳ ಮುಖ್ಯಮಂತ್ರಿಗೆ ಉನ್ನಿಕೃಷ್ಣನ್, ಮತ್ತು ಇನ್ನೊಂದೆಡೆ ಸಂಜಯ್ ನಿರುಪಮ್‌ಗೆ ಜನರು ಚುರುಕು ಮುಟ್ಟಿಸಿದ್ದಾರೆ. ಇಷ್ಟಾಗಿಯೂ ರಾಜಕಾರಣಿಗಳು ರಾಜಕೀಯ ಮಾಡುವುದರಿಂದ ಎಚ್ಚೆತ್ತುಕೊಳ್ಳದಿದ್ದರೆ, ನಮ್ಮ ಬೊಗಳೆಗೆ ಸುದ್ದಿಗೆ ಬರವಿರಲಾರದು ಎಂದು ಭರವಸೆ ನೀಡುತ್ತಿದ್ದೇವೆ. ಹಾಗೂ ನಾವು ಕೂಡ ಮೊಸಳೆ ಕಣ್ಣೀರು ಸುರಿಸುತ್ತೇವೆ.
2 ಕಾಮೆಂಟ್‌ಗಳು
ಹೌದ್ ಹೌದು...ಜರಾಕೀಯರ್ರನ್ನು ಹೊಡೆದಟ್ಟುವ ಬಗ್ಗೆ ನನ್ನದೂ ಒಂದು ಅನುಮೋದನೆ ಇದೆ.
ಪ್ರತ್ಯುತ್ತರಅಳಿಸಿಸರಕಾರಕ್ಕೆ ನಿಮ್ಮ ಅಣುಮೋದನೆ (ಇಂಡೋ-ಯುಎಸ್ ನ್ಯೂಕ್ಲಿಯರ್ ಬಂಧಕ್ಕೆ) ಮಾತ್ರ ಬೇಕಾಗಿತ್ತು. ಹೀಗಾಗಿ ಈ ಬಾರಿ ಅದು ತಗೊಳ್ಳಲ್ವಂತೆ.
ಪ್ರತ್ಯುತ್ತರಅಳಿಸಿನಿಮ್ಮ ಒಂದು ಕಣ್ಣುರಿಯ ದೃಷ್ಟಿ ನೋಡುದ್ರೆ ಜರಾಕಾರಣ್ಗಳು ಭಸ್ಮ.
ಏನಾದ್ರೂ ಹೇಳ್ರಪಾ :-D