(ಬೊಗಳೂರು ಬೊಗಳೆ ಬ್ಯುರೋದಿಂದ)
ಬೊಗಳೂರು, ಡಿ.3- ನುಡಿಸಿರಿಗೆ ಹೋದ ಬೊಗಳೂರಿನ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿ ಕಂಗಾಲಾಗಿ ಕುಲಗೆಟ್ಟು ಹೋಗಿದ್ದಾರೆ. ಇದಕ್ಕೆ ಕಾರಣವೆಂದರೆ ಬೊಗಳೂರಿನಿಂದ ಹೊರಗೆ ಕಾಲಿಟ್ಟ ತಕ್ಷಣವೇ ಒಂದಿಲ್ಲೊಂದು ಘಟನೆಗಳು ದೇಶದ ವಿವಿಧೆಡೆ ನಡೆಯುತ್ತಿರುವುದು.ಈ ಹಿಂದೆ ಒಮ್ಮೆ ಬೊಗಳೂರಿನಿಂದ ಹೊರಬಿದ್ದು ಮಂಗಳೂರಲ್ಲಿ ನೆಗೆದಾಗ ಕರ್ನಾಟಕದಲ್ಲಿ ಚರ್ಚ್ ಮೇಲೆ ದಾಳಿ ನಡೆಯಿತು, ಗಲಾಟೆ, ಹಿಂಸಾಚಾರ ಎಲ್ಲ ನಡೆದು ನಾಲ್ಕು ದಿನ ಬಂದ್. ಹೀಗಾಗಿ ಬೊಗಳೆ ಅಲ್ಲಿಗೆ ಬಂದು ಬಿದ್ದದ್ದೇ... ನಾಲ್ಕು ದಿನ ಏಳಲಿಲ್ಲ, ಆ ಬಳಿಕ ಮತ್ತೊಮ್ಮೆ ಬೊಗಳೂರಿನಿಂದ ಹೊರಗೆ ತಲೆ ಹಾಕಿದ ತಕ್ಷಣವೇ ಬೆಂಗಳೂರು, ಅಹಮದಾಬಾದ್ ಸರಣಿ ಬಾಂಬ್ ಸ್ಫೋಟಗಳು ನಡೆದವು. ಬೊಗಳೆಯ ಬೇಳೆ ಯಾವುದೂ ಬೇಯಲಿಲ್ಲ. ಈ ಬಾರಿಯೂ ಅಷ್ಟೇ, ಬೊಗಳೂರಿನಲ್ಲಿ ಮರೆಸಿಕೊಂಡಿದ್ದ ತಲೆಯನ್ನು ಹೊರಹಾಕಿದ್ದೇ ತಡ, ಮುಂಬಯಿಯು ಉಗ್ರರ ಸ್ವರ್ಗ ಆಗಿಹೋಯಿತು. ಬೊಗಳೆ ಸ್ತಬ್ಧವಾಯಿತು.
ಹೀಗಾಗಿ ಏನೂ ತಿಳಿಯದೆ ಅತ್ತಿತ್ತ ಸುಳಿದಾಡುತ್ತಿದ್ದಾಗ, ಬೊಗಳೂರಿನಿಂದ ಬೊ.ರ. ಬ್ಯುರೋ ಹೊರಬೀಳುವುದಕ್ಕೂ, ಉಗ್ರರ ದಾಳಿಗೂ ಖಚಿತ ಸಂಬಂಧವಿದೆ ಎಂದು ಗರಿಗರಿಯಾದ ಸೂಟು ಧರಿಸಿದ ಹಿಂದಿನ ಮನೆ ಮಂತ್ರಿಗಳು ಹೇಳಿಕೆ ನೀಡಿದ್ದು, ಅವರು ನೀಡಿರುವ ಹೇಳಿಕೆಗಳು ಉಗ್ರವಾದಕ್ಕಿಂತಲೂ ಉಗ್ರವಾಗಿ ಪರಿಣಮಿಸಿದ ಪರಿಣಾಮವಾಗಿ ಬೊಗಳೂರು ಸಿಬ್ಬಂದಿ ಅಸ್ವಸ್ಥರಾಗಿಬಿಟ್ಟರು.
ನುಡಿಸಿರಿಗೆ ಹೋದ ಬೊಗಳೆ ಯಾವುದೇ ರಗಳೆ ಮಾಡದಿರುವುದಕ್ಕೆ ಬಲವಾದ ಕಾರಣ ಅಲ್ಲಿ ದೊರೆತ ರಾಜೋಪಚಾರವೇ ಎಂಬ ವಾದವೂ ಒಂದೆಡೆಯಿಂದ ಕೇಳಿಬರುತ್ತಿದೆ. ನಮ್ಮ ಓದುಗರೆಲ್ಲರ ಭವ್ಯ ಹಾರೈಕೆಯಂತೆ ಅಲ್ಲಿ ಮೂರು ದಿನಗಳ ಕಾಲ ಮೆಲ್ಲಲು (ಅಂದರೆ ಮೇಯಲು) ಏನ್ ಸಿಗುತ್ತೋ... ಅದನ್ನೆಲ್ಲಾ ಮೊದಲ ದಿನವೇ ಕಬಳಿಸಿದ ಪರಿಣಾಮ, ಬೊಗಳೆ ಅಲ್ಲಿಗೆ ಬಂದು ಬಿದ್ದದ್ದು ನೇರವಾಗಿ ಹಾಸಿಗೆಗೆ. ನುಡಿಸಿರಿಯಲ್ಲಿ ಆಳ್ವರು ಬಡಿಸಿರಿ ಬಡಿಸಿರಿ ಎಂದಷ್ಟೇ ಹೇಳಿದ್ದು ಗೊತ್ತು. ಹಾಸಿಗೆಯಿಂದ ಎಚ್ಚರವಾದಾಗ, ಅವರ ಬಾಯಿಂದ ಗುಡಿಸಿರಿ ಸಾರಿಸಿರಿ ಎಂದು ಸಮ್ಮೇಳನದ ಆವರಣವನ್ನು ಸ್ವಚ್ಛಗೊಳಿಸುವ ಕರೆ ಕೇಳಿಬರುತ್ತಿತ್ತು! ಈಗ ಬೊಗಳೂರು ಸಿಬ್ಬಂದಿ ಸ್ವಸ್ಥರಾಗಿ ತಮ್ಮ ಸ್ವ-ಕಾರಸ್ಥಾನಕ್ಕೆ ಮರಳಿದ್ದು, ಕಾರ್ಯಾಚರಣೆ ಆರಂಭಿಸಲಿದ್ದಾರೆ ಎಂದು ತಿಳಿದುಬಂದಿದೆ.
8 ಕಾಮೆಂಟ್‌ಗಳು
Moral of the story is... ನಮಗೆ ಹೊಟ್ಟೆ ಉರಿಸಿ ಮೂಡುಬಿದಿರಿಗೆ ಹೋಗಿ ಮೇಯ್ದಿದ್ದಕ್ಕೆ ತಕ್ಕ ಶಾಸ್ತಿಯಾಯ್ತು. ಎಷ್ಟೇ ಆಗಲಿ ನನ್ನ ಶಾಪ...ತಟ್ಟದೇ ಇರತ್ತಾ ? ;-)
ಪ್ರತ್ಯುತ್ತರಅಳಿಸಿJokes apart, get well soon.
ತಮಿಳುಕಾಡಿನಲ್ಲಿ ನಿಮ್ಮ ಆಟ ನಡೆಯೋದಿಲ್ಲ ಅಂತಾಯ್ತಲ್ಲ!
ಪ್ರತ್ಯುತ್ತರಅಳಿಸಿಖಂಡಿತಾ ಎಲ್ಲಾದರೂ, ಏನಾದರೂ ಬುಡಮೇಲು ಕೃತ್ಯಗಳು ನಡೆಯುತ್ತವೆ ಅಂತ ನಿಮ್ಮ ಗಂಟು-ಮೂಟೆ ಕಂಡೇ ತಿಳಿದಿತ್ತು, ಪೂರ್ವ ಕರಾವಳಿಯಿಂದ ಪಶ್ಚಿಮ ಕರಾವಳಿಗೆ ಹಾರಿದ ನಿಮಗೆ ಲಾಗ ಹಾಕದೆ ಸುಮ್ಮನಿರಲಾಗುವುದಿಲ್ಲವೇ? ನುಡಿಸಿರಿ ಅಂದದ್ದನ್ನೆಲ್ಲ ಬಡಿಸಿರಿ ಬಡಿಸಿರಿ ಅಂತ ಬಡಬಡಿಸಿದ್ದು ಯಾಕೋ?
ಪ್ರತ್ಯುತ್ತರಅಳಿಸಿಲಕ್ಷ್ಮಿಯವರೆ,
ಪ್ರತ್ಯುತ್ತರಅಳಿಸಿಯಬ್ಬ ನೀವೂ ಆ ಒಂಟಿಕಣ್ಣಿನಿಂದ ನೋಡೋ ದೃಷ್ಟಿಯ ಮೂಲಕವೇ ನಿಮ್ಮ ಶಾಪ ನಮಗೆ ಸುರಕ್ಷಿತವಾಗಿ ಬಂದು ತಲುಪಿದೆ.
ಹಾಗು ನೀವು ಜೋಕ್ಸ್ ಅನ್ನು tear apart ಮಾಡಿದ್ರೂ, ನಾವು ಗೆಟ್ಟಿಂಗ್ ಇನ್ ಟು ದ ವೆಲ್ ಸೂನ್ ಆಗುತ್ತಿದ್ದೇವೆ...
thanks ;-)
ಸುನಾಥರೆ,
ಪ್ರತ್ಯುತ್ತರಅಳಿಸಿಅಂದ್ರೆ ಅಂದ್ರೆ ನಮಗೆ ತಮಿಳುಕಾಡೇ ಗತಿ... ನಾವು ತಮಿಳುಕಾಡು ಬಿಟ್ರೆ ದೇಶಕ್ಕೇ ಒಳಿತಲ್ಲ ಎಂಬುದಂತೂ ಸಾಬೀತಾಯ್ತು... ನಾವು ತಮಿಳುಕಾಡು ಬಿಟ್ಟದ್ರಿಂದ್ಲೇ ಕೇಂದ್ರದ ಮನೆಸಚಿವರು ಮನೆಯಿಂದ ಹೊರಬರಬೇಕಾಗಿದ್ದು...
ಅನಾನಸ್ ಅವರೆ,
ಪ್ರತ್ಯುತ್ತರಅಳಿಸಿನೀವು ನಮ್ಮ ಗಂಟು-ಮೂಟೆ ನೋಡಿದವರಾಗಿರುವುದರಿಂದ ನಿಮ್ಮ ಕಾರಸ್ಥಾನ ಮೂಡುಬಿದ್ರೆಯೇ ಇರಬೇಕೂ ಅಂತ ದಿಟವಾಯ್ತು... ನಾವೇನೂ ಬಡಿಸಿರಿ ಬಡಿಸಿರಿ ಎಂದಿರಲಿಲ್ಲ... ಅವರೇ ಬಡಿಸಿದ್ರು... ತಿಂದೆವು... ತಗೊಳ್ಳಿ... ಅಂತ ಹಾಸಿಗೇನೂ ಕೊಟ್ರು!
Ondu vishaya nimage kELale bEku. nuDisiriyalli nIvu Enu kaDidu hAkidrI? biDuva bogaLeyanna bogaLUrinalle biDabahudittallA? innondu vishaya nanna tarale manDege (manDige tinnuttaa ideeni adakke) bandide. naanantu hELalE bEku. nuDisiri naDeyuva samayadallE nIvu yAke 'guDisiri' samAveshavannu mADabAradu?
ಪ್ರತ್ಯುತ್ತರಅಳಿಸಿರಘು ಅವರೆ,
ಪ್ರತ್ಯುತ್ತರಅಳಿಸಿನುಡಿಸಿರಿಯಲ್ಲಿ ನಾವೇನೂ ಕಡಿದು ಹಾಕಿಲ್ಲ.. ಆದರೆ ಕುಡಿದು ಹಾಕಿದ್ದೇವೆ ಅಂತ ನಮ್ಮ ವಿರೋಧಿ ಪತ್ರಿಕೆಗಳವರು ವರದ್ದಿ ಮಾಡಿದ್ದಾರೆ.
ನುಡಿಸಿರಿಯಲ್ಲಿ ನಾವೂ ಗುಡಿಸಿ ಸಾರಿಸಿದ್ದೇವೆ ಎಂಬುದನ್ನು ಸಾಬೀತು ಪಡಿಸಲು ಶೀಘ್ರವೇ ಒಂದು ಧಾರಾವಾಹಿ ಪ್ರಕಟವಾಗಲಿದೆ.
ಏನಾದ್ರೂ ಹೇಳ್ರಪಾ :-D