ಮೂಡಬಿದ್ರಿಯಲ್ಲಿ ನಡೆಯುತ್ತಿರುವ ಸಾಹಿತ್ಯದ ಔತಣಕೂಟದಲ್ಲಿ ಸುಗ್ರಾಸ ಭೋಜನ ಮಾಡಲೆಂದು ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ದಂಡು ಕಟ್ಟಿಕೊಂಡು ಜಾತ್ರೆಗೆ ಹೊರಟಂತೆ ಹೊರಟಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.
ವಿಶೇಷವಾಗಿ ಅಲ್ಲಿನ ಭೋಜನಾಲಯ ಸಿಬ್ಬಂದಿಗೆ ಈ ಕುರಿತು ಎಚ್ಚರಿಕೆಯ ಮುನ್ಸೂಚನೆ ನೀಡಲಾಗಿದೆ. ಈಗಾಗಲೇ ಇದು ಸಾಹಿತ್ಯ ಸಮಾರಾಧನೆ, ಕನ್ನಡ ಸಾಹಿತ್ಯ ಜಾತ್ರೆ ಮತ್ತು ಸಾಹಿತ್ಯದ ರಸದೌತಣ ನಡೆಯಲಿದೆ ಎಂಬುದಾಗಿ ನಾಡೆಲ್ಲಾ ಪ್ರಚಾರವಾಗಿರುವ ಹಿನ್ನೆಲೆಯಲ್ಲಿ ಬೊಗಳೆ ರಗಳೆ ಬ್ಯುರೋಗೆ ಬ್ಯುರೋವೇ ಬಾಯಲ್ಲಿ ನೀರೂರಿಸಿದ ಕಾರಣ, ಬ್ಯುರೋ ಇರುವ ಚೆನ್ನೈಯಲ್ಲಿ ನೆರೆ ಹಾವಳಿ ಜೋರಾಗಿತ್ತು ಎಂಬುದನ್ನು ಪತ್ತೆ ಹಚ್ಚಲಾಗಿದೆ.
ನುಡಿಸಿರಿಯಲ್ಲಿ ಆಳ್ವರು ಏನನ್ನೆಲ್ಲಾ ಬಡಿಸಿರಿ ಅಂತ ಹೇಳುತ್ತಾರೆಯೋ, ಅದನ್ನು ಕೇಳಿಸಿಕೊಂಡು, ಯಾರೇ ಕುಡಿಸಿರಿ ಎಂದರೂ ಕುಡಿಯದೆ, ಬೊಗಳೆ ಬ್ಯುರೋಗೆ ಹೊಡೆಸಿರಿ ಎಂದು ಹೇಳದಂತೆ ಮಾಡಲು ಮುನ್ನೆಚ್ಚರಿಕೆ ವಹಿಸುತ್ತಾ ಮುನ್ನುಗ್ಗಲಾಗುತ್ತದೆ. ಶಾಸ್ತ್ರೀಯವಾಗಿ ಏನಾದರೂ ಚೆನ್ನುಡಿ, ಹೊನ್ನುಡಿ, ನಲ್ನುಡಿ, ಮೆಲ್ನುಡಿ, ಮೇಲ್ನುಡಿಗಳು ಸಿಕ್ಕಿದರೆ ಎತ್ತಿಕೊಂಡು ಬೊಗಳೆಯಲ್ಲೂ ಪ್ರಕಟಿಸಲಾಗುತ್ತದೆ.
ಅಲ್ಲೀವರೆಗೆ ಯಾರು ಕೂಡ ಖುಷಿಯಿಂದ ನಲಿದಾಡದಂತೆ ಸೊಂಪಾದಕರು ವರಾತವಾಚಕರ ಮೂಲಕ ಸುದ್ದಿ ಪ್ರಕಟಿಸಿದ್ದಾರೆ.
-ಸಂ
- Home
- NEWS
- _POLITICS
- __ಜಾರಕಾರಣ
- __ರಾಜಕೀಯ
- __ಪಾತಕಿಸ್ತಾನ
- _ELECTION
- __ಚುನಾವಣೆ
- __ಚುಚ್ಚುವ ಆಣೆ
- __ಎಲೆಕ್ಷನ್
- __ಓಟು
- _SPORTS
- BARKING NEWS
- YOUTH
- _ಭಗ್ನ ಹೃದಯ
- _ವಿಚ್ಛೇದನೆ
- _ಬಾಲ್ಯ ವಿವಾದ
- _ನಿರುದ್ಯೋಗ
- _ಬಾಲ-ಕರುಗಳ ಸಂಘ
- SCIENCE
- _ತಾಪಮಾನ
- _ಸಂಚೋದನೆ
- _ಕತ್ತರಿ ಪ್ರಯೋಗ
- _ಪ್ರಾಣಿ ನಿರ್ದಯ ಸಂಘ
- _ಒದೆಗಳು
- EDITORIAL
- EDUCATION
- _ಶೈ-ಕ್ಷಣಿಕ
- _ಬ್ಲಾಗಿನ
- _ಏಪ್ರಿಲ್ 1
- BUSINESS
- _ಕುದುರೆ ವ್ಯಾಪಾರ
- _ಆರ್ಥಿಕ ಸ್ಥಿತಿ
- _ವ್ಯವಹಾರ
- _ಜಾಹೀರಾತು
- __ನ್ಯಾನೋ
- HEALTH
- _ಕುಡುಕರ ಸಂಘ
- _ಅನಾರೋಗ್ಯ
- _ಜನಸಂಖ್ಯಾ ನಿಯಂತ್ರಣ
- INTERVIEWS
- _Someದರ್ಶನ
- _ಸಂದರ್ಶನ
12 ಕಾಮೆಂಟ್‌ಗಳು
ತಂಡಿಪೋತ ಸರ್ವಸದಸ್ಯರಿಗೆ ತಿಂಡಿ ಊಟ ಸಮೃದ್ಧವಾಗಿ ಸಿಗದಿರಲೆಂದು ಬಾಯ್ತುಂಬಾ ಹಾರೈಸುತ್ತೇವೆ.
ಪ್ರತ್ಯುತ್ತರಅಳಿಸಿ"ಬರೋ ಮುಂದ ಎರಡು ಪುಗ್ಗೆ
ಪ್ರತ್ಯುತ್ತರಅಳಿಸಿಕದ್ದು ತರಬೇಕು."
-ಬೇಂದ್ರೆ
"ದಂಡ" ಯಾತ್ರೆಗೆ ಜಯವಾಗಲಿ!
ಪ್ರತ್ಯುತ್ತರಅಳಿಸಿಅನ್ವೇಷಿಗಳೇ...ನನ್ನ ಮರೆತು ಬಿಟ್ಟಿರಾ?. ಹಾಗೇ ಬರುತ್ತಾ, ಬೆಂಗಳೂರಿಗೆ ಬಂದು ಹೋಗಿ...ಬರುವಾಗ ನುಡಿಸಿರಿಯಲ್ಲಿನ ಎಲ್ಲ ತಿಂಡಿಗಳ ಕೇವಲ ನಾಲ್ಕು ಸ್ಯಾಂಪಲ್‌ಗಳನ್ನು ಕಟ್ಟಿಕೊಂಡು ಬಂದಲ್ಲಿ ನಾವು ನಿಮಗೆ ಆಭಾರಿಗಳಾಗುತ್ತೇವೆ. ಅಂದ ಹಾಘೆ ಮುಂಬೈನಲ್ಲಿನ ಕೆಲ ಭಯೋತ್ಪಾದಕರು ನುಡಿಸಿರಿಗೆ ಲಗ್ಗೆ ಹಾಕುವ ಬಗ್ಗೆ ಗಾಳಿ ಸುದ್ದಿ. ಎಚ್ಚರವಿರಲಿ ಮಾರಾಯ್ರೆ....ತಿಂಡಿ ತಿನ್ನುವ ಭರದಲ್ಲಿ ಬಾಂಬ್ ಸ್ಪೋಟದ ಸದ್ದು ಕೇಳಿಸುತ್ತೆ ತಾನೆ?
ಪ್ರತ್ಯುತ್ತರಅಳಿಸಿಲಕ್ಷ್ಮಿ ಅವರೆ,
ಪ್ರತ್ಯುತ್ತರಅಳಿಸಿನಿಮ್ಮ ಹಾರೈಕೆಯಂತೆಯೇ ನಡೆದುಕೊಂಡಿದ್ದೇವೆ. ಕೂಡಲೇ ನಿಮ್ಮ ಪಾಲಿನದನ್ನು ಕೊರಿಯರಿನಲ್ಲಿ ಕಳುಹಿಸಿಬಿಡಿ. ಕಾಯುತ್ತಿರುತ್ತೇವೆ.
ಸುನಾಥರೆ,
ಪ್ರತ್ಯುತ್ತರಅಳಿಸಿಪುಗ್ಗೆ ತರೋದ್ರಲ್ಲಿ ಯಾರೋ ಹಿಂದ್ಗಡೆಯಿಂದ ಬಂದು ಪಿನ್ ಚುಚ್ಚಿದ್ರಲ್ಲಾ...
ನೀಲಗಿರಿಯವರೆ,
ಪ್ರತ್ಯುತ್ತರಅಳಿಸಿನಿಮ್ಮ ದಂಡ ಯಾತ್ರೆಯ ಹಾರೈಕೆಗೆ ಧನ್ಯವಾದಗಳು
ಗುರುಗಳೆ
ಪ್ರತ್ಯುತ್ತರಅಳಿಸಿಇಲ್ಲಿ ಲಾಡು ಕೊಟ್ಟರೂಂತ ನಾಲ್ಕು ಹಿಡಿದುಕೊಂಡೆ. ಅದು ಬೆಂಗಳೂರಿಗೆ ಬರೋವಷ್ಟರಲ್ಲಿ ಸಿಡಿದುಬಿಡ್ತು... ಬಾಂಬೇಯಿಂದ ತರಿಸಲಾದ ಬಾಂಬಂತೆ!
elliddeeri? naanoo nudisirili iddene!
ಪ್ರತ್ಯುತ್ತರಅಳಿಸಿನಮ್ಮ ಕಾಲೇಜಿಗೆ ಬಂದು ನುಡಿಸಿರಿಯಲ್ಲೇ ಓಡಾಡಿಕೊಂಡಿದ್ದು ಕೊನೆಗೂ ಸಿಗದೇ ಹೋದ ನಿಮ್ಮನ್ನ ಕುಟ್ಟಿ ಹಾಕುವಷ್ಟು ಪ್ರೀತಿ ಉಕ್ಕುತ್ತಿದೆ ಎಂದು ತಿಳಿಸಲು ವಿಷಾದಿಸುತ್ತೇವೆ
ಪ್ರತ್ಯುತ್ತರಅಳಿಸಿಶ್ರೀನಿಧಿಯವರೆ,
ಪ್ರತ್ಯುತ್ತರಅಳಿಸಿನಮ್ಮನ್ನು ನೀವೇಕೆ ನೋಡಲಿಲ್ಲ ಎಂದರೆ.... ನಾವು ಅಲ್ಲಿಗೆ ಬಂದ ಸಾವಿರಾರು ಮಂದಿಯಲ್ಲಿ ಒಬ್ಬರಾಗಿದ್ದೆವು. ಆದರೆ ನಿಮ್ಮನ್ನು ನಾವು ನೋಡಿದ್ದೇವೆ ಏಕೆಂದರೆ, ಅಲ್ಲಿ ಇದ್ದದ್ದು ಒಬ್ಬರೇ ಶ್ರೀನಿಧಿ!
ಇರಲಿ... ನಿಮಗೆ ಯಾಕೆ ಸಿಕ್ಕಿಲ್ಲ ಅನ್ನೋದಕ್ಕೆ ಮುಂದಿನ ಪೋಸ್ಟು ಓದಿ...
ಮೃಗನಯನಿ ಅವರೆ,
ಪ್ರತ್ಯುತ್ತರಅಳಿಸಿಓಹ್ ನಿಮ್ಮದೇ ಕಾಲೇಜಿಗೆ ಕಾಲಿಟ್ಟದ್ದು ಅಂತ ಮೊದ್ಲೇ ತಿಳ್ಸಿದ್ರೆ... ಏನಾಗ್ತಿತ್ತು? ಗೊತ್ತಿಲ್ಲ...
ನೀವು ಕಾಮೆಂಟ್ ಕುಟ್ಟಿದ ವೇಗವನ್ನು ನೋಡಿದ್ರೇ ಗೊತ್ತಾಯ್ತು... ಅದಕ್ಕೇ ತಲೆ ಮರೆಸಿಕೊಂಡಿದ್ವಿ...
ಏನಾದ್ರೂ ಹೇಳ್ರಪಾ :-D