(ಬೊಗಳೂರು WWW ಬ್ಯುರೋದಿಂದ)
ಬೊಗಳೂರು, ನ.20- ಕುಡಿತದಿಂದಾಗುವ ಸತ್ಪರಿಣಾಮಗಳನ್ನು ದನಗಳಿಗೆ ಮತ್ತು ಜನಗಳಿಗೆ ತಿಳಿಯಪಡಿಸುವ ನಿಟ್ಟಿನಲ್ಲಿ ಬೊಗಳೂರಿನಲ್ಲಿ ಹೊಸ ಸಂಚೋದನೆಯೊಂದು ನಡೆಯುತ್ತಿದ್ದು, ಇದಕ್ಕೆ ವರ್ಲ್ಡ್ ವೈಡ್ ಪಬ್ ಎಂದು ನಾಮಕರಣ ಮಾಡಲಾಗಿದೆ.ಕಾಸ್ಮೋಪಾಲಿಟನ್ ನಗರಗಳಲ್ಲಿ ಮಾತ್ರವಲ್ಲದೆ ಇತ್ತೀಚೆಗೆ ಕಾಸ್ಮೋಪಾಲಿಟನ್ ಹಳ್ಳಿಗಳಲ್ಲಿಯೂ ಪಬ್ ಸಂಸ್ಕೃತಿ ಮೇರೆ ಮೀರುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬೊಗಳೂರಿನ ನಿಧಾನಮಂತ್ರಿಗಳು ಪುತ್ರೀ ಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಮುಂಬಯಿಯಲ್ಲಿ ನಂಗಾನಾಚ್ ಪಾರ್ಟಿಯಲ್ಲಿ ನೂರಾರು ಮಂದಿ ಸಿಕ್ಕಿಬಿದ್ದದ್ದು ಕಳಪೆ ಮಾದಕ ದ್ರವ್ಯ ಸೇವಿಸಿದ್ದರಿಂದಾಗಿ. ನೈಜವಾದ ಮಾದಕ ದ್ರವ್ಯ ಸೇವಿಸಿದ್ದಿದ್ದರೆ ಅವರು ಸಿಕ್ಕಿಬೀಳುವ ಬದಲು (ಚರಂಡಿಯಲ್ಲಿ) ಬಿದ್ದು ಸಿಕ್ಕುತ್ತಿದ್ದರು ಎಂಬುದನ್ನು ಬೊಗಳೂರಿನ ಸಂಚೋದನಾ ಮಂಡಳಿ ಕಂಡುಕೊಂಡಿದೆ.
ಏನೇ ಆದರೂ, ಇದೀಗ ಸಿಕ್ಕಿಬಿದ್ದಾಗಿದೆ. ಆದರೆ ಸಿಕ್ಕಿದ್ದು ಪೊಲೀಸರ ಕೈಗಾದರೂ, ಬಿದ್ದಿದ್ದು ಜೈಲಿನಲ್ಲಿ ಆಗಿರುವುದರಿಂದ ಇನ್ನು ಆರು ತಿಂಗಳ ಕಾಲ, ಕಾಲೇಜಿಗೆ ಹೋಗಬೇಕಿಲ್ಲ, ಜೈಲಿನೊಳಗೇ ಆರಾಮವಾಗಿ ಕಾಲ ಕಳೆಯಬಹುದು.
ಎಲ್ಲ ಬೇಸರ ಮರೆಸುವ, ಎಲ್ಲ ದುಃಖ ಒರೆಸುವ ಮತ್ತು ಯುಪಿಎ ಸರಕಾರದ ಬೆಲೆ ಏರಿಕೆ ನೀತಿಗಳನ್ನೆಲ್ಲಾ ಕ್ಷಮಿಸಿಬಿಡಬಹುದಾದ ತಾಕತ್ತು ನೀಡುವ ಈ ದ್ರವ್ಯಗಳನ್ನು ಅಂತಾರಾಷ್ಟ್ರೀಯ ಮತ್ತು ಅಂತರ್ಜಾಲೀಯ ಮಟ್ಟದಲ್ಲಿ ಆಂದೋಲನವೇ ನಡೆಯಬೇಕಿದೆ, ವಿಶ್ವದೆಲ್ಲೆಡೆ ವರ್ಲ್ಡ್ ವೈಡ್ ಆಗಿ ಪಬ್‌ಗಳನ್ನು ಸ್ಥಾಪಿಸಬೇಕಿದೆ ಎಂದು ಯುಪಿಎ ಸರಕಾರದ ವ್ಯಾಕ್‌ತಾರರು ಬೊಗಳೂರು ಬ್ಯುರೋಗೆ ತಿಳಿಸಿದ್ದಾರೆ.
4 ಕಾಮೆಂಟ್‌ಗಳು
ಏನ್ ಚಿಂತನೆ...ಏನ್ ಕಥೆ ! ಜೀವಮಾನದಲ್ಲಿ ಒಂದ್ಸಲ ತಲೆ ಉಪ್ಯೋಗ್ಸಿದೆ ಯುಪಿಎ...:P :P :P
ಪ್ರತ್ಯುತ್ತರಅಳಿಸಿworld wide pubಗೆ ಗಡ್ಡಮೂರ್ತಿಗಳನ್ನೇ ಅಧ್ಯಕ್ಷರನ್ನಾಗಿ ಮಾಡಬೇಕಲ್ಲವೆ?
ಪ್ರತ್ಯುತ್ತರಅಳಿಸಿಲಕ್ಷ್ಮೀೀೀೀೀೀೀೀೀೀ
ಪ್ರತ್ಯುತ್ತರಅಳಿಸಿಬಾಯ್ಬಿಟ್ರೀ.....
ಅದಿರ್ಲಿ... ಯುಪಿಎ ತಲೆಯನ್ನೇ ಉಪ್ಯೋಗ್ಸಿದೆ ಅಂತ ಅದೆಂಗೆ ಹೇಳ್ತೀರಿ...? ತಲೆಯೊಳಗೆ ಏನೂ ಇರದಿದ್ದರೆ? ಎಲ್ಲೋ ಅಪ್ಪೀ ತಪ್ಪಿ ಕಿಡ್ನಿ ಉಪ್ಯೋಗ್ಸಿರ್ಬೇಕು...
ಸುನಾಥರೇ,
ಪ್ರತ್ಯುತ್ತರಅಳಿಸಿನಿಮ್ಮ ಸಲಹೆ ಮತ್ತು ಒತ್ತಾಯಪೂರ್ವಕ ಆಗ್ರಹವು ಸಮ್ಮತಾರ್ಹವೇ. ಆದ್ರೆ... ಗಡ್ಡವೀಗ ಬೋಳುತಲೆಯ ಮೇಲೆ ಹೋಗಿ ಕೂರುತ್ತದಲ್ಲ... ಲೋಕಸಭೆಯಲ್ಲೂ ಕೋಲಾಹಲ ಆಗಲಿದೆ ಇನ್ನು....
ಏನಾದ್ರೂ ಹೇಳ್ರಪಾ :-D