ಬೊಗಳೆ ರಗಳೆ

header ads

ವಿದ್ಯುತ್ ಕಳವಿಗೆ ಲೋಡ್ ಶೆಡ್ಡಿಂಗ್ ತೆರವು ಶಿಕ್ಷೆ!

(ಬೊಗಳೂರು ಕಳ್ಳರ ಬ್ಯುರೋದಿಂದ)
ಬೊಗಳೂರು, ಅ.15- ವಿದ್ಯುತ್ ಕಳ್ಳತನ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದು, ರೈತರಲ್ಲಿ, ಗ್ರಾಮೀಣ ಪ್ರದೇಶದಲ್ಲಿ ಹರ್ಷ ಮೂಡಿಸಿದೆ.

ಈ ಸುದ್ದಿ ಪ್ರಕಟವಾದ ತಕ್ಷಣವೇ ರೈತರೆಲ್ಲಾ ಹರ್ಷ ಆಚರಿಸುತ್ತಾ, ರಾತ್ರಿಯಿಡೀ ಸಂತಸದ ಹೊಳೆಯಲ್ಲಿ "ತೇಲುತ್ತಾ" ಇರುವುದು ಏಕೆ ಎಂಬುದರ ಬಗ್ಗೆ ನಮ್ಮ ಬ್ಯುರೋದ ಏಕಸದಸ್ಯ ಆಯೋಗದ ಒಂದಷ್ಟು ಮಂದಿ ಸೇರಿಕೊಂಡು ತನಿಖೆ ಆರಂಭಿಸಿತು.

ವಿದ್ಯುತ್ ಕಳ್ಳತನ ತಡೆಗೆ ಸೂಕ್ತ ಕ್ರಮ ಜರುಗಿಸುವುದು ಹೇಗೆ ಎಂದರೆ ವಿದ್ಯುತ್ ಕಳ್ಳರಿಗೇ ಶಾಕ್ ಹೊಡೆಸಿ, ಅವರು ಮುಂದೆ ಕದಿಯದಂತೆ ಮಾಡುವುದು. ಅಂದರೆ ವಿದ್ಯುತ್ ವಯರುಗಳಲ್ಲಿ ವಿದ್ಯುತ್ ಹರಿಸುವುದು. ಈ ಮೂಲಕ ಯಾವತ್ತೂ ಕರೆಂಟಿಲ್ಲದೆ ಒದ್ದಾಡುತ್ತಿದ್ದವರಿಗೆ ಈ ಲೆಕ್ಕದಲ್ಲಾದರೂ ಕರೆಂಟು ಬರುತ್ತದೆಯೆಂಬುದು ಅವರ ಲೆಕ್ಕಾಚಾರವೆಂಬುದನ್ನು ಪತ್ತೆ ಹಚ್ಚಲಾಗಿದೆ. ಈ ನೆಪದಲ್ಲಿ ನಮಗಿನ್ನು ಕರೆಂಟು ಖಂಡಿತ ಎಂದು ಅವರೆಲ್ಲಾ ಬಿದ್ದು ಬಿದ್ದು ನಗುತ್ತಿರುವುದನ್ನು ಕೂಡ ಚಿತ್ರ ಸಮೇತ ಬೊಗಳೂರು ಬ್ಯುರೋ ಕಂಡುಕೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಅನ್ವೇಷಿಗಳೆ,
    ವಿದ್ಯುತ್ ಕಳ್ಳತನ ತಡೆಯಲು, ಆ ಕಳ್ಳರನ್ನೆಲ್ಲ KEBಯಲ್ಲಿ ನೇಮಿಸಿಕೊಳ್ಳುತ್ತಿದ್ದಾರಂತೆ. ಅಂದರೆ ಕಳ್ಳತನವು ಆಗ official ಆಗಿಬಿಟ್ಟು, ಕಳ್ಳತನವೇ ಇಲ್ಲ ಎಂದು ಘೋಷಿಸಬಹುದು.

    ಪ್ರತ್ಯುತ್ತರಅಳಿಸಿ
  2. ಅಂತೂ ಇಂತೂ... ಕರೆಂಟು ಬಂತೂ...
    ಅಂತ, ನಗೋದ್ರ್ ಜೊತೆಗೇ ಹಾಡು ಕೂಡಾ ಹಾಡ್ತಾರೇನೋ....

    ಪ್ರತ್ಯುತ್ತರಅಳಿಸಿ
  3. ಸುನಾಥರೆ,
    ಓಹ್... ಮರ್ತೇ ಬಿಟ್ಟಿದ್ದೆ... Kallara Eleyuva Buearo ಅಂದ್ರೆ ತಾನೇ ಕೆಇಬಿ? ಅಧಿಕೃತ ಕಳ್ಳರ ವಿದ್ಯುತ್ ಮಂಡಳಿಯಾಗಿತ್ತದು.

    ಪ್ರತ್ಯುತ್ತರಅಳಿಸಿ
  4. ಅನ್ನಪೂರ್ಣರೆ,
    ಬಂತು ಬಂತು ಕರೆಂಟು ಬಂತು ಹಾಡಲ್ಲಿ ಸಿಲ್ಕ್ ಆಗಿರೋ ಸ್ಮಿತೆ ಕುಣಿದಾಡಿತ್ತು. ಕುಣಿದದ್ದು ಈ ಸುದ್ದಿ ತಿಳಿದೇ ಇರಬಹುದೇ?

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D