(ಬೊಗಳೂರು ಕುಂಯ್ ಚುಂಗ್ ಚೈಂ ಬ್ಯುರೋದಿಂದ)
ಬೊಗಳೂರು, ಆ.27- ಬೀಜಿಂಗ್ ಎಂಬ ಒಲಿಂಪಿಕ್ಸ್ ಈಜುಕೊಳದಲ್ಲಿ 8 ಚಿನ್ನದ ಪದಕಗಳನ್ನು ನುಂಗಿದ ವಿಶ್ವದ ಅತ್ಯಂತ ದೊಡ್ಡ ಮೀನನ್ನು ಇದೀಗ ಅದರ ತಾಣವಾಗಿರುವ ಅಮೆರಿಕಕ್ಕೆ ಮರಳಿಸಲಾಗಿದೆ.200 ಪೌಂಡ್ ತೂಕದ, 193 ಇಂಚು ಎತ್ತರವಿರುವ ಈ ಫೆಲ್ಪ್ಸ್ ಎಂಬ ಮೀನನ್ನು ಬೃಹತ್ ಕೃತಕ ಕೊಳವೊಂದರಲ್ಲಿ ಹಾಕಿ, ನಾಲ್ಕಾರು ಚಕ್ರಗಳುಳ್ಳ ದೊಡ್ಡ ಟ್ರಕ್‌ನಲ್ಲಿರಿಸಿ ಅಮೆರಿಕಕ್ಕೆ ಮರಳಿಸಲಾಯಿತು.
ನೂರಾರು ಮಂದಿ ಕೆಲಸಗಾರರು ಈ ಮೀನನ್ನು ಕೃತಕ ಕೊಳದೊಳಗೆ ಸೇರಿಸಲು ಹರಸಾಹಸ ಪಟ್ಟಿದ್ದು, ಹಲವಾರು ಚಿನ್ನದ ಪದಕಗಳನ್ನು ನುಂಗಿದ್ದ ಕಾರಣದಿಂದಾಗಿ ಅದರ ತೂಕ ಹೆಚ್ಚಾಗಿತ್ತು.
ಇದೀಗ ಎಂಟು ಚಿನ್ನ ನುಂಗಿ ಸುದ್ದಿ ಮಾಡಿದ್ದ ಈ ಬೃಹತ್ ಮೀನು, ತನ್ನೂರಿನಲ್ಲಿರುವ ಆರಡಿ ಮೂರಡಿಗಿಂತಲೂ ದುಪ್ಪಟ್ಟು ವಿಸ್ತೀರ್ಣವಿರುವ, ಆವಾಸ ಸ್ಥಾನದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದೆ ಎಂದು ಅಲ್ಲಿಗೆ ತೆರಳದ ಮೂಲಗಳು ವರದ್ದಿ ಕಳುಹಿಸಿವೆ.
ಈ ದೈತ್ಯ ದೇಹಿಯನ್ನು ಬೃಹತ್ ಗಾಜಿನ ಪೆಟ್ಟಿಗೆಯಲ್ಲಿ ನೀರು ತುಂಬಿಸಿ ಇರಿಸಲಾಗಿದ್ದು, ಅದನ್ನು ನೋಡಲು ಜನಜಾತ್ರೆಯೇ ಹರಿದುಬರುತ್ತಿದೆ.
ನೀರಿನ ತೊಟ್ಟಿಯಲ್ಲಿ ಆರಾಮವಾಗಿರುವಂತೆ ಕಂಡುಬಂದಿರುವ ಫೆಲ್ಪ್ಸ್ ಮೀನು, ರಾತ್ರಿ 2 ಗಂಟೆ ಸುಮಾರಿಗೆ ನಿದ್ರೆಗೆ ಶರಣಾಯಿತು ಎಂದು ಈ ಮೀನನ್ನು ಇರಿಸಲಾಗಿರುವ ಮತ್ಸ್ಯಾಲಯದ ಉಸ್ತುವಾರಿ ಅಧಿಕಾರಿಗಳು ಔಟ್‌ಗೋಯಿಂಗ್ ಸೌಲಭ್ಯವಿಲ್ಲದ ಫೋನ್ ಇನ್ ಫೆಸಿಲಿಟಿ ಮೂಲಕ ಬೊಗಳೆ ರಗಳೆಗೆ ಮಾಹಿತಿ ನೀಡಿದ್ದಾರೆ.
ಈ ನಡುವೆ, ಬೀಜಿಂಗಿನಲ್ಲಿ ಅದು ಎಷ್ಟು ಮೆಡಲ್‌ಗಳನ್ನು ನುಂಗಿದೆ ಎಂಬುದು ಇನ್ನೂ ದೃಢಪಟ್ಟಿಲ್ಲ. ಹೀಗಾಗಿ ಈ ಮೀನು ಎಲ್ಲೆಲ್ಲಾ ಈಜುಗಾರಿಕೆ ನಡೆಸಿದೆಯೋ, ಆ ಕೊಳದೊಳಗೆಲ್ಲಾ ಮುಳುಗೆದ್ದು, ಅದರಲ್ಲೇನಾದರೂ ಮೆಡಲುಗಳು ಬಾಕಿ ಉಳಿದಿವೆಯೇ? ಉಳಿದಿದ್ದರೆ ಎಷ್ಟಿವೆ ಎಂಬಿತ್ಯಾದಿಗಳ ನಿಖರ ಅಂಕಿ ಅಂಶ ಪಡೆಯಲು ಶತ ಪ್ರಯತ್ನ ನಡೆಯುತ್ತಿದೆ. ಆದರೆ ಈಜು ಕೊಳದಿಂದ ಚಿಮ್ಮಿದ ಮೀನೊಂದು, ಬಣ್ಣವನ್ನು ಒಂದಷ್ಟು ಬದಲಿಸಿ, ಅತಿ ವೇಗದಿಂದ ಓಡಿ, ಜಮೈಕಾವರೆಗೂ ತೆರಳಿ ಬಾಗಿಲಿನ ಬೋಲ್ಟ್ ಹಾಕಿಕೊಂಡು ಕುಳಿತಿದೆ ಎಂಬುದನ್ನು ಕೂಡ ಪತ್ತೆ ಹಚ್ಚಲಾಗಿದೆ. ಇದರ ನಡುವೆಯೇ, ಟ್ರ್ಯಾಕ್‌ನಿಂದ ಅಥವಾ ಈಜುಕೊಳದಿಂದ ಮೆಡಲ್‌ಗಳು ಮೇಲಕ್ಕೆ ಜಿಗಿದಿವೆಯೇ ಎಂಬುದರ ಕುರಿತಾಗಿಯೂ ಚೀನೀ ತನಿಖೆ ನಡೆಯುತ್ತಿದೆ.
ಈ ತನಿಖೆ ನೇತೃತ್ವವನ್ನು ಚೀನಾದ ಮಹಾನ್ ಪತ್ತೆದಾರ ಚು ಚಿಂವ್ ಚುಂಯ್ ಕುಂಯ್‌ಗೆ ವಹಿಸಲಾಗಿದೆ.
8 ಕಾಮೆಂಟ್‌ಗಳು
ಒಬ್ಬರೇ ಇರೋ ಬರೋ ಚಿನ್ನವನ್ನೆಲ್ಲಾ ನುಂಗಿದ್ರಿಂದ ಚೀನಾದಲ್ಲಿ ನಮ್ಗೆ ಮೆಡಲ್ ಗಳು ಬರ್ಲಿಲ್ಲ ಅನ್ವೇಷಿಗಳೇ. ಇಲ್ಲಾಂದ್ರೆ ಏನೇನೆಲ್ಲಾ ನುಂಗಿರೋ ನಮ್ಗೆ ಮೆಡಲುಗಳೇನು ದೊಡ್ಡ ಸುದ್ದಿನಾ?;)
ಪ್ರತ್ಯುತ್ತರಅಳಿಸಿಹೋಗಿ ಈಜ್ಕೊಂಡು ಮೆಡಲು ತಗೊಂಡು ಬನ್ರೋ ಅಂತ ಇಲ್ಲಿಂದ ಕಳ್ಸಿದ್ರೆ, ಅವ್ರುಗಳು ಮತ್ತೇನೋ ಫೋಟೋ ತಗ್ದು, ಸಿಕ್ಕಾಕೊಂಡು ಬ್ಯಾನ್ ಆಗಿದ್ರು!
http://www.nzherald.co.nz/section/4/story.cfm?c_id=4&objectid=10529196
ಭಾರತೀಯ ಟೀಮು ಎಂಥಾ ಮೆಡಲನ್ನೂ ಗೆಲ್ಲಬಾರದು ಎನ್ನುವ ಉದ್ದೇಶದಿಂದ, ಭಾರತ ಸರಕಾರವು ಬೀಜಿಂಗಕ್ಕೆ ಸಾಕಷ್ಟು ಅಧಿಕಾರಿಗಳನ್ನು ಕಳಿಸಿತ್ತು. ಹೀಗಿದ್ದರೂ ಸಹ ಭಾರತವು ಒಂದು ಚಿನ್ನ, ಒಂದು ಬೆಳ್ಳಿ ಹಾಗು ಒಂದು ಕಂಚಿನ ಪದಕವನ್ನು ಗೆದ್ದದ್ದರಿಂದ ಕಾಲ್ಮಡಿಯವರಿಗೆ ತೀರಾ ಹತಾಶೆಯಾಗಿದೆ.
ಪ್ರತ್ಯುತ್ತರಅಳಿಸಿಈ ಅವಘಡವನ್ನೂ ಸಹ ಚೀನಾದ ಕುಂಇ ಕುಂಇ ಅವರೇ ತಪಾಸು ಮಾಡಲು ಕೇಳಿಕೊಳ್ಳಲಾಗಿದೆ.
(ಟಿಪ್ಪಣಿ: ಧಾರವಾಡ ಜಿಲ್ಲೆಯಲ್ಲಿ ಕಾಲ್ಮಡಿ ಅರ್ಥ:ಮೂತ್ರ ವಿಸರ್ಜನೆ).
majavani thara neevu yaake bogareragale.com ge shift aagbaardu?
ಪ್ರತ್ಯುತ್ತರಅಳಿಸಿPhelps has been admitted to Mental Clinic of our Neuroshire Head Office. Operation to dig out the swallowed medals is about to start. Demands for those medals are coming from India. They want to use these medals in the next London Olympics.
ಪ್ರತ್ಯುತ್ತರಅಳಿಸಿನೀಲಗಿರಿಯವರೆ,
ಪ್ರತ್ಯುತ್ತರಅಳಿಸಿನೀವೂ ಚೀನಾಕ್ಕೇ ಹೋಗ್ಬಿಟ್ರೇನೋ ಅಂತ ಆಮ ಶಂಕೆ ಇತ್ತು. ತುಂಬಾ ದಿನದಿಂದ ಕಾಣಿಸ್ತಿಲ್ಲವಲ್ಲ..
ನಿಮ್ಮ ಸಂಶೋಧನೆ ಅದ್ಭುತ.
ಸುನಾಥರೆ,
ಪ್ರತ್ಯುತ್ತರಅಳಿಸಿಹೊಸ ಶಬ್ದ ಹೇಳಿಕೊಟ್ಟಿದ್ದಕ್ಕೆ ಥ್ಯಾಂಕ್ಸ್.
ಕಾಲ್ಮಡಿಯಲ್ಲೇ ಕೈಕಾಲು ಬಡಿಯುತ್ತಾ, ಬೇರೆಯವರ ಕಾಲಡಿಯಿಂದ ಚಿನ್ನ ಎತ್ತುಕೊಂಡು ಬರಲೆಂದು ಹೋದ ಅಧಿಕಾರಿಗಳು ವಿಷಯದ ಅರಿವಾಗಿ ಬೆಚ್ಚಿಬಿದ್ದಿದ್ದಾರೆ ಅಂತ ತನಿಖಾ ವರದಿಗಳು ತಿಳಿಸಿವೆ.
ಶ್ರೀನಿಧಿ ಅವರೆ,
ಪ್ರತ್ಯುತ್ತರಅಳಿಸಿನಿಮ್ಮ ಸಲಹೆಗೆ ಧನ್ಯವಾದ. ಹೇಗೆ, ಏನು ಎತ್ತ ಎಂಬ ಬಗ್ಗೆ ಒಂದಷ್ಟು ಜ್ಞಾನ ಧಾರೆ ಎರೆಯಿರಿ. ಯಾಕಂದ್ರೆ ನೀವು ಕೂಡ ಈನಿಧಿ ನೆಟ್ಟಿಗರೂ, ಗಟ್ಟಿಗರೂ ಅಲ್ವಾ...
ಮೆಂಟಲಿಗರೆ,
ಪ್ರತ್ಯುತ್ತರಅಳಿಸಿಈ ಮೆಡಲುಗಳೆಲ್ಲವನ್ನೂ ನಿಮ್ಮ ಮೆಂಟಲ್ ಕಿಲಿಕಿಲಿನಿಕ್‌ನಲ್ಲಿ ಇರಿಸಿಕೊಂಡಿದ್ದೀರಿ ಮತ್ತು ಅದನ್ನು ಕಾಳಸಂತೆಯಲ್ಲಿ ಮುಂದಿನ ಥಂಡಾಸ್ ಒಲಿಂಪಿಕ್ಸ್‌ಗೆ ಕಾದಿರಿಸಿಕೊಂಡಿದ್ದೀರಿ ಅನ್ನುವುದು ತನಿಖೆಯಿಂದ ಪತ್ತೆಯಾಗಿದೆ.
ಏನಾದ್ರೂ ಹೇಳ್ರಪಾ :-D