(ಬೊಗಳೂರು ಪಾಸಿಟಿವ್ ರಿಪೋರ್ಟ್ ಬ್ಯುರೋದಿಂದ)
ಬೊಗಳೂರು, ಆ.14- ದೇಶಾದ್ಯಂತ A+ve, B+ve, AB+ve O+ve ಮುಂತಾದ ಪಾಸಿಟಿವ್ ರಕ್ತ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತಿರುವಂತೆಯೇ, ಇದಕ್ಕೆ ಮತ್ತೊಂದು ರಕ್ತದ ತಳಿಯು ಪ್ರಬಲ ಪೈಪೋಟಿ ನೀಡಲು ಸಿದ್ಧತೆ ನಡೆಸುತ್ತಿದೆ ಎಂಬುದನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.ಯಾವತ್ತಿದ್ದರೂ ನೆಗೆಟಿವ್ ಗುಂಪಿನ ರಕ್ತವುಳ್ಳವರಿಗೆ ತೊಂದರೆ ತಪ್ಪಿದ್ದಲ್ಲ ಎಂಬುದು ವೈದ್ಯಲೋಕದ ಅಭಿಮತ. ಈ ಕಾರಣಕ್ಕೆ, ಇತ್ತೀಚೆಗಿನ ಟ್ರೆಂಡ್ ಪ್ರಕಾರ, ಎಚ್ಐವಿ ಪಾಸಿಟಿವ್ ರಕ್ತವುಳ್ಳವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆಧುನಿಕತೆಯ ಸುಳಿಗೆ ಸಿಲುಕಿದ ಮಂದಿ ಇತ್ತೀಚೆಗಿನ ದಿನಗಳಲ್ಲಿ ಪ್ರತಿಯೊಂದಕ್ಕೂ ಎಚ್ಐವಿ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತಿದೆ. ಈ ಸಂದರ್ಭದಲ್ಲಿ ಎಚ್ಐವಿ ನೆಗೆಟಿವ್ ರಕ್ತವಿದೆ ಎಂದು ಪರೀಕ್ಷಾ ವರದಿಗಳು ಬಂದಾಗ ಅವರೆಲ್ಲಾ ಹೌಹಾರಿದ್ದರು.
ಯಾವುದೇ ರೀತಿಯಲ್ಲಾದರೂ ಎಚ್ಐವಿ ನೆಗೆಟಿವ್ ರಿಪೋರ್ಟ್ ಬರಬಾರದು, ಪಾಸಿಟಿವ್ ಆಗಿಯೇ ಇರಬೇಕು ಎಂದು ಹೆಣಗಾಟ ನಡೆಸಿರುವ ಜನರಿಂದಾಗಿ, ಎಚ್ಐವಿ ಪಾಸಿಟಿವ್ ರಕ್ತವಿರುವವರ ಸಂಖ್ಯೆಯೂ ಏರುತ್ತಲೇ ಇರುತ್ತಿದೆ ಎಂಬುದನ್ನು ನಮ್ಮ ಸಂ-ಚೋದನಾ ಬ್ಯುರೋ ಸದಸ್ಯರು ಕಂಡುಕೊಂಡಿದ್ದಾರೆ.
ಹಾಗಿದ್ದರೆ ಎಚ್ಐವಿ ಪಾಸಿಟಿವ್ ಪಟುಗಳ ಈ ದಿಢೀರ್ ಏರಿಕೆಗೆ ಕಾರಣಗಳೇನು ಎಂಬುದರ ಹಿಂದೆ ಬಿಂದ ಬೊಗಳೆ ರಗಳೆ ಬ್ಯುರೋದ ಏಕಸದಸ್ಯ ತನಿಖಾ ಮಂಡಳಿಯ ಸರ್ವ ಸದಸ್ಯರು, ಅತ್ಯಂತ ಪ್ರೋತ್ಸಾಹದಾಯಕ ಸಂಗತಿಯೊಂದನ್ನು ಕಂಡುಕೊಂಡರು. ಅದೆಂದರೆ ಎಚ್ಐವಿ ಪಾಸಿಟಿವ್ ರಕ್ತ ಹೊಂದಿರುವವರಿಗೆ ಮೀಸಲಾತಿ. ಮಾತ್ರವಲ್ಲದೆ, ಎಚ್ಐವಿ ಪಾಸಿಟಿವ್ ಇದ್ದರೆ ವಿಮಾ ರಕ್ಷಣೆಯೂ ದೊರೆಯುತ್ತದೆ!
ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದೊಂದು ದಿನ ಎಚ್ಐವಿ ಪಾಸಿಟಿವ್ ರಕ್ತವುಳ್ಳವರ ಸಂಖ್ಯೆ ಹೆಚ್ಚೆಚ್ಚಾಗುತ್ತದೆ. ಅವರು ಕೂಡ ತಾವು ಅಲ್ಪಸಂಖ್ಯಾತರು, ತಮಗೂ ಮೀಸಲಾತಿ ಬೇಕು ಅಂತ ಹೋರಾಟ ಮಾಡಬಹುದು ಮತ್ತು ಅವರು ಕೂಡ ಅಮೂಲ್ಯವಾದ ಓಟು ಬ್ಯಾಂಕ್ ಆಗಬಲ್ಲರು ಎಂಬುದನ್ನು ಮನಗಂಡಿರುವ ಜಾರಕಾರಣಿಗಳು, ಅವರಿಗೆ ಮಾನವೀಯ ನೆರವು, ಮಾನಸಿಕ ಬೆಂಬಲ ಇತ್ಯಾದಿಯೆಲ್ಲಾ ನೀಡುವ ಬದಲಾಗಿ, ಮೀಸಲಾತಿ ಕಲ್ಪಿಸಲು ಈಗಿಂದೀಗಲೇ ಸಿದ್ಧತೆ ನಡೆಸತೊಡಗಿದ್ದಾರೆ.
6 ಕಾಮೆಂಟ್‌ಗಳು
ಸೊಂಪಾದಕರೆ, ನಿಮ್ಮ ಸಂ-ಚೋದನೆಯನ್ನು ಓದಿ ಸಂತೋಷವಾಯಿತು.ಕೇಂದ್ರ ಅನಾರೋಗ್ಯ ಮಂತ್ರಿ ರಾಮದೋಸೆಯವರಿಗೆ ಕೆಲವು ಪುಕ್ಕಟೆ ಸಲಹೆಗಳನ್ನು ನೀಡುವ ಕುಹಕ ಬುದ್ಧಿಯನ್ನು ತೋರಿಸುತ್ತಿದ್ದೇನೆ:
ಪ್ರತ್ಯುತ್ತರಅಳಿಸಿ(೧)ದೇಶದಲ್ಲಿ ಎಚ್.ಆಯ್.ವಿ. ನೆಗೆಟಿವ್ ಹೆಚ್ಚಿಸಲು, ಹಳ್ಳಿ ಹಳ್ಳಿಗಳಲ್ಲಿ ಅನಾರೋಗ್ಯ ಕೇಂದ್ರಗಳನ್ನು ಸ್ಥಾಪಿಸಬೇಕು.
(೨)AIIMSಗೆ ಎಚ್.ಆಯ್.ವಿ, ನೆಗೆಟಿವ್ ರಕ್ತವಿರುವ ನಿರ್ದೇಶಕನನ್ನೇ ನಿಯಮಿಸಬೇಕು. ಎಷ್ಟೆಂದರೂ ರಕ್ತಸಂಬಂಧಿಯಾಗುತ್ತಾನೆ,ಅಲ್ಲವೆ!
ಸೂ.ಮಗ ಕರುಣಾನಿಧಿಯ ರಕ್ತ ಯಾವುದು?. ಅದು ಕುಲಗೆಟ್ಟ hiv+ ತಮಿಳು ರಕ್ತನಾ?. ರಾಮದಾಸ್ ಎಂಬ ಎಲ್.ಟಿ.ಟಿ.ಈ. ಏಜೆಂಟ್, ರಾಜಾ ಎಂಬ ಚೈನಾ ಏಜೆಂಟ್, ಮಣಿಶಂಕರ್ ಅಯ್ಯರ್ ಎನ್ನುವ ಐ.ಎಸ್.ಐ. ಏಜೆಂಟ್‌ಗಳು ನಮ್ಮ ದೇಶವನ್ನು ಪಾಕಿಸ್ತಾನಕ್ಕೆ ಮಾರುವ ತಯಾರಿ ನಡೆಸಿವೆ. ಇದಕ್ಕೆ ಚಿದಂಬರಂ ಎಂಬ ದುಷ್ಟ ಅನುಮೋದನೆ ನೀಡಿದ್ದಾನೆ. ಇವರೆಲ್ಲರ ಬೆಂಬಲಕ್ಕೆ ಸಕಲ ತಮಿಳು ಸಂಘಟನೆಗಳು ಬೆಂಬಲ ಸಾರಿ, ತಮಿಳು ರಕ್ತ ಎಂಬುದು ದೇಶದ್ರೋಹಿ HIV+TN ರಕ್ತ ಎಂಬುದನ್ನು ಶ್ರುತಿಪಡಿಸಿವೆ.
ಪ್ರತ್ಯುತ್ತರಅಳಿಸಿKnow The Truth & Fight For Equality:
ಪ್ರತ್ಯುತ್ತರಅಳಿಸಿWhy Our Deve Gowda Went Out, and Gujral Came In As The Prime Minister? <-- Click
ಸುನಾಥರೆ,
ಪ್ರತ್ಯುತ್ತರಅಳಿಸಿಈಗ ಗೊತ್ತಾಯಿತು. AIIMSನಿಂದ ವೇಣುಗೋಪಾಲರನ್ನು ಓಡಿಸಲು ರಾಮದೋಸೆ ಅಷ್ಟು ಹಿಗ್ಗಾಮುಗ್ಗಾ ಪ್ರಯತ್ನ ಮಾಡಿದ್ದೇಕೆಂದು ಈಗ ಗೊತ್ತಾಯಿತು. ತಮ್ಮದೇ ರಕ್ತಸಂಬಂಧಿಗಳು (ಎಚ್ಐವಿ ಪಾಸಿಟಿ)ವ್ ಅಲ್ಲಿ ಇರಲಿಲ್ಲವಂತೆ. ಇದಕ್ಕಾಗಿ ಅವರ ಈ ಆತುರ-ತರಾತುರಿ ಎಲ್ಲ. ಅಂತೂ ನಮ್ಮ ಕಣ್ಣು ತೆರೆಸಿದಿರಿ.
ದೇಶಪ್ರೇಮಿಗಳೆ,
ಪ್ರತ್ಯುತ್ತರಅಳಿಸಿನೋ ಕಾಮೆಂಟ್ಸ್
ಅನಿಮೋಸರೆ,
ಪ್ರತ್ಯುತ್ತರಅಳಿಸಿಎಷ್ಟೇ ಫೈಟ್ ಮಾಡಿದರೂ ನಿಮ್ಮ ಲಿಂಕನ್ನು ಕ್ಲಿಕ್ ಮಾಡಿ ಮಾಡಿ ಸಾಕಾಯಿತು. ಲಿಂಕಿಸಲು ಆಗುತ್ತಲೇ ಇಲ್ಲ. ತಕ್ಷಣವೇ ಏನಾದರೂ ಮಾಡಿ, ನಮ್ಮನ್ನು ಬಚಾವ್ ಮಾಡಿ.
ಏನಾದ್ರೂ ಹೇಳ್ರಪಾ :-D