(ಬೊಗಳೂರು ಮಜಾ ವಾದ ಬ್ಯುರೋದಿಂದ)
ಬೊಗಳೂರು, ಜು.೭- ರಾಷ್ಟ್ರ ಹಿತವೂ, ಮಾರ್ಕ್ಸಿಸ್ಟ್ ಆಡಳಿತವಿರುವ ನೆರೆ ರಾಷ್ಟ್ರದ ಹಿತವೂ ಮೇಳೈಸಿದ ಪರಿಣಾಮವಾಗಿ ಬಲಪಂಥೀಯರ ವಿರೋಧಿಗಳು ಯುಪಿಎಯಿಂದ ಅಂಗ ಕಳೆದುಕೊಳ್ಳುವ ಹಿನ್ನೆಲೆಯಲ್ಲಿ ಮುಲಾಮು ಹಚ್ಚಲು ಈಗಾಗಲೇ ಭಾರೀ ಸಿದ್ಧತೆ ನಡೆದಿದೆ.ಇನ್ನುಳಿದ ನಾಲ್ಕಾರು ತಿಂಗಳುಗಳ ಕಾಲ ಈ ಬೆಲೆ ಆಗಸಕ್ಕೇರಿಕೆಯ ಯುಗದಲ್ಲೇ ಮುಂದುವರಿದು, ಜನಗಳನ್ನು ಮತ್ತಷ್ಟು ಕೂಪಕ್ಕೆ ತಳ್ಳಿಬಿಡುವ ಪ್ರಯತ್ನವಾಗಿ Unprecedented Price Agenda ಸರಕಾರವು ಎಡಗೈ ಕಳಚಿಕೊಂಡಲ್ಲಿ ಗಾಯವಾಗುವುದಕ್ಕೆ ಮುಲಾಮು ಹಚ್ಚಲೇಬೇಕಾಗುತ್ತದೆ.
ಇದಕ್ಕೆ ಮುಲಾಮು ಹಚ್ಚಲೆಂದೇ ಒಂದು ಕಾಲದಲ್ಲಿ ತಮ್ಮಿಂದ ಯದ್ವಾತದ್ವಾ ಬಾಯಿಗೆ ಬಂದಂತೆ ಹೊಗಳಿಸಿಕೊಳ್ಳುತ್ತಿದ್ದ, ಮತ್ತು ತಾವು ಕೂಡ ಪರಸ್ಪರ ಉಗುಳಿಸಿಕೊಳ್ಳುತ್ತಿದ್ದ ಪಕ್ಷದ ಸಹಕಾರ ಅತ್ಯಗತ್ಯ ಎಂಬುದು ಇಬ್ಬರಿಗೂ ಮನವರಿಕೆಯಾಗಿದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.
ರಾಜಕೀಯದಲ್ಲಿ ಇಡೀ ವಿಶ್ವವೇ ತಮ್ಮ ಸಮಾಜ ಎಂಬುದನ್ನು ತಿಳಿದುಕೊಂಡು, ತಮ್ಮ ಕಾರ್ಯ ಸಾಧಿಸಿಕೊಂಡು ಮಜಾ ಅನುಭವಿಸಲು ಸಿದ್ಧವಾಗಿರುವ ಸಮಜಾ ವಾದ ಪಕ್ಷದ ನೀತಿ ನಿಯಮಗಳು ಮತ್ತು ತತ್ವ ಸಿದ್ಧಾಂತಗಳು ಗಾಳಿಗೆ ತೂರದಂತಾಗಲು ಅಥವಾ ಅಕಸ್ಮಾತ್ ತೂರಿ ಹೋದರೂ, ಅದನ್ನು ಮರಳಿ ಗೂಡಿಗೆ ಸೇರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ವರದ್ದಿ ಮಾಡಿವೆ.
6 ಕಾಮೆಂಟ್‌ಗಳು
ಮಾರ್ಕ್ಸ್-ಹಿಟ್ ಮಂಗಣ್ಣಗಳು ತಮ್ಮ ಹಳೆಯ ಗೆಳೆಯ ಮೋಹನ ಸಿಂಗಣ್ಣನ ಗಡ್ಡಕ್ಕೆ ಬೆಂಕಿ ಹಚ್ಚಿವೆ.
ಪ್ರತ್ಯುತ್ತರಅಳಿಸಿಮುಲಾ-ಯಮ ಸಿಂಗಣ್ಣ ಈಗ ಬಾವಿ ತೋಡುತ್ತಿದ್ದಾನೆ!
ತಾವು ಯಾವ ದೇಶದ್ರೋಹಿಗಳಿಗೂ ಕಮ್ಮಿ ಇಲ್ಲವೆಂದು ಕ್ಯಾರೆಟ್, ಬೀಟ್ ರೂಟ್ ಗಳು ಕುಣಿದು ಕುಪ್ಪಳಿಸುತ್ತಿವೆ. ಇಂತಹ ನಾಮರ್ದ ನಾಯಿಗಳನ್ನು ನಮ್ಮ ದೇಶದಿಂದದಲೇ ಹೊರಗಟ್ಟಬೇಕು. ಈ ಚೀನೀ ಗುಲಾಮರು ದೇಶದ ಏಕತೆಗೆ ಭಂಗ ತಂದು, ಕೇಂದ್ರದಲ್ಲಿ ಅಧಿಕಾರ ಪಡೆಯಲು ಹುನ್ನಾರ ನಡೆಸಿವೆ. ಜನಕ್ಕೆ ಇವರ ಕುತಂತ್ರದ ನಡೆ ಗೊತ್ತಾದರೆ ಸಾಕು. ಈ ಎಡಬಿಡಂಗಿಗಳಿಗೆ ಮತ ನೀಡುವ ಜನ ನಿಜವಾದ ದೇಶದ್ರೋಹಿಗಳು.
ಪ್ರತ್ಯುತ್ತರಅಳಿಸಿನನ್ನ ಬ್ಲಾಗನ್ನು ಅಂತರರಾಷ್ಟ್ರೀಯವಾಗಿ ಎತ್ತರಕ್ಕೆ ಏರಿಸಲು ನಾನು ಈಗ ಅಸತ್ಯ ಅನ್ವೇಷಿಯವರಿಗೆ ಗಾಳ ಹಾಕುತ್ತಿದ್ದೇನೆ. ಇದಕ್ಕೆ ನನಗೆ ಕರ್ನಾಟಕದಲ್ಲಿ ಹಾಗೂ ದೆಹಲಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳೇ ಸ್ಪೂರ್ತಿ. ನಿಮ್ಮ ಬ್ಲಾಗ್ ಮುಚ್ಚಿ ನನ್ನ ಬ್ಲಾಗಿಗೆ ಸೊಂಪಾದಕರಾಗಲು ತಮ್ಮ ಫೀಸು(?) ಎಷ್ಟು?. ಇಲ್ಲಿ ಪೂರ್ತಿ ಸ್ವಾತಂತ್ರ್ಯ ಇರುತ್ತದೆ. ಕೇವಲ ದಿನಕ್ಕೆ ಒಂದೇ ಪುಟ ಬರವಣಿಗೆ. ನಿಮ್ಮ ಅನುಮತಿಗಾಗಿ ಕಾಯುತ್ತಿದ್ದೇನೆ. ಸ್ವಲ್ಪ ಈ ಕಡೆ ನೋಡಿ ಮಾರಾಯ್ರೆ...
ಪ್ರತ್ಯುತ್ತರಅಳಿಸಿಸುನಾಥರೆ,
ಪ್ರತ್ಯುತ್ತರಅಳಿಸಿಮುಲಾ-ಯಮ ತೋಡಿದ ಬಾವಿಗೆ ಮೋಹಕ ಸಿಂಗಣ್ಣ ಬಿದ್ದು, ಮೈಯೆಲ್ಲಾ ಮುಲಾಮು ಮೆತ್ತಿಕೊಳ್ಳುವಂತಾಗಿದೆ.
ಗುರುಗಳೆ,
ಪ್ರತ್ಯುತ್ತರಅಳಿಸಿದೇಶದಿಂದ ಹೊರಗಟ್ಟಬೇಕು ಅಂತ ಕರೆ ನೀಡಿದ್ದೀರಿ. ಆದರೆ ಹೊರಗಟ್ಟುವುದಾದರೂ ಎಲ್ಲಿಗೆ? ಒಂದು ಕಡೆ ಬೃಹತ್ ಮತಬ್ಯಾಂಕು ಇರುವ, ಯಾವಾಗಲೂ ಮೀಸಲಾತಿಗೆ ಹಕ್ಕುದಾರರಾಗಿರುವ ರಾಷ್ಟ್ರವಿದ್ದರೆ, ಮತ್ತೊಂದು ಕಡೆ ನಮ್ಮ ಮಾರ್-ಕ್-ಹಿಟ್ಟುಗಳೇ ಇರುವ ನಾಡಿದೆ. ಎಲ್ಲಿ ಹೋದರೂ ಆಶ್ರಯ ಕಟ್ಟಿಟ್ಟ ಬುತ್ತಿ.
ಆ ಮೇಲೆ, ನೀವು ಹಾಕಿದ ಗಾಳ ಇನ್ನೂ ಇಲ್ಲಿಗೆ ಮುಟ್ಟಿಲ್ಲ. ನೀವು ಅಷ್ಟೊಂದು ಎತ್ತರಕ್ಕೆ ಏರಿಸಬೇಕೂಂತ ಹೇಳಿದ್ದೀರಿ. ಅಷ್ಟು ದೊಡ್ಡ ಕೋಲು ಕೂಡ ನಮ್ಮ ಬಳಿ ಇಲ್ಲ.
ಪ್ರತ್ಯುತ್ತರಅಳಿಸಿಇನ್ನೂ ಒಂದಿದೆ. ನಮ್ಮ ಒಂದು ಪುಟದಲ್ಲಿ ಒಂದೇ ಅಕ್ಷರ ಹಿಡಿಸುತ್ತದೆ. ಹೀಗಾಗಿ ನಿಮ್ಮ ಸೊಂಪಾದಕರಾಗಲು ಒಪ್ಪಿಗೆ.
ಏನಾದ್ರೂ ಹೇಳ್ರಪಾ :-D