ಬೊಗಳೆ ರಗಳೆ

header ads

Cheap Minister ಬರ್ತ್‌ಡೇ ಗಿಫ್ಟ್!

(ಬೊಗಳೂರು cheap ಬ್ಯುರೋದಿಂದ)

ಬೊಗಳೂರು, ಜೂ.4- Chief ಆಗಬೇಕಿದ್ದ ವಯೋವೃದ್ಧರೂ, ಅಜ್ಞಾನವೃದ್ಧರೂ ಆಗಿರುವ ತಮಿಳುನಾಡು ಮುಖ್ಯಮಂತ್ರಿಗಳು 85 ವರ್ಷ ಪೂರೈಸಿದ ದಿನ Cheap ಆಗಿ ಪರಿಗಣಿಸಲ್ಪಟ್ಟಿದ್ದಾರೆ. ಇದಕ್ಕೆ ಕಾರಣ, ಎಂದೂ ಕೂಡ ಏರುತ್ತಲೇ ಇರುವ, ಯಾವುದೇ ವಸ್ತುಗಳ ಬೆಲೆ ಇಳಿಕೆಯಾದರೂ ಇಳಿಯದೇ ಇರುವ ಹೋಟೆಲ್ ತಿಂಡಿಗಳ ಬೆಲೆಯನ್ನು Cheap ಮಾಡಿಸಿದ್ದು.

ಈಗ ಚೀಪ್ ಮಿನಿಸ್ಟರು ಇಡ್ಲಿಯ ಬೆಲೆ ಇಳಿಸಿರುವುದರಿಂದ ಅವರು ಇನ್ನು ಮುಂದೆ ಕೇಕು ಕತ್ತರಿಸಿ ಬರ್ತ್ ಡೇ ಆಚರಿಸಬಾರದು. ಏನಿದ್ದರೂ ಇಡ್ಲಿ ಕತ್ತರಿಸಿಯೇ ಹುಟ್ಟು ಹಬ್ಬ ಆಚರಿಸಬೇಕು. ಯಾಕೆಂದರೆ, ಕೇಕು ಎನ್ನುವುದು ತಮಿಳು ಸಂಸ್ಕೃತಿಗೆ ವಿರೋಧವಾದದ್ದು. ಇಡ್ಲಿ ದೋಸೆಯೇ ತಮಿಳು ಭಾಷೆಯ ಬ್ರ್ಯಾಂಡ್ ಎಂಬ ಕೋಲಾಹಲವೂ ತಮಿಳುನಾಡಿನಿಂದ ಕೇಳಿಬರುತ್ತಿದೆ.

ಆದರೆ ಬರೇ ಇಡ್ಲಿ ಕತ್ತರಿಸಿ ಸುಮ್ಮನಿರಬೇಕಾದ ಅವರು, ಸಮುದ್ರದ ಸೇತುವನ್ನೇ ಕತ್ತರಿಸಿ ಬರ್ತ್ ಡೇ ಆಚರಿಸುತ್ತೇನೆ ಎಂದು ಹೇಳಿರುವುದು ಮಾತ್ರ ಹಲವರ ಹುಬ್ಬುಗಳು ತೂಗುಸೇತುವೆಯ ಮಾದರಿಯಲ್ಲಿ ವಕ್ರವಾಗಿ ಮೇಲೇರಲು ಕಾರಣವಾಗಿದೆ.

ಇದರ ನಡುವೆಯೇ, ಕೇಕಿನ ಬದಲು ಹೊಗೇನಕಲ್ಲನ್ನೂ ಕತ್ತರಿಸುತ್ತೇನೆ, ತಮಿಳುನಾಡಿನ ಅಧಿಕಾರವನ್ನೂ ಮಕ್ಕಳಾದ ಅಳಗಿರಿ-ಸ್ಟಾಲಿನ್‌ಗೆ ಕತ್ತರಿಸಿ ಹಂಚುತ್ತೇನೆ, ಕುರಿಯನ್ನೂ ಕತ್ತರಿಸಿ ಬರ್ತ್‌ಡೇ ಸೆಲೆಬ್ರೇಟ್ ಮಾಡುತ್ತೇನೆ ಎಂದೆಲ್ಲಾ ಘೋಷಿಸಿರುವುದಾಗಿ ಯಾರೂ ವರದಿ ಮಾಡಿಲ್ಲ.

ಆದರೆ ಇದೇ ವರದಿಯಲ್ಲಿ, ತಮಿಳುಕಾಡಿನಲ್ಲಿದ್ದುಕೊಂಡು ಬಾವಿಯೊಳಗಿನ ಕಪ್ಪೆಯಂತೆ ವಟಗುಟ್ಟಿರುವ ಅವರು, ನಮಗೆ ಒಳ್ಳೆಯ ನೆರೆಹೊರೆಯವರಿಲ್ಲ. ನೆರೆ ಬರುತ್ತದೆ, ಅದರ ಜೊತೆಗೆ ಹೊರೆಯೂ ಇದೆ. ಹೀಗಾಗಿ ತಮಿಳರನ್ನು ತಮಿಳರೇ ರಕ್ಷಿಸಿಕೊಳ್ಳಬೇಕಷ್ಟೆ ಎಂಬರ್ಥದ ಮಾತುಗಳನ್ನು ಆಡಿರುವುದು ಬೊಗಳೆಯ ಸುದ್ದಿಗೆ ಗ್ರಾಸವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

7 ಕಾಮೆಂಟ್‌ಗಳು

  1. ಕನ್ನಡಿಗರ ಕತ್ತು ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಳ್ಳುವದೇ, ತಮಿಳು ರಾಜಕಾರಣಿಗಳ ಹವ್ಯಾಸವಾಗಿದೆ. ಇಂಥಾ ಕ್ರಿಮಿನಲ್‌ಗಳಿಗೆ ಕೇಕು ತಿನ್ನಿಸಲು ಒಣಮೋರೆಸಿಂಗ್‌ನಂತಹ ಪ್ರಮಾದಮಂತ್ರಿಗಳಿದ್ದಾರಲ್ಲ!

    ಪ್ರತ್ಯುತ್ತರಅಳಿಸಿ
  2. ತಮಿಳರಿಗೆ ತಮಿಳರೇ ಸಾಟಿ
    ಅವರಿಗಿನ್ನೊಬ್ಬರಿಲ್ಲ ಪೈಪೋಟಿ
    ಪರದೇಶ ಹೊರದೇಶ ಎಲ್ಲೆಲ್ಲೂ ಅಟ್ಟಹಾಸ
    ಕಲಿಯರಿವರು ಪರಭಾಷ.

    ಸಿಂಗಪುರ ಮಲೇಶಿಯ ಸಿರಿಲಂಕ ಇತ್ಯಾದಿ ದೇಶಗಳಲ್ಲೂ ಇವರು ಹೊರೆಯಂತೆ. ಅದಕ್ಕೇ ಇರಬೇಕು ನಮಗ್ಯಾರೂ ನೆರೆಹೊರೆಯರಿಲ್ಲ ನಾವೇ ಎಲ್ಲರಿಗೂ ಹೊರೆ ಅಂತ ಹೇಳ್ತಿರೋದು.

    ಪ್ರತ್ಯುತ್ತರಅಳಿಸಿ
  3. ಒಳ್ಳೆಯ ಜ್ಯೋತಿಶಿಗಳಲ್ಲಿ ಕೇಳಬೇಕು ಇವರ ಆಯುಷ್ಯ ಎಷ್ಟಿದೆಯೆಂದು!!

    ಪ್ರತ್ಯುತ್ತರಅಳಿಸಿ
  4. ಸುನಾಥರೆ,

    ಕಾಂಗ್ರೆಸಿನ ಘೋಷಣೆ ಗೊತ್ತಲ್ಲಾ... ಕಾಂಗ್ರೆಸ್ ಕೀ ಹಾತ್, ಆಮ್ ಆದ್ಮೀಕೇ ಗಲೇ ಕೇ ಊಪರ್! ಒಟ್ಟಿನಲ್ಲಿ ಯಾರದೋ ಕತ್ತು ಕತ್ತರಿಸಿ ಇವರದು ಹುಟ್ಟು ಹಬ್ಬ ಪ್ರಮಾದದ ಆಚರಣೆ!!!

    ಪ್ರತ್ಯುತ್ತರಅಳಿಸಿ
  5. ಶ್ರೀನಿವಾಸರೆ,

    ನಮ್ಮನ್ನೇ ತಮಿಳರು ಅಂತ ಮಾಡಿಬಿಟ್ಟೀರಿ.... ಹುಷಾರ್!!!

    ಆದ್ರೆ ಯಾರು ಹೊರೆ ಹೇಗೆ ಹೊರೆ ಎಂಬ ಬಗ್ಗೆ ನಿಮ್ಮದೊಂದು ಸಂಶೋಧನೆಗೆ ನನ್ನ ಟೋಪಿ ಕೆಳಗೆ!!!

    ಪ್ರತ್ಯುತ್ತರಅಳಿಸಿ
  6. ತೇಜಸ್ವಿನಿ ಅವರೆ,

    ಜ್ಯೋತಿಷಿಗಳನ್ನು ಕೇಳೋಕೆ ಸ್ವತಃ ಅವ್ರಿಗೇ ಭಯ ಇದೆ. ಯಾಕಂದ್ರೆ, ಅವ್ರು ದೇವ್ರು-ದಿಂಡ್ರನ್ನ ತೋರಿಕೆಗೆ ನಂಬೋದಿಲ್ಲ. ಆದ್ರೆ, ಉತ್ತರಾಧಿಕಾರಕ್ಕಾಗಿ ಇಬ್ಬರು ಮಕ್ಕಳು ಆಗಲೇ ಹಸಿದ ಹೆಬ್ಬುಲಿಗಳಂತೆ ಕಾಯ್ತಾ ಇದ್ದಾರೆ. ಢಮಾರ್ ಅಂದ ತಕ್ಷಣವೇ ಎಗರಿ ಬಿಡ್ತಾರೆ.

    ಪ್ರತ್ಯುತ್ತರಅಳಿಸಿ
  7. ಈ ತಮಿಳರಿಂದ ನಮ್ಮ ದೇಶ ಮೊದಲು ಭಯೋತ್ಪಾದನೆಗೊಳಗಯಿತು. ಅವರ ಭಾಷಾಪ್ರೇಮ ಮೆಚ್ಚಬೇಕಾದ್ದೆ. ಆದರೆ ಅದು ಮಿತಿ ಮೀರಿ ಅಸಹ್ಯ ವಾಸನೆ ಹುಟ್ಟಿಸುತ್ತಿದೆ. ಕರುಣಾನಿಧಿಯಂತಹ ಒಬ್ಬ ಭಯೋತ್ಪಾದಕ ಈ ಕರ್ನಾಟಕಕ್ಕೇ ಕಂಟಕನಾಗಿದ್ದಾನೆ. ಇವ ಯಾವಾಗ ಸಾಯ್ತಾನೋ ಅಂತ ಕಾದು ಕುಳಿತಿದ್ದೇನೆ. ಯಾವ ಜ್ಯೋತಿಷಿಯೂ ಅವನ ಸಾವಿನ ಬಗ್ಗೆ ಹೇಳುತ್ತಿಲ್ಲವಲ್ಲ?

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D