(ಬೊಗಳೂರು ಬೊಗಳೆ ಬ್ಯುರೋದಿಂದ)
ಬೊಗಳೂರು, ಜೂ.6- ಇವರೇಕೆ ಬೊಗಳೆಗೆ ಸೆಡ್ಡು ಹೊಡೆಯುತ್ತಿದ್ದಾರೆ? ಏನಾದರೂ ಬೊಗಳೆ ರಗಳೆ ಬ್ಯುರೋವನ್ನು ಪೆಟ್ರೋಲ್ ಹಾಕಿ ಸುಟ್ಟುಬಿಡುವ ಹುನ್ನಾರವೇ ಎಂದು ನಮ್ಮ ಏಕ ಸದಸ್ಯ ಬ್ಯುರೋದ ಎಲ್ಲರೂ ಬಂದು ಸೊಂಪಾದಕರಲ್ಲಿ ಆತಂಕ ತೋಡಿಕೊಂಡ ಹಿನ್ನೆಲೆಯನ್ನು ಶೋಧಿಸಲಾಯಿತು.ನೋಡಿದರೆ ಆಗಲೇ ಎಲ್ಲಾ ಕಡೆ ತೈಲ ಬೆಲೆ ಏರಿಕೆಯ ಬೆಂಕಿಗೆ ಪೆಟ್ರೋಲ್ ಸುರಿಯಲಾಗುತ್ತಿದೆ. ಪೆಟ್ರೋಲ್ ಬೆಲೆ ಏರಿಕೆಯಿಂದ ಉಂಟಾಗುವ ಸಾಧ್ಯಾಸಾಧ್ಯತೆಗಳ ಬಗ್ಗೆ ಈಗಾಗಲೇ ಹಲವು ಬಾರಿ ನಮ್ಮ ಬ್ಯುರೋ ಬೊಗಳೆ ಬಿಟ್ಟಿದ್ದು, ಈ ಜನನಾಯಕರು ಮತ್ತು ದನ-ನಾಯಿ-ಕರುಗಳು ಎಲ್ಲಾ ಸೇರಿಕೊಂಡು, ಜನತೆಯ ಹಿತ ಕಾಯದಿರುವ ನಿರ್ಧಾರಗಳನ್ನೆಲ್ಲಾ ಕೈಗೊಳ್ಳುತ್ತಾ, ಮತ್ತೆ ಮತ್ತೆ ಇದನ್ನೇ ಬೊಗಳೆ ಬಿಡುತ್ತಿದ್ದಾರೆ.
ಈ ಬೊಗಳೆಗಳೇನು ಅಂತ ಕೂಲಂಕಷವಾಗಿ ನೋಡಿದರೆ :
* ನಾವು ದೇಶಾದ್ಯಂತ ಪ್ರತಿಭಟನೆ ನಡೆಸುತ್ತೇವೆ, ಬೆಂಬಲ ಹಿಂತೆಗೆಯುತ್ತೇವೆ: ಎಡಪಕ್ಷಗಳ ಬೊಗಳೆ
* ಬೆಲೆ ಇಳಿಸುವವರೆಗೂ ಹೋರಾಟ: ಪ್ರತಿಪಕ್ಷಗಳ ಬೊಗಳೆ ಘೋಷಣೆ
* ನಾವು ಬೀದಿಗಿಳಿದು ಹೋರಾಡುತ್ತೇವೆ, ಪೆಟ್ರೋಲ್ ಬೆಲೆ ಇಳಿಸುವವರೆಗೆ ವಿರಮಿಸುವುದಿಲ್ಲ: ಎಲ್ಲ ಅಂಗ- ಅನಂಗ ಪಕ್ಷಗಳಿಂದ ಬೊಗಳೆ ಘೋಷಣೆ
* ಹಣದುಬ್ಬರಕ್ಕೆ ಕಡಿವಾಣ ಅತ್ಯಗತ್ಯ, ಅದನ್ನು ಸಾಧಿಸಿಯೇ ಸಿದ್ಧ: ಮಾನ್ಯ ನಿಧಾನಿ ಘೋಷಣೆ
* ಆಹಾರ ವಸ್ತುಗಳು ಸಾಕಷ್ಟು ಸ್ಟಾಕ್ ಇವೆ, ಬೆಲೆ ಏರಲು ಬಿಡುವುದಿಲ್ಲ: ಆಹಾರ ಸಚಿವರ ಬೊಗಳೆ ಘೋಷಣೆ
* ಕಾಂಗ್ರೆಸ್ ಕಾ ಹಾತ್ ಆಮ್ ಆದ್ಮೀ ಕಾ ಸಾಥ್! --- (ಆಮ್ ಆದ್ಮೀ ಕೇ ಗಲೇ ಕೇ ಊಪರ್?)
* ಹಣದುಬ್ಬರಕ್ಕೆ ಕಡಿವಾಣ ಹಾಕಲು ಹಾಗೆ ಮಾಡಬೇಕು, ಹೀಗೆ ಮಾಡಬೇಕು: ಪಿತ್ತ ಸಚಿವರು
* ಬಡವರ ನಿರ್ಮೂಲನೆ ಅತ್ಯಗತ್ಯ: ಸರಕಾರ ಘೋಷಣೆ (ಖಂಡಿತಾ ಬೊಗಳೆಯಂತೆ ತೋರುವುದಿಲ್ಲ!)
* ದೇಶದಲ್ಲಿ ಬಡವರೇ ಇಲ್ಲದಂತೆ ಮಾಡುತ್ತೇವೆ: ಮತ್ತೊಂದು ಸರಕಾರದ ಘೋಷಣೆ (ಡಿಟ್ಟೋ ಮೇಲಿನದೇ!)
* ಮಂತ್ರಿಗಳು, ಮಾಗಧರು, ಅಧಿಕಾರಿಗಳು ಐಷಾರಾಮ ಕಡಿಮೆ ಮಾಡಬೇಕು, ವಿದೇಶ ಪ್ರವಾಸ ಕಡಿಮೆ ಮಾಡಬೇಕು: ಮಾನ್ಯ ನಿಧಾನಿ ಘೋಷಣೆ
* ಬಡವರ ತೆರಿಗೆ ಹಣದಲ್ಲಿ ಐಷಾರಾಮಿ ಜೀವನ ಮಾಡುತ್ತಾ, ಗೂಟದ ಕಾರಿಗೊಂಡು, ಕೈಗೊಂದು ಆಳುಗಳೊಂದಿಗೆ ಸೇವೆ ಮಾಡಿಸಿಕೊಳ್ಳುತ್ತಾ, ಜೇಬು ತುಂಬಿಸಿಕೊಳ್ಳುತ್ತಿರುವವರನ್ನು ದೇಶದಿಂದಲೇ ಹೊಡೆದೋಡಿಸಬೇಕು: ಯಾರು ಹೇಳಿದ್ದು ಅಂತ ಯೋಚಿಸಿ?....
ಉತ್ತರ: ಭವ್ಯ ಭಾರತದ ನಗಣ್ಯವಾಗಿಬಿಟ್ಟಿರುವ ಬಡ ಪ್ರಜೆ!
8 ಕಾಮೆಂಟ್‌ಗಳು
ನೀವೇನೇ ಹೇಳಿ, ಅನ್ವೇಷಿಗಳೇ!!!
ಪ್ರತ್ಯುತ್ತರಅಳಿಸಿಜಾರಕಾರಣಿಗಳ ಮಾತುಗಳ ಮುಂದೆ ನಿಮ್ಮ ಬೊಗಳೆ ಏನೂ ಅಲ್ಲ. ನೀವು ಸುಳ್ಳಪ್ಪ ಅಂತ ಹೇಳಿಕೊಂಡ್ರೆ ಅವರು ನಿಮ್ಮ ದೊಡ್ಡಪ್ಪ :D
ಮೇರಾ ಭಾರತ ಮಹಾನ್!
ಪ್ರತ್ಯುತ್ತರಅಳಿಸಿರಾಜಕಾರಣಿಗಳು ನಿಂತಿರುವುದೇ ಬೊಗಳೆಯ ಮೇಲೆ ಅಲ್ಲವೇ ಅನ್ವೇಷಿಯವರೆ?! ಬೊಗಳೆಯಿಲ್ಲದ ಒಬ್ಬ ರಾಜಕಾರಣಿಯ ತೋರಿಸಿ.. ಅವರನ್ನು ಆರಿಸುವ ನಾವೆಂತ ದೊಡ್ಡ ಬೊಗಳೆಯವರೆಂದು ಅನಿಸದೇ?
ಪ್ರತ್ಯುತ್ತರಅಳಿಸಿನಮ್ಮ ದೇಶದ ದುರವಸ್ಥೆಗೆ ನಾವು ಗೋಳಿಡಬೇಕೋ, ನಗಬೇಕೋ ಅರಿಯದಾಗಿದೆ. ಒಬ್ಬ ಭಯೋತ್ಪಾದಕ-ಪ್ರಧಾನಮಂತ್ರಿ, ಒಬ್ಬಳು ಗೂಢಚಾರಿಣಿ-ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ, ಒಬ್ಬಳು ಕೊಲೆಗಾತಿ-ರಾಷ್ಟ್ರಪತಿ, ಒಬ್ಬ ಐ.ಎಸ್.ಐ ಏಜೆಂಟ್ ವಿದೇಶಾಂಗ ಮಂತ್ರಿ, ಒಬ್ಬ ಅಪಹರಣಕಾರ- ರೈಲ್ವೇ ಮಂತ್ರಿ...ಇದು ಬೆಳೆಯುತ್ತಲೇ ಹೋಗುತ್ತದೆ....
ಪ್ರತ್ಯುತ್ತರಅಳಿಸಿಇವರಿಂದ ಈ ದೇಶ ಉದ್ಧಾರ ಆಗಲು ಸಾಧ್ಯವಿಲ್ಲ. ಇದು ಅವನತಿಯ ಕಾಲ. ಇಂತಹ ದೇಶದ್ರೋಹಿಗಳನ್ನು ನಡುಬೀದಿಯಲ್ಲಿ ನಿಲ್ಲಿಸಿ, ಚಪ್ಪಲಿಯೇಟು ಹಾಕಬೇಕು. ನಂತರ ಗಲ್ಲಿಗೇರಿಸಬೇಕು. ಐದು ವರ್ಷ ಮಿಲಿಟರಿ ಆಡಳಿತ ತಂದು, ನಂತರ ಚುನಾವಣೆ ನಡೆಸಬೇಕು. ಆಗಲೇ ಈ ದೇಶದ ಉದ್ಧಾರ ಸಾಧ್ಯ.
ಶ್ರೀನಿವಾಸರೆ,
ಪ್ರತ್ಯುತ್ತರಅಳಿಸಿಈಗೀಗ ನಮ್ಮ ಬ್ಯುರೋದವರಿಗೆ ಹೆದರಿಕೆ ಹುಟ್ಟಿದೆ. ಜಾರಕಾರಣಿಗಳ ಕುಲವೇ ಬೊಗಳೆ ಬಿಡಲಾರಂಭಿಸಿದ್ದು, ನಮ್ಮ ಮಾತಿಗೆ ಬೆಲೆ ಕಡಿಮೆಯಾಗುತ್ತಿದೆ. ಅಂದರೆ ಈ ದೇಶದಲ್ಲಿ ಎಲ್ಲವುಗಳ ಬೆಲೆ ಇಳಿಯುತ್ತಿದ್ದರೆ, ಕಡಿಮೆಯಾಗುತ್ತಿರುವುದು ನಮ್ಮ ಮಾತಿಗೆ ಮಾತ್ರ!
ಸುನಾಥರೆ,
ಪ್ರತ್ಯುತ್ತರಅಳಿಸಿ"ಓ ಜನಸಾಮಾನ್ಯಾ... ಮಹಾನ್ ಎನಿಸುವಷ್ಟು ಭಾರವಾದ ಸೂಟ್ ಕೇಸ್ ತಾ" ಅಂತ ನೀವು ಹೇಳಿದ ವಾಕ್ಯವನ್ನು ಭಾಷಾಂತರಿಸಿದ್ದೇವೆ.
ತೇಜಸ್ವಿನಿ ಅವರೆ,
ಪ್ರತ್ಯುತ್ತರಅಳಿಸಿಹೌದು. ನೀವು ಹೇಳಿದ್ದು ಸರಿ. ರಾಜಕಾರಣಿಗಳು ಈಗೀಗ ಬೊಗಳೆಯ ಮೇಲೆಯೇ ಮೆಟ್ಟಿ ನಿಲ್ಲಲಾರಂಭಿಸಿದ್ದಾರೆ. ಅದಕ್ಕೇ ಇರಬೇಕು ಬೊಗಳೆ ಭಾರವಾಗುತ್ತಿದೆ. ಮೇಲೇಳಲು ಆಗುತ್ತಿಲ್ಲ.
ಆದರೆ ಅವರನ್ನು ಆರಿಸುವ ನಾವು ಎಷ್ಟೇ ಆದ್ರೂ ಹಣ-ಹೆಂಡದಲ್ಲಿ ಕರಗಿ ಹೋಗ್ತೀವಲ್ಲಾ.... ಸೋ... ಬೊಗಳೆ ಭಾರವೇ ಆಗಿರೋದಿಲ್ಲ.
ಗುರು ಅವರೆ,
ಪ್ರತ್ಯುತ್ತರಅಳಿಸಿನೀವು ಕೊಟ್ಟಿರೋ ಬಿರುದುಗಳನ್ನು ನೋಡಿದ್ರೆ, ನಮ್ಮ ದೇಶದ ಸ್ಥಿತಿ ನೋಡಿ ಗಹಗಹಿಸಿ ಅಳಬೇಕೆನಿಸುತ್ತಿದೆ. !!!
ಏನಾದ್ರೂ ಹೇಳ್ರಪಾ :-D