ಅರ್ಜೆಂಟಾಗಿ ಬೊಗಳೂರು ಬಿಟ್ಟು ಪರಾರಿಯಾಗಬೇಕಾದ ಪ್ರಸಂಗ ಬಂದಿರೋದ್ರಿಂದ ಬೊಗಳೂರಿಗೆ ಎರಡು ದಿನ ರಜೆ ಸಾರಲಾಗಿದೆ.
ಎಲ್ಲರೂ ನಿರಾಳವಾಗಿ ಉಸಿರಾಡುವಂತೆ ಕೋರಲಾಗಿದೆ.
ಆದರೆ ಬೊಗಳಿಗರ ಸಮಾವೇಶದಲ್ಲಿ ಭಾಗವಹಿಸಿ, ಅಲ್ಲಿಂದ ಯಾರೋ ಅಟ್ಟಿಸಿಕೊಂಡು ಹೋಗಿದ್ದಾರೆ ಎಂಬ ವರದಿಗಳನ್ನು ಮಾತ್ರ ನಮ್ಮ ಬ್ಯುರೋದ ಸೊಂಪಾದ-ಕರುಗಳು ನೀರ್ ನೀರ್-ವಾಕರಿಸಿದ್ದಾರೆ. ಎಲ್ಲರೂ ಎರಡು ದಿನ ಹರ್ಷಚಿತ್ತರಾಗಿ ರಜೆ ಸೆಲೆಬ್ರೇಟ್ ಮಾಡುವಂತೆ ಸಂದೇಶವನ್ನೂ ರವಾನಿಸಿದ್ದಾರೆ.
- Home
- NEWS
- _POLITICS
- __ಜಾರಕಾರಣ
- __ರಾಜಕೀಯ
- __ಪಾತಕಿಸ್ತಾನ
- _ELECTION
- __ಚುನಾವಣೆ
- __ಚುಚ್ಚುವ ಆಣೆ
- __ಎಲೆಕ್ಷನ್
- __ಓಟು
- _SPORTS
- BARKING NEWS
- YOUTH
- _ಭಗ್ನ ಹೃದಯ
- _ವಿಚ್ಛೇದನೆ
- _ಬಾಲ್ಯ ವಿವಾದ
- _ನಿರುದ್ಯೋಗ
- _ಬಾಲ-ಕರುಗಳ ಸಂಘ
- SCIENCE
- _ತಾಪಮಾನ
- _ಸಂಚೋದನೆ
- _ಕತ್ತರಿ ಪ್ರಯೋಗ
- _ಪ್ರಾಣಿ ನಿರ್ದಯ ಸಂಘ
- _ಒದೆಗಳು
- EDITORIAL
- EDUCATION
- _ಶೈ-ಕ್ಷಣಿಕ
- _ಬ್ಲಾಗಿನ
- _ಏಪ್ರಿಲ್ 1
- BUSINESS
- _ಕುದುರೆ ವ್ಯಾಪಾರ
- _ಆರ್ಥಿಕ ಸ್ಥಿತಿ
- _ವ್ಯವಹಾರ
- _ಜಾಹೀರಾತು
- __ನ್ಯಾನೋ
- HEALTH
- _ಕುಡುಕರ ಸಂಘ
- _ಅನಾರೋಗ್ಯ
- _ಜನಸಂಖ್ಯಾ ನಿಯಂತ್ರಣ
- INTERVIEWS
- _Someದರ್ಶನ
- _ಸಂದರ್ಶನ
8 ಕಾಮೆಂಟ್‌ಗಳು
Happy Holi!
ಪ್ರತ್ಯುತ್ತರಅಳಿಸಿನಿಮ್ಮನ್ನು ಯಾರೋ ಓಡ್ಸಿದ್ರೂ ಅಂತ ನಿಮ್ಮ ಏಕ ಸದಸ್ಯ ಬ್ಯೂರೋದ ಸರ್ವ ಸದಸ್ಯರೂ ಬಣ್ಣಹಚ್ಚಿಕೊಂಡು ಕುಣಿಕುಣಿದು ನಲಿನಲಿದು ಹೋಲಿ ಆಚರ್ಸ್‌ತ್ತಿದ್ರಪ್ಪ!
ಪ್ರತ್ಯುತ್ತರಅಳಿಸಿಎಲ್ಲರಿಗೂ ನಮಸ್ಕಾರಗಳು
ಪ್ರತ್ಯುತ್ತರಅಳಿಸಿಅನ್ವೇಷಿಗಳು ತಲೆಮರೆಸಿಕೊಂಡು ಓಡಿ ಹೋಗಿದ್ದಾರೆ ಎಂದು ತಿಳಿಸಲು ಬಹಳ ಹರ್ಷವಾಗುತ್ತಿದೆ
ಇನ್ಮೇಲೆ ನಾನೇ ಇಲ್ಲಿಯ ವದರಿಗಾರ. ನಿಮಗೆ ಎಂತಹ ಸುದ್ದಿ ಬೇಕು ಎಂದು ನನಗೆ ಪಂಚೆಯ ಮೂಲಕ, ಕ್ಷಮಿಸಿ ಅಂಚೆಯ ಮೂಲಕ
ತಿಳಿಸಿದರೆ ಅಂತಹದ್ದೇ ಸುದ್ದಿಗಳನ್ನು ನಿಮಗೆ ರುಚಿಸುವಂತೆ ಶುಚಿಯಾಗಿ ರಚಿಸಿ, ಇಲ್ಲಿ ಏರಿಸುವೆ
ನೀವೇನೂ ಹೆದರಬೇಡಿ, ಇನ್ಮೇಲೆ ಅನ್ವೇಷಿಗಳು ಈ ಕಡೆಗೆ ಬರದಂತೆ ಮುಂಬಾಗಿಲು, ಹಿಂಬಾಗಿಲು ಭದ್ರಮಾಡಿರುವೆ :)
ಅಸತ್ಯ ಅನ್ವೇಷಿಯವರನ್ನು ಬೊಗಳೂರಿನಿಂದಲೇ ಓಡಿಸಿರುವುದರ ಹಿಂದೆ ನಮ್ಮ ಸಂಸ್ಥೆಯ ಕೈವಾಡವಾಗಲೀ ಮುಖವಾಡವಾಗಲೀ ಇಲ್ಲ ಎಂದು ಈ ಮೂಲಕ ಸಾರುತ್ತಿದ್ದೇವೆ.
ಪ್ರತ್ಯುತ್ತರಅಳಿಸಿಯಾರಾದರೂ ಅಸತ್ಯ ಅನ್ವೇಷಿ ಬೊಗಳೂರಿನಿಂದ ಕಾಣೆಯಾಗಿರುವುದಕ್ಕೆ ಆಗಿರುವ ಅದಮ್ಯ ಸಂತೋಷವನ್ನು ಪಟಾಕಿ ಹಾರಿಸುವ ಮೂಲಕವೋ, ಸಿಹಿ ಹಂಚುವ ಮುಖಾಂತರವೋ ತೋರ್ಪಡಿಸಿದಲ್ಲಿ ನಮ್ಮ ಮಾಜಿ ‘ಮಣ್ಣಿನ ಮಗ’ನಂತೆ ಬೊಗಳೂರಿನಲ್ಲಿ ಮತ್ತೆ ಹುಟ್ಟದಿರುವ ಶಪಥ ಮಾಡಿಯಾರು ಜೋಕೆ!
supreeth
ಸುನಾಥರೆ,
ಪ್ರತ್ಯುತ್ತರಅಳಿಸಿಊರ ತುಂಬೆಲ್ಲಾ ಹೋಳಿಗೆ ಚೆನ್ನಾಗಿಯೇ ರೆಡಿ ಮಾಡಿದ್ದಾರೆ ಅಂತ ಗೊತ್ತಾಯ್ತು...
ನಿಮಗೂ ಶುಭಾಶಯ.
ಶಾನಿಯವರೆ,
ಪ್ರತ್ಯುತ್ತರಅಳಿಸಿಸ್ಪೆಲ್ಲಿಂಗ್ ಮಿಸ್ಟೇಕ್ ಆಗಿದೆ ಅಂತ ಎತ್ತಿ ತೋರಿಸುತ್ತಿದ್ದೇವೆ. ಕುಣಿಕುಣಿದು ಅನ್ನೋ ಪದದಲ್ಲಿ ಣಿ ಬದಲು ಡಿ ಆಗಬೇಕಿತ್ತು... ಆನಂತರ ಅವರೆಲ್ಲಾ ಡೆಸ್ಕ್ ಮೇಲೇ ಪವಡಿಸಿದ್ರಂತೆ...
ಅನಾನಸ್1 ಅವರೆ,
ಪ್ರತ್ಯುತ್ತರಅಳಿಸಿನಮಗೆ ನಾಮ-ಸ್ಕಾರ ಹಾಕಲು ಬಂದವರಿಗೂ ನಮಸ್ಕಾರ.
ನಮ್ಮನ್ನು ಓಡಿಸಿ ಅಧಿಕಾರಕ್ಕೇರೋಕ್ಕೆ ನೀವೇನು ನೋಸಿಯಾ ಗಾಂಧಿಯೇ ಅಥವಾ ನಾವು ಸೀತಾರಾಮ ಕೇಸರಿಯೇ? ರಂಗೋಲಿ, ಚಾಪೆ, ಹಾಸಿಗೆ, ಬಾಗಿಲು, ಗವಾಕ್ಷಿ... ಎಲ್ಲಾ ಕಡೆ ತೂರಿಕೊಂಡು ಮತ್ತೆ ಬಂದಿದ್ದೇವೆ.
ಅನಾನಿಮಸ್ 2 ಸುಪ್ರೀತರೆ,
ಪ್ರತ್ಯುತ್ತರಅಳಿಸಿನೀವು ಸಂತೋಷ ಆಚರಿಸಿದ್ದು ಪಟಾಕಿ ತಿಂದು, ಸಿಹಿ ಹಾರಿಸಿ ಅಂತ ತಿಳಿದು ಬಹಳ ಸಂತೋಷವಾಯಿತು. ಪಟಾಕಿ ಒಡೆದಾಗ ನಿಮ್ಮ ಬ್ಯುರೋದವರ ಮುಖ ನೆನಪಿಸಿಕೊಂಡು ನಗು ಬರಲೇ ಇಲ್ಲ...
ಏನಾದ್ರೂ ಹೇಳ್ರಪಾ :-D