ಬೊಗಳೆ ರಗಳೆ

header ads

ಅಂಗಿ ಹಾಕಿದರೆ ಸುದ್ದಿ, ಕಳಚಿದರೆ ರದ್ದಿ!

(ಬೊಗಳೂರು ಬಟ್ಟೆರಹಿತ ಬ್ಯುರೋದಿಂದ)
ಬೊಗಳೂರು, ಮಾ.6- ಥೂ... ಯಾರಿಗೆ ಯಾವಾಗ ಎಂಥ ವರದಿಗಳನ್ನು ನೀಡಬೇಕೆಂಬುದು ಗೊತ್ತೇ ಆಗುತ್ತಿಲ್ಲವಲ್ಲ ಎಂಬುದು ಬೊಗಳೆ ಸೊಂಪಾದಕರುಗಳ ಉದ್ಗಾರ.

ಇದಕ್ಕೆ ಕಾರಣವೆಂದರೆ, ಸಾಲಮನ್ನಾ ಖಾನ್ ಅಂಗಿ ಕಳಚಿದ್ದನ್ನೇ ಸುದ್ದಿ ಮಾಡುವವರು ಮಾಧ್ಯಮಕ್ಕೆ ಅಪಚಾರ ಎಸಗಿದಂತೆ ಎಂಬುದು ಅವರ ಅಭಿಪ್ರಾಯ. ಇದೇಕೆ ತಮ್ಮಷ್ಟಕ್ಕೆ ತಾವೇ ಒದರಿಕೊಳ್ಳುತ್ತಿದ್ದೀರಿ? ಸಾಲಮನ್ನಾ ಖಾನನಿಗೆ ಏನಾದರೂ ಹಾಟ್ ಹಾಟ್ ತಾರೆಯರ ಕಾಟದಿಂದ ಸೆಖೆ ಜಾಸ್ತಿಯಾಗಿರಬೇಕು, ಅದಕ್ಕಾಗಿ ಅಂಗಿ ಕಳಚಿ ತಂಪು ಮಾಡಿಕೊಳ್ಳುತ್ತಿದ್ದಿರಬಹುದಲ್ಲ ಎಂದು ವರದ್ದಿಗಾರರು ಪ್ರಶ್ನಿಸಿದಾಗ, ಅದಕ್ಕೆ ಅವರು ಉದಾಹರಣೆ ಸಹಿತ ಉತ್ತರ ನೀಡಿ ನಮ್ಮನ್ನು ತತ್ತರಿಸುವಂತೆ ಮಾಡುತ್ತಾ ಐಸ್ ವಾಟರ್ ತರಿಸಿಕೊಂಡರು.

ಸಾಲಮನ್ನಾ ಖಾನ್ ಅಂಗಿ ಹಾಕಿದರೆ ಅದನ್ನು ಸುದ್ದಿ ಮಾಡಬೇಕು. ಅಂಗಿ ಕಳಚುವುದು ಮಾಮೂಲಿ ಸಂಗತಿಯೇ ಅಲ್ಲವೇ? ಎಂದು ಪ್ರಶ್ನಿಸಿರುವ ಅವರು, ಇದನ್ನೇಕೆ ಸುದ್ದಿ ಮಾಡಬೇಕು? ಈಗಾಗಲೇ ಜಾಗತಿಕ ತಾಪಮಾನ ಹೆಚ್ಚಾಗಿದ್ದು, ಎಲ್ಲರೂ ಸೆಕೆಯಲ್ಲಿದ್ದಾರೆ. ಶರ್ಟು ಕಳಚುತ್ತಾರೆ. ಅಂತೆಯೇ ಸಾಲಮನ್ನಾ ಖಾನ ಅವರು (ಬಟ್ಟೆಗೂ) ಕತ್ರೀನಾ? ಜತೆಗೆ ತಿರುಗಾಡಿಕೊಂಡು ಸುದ್ದಿ ಮಾಡುತ್ತಿದ್ದಾರೆ. ಆಗಾಗ್ಗೆ ತನ್ನ ಅಂಗಿ ಬದಲಾಯಿಸಿದಂತೆಯೇ ತಮ್ಮ ಲವರ್‌ಗಳನ್ನೂ ಬದಲಾಯಿಸುತ್ತಾ ಇರುತ್ತಾರೆ. ಇದನ್ನೆಲ್ಲಾ ಸುದ್ದಿ ಮಾಡುವುದು ಬಿಟ್ಟು, ಹುಟ್ಟುಡುಗೆಯಲ್ಲಿ ಇರೋದನ್ನೇ ಸುದ್ದಿ ಮಾಡಿದರೆ ನಮ್ಮಂಥ ಅವಮರ್ಯಾದಸ್ಥ ಪತ್ರಿಕೆಗಳಿಗೆ ಮತ್ತಷ್ಟು ಅವಮಾನ ಮಾಡಿದಂತಾಗುತ್ತದೆ ಎಂದು ಅಲವತ್ತುಕೊಂಡಿರುವುದನ್ನು ನಮ್ಮ ರದ್ದಿಗಾರರು ವರದಿ ಮಾಡಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

10 ಕಾಮೆಂಟ್‌ಗಳು

  1. ಅನ್ವೇಷಿಗಳೇ,

    ನಮಸ್ಕಾರ. ಹೇಗಿದ್ದೀರಿ?

    ನಿಮ್ಗೂ ಗೊತ್ತಿರೋ ಹಾಗೆ, ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

    ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

    ಡೇಟು: ೧೬ ಮಾರ್ಚ್ ೨೦೦೮
    ಟೈಮು: ಇಳಿಸಂಜೆ ನಾಲ್ಕು
    ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು


    ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

    ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

    ಅಲ್ಲಿ ಸಿಗೋಣ,
    ಇಂತಿ,

    ಸುಶ್ರುತ ದೊಡ್ಡೇರಿ

    ಪ್ರತ್ಯುತ್ತರಅಳಿಸಿ
  2. ಕೌದು ಕಣ್ರೀ ನೀವು ಹೇಳ್ತಾ ಇರೋದು ಕರೆಕ್ಟು..ಭಯಂಕರ ಒಳ್ಳೆ ಸುದ್ದಿ ನೀಡಿದ್ದೀರಿ..ನಮಸ್ಕಾರಗಳು ಸೊಂಪಾದಕರಿಗೆ

    ಪ್ರತ್ಯುತ್ತರಅಳಿಸಿ
  3. ಸಾಲಮನ್ನಾ ಖಾನ್, ಖಾಕಿ ಸಾವಂತ ಇವರೆಲ್ಲಾ topless
    ಆಗಿ ಇರೋದೆ ಸಹಜ ಪರಿಸ್ಥಿತಿ.ಯುವ ಜನತೆಯೂ ಇವರನ್ನೇ ಅನುಕರಿಸಹತ್ತಿದ್ದರಿಂದ textile industry ದಿವಾಳಿಯ ಅಂಚಿನಲ್ಲಿದೆ ಅಂತ ಬೊಗಳೆ ರಗಳೆಯ ಗೂಢಚಾರರು
    ಪತ್ತೆ ಹಚ್ಚಿಲ್ಲವಂತೆ.

    ಪ್ರತ್ಯುತ್ತರಅಳಿಸಿ
  4. ಅಸತ್ಯಾನ್ವೇಶಿಗಳೇ ಇಲ್ಲಿ ನೊಡಿ ಇನ್ನೊಂದು ಬಿಸಿ ಬಿಸಿ ತಾಜಾ ಸುದ್ದಿ. ಮುಂದಿನ ಪ್ರತಿಗಾಗಿ ಈ ಕೂಡಲೆ ನಿಮ್ಮ ಏಕ ಸದಸ್ಯ ಬ್ಯೂರೊವನ್ನು ಕಳುಹಿಸಿ

    ಪ್ರತ್ಯುತ್ತರಅಳಿಸಿ
  5. ಹಿಂದೊಮ್ಮೆ ಠೋಳಾ ಭಾಕ್ರೆ ಹೇಳಿದ್ದು ನೆನಪಾಗ್ತಿದೆ

    ಉಠಾವೋ ಲುಂಗೀ
    ಬಜಾವೋ ಪುಂಗೀ ... ಹ ಹ ಹ

    ಅನ್ವೇಷಿಗಳೇ ನೀವೆಲ್ಲೋ ನಮ್ಮ ಕಾಲದಲ್ಲಿ ಇದ್ದೀರಿ
    ಈಗ ಸುದ್ದಿ ರದ್ದಿ ಎಲ್ಲ ಒಂದೇ - ನಾವು ನೀವು ಮಾತ್ರ ಬೇರೆ ಬೇರೆ ಅಷ್ಟೆ. :)

    ಪ್ರತ್ಯುತ್ತರಅಳಿಸಿ
  6. ಸುಶ್ರುತ ಅವರೆ,

    ಒಳ್ಳೇ ಕೆಲಸ ಮಾಡ್ತಿರೋದು ತುಂಬಾ ತುಂಬಾ ಸಂತೋಷ. ಪ್ರಣತಿಯ ಕಾರ್ಯ ಶ್ಲಾಘನಾರ್ಹ. ದೂರದಿಂದ ಬರೋದು ಕಷ್ಟವಾದರೂ ಸಮಯ ಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ.

    ತುಂಬಾ ತುಂಬಾ ಧನ್ಯವಾದ.

    ಪ್ರತ್ಯುತ್ತರಅಳಿಸಿ
  7. ಚಿತ್ರಾ,

    ನಮ್ಮ "ಭಯಂ"ಕರ ಸುದ್ದಿ ಕೇಳಿಯೂ ನೀವು ಭಯಮುಕ್ತರಂತೆ ವರ್ತಿಸುತ್ತಿರುವುದರಿಂದ ನಮಗೇ ಭಯವಾಗತೊಡಗಿದೆ.

    ಪ್ರತ್ಯುತ್ತರಅಳಿಸಿ
  8. ಸುನಾಥರೆ,
    ನಮ್ಮಂಥ ಡೆಸ್ಕ್‌ಟಾಪ್‌ಲೆಸ್‌ಗಳೇ ಇರೋವಾಗ, ಖಾನು, ಖಾಕಿಯಂತಹ ಟಾಪ್‌ಲೆಸ್‌ಗಳ ಬಗ್ಗೆ ನಾವೇಕೆ ತಲೆಕೆಡಿಸಿಕೊಳ್ಬೇಕು... ಅಂತೂ ಬೊಗಳೆರಗಳೆಯ ದಿವಾಳಿಯಂಚಿನಲ್ಲಿರೋ ಗೂಢಚಾರರಿಗೆ ಬಿಸಿ ಮುಟ್ಟಿಸಿದ್ದೀರಿ...

    ಪ್ರತ್ಯುತ್ತರಅಳಿಸಿ
  9. ವಿವೇಕರೆ,
    ನಮ್ಮ ಏಕಸದಸ್ಯ ಬ್ಯುರೋದ ಎಲ್ಲಾ ಸದಸ್ಯರನ್ನು ಕಳುಹಿಸಲಾಗಿದ್ದು, ಸಾಕಷ್ಟು ರದ್ದಿಗಳು ಅಲ್ಲಿಂದ ಶೀಘ್ರವೇ ರವಾನೆಯಾಗಲಿವೆ. ಆದರೆ ಬೊಗಳೆ ಈಸ್ ಡೆಡ್, ಲಾಂಗ್ ಲಿವ್ ಬೊಗಳೆ ಅಂತ ನಮಗೆ ಸಿಕ್ಕಿದ ವರದಿಯಲ್ಲಿ ಪ್ರಕಟವಾಗಿದೆ.

    ಪ್ರತ್ಯುತ್ತರಅಳಿಸಿ
  10. ಶ್ರೀನಿವಾಸರೆ,

    ನಾವು ನೀವು ಬೇರೆ ಬೇರೆ ಮಾತ್ರೆ ಅಂತ ಹೇಳಿ ನಮ್ಮನ್ನು ಮಾತ್ರಾಸಮಾನರನ್ನಾಗಿಸಿದ್ದಕ್ಕೆ ಧನ್ಯವಾದ. ನಿಮ್ಮ ಕಾಲಕ್ಕೆ ನಾವಿನ್ನೂ ಹಿಂದೆ ಹೋಗುವುದು ಹೇಗೆ ಎಂಬುದೇ ತಿಳಿಯುತ್ತಿಲ್ಲ... :-))

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D