(ಬೊಗಳೂರು ಸ್ಲೆಡ್ಜಿಂಗ್ ಬ್ಯುರೋದಿಂದ)
ಬೊಗಳೂರು, ಮಾ.4- ಭಜ್ಜಿಗೆ ಮೆಣಸಿನಕಾಯಿ ಪುಡಿ ಎರಚುತ್ತಾ ಸಂಭ್ರಮದಲ್ಲಿರುವ ಆಸೀಸ್ ಆಟಗಾರರು ಈ ಕ್ಷಣದ ವಿದ್ಯಮಾನವೊಂದರ ಪ್ರಕಾರ, ಅಂಪೈರ್ ವಿರುದ್ಧ ಜನಾಂಗೀಯ ನಿಂದನೆ ಆರೋಪ ಹೊರಿಸಿದ್ದಾರೆ.ಫೀಲ್ಡಿನಲ್ಲಿ ಹರಭಜನ್ ಸಿಂಗ್ ಮಾಡುತ್ತಿರುವ ಎಲ್ಲ ಭಾವ ಭಂಗಿಗಳನ್ನು ಸ್ಲೆಡ್ಜಿಂಗ್, ಪ್ರಚೋದನೆ, ಜನಾಂಗೀಯ ನಿಂದನೆ ಎಂದೆಲ್ಲಾ ಜರೆಯುವ ಕಲೆಯನ್ನು ಕರಗತ ಮಾಡಿಕೊಂಡಿರುವ ಕಾಂಗರೂಗಳು, ಈ ಜನಾಂಗೀಯ ನಿಂದನೆ ಪಟ್ಟಿಗೆ ಹೊಸ ಹೊಸ ಕೇಸುಗಳನ್ನು ಸೇರಿಸಿಕೊಳ್ಳುವಲ್ಲಿಯೂ ನಿಷ್ಣಾತರಾಗಿದ್ದೇವೆ ಎಂದು ರಾಕಿ ಫಟಿಂಗ ಅವರು ಬೊಗಳೆ ರಗಳೆಗೆ ನೀಡಿದ ಸ-ಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಹರಭಜನ್ ಸಿಂಗ್ ಚೆಂಡನ್ನು ಸ್ಪಿನ್ ಮಾಡಿ ಎಸೆಯುವುದೇ ಜನಾಂಗೀಯ ನಿಂದನೆ ಎಂದು ಸ್ಪಷ್ಟಪಡಿಸಿರುವ ಅವರು, ಇದೇ ಕಾರಣಕ್ಕೆ ತಾನು ಹಲವಾರು ಬಾರಿ ಭಜ್ಜಿ ಬೌಲಿಂಗಿನಲ್ಲಿಯೇ ಔಟಾಗಿದ್ದೇನೆ. ಈ ಥರ ಜನಾಂಗೀಯ ನಿಂದನೆ ಮಾಡಿದರೆ, ನಾವು ಮುರಳೀಧರನ್ ಸಹಿತ ಏಷ್ಯಾ ಉಪಖಂಡದ ಬೌಲರುಗಳನ್ನು ಎದುರಿಸುವುದಾದರೂ ಹೇಗೆ. ಹಾಗಾಗಿ ಸ್ಪಿನ್ ಬೌಲಿಂಗನ್ನೇ ನಿಷೇಧಿಸಬೇಕು ಎಂದು ಫಟಿಂಗ ಆಗ್ರಹಿಸಿದ್ದಾರೆ.
ಇಶಾಂತ್ ಶರ್ಮಾ ಕೂಡ ಸೈಮೊಂಡನನ್ನು ಕ್ಲೀನ್ ಬೌಲ್ಡ್ ಮಾಡಿದ ಬಳಿಕ, ಆ ರೀತಿ ಬೆರಳೆತ್ತಿ ಔಟ್ ಅಂತ ಕೂಗಬಾರದಿತ್ತು. ಆತ ಕೂಡ ಕೈ ಬೆರಳೆತ್ತಿ ಜನಾಂಗೀಯ ನಿಂದನೆ ಮಾಡಿದ್ದಾರೆ ಎಂದು ಹೇಳಿದ ಅವರು, ಅಂಪೈರ್ ಹೇಗೆ ಜನಾಂಗೀಯ ನಿಂದನೆ ಮಾಡಿದರು ಎಂಬ ಪ್ರಶ್ನೆಗೆ ಈ ರೀತಿ ಉತ್ತರಿಸಿದರು:
ಆ ಅಂಪೈರಿಗೆ ತಲೆ ಇಲ್ಲ. ಕಾಂಗರೂ ಬ್ಯಾಟ್ಸ್‌ಮನ್‌ಗಳು ಔಟಾದಾಗ ಅವರೇಕೆ ಒಂದು ಬೆರಳು ಎತ್ತಿ ತೋರಿಸಬೇಕು? ಇದು ನಮಗೆ ಮಾಡಿದ ಅವಮಾನವಲ್ಲವೇ? ಅದೂ ಅವರು ಎತ್ತಿ ತೋರಿಸಿದ್ದು ತೋರು ಬೆರಳನ್ನೇ. ಒಂದು ವೇಳೆ ಅವರು ಒಂದು ಕೈಯ ಕಿರು ಬೆರಳು ಮಾತ್ರ ಎತ್ತಿದ್ದರೆ, ಭಾರತೀಯ ಬೌಲರುಗಳೆದುರಿನ ನಮ್ಮ ಪರಿಸ್ಥಿತಿಯ ಅರಿವು ನಮಗೆ ಮೂಡುತ್ತಿತ್ತು. ಅದಕ್ಕೆ ಖಂಡಿತವಾಗಿಯೂ ನಾವು ಪೆವಿಲಿಯನ್ ಪಕ್ಕವೇ ಹೋಗಬೇಕಾಗುತ್ತಿತ್ತು ಎಂದು ಕಿರು ಬೆರಳು ತೋರಿಸುತ್ತಾ, ಈಗ್ಬಂದೆ ಎನ್ನುತ್ತಾ ಪೆವಿಲಿಯನ್ ಹಿಂದಕ್ಕೆ ಓಡತೊಡಗಿದರು.
ಮರಳಿ ಬಂದ ಅವರಿಗೆ ಮತ್ತೆ ಪ್ರಶ್ನಿಸಲಾಯಿತು. ಹಾಗಿದ್ದರೆ, ನೀವೇಕೆ "ಜನಾಂಗೀಯ ನಿಂದನೆ" ಎಂಬ ಪದವನ್ನು ಬಳಸ್ತಿದೀರಿ, ನಿಮ್ಮದು ಯಾವ ಜನಾಂಗ? ಅಂತ ಕೇಳಿದಾಗ ತತ್ತರಿಸಿದ ಅವರು, "ನಮ್ಮದು ಯಾವ ಜನಾಂಗವಾದ್ರೆ ನಿಮಗೇನ್ರೀ... ಮಂಗ ಅಂತ ಹೇಳೋದು ನಮ್ಮ ಜನಾಂಗೀಯ ನಿಂದನೆಯೇ..." ಅಂತ ಸಮರ್ಥಿಸಿಕೊಂಡರು.
5 ಕಾಮೆಂಟ್‌ಗಳು
ಓಹ್ ಇಷ್ಟೆಲ್ಲಾ ರಾದ್ಧಾಂತ ಆಗಿರೋದು ನನಗೆ ತಿಳಿದಿರಲಿಲ್ಲ - ಕಾಂಗರೂಗಳು ಕಂಗಾಲಾಗಿದ್ದ ಬಗ್ಗೆ ಎಲ್ಲೋ ಗಾಳಿಯಲ್ಲಿ ಕೇಳಿದಂತಿತ್ತು.
ಪ್ರತ್ಯುತ್ತರಅಳಿಸಿಸೈ ಮೊಂಡ ಕೈ ಬೆರಳು ಎತ್ತಿದ್ದರ ಬಗ್ಗೆ ಗೊತ್ತಿರಲಿಲ್ಲ ಆದರೆ ಸ್ಟಂಪ್‍ನ ಹತ್ತಿರ ಸುಳಿದಾಗಲೆಲ್ಲಾ ಕಾಲೆತ್ತುತ್ತಿದ್ದನಂತೆ
ಇನ್ನೊಂದು ವಿಷಯ ಗೊತ್ತಾ - ಬಜ್ಜಿ ಈಗ ನಮ್ಮೂರಿನಲ್ಲಿ ಬಜ್ಜಿ ಪಕೋಡ ಬೋಂಡ ಇತ್ಯಾದಿಗಳ ಮಳಿಗೆಯನ್ನು ತೆರೆಯುತ್ತಿದ್ದಾನಂತೆ
ಉತ್ತಮ ವರದಿ ವದರಿದ್ದಕ್ಕೆ ನಿಮಗೊಂದು ...
ನಿಮಗೂ ಸೈಮಂಡ್ಸ್ ಅಂದ್ರೆ ಬಲೊ ಪ್ರೀತಿ ಅಂತ ಕಾಣುತ್ತೆ... ಮಂಗನ ಫೋಟೋ ಹಾಕಿದ್ರಲ್ಲ ಅದಿಕ್ಕೆ ಕೇಳಿದೆ
ಪ್ರತ್ಯುತ್ತರಅಳಿಸಿveena
ಶ್ರೀನಿವಾಸರೆ,
ಪ್ರತ್ಯುತ್ತರಅಳಿಸಿನಮ್ಮ ವರದ್ದಿಗೆ ನೀವೇನೋ ಕೊಟ್ಟದ್ದು ಇನ್ನೂ ತಲುಪಿಲ್ಲ. ತಕ್ಷಣವೇ ರವಾನಿಸಿದಲ್ಲಿ ಬಜ್ಜಿ ತಿಂದು ಬಾಯಿ ಮುಚ್ಚಿರುತ್ತೇವೆ.
ಲಿಪಿಕಾರರಿಗೆ ಸ್ವಾಗತ. ನಮ್ಮ ಪಿಸಿಯಲ್ಲೇ ಎಲ್ಲವೂ ಇರುವುದರಿಂದ ಈ ಟೂಲ್ ಅವಶ್ಯಕತೆಯಿಲ್ಲ. ಆದರೆ ನಿಮ್ಮ ಪ್ರಯತ್ನ ಶ್ಲಾಘನೀಯ. ಬರ್ತಾ ಇರಿ.
ಪ್ರತ್ಯುತ್ತರಅಳಿಸಿವೀಣಾ ಅವರೆ,
ಪ್ರತ್ಯುತ್ತರಅಳಿಸಿಛೆ... ಎಂಥಾ ತಪ್ ಮಾಡ್ತಿದೀರಿ...
ಇಲ್ಲಿರೋ ಫೋಟೋವನ್ನು ಸೈಮೊಂಡನಿಗೆ ಹೋಲಿಸಿದ್ದಕ್ಕೆ ಇಡೀ ಕಪಿ ಸಮುದಾಯ ಆಕ್ರೋಶಗೊಂಡಿದೆ. ಅವರೀಗ ನಿಮ್ ವಿರುದ್ಧ ಮಂಗ ಜನಾಂಗ ನಿಂದನೆ ಕೇಸು ಹಾಕಲಿದ್ದಾರಂತೆ.
ಏನಾದ್ರೂ ಹೇಳ್ರಪಾ :-D