(ಫ್ಲಾಶ್ ಮತ್ತು ಬ್ರೇಕ್ ಆಗುವ ನ್ಯೂಸ್ ಬ್ಯುರೋದಿಂದ)
ಬೊಗಳೂರು, ಫೆ.19- ಪ್ರತಿದಿನವೂ ನಾಳೆ ನಾಳೆ ಎಂದೇ ತಿಳಿದುಕೊಳ್ಳಲಾಗುತ್ತಿದ್ದ ಗಣೇಶನ ಮದುವೆ ರಾತೋರಾತ್ರಿ ದಿಢೀರ್ ಆಗಿ ಆಗಿ ವಿಶ್ವವೇ ತಲೆಕೆಳಗಾದ ಸುದ್ದಿಯನ್ನು ಬೊಗಳೆ ರಗಳೆಯಲ್ಲಿ ಫ್ಲ್ಯಾಶ್ ಮತ್ತು ಬ್ರೇಕ್ ಆದ ಮಾದರಿಯಲ್ಲಿ ಕೇಳಿದ ನೂರೆಂಟು ವರ್ಷದ ಹಣ್ಣು ಹಣ್ಣು ವೃದ್ಧೆಯೊಬ್ಬರು ಹೃದಯಾಘಾತಕ್ಕೊಳಗಾಗಿ ಹೃದಯಾಲಯದಲ್ಲಿ ಸೇರ್ಪಡೆಯಾಗಿರುವ ವಾರ್ತೆ ಬೊಗಳೂರಿನಿಂದ ತಡವಾಗಿ ವರದಿಯಾಗಿದೆ.ಬೊಗಳೆ ಪತ್ರಿಕೆಯಲ್ಲಿ ಸುದ್ದಿ ತಿಳಿದ ತಕ್ಷಣವೇ ಮುತ್ತಜ್ಜಿ ಆತುರಾತುರವಾಗಿ ಓಡುತ್ತಾ , ತನ್ನ ಮರಿ ಮೊಮ್ಮಕ್ಕಳಿಗೆ ತಮ್ಮ ಮನಸ್ಸಿನ ವೇದನೆಯನ್ನು ಹಸ್ತಾಂತರಿಸಲೆಂದು ಧಾವಂತದಿಂದ ಓಡುತ್ತಿದ್ದಾಗ, ಹೊಸಿಲು ದಾಟಿ ಬಿದ್ದಿದ್ದರು.
ಆದರೆ ಇಲ್ಲಿ ನಿಜವಾಗಿಯೂ ಸುದ್ದಿಯೇ ಬ್ರೇಕ್ ಆಯಿತೋ ಅಥವಾ ಹೃದಯ ಬ್ರೇಕ್ ಆಗಿದ್ದೇ ಎಂಬುದು ತನಿಖಾರ್ಹ ಸಂಗತಿ. ತನಿಖೆಗೆ ಮತ್ತೊಂದು ಸೇರ್ಪಡೆಯೆಂದರೆ, ಹೊಸಿಲು ದಾಟಿ ಬಿದ್ದ ಕಾರಣ ಮಂಡೆಯೂ ಬ್ರೇಕ್ ಆಗಿರುವ ಸಾಧ್ಯತೆಗಳಿವೆ.
ಈ ಕುರಿತು ಸ್ಪಷ್ಟನೆ ನೀಡಿರುವ ಮುತ್ತಜ್ಜಿ, ನನಗೇನೂ ಆಗಿಲ್ಲ, ಏನಾದರೂ ಆಗಿದ್ದಿದ್ದರೆ ಹೃದಯಕ್ಕೆ ಸ್ವಲ್ಪ ಏಟು ಬಿದ್ದಿರಬಹುದು ಎಂದು ಸ್ವತಃ ಹೇಳಿದ ಹಿನ್ನೆಲೆಯಲ್ಲಿ ಅವರನ್ನು ನನ್ನಾರು-ಆಯಣ ಹೃದಯಾಲಯಕ್ಕೆ ಸೇರಿಸಲಾಗಿತ್ತು.
ಆದರೆ ಈ ಆಘಾತವಾಗಿ ಆಸ್ಪತ್ರೆ ಸೇರಿದ ಸುದ್ದಿಯನ್ನು ವರದಿ ಮಾಡಿದ್ದು ಯಾರು ಎಂಬುದನ್ನು ಪತ್ತೆ ಹಚ್ಚಲು ತೀವ್ರ ಕಾರ್ಯಾಚರಣೆ ನಡೆಯುತ್ತಿದೆ. ಇದು ಕಿಡಿಗೇಡಿಗಳ ಕೃತ್ಯವೇ ಎಂಬುದು ತನಿಖೆಯ ಬಳಿಕ ಗೊತ್ತಾಗಬೇಕಿದೆ.
ತಾನು ಖಂಡಿತವಾಗಿಯೂ ಆತ್ಮಹತ್ಯೆ ಪ್ರಯತ್ನ ಮಾಡಿದ್ದಲ್ಲ ಎಂದು ಈ ವೃದ್ಧೆ ಸ್ಪಷ್ಪಪಡಿಸಿದ್ದು, ಇದು ನನ್ನ ವೈಯಕ್ತಿಕ ವಿಷಯವಾಗಿದ್ದು, ಪತ್ರಿಕೆಗಳಲ್ಲಿ ಎಂಟು ಕಾಲಂ ಹೆಡ್‌ಲೈನ್ ನೀಡಿ ಪ್ರಕಟಿಸಬೇಕಾಗಿಲ್ಲ ಮತ್ತು ಇದೆಂಥಾ ಮದುವೆ ಅಲ್ಲಲ್ಲ... ಇದೆಂಥಾ ನರಕ ಅಂತ ಟಿವಿ ಚಾನೆಲ್‌ಗಳಲ್ಲಿ ವಿಶೇಷ ಪ್ರೋಗ್ರಾಂಗಳನ್ನೂ ಬಿತ್ತರಿಸಬೇಕಾಗಿಲ್ಲ ಎಂದು ಕೋರಿ ಅಲವತ್ತುಕೊಂಡಿದ್ದಾರೆ.
ಈ ನಡುವೆ, ಗಣೇಶನಿಗಾಗಿ ಈ ಅಜ್ಜಿ ನೂರಾ ಎಂಟು ವರ್ಷ ಕಾದಿದ್ದರೇ ಎಂಬುದು ಎಲ್ಲಾ ಪತ್ರಿಕೆಗಳಿಗೆ ಸುದ್ದಿಗೊಂದು grass ಒದಗಿಸಿದೆ. ಶೀಘ್ರವೇ ಈ ಕುರಿತು 'ಇದೆಂಥ ಅಜ್ಜಿ' ಎಂಬೊಂದು ಕಾರ್ಯಕ್ರಮ ಪ್ರಸಾರವಾಗುವ ಸಾಧ್ಯತೆಗಳು ದಟ್ಟವಾಗುತ್ತಿವೆ.
4 ಕಾಮೆಂಟ್‌ಗಳು
ಬಿದ್ದೀಯಬೆ ಮುದುಕಿ, ಬಿದ್ದೀಯಬೆ!
ಪ್ರತ್ಯುತ್ತರಅಳಿಸಿ’ಮುದ್ದು ಗಣೇಶಾ’ ಎಂದು
ಎದ್ದೋಡ ಹೋಗಿ ನೀ,
ಬಿದ್ದೀಯಬೆ ಮುದುಕಿ, ಬಿದ್ದೀಯಬೆ!
'ಭಯಂಕರ'ವಾಗಿದೆ ಸುದ್ದಿ ಮಾರಾಯ್ರೆ...
ಪ್ರತ್ಯುತ್ತರಅಳಿಸಿಸುನಾಥರೆ,
ಪ್ರತ್ಯುತ್ತರಅಳಿಸಿಬೀಳುವುದರಲ್ಲಿ ಹಲವು ವಿಧ.
ಕಲ್ಲು ಎಡವಿ ಬೀಳುವುದು,
ದಾರಿ ತಪ್ಪಿ ಬೀಳುವುದು
ಅಡ್ಡ ಬೀಳುವುದು
ಉದ್ದುದ್ದ ಬೀಳುವುದು
ಬಲೆಗೆ ಬೀಳುವುದು
ಬೌಲ್ಡ್ ಆಗುವುದು!
ಇದರಲ್ಲಿ ಯಾವುದು ಸರಿ ಅಂತ ನೀವೇ ಆರಿಸಿ.
ಚಿತ್ರಾ ಅವರೆ,
ಪ್ರತ್ಯುತ್ತರಅಳಿಸಿಟಿವಿ-9 ಕೇಳಿದಂತೆ ನಾವೂ ಕೇಳುತ್ತೇವೆ!... ಇದೆಂಥಾ ಕಾಮೆಂಟ್!!!! :)
ಏನಾದ್ರೂ ಹೇಳ್ರಪಾ :-D