ಉಡುಪಿಯಲ್ಲಿ ಪರ್ಯಾಯಕ್ಕೆ ಪರ್ಯಾಯವೇ ಪರ್ಯಾಯ ಎಂಬಂತೆ ಪರ್ಯಾಯಕ್ಕೆ ಪರ್ಯಾಯವಾಗದ ಪರ್ಯಾಯವೂ, ಪರ್ಯಾಯಕ್ಕೆ ಪರ್ಯಾಯವಾದ ಪರ್ಯಾಯವೂ ನಡೆದು ಹೋಗಿದೆ ಎಂದು ಬೊಗಳೆ ರಗಳೆ ಬ್ಯುರೋ ವಿಶೇಷ ಸುದ್ದಿಯನ್ನು ಫ್ಲ್ಯಾಶ್ ರೂಪದಲ್ಲಿ ತುಂಬಾ ತಡವಾಗಿ ನೀಡುತ್ತಿದೆ.
ಪರ್ಯಾಯದ ವಿಪರ್ಯಾಸದ ಫ್ಲಾಶ್ ಸುದ್ದಿಗಳು ಭಯಾನಕವಾಗಿ, ರೋಚಕವಾಗಿ, ರಂಜಕವಾಗಿ ಫ್ಲಾಶ್ ಆಗಿ ಆಗೀ ಜನರ ಕಣ್ಣುಗಳು ಬ್ಲೈಂಡ್ ಆಗುತ್ತಿರುವುದನ್ನು ಗಮನಿಸಿ ನಮ್ಮ ಸುದ್ದಿ ಸಂಸ್ಥೆ ಸುದ್ದಿಯ ಫ್ಲಾಶನ್ನು ಸ್ವಲ್ಪ ಕಡಿಮೆ ಮಾಡಲು ಇರುಳು-ರಾತ್ರಿ ಶ್ರಮಿಸುತ್ತಿದೆ.
ಸರ್ವಜ್ಞ ಪೀಠವನ್ನು ಏರುವುದು, ಕೃಷ್ಣನನ್ನು ಮುಟ್ಟುವುದು, ತುಳಸೀ ದಳ ಎಸೆಯುವುದು ಮುಂತಾದ ಶಬ್ಧಗಳು ಪಾಮರರ ಬಾಯಲ್ಲೂ ನಲಿದಾಡುತ್ತಿರುವುದು ನಿಜಕ್ಕೂ ‘ಉಗ್ರ ಬಂಡಾಯ’ ಓರಾಟಗಾರರಿಗೆ ಸಂಕ್ರಾಂತಿಯ ಸುಗ್ಗಿಯಾಗಿ ಕಂಡಿರುವುದಾಗಿ ನಮ್ಮ ಸುದ್ದಿ ಸಂಸ್ಥೆ ಸ್ಕೂಪ್ ಹೊರಡಿಸಲಿದೆ.
ರಾಜಕೀಯ ಪಕ್ಷಗಳು ಒಡೆದು ಪರ್ಯಾಯ ಪಕ್ಷಗಳು ಹುಟ್ಟಿದಂತೆ, ಈಗ ಉಡುಪಿಯಲ್ಲಿಯೂ ಸಹ ಪರ್ಯಾಯ ಕೃಷ್ಣ ದೇವರು, ಪರ್ಯಾಯ ಯತಿಗಳು ಹಾಗು ಅವರಿಗೆ ಪರ್ಯಾಯ ಭಕ್ತರು ಹುಟ್ಟಬಹುದು. ಒಡೆಯುವದು ಭಾರತೀಯರ ರಕ್ತದಲ್ಲಿಯೇ ಇದೆ.
ನಿಮ್ಮ ಮಿತ್ರ ಬೆಟ್ಟಿಂಗಿನಲ್ಲಿ ಸೋತಿದ್ದಾನೆ ಅನ್ನೋದು ಖಚಿತ. ಹಾಗಾಗಿ ನಿಮಗೆ ದೊರೆಯುವ ಕಮಾಯಿಯಲ್ಲಿ ಪೂರ್ಣಪ್ರಮಾಣಕ್ಕಿಂತಲೂ ಸ್ವಲ್ಪ ಹೆಚ್ಚನ್ನು ನಮಗೆ ರವಾನಿಸಿ ಕೊಡಿ. ಆ ಹೆಚ್ಚಿನ ಭಾಗವನ್ನು ನಿಮಗೆ ವಾಪಸ್ ಮಾಡುತ್ತೇವೆ.
ಪರ್ಯಾಯ ಎಂಬೋದು ಸುಸೂತ್ರವಾಗಿ ನಡೆದರೆ ಅದೊಂದು ಮಾಮೂಲಿ ಸುದ್ದಿ, ಒಳ್ಳೆಯ ಕವರೇಜ್, ಶ್ಲಾಘನೆ ಇತ್ಯಾದಿ ಡೀಫಾಲ್ಟ್ ಆಗಿ ದೊರೆಯುತ್ತೆ.... ಆದರೆ ಸೂತ್ರ ತಪ್ಪಿದಾಗ ಅದೊಂದು ವಿಶೇಷ ಸುದ್ದಿ, ವಿವರಿಸಲು ಹೆಚ್ಚು ಪುಟಗಳು ಬೇಕಾಗುತ್ತವೆ ಅನ್ನೋದು ನಮ್ಮ ಹಿಂದಿನ ಜನ್ಮದ ಉದ್ಯೋಗದ ನೆನಪಿನ ಅನುಭವ.
ಪಕ್ಕಾ ಕನ್ನಡಿಗ. ಕರ್ನಾಟಕವು ಕರ್ನಾಟಕಟಕ ಆಗುತ್ತಿರುವ ಬಗ್ಗೆ ಆತಂಕವಿದೆ. ಅಸತ್ಯದ ಅನ್ವೇಷಣೆಯಲ್ಲಿರುವ ಬೊಗಳೂರಿನ ಏಕಸದಸ್ಯ ಬ್ಯುರೋದ ಸರ್ವರ ಮುಖ್ಯಸ್ಥ. ಅಸತ್ಯವೇ ನಮ್ಮ ತಾಯಿ ತಂದೆ. ಸತ್ಯ ವಾಕ್ಯಕೆ ನೆಚ್ಚಿ ನಡೆದರೆ ಮೆಚ್ಚನಾ ಪರಮಾತ್ಮ ಎಂಬುದು ನಮ್ಮ ಆತಂಕ.
10 ಕಾಮೆಂಟ್‌ಗಳು
ಪರ್ಯಾಯದ ವಿಪರ್ಯಾಸದ ಫ್ಲಾಶ್ ಸುದ್ದಿಗಳು ಭಯಾನಕವಾಗಿ, ರೋಚಕವಾಗಿ, ರಂಜಕವಾಗಿ ಫ್ಲಾಶ್ ಆಗಿ ಆಗೀ ಜನರ ಕಣ್ಣುಗಳು ಬ್ಲೈಂಡ್ ಆಗುತ್ತಿರುವುದನ್ನು ಗಮನಿಸಿ ನಮ್ಮ ಸುದ್ದಿ ಸಂಸ್ಥೆ ಸುದ್ದಿಯ ಫ್ಲಾಶನ್ನು ಸ್ವಲ್ಪ ಕಡಿಮೆ ಮಾಡಲು ಇರುಳು-ರಾತ್ರಿ ಶ್ರಮಿಸುತ್ತಿದೆ.
ಪ್ರತ್ಯುತ್ತರಅಳಿಸಿಸರ್ವಜ್ಞ ಪೀಠವನ್ನು ಏರುವುದು, ಕೃಷ್ಣನನ್ನು ಮುಟ್ಟುವುದು, ತುಳಸೀ ದಳ ಎಸೆಯುವುದು ಮುಂತಾದ ಶಬ್ಧಗಳು ಪಾಮರರ ಬಾಯಲ್ಲೂ ನಲಿದಾಡುತ್ತಿರುವುದು ನಿಜಕ್ಕೂ ‘ಉಗ್ರ ಬಂಡಾಯ’ ಓರಾಟಗಾರರಿಗೆ ಸಂಕ್ರಾಂತಿಯ ಸುಗ್ಗಿಯಾಗಿ ಕಂಡಿರುವುದಾಗಿ ನಮ್ಮ ಸುದ್ದಿ ಸಂಸ್ಥೆ ಸ್ಕೂಪ್ ಹೊರಡಿಸಲಿದೆ.
ಈ ಫ್ಲಾಶ್ ಗೆ ಬಳಸಿದ ವಿದ್ಯುತ್ Aleternating current = ಪರ್ಯಾಯ ವಿದ್ಯುತ್!
ಪ್ರತ್ಯುತ್ತರಅಳಿಸಿಸುಪ್ರೀತರೆ,
ಪ್ರತ್ಯುತ್ತರಅಳಿಸಿಇದು ನಿಜಕ್ಕೂ ಕಣ್ಣು ಕುಕ್ಕುವ ಫ್ಲಾಶೇ ಆಗಿದ್ದು, ಪರ್ಯಾಯಕ್ಕೆ ಪರ್ಯಾಯ ಪರಿಹಾರವೊಂದನ್ನು ಕಂಡುಹುಡುಕಲು ಈ ಕಣ್ಣು ಕುಕ್ಕುವ ಫ್ಲಾಶ್ ಅತ್ಯಗತ್ಯ.
ಜೋಷಿಯವರೆ,
ಪ್ರತ್ಯುತ್ತರಅಳಿಸಿಉಡುಪಿಯಲ್ಲಾಗಿದ್ದು ಬೇರೆಯೇ. ಅಲ್ಲಿ ಪ್ರವಹಿಸಿದ್ದು Adulterating current affair!
ರಾಜಕೀಯ ಪಕ್ಷಗಳು ಒಡೆದು ಪರ್ಯಾಯ ಪಕ್ಷಗಳು ಹುಟ್ಟಿದಂತೆ, ಈಗ ಉಡುಪಿಯಲ್ಲಿಯೂ ಸಹ ಪರ್ಯಾಯ ಕೃಷ್ಣ ದೇವರು, ಪರ್ಯಾಯ ಯತಿಗಳು ಹಾಗು ಅವರಿಗೆ ಪರ್ಯಾಯ ಭಕ್ತರು ಹುಟ್ಟಬಹುದು. ಒಡೆಯುವದು ಭಾರತೀಯರ ರಕ್ತದಲ್ಲಿಯೇ ಇದೆ.
ಪ್ರತ್ಯುತ್ತರಅಳಿಸಿಬೊಗಳೆರಗಳೆಗೆ ಪರ್ಯಾಯ ಯಾವುದಿದೆ?
ಪ್ರತ್ಯುತ್ತರಅಳಿಸಿವಿಶ್ವದಲ್ಲಿ ಇಂತಹದ್ದಿನ್ನೊಂದಿಲ್ಲ ಎಂಬುದು ನನ್ನ ಸ್ನೇಹಿತನ ಅಂಬೋಣ
ಇದರ ಬಗ್ಗೆ ಅವನು ಬೆಟ್ಟಿಂಗ್ ಕಟ್ಟಿದ್ದಾನೆ
ಬೊ-ರಗೆ ಪರ್ಯಾಯ ಇನ್ನೊಂದಿರುವುದನ್ನು ನೀವು ನನಗೆ ತಿಳಿಸಿಕೊಟ್ಟಲ್ಲಿ ಬರುವ ಬೆಟ್ಟಿಂಗ್ ಕಮಾಯಿಯಲ್ಲಿ ನಿಮಗೆ ಅರ್ಧ ಎಂಬೋದು ಗುಟ್ಟಿನ ವಿಷಯವಾಗಿರಲಿ
ಉಡುಪಿ ವಿವಾದಕ್ಕೆ ಪತ್ರಿಕೆಗಳು ಸ್ವಲ್ಪ ಹೆಚ್ಚೇ ಪ್ರಾಮುಖ್ಯಕೊಟ್ಟವಲ್ಲವೇ? ಇದು ಪತ್ರಿಕೆಗಳಿಗೆ ಸುದ್ದಿಗೆ ಬರ ಬಂದಿರುವುದನ್ನೂ ಸೂಚಿಸುತ್ತದೆ.
ಪ್ರತ್ಯುತ್ತರಅಳಿಸಿಸುನಾಥರೆ,
ಪ್ರತ್ಯುತ್ತರಅಳಿಸಿಮಾತು ಒಡೆಯುವುದು ಅಂದರೆ ಮುರಿಯುವುದು, ಮಂಡೆ ಒಡೆಯುವುದು ಇವೆಲ್ಲಾ ನಮ್ಮ ರಕ್ತದಲ್ಲೇ ಇದೆ ಎಂಬ ಸತ್ಯವಾಕ್ಯವು ಇಲ್ಲಿ ನಿಷಿದ್ಧ!
ಶ್ರೀನಿವಾಸರೆ,
ಪ್ರತ್ಯುತ್ತರಅಳಿಸಿನಿಮ್ಮ ಮಿತ್ರ ಬೆಟ್ಟಿಂಗಿನಲ್ಲಿ ಸೋತಿದ್ದಾನೆ ಅನ್ನೋದು ಖಚಿತ. ಹಾಗಾಗಿ ನಿಮಗೆ ದೊರೆಯುವ ಕಮಾಯಿಯಲ್ಲಿ ಪೂರ್ಣಪ್ರಮಾಣಕ್ಕಿಂತಲೂ ಸ್ವಲ್ಪ ಹೆಚ್ಚನ್ನು ನಮಗೆ ರವಾನಿಸಿ ಕೊಡಿ. ಆ ಹೆಚ್ಚಿನ ಭಾಗವನ್ನು ನಿಮಗೆ ವಾಪಸ್ ಮಾಡುತ್ತೇವೆ.
ಶ್ರೀಕೃಷ್ಣನೇ ಬಂದ್ಹಾಗಾಯಿತು. ಕೃಷ್ಣರಿಗೆ ಸ್ವಾಗತ.
ಪ್ರತ್ಯುತ್ತರಅಳಿಸಿಪರ್ಯಾಯ ಎಂಬೋದು ಸುಸೂತ್ರವಾಗಿ ನಡೆದರೆ ಅದೊಂದು ಮಾಮೂಲಿ ಸುದ್ದಿ, ಒಳ್ಳೆಯ ಕವರೇಜ್, ಶ್ಲಾಘನೆ ಇತ್ಯಾದಿ ಡೀಫಾಲ್ಟ್ ಆಗಿ ದೊರೆಯುತ್ತೆ.... ಆದರೆ ಸೂತ್ರ ತಪ್ಪಿದಾಗ ಅದೊಂದು ವಿಶೇಷ ಸುದ್ದಿ, ವಿವರಿಸಲು ಹೆಚ್ಚು ಪುಟಗಳು ಬೇಕಾಗುತ್ತವೆ ಅನ್ನೋದು ನಮ್ಮ ಹಿಂದಿನ ಜನ್ಮದ ಉದ್ಯೋಗದ ನೆನಪಿನ ಅನುಭವ.
ಏನಾದ್ರೂ ಹೇಳ್ರಪಾ :-D