ಬೊಗಳೆ ರಗಳೆ

header ads

ಮತ್ತೆ ಒಂದಾದ ಪ್ರೇಮವಿರಹಿಗಳ ಸಂದರ್ಶನ ನಿರೀಕ್ಷಿಸಿ!!!!

(ಬೊಗಳೂರು ವಿಷಯವಿಲ್ಲದ ಬ್ಯುರೋದಿಂದ)
ಬೊಗಳೆ ರಗಳೆ ಓದುಗರಿಗೆ ಓದಲು ಯಾವುದೇ ವಿಷಯ ದೊರಕುತ್ತಿಲ್ಲ ಎಂದು ಪರದಾಡುತ್ತಿದ್ದ ಬೊಗಳೆ ರಗಳೆ ಬ್ಯುರೋಗೆ ಹೊಸ ಸಾಂತ್ವನ ನೀಡುವ ನಿಟ್ಟಿನಲ್ಲಿ ಕರು-ನಾಟಕದಲ್ಲಿ ನಾಟಕದ ಹೊಸ ಅಧ್ಯಾಯ ತೆರೆದುಕೊಂಡಿದೆ.

ಅವಕಾಶವಾದಿತನ, ವಚನಭ್ರಷ್ಟತೆ, ಪ್ರೇಮ, ವಿರಹ, ಮತ್ತೆ ಒಂದಾಗುವುದು ಇತ್ಯಾದಿ ರಸವತ್ತಾದ, ಒಂಬತ್ತು ರಸಗಳೂ ಬಿಂಬಿಸುವ ಅದ್ಭುತ ಕಲಾ ಕಾಣಿಕೆ ನೀಡುತ್ತಿರುವ ಕರು-ನಾಟಕದ ಅಧಿಕಾರದಾಹಿಗಳ ವಿಶೇಷ ಸಂದರ್ಶನ ನಿಮ್ಮ ಬೊಗಳೆ ರಗಳೆಯಲ್ಲಿ ಮೂಡಿಬರಲಿದೆ.

ನಿಮ್ಮ ಪ್ರತಿಗಳನ್ನು ಇಂದೇ ಕಾದಿರಿಸಿ. ಕರು-ನಾಟಕದ ರಾಜಕೀಯದ ಪ್ರಭಾವದಿಂದಾಗಿ ನಾವು ಕೂಡ ಮಾತಿಗೆ ತಪ್ಪಿದರೆ ನಾವು ಖಂಡಿತವಾಗಿಯೂ ಜವಾಬ್ದಾರರಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇವೆ.

(ಬೀಜ-ಪೀ ಮತ್ತು ಜೇಡಿ-ಸುಗಳು ಪರಸ್ಪರರನ್ನು ದೂಷಿಸುತ್ತಾ ನಮ್ಮ ಪ್ರತಿಸ್ಪರ್ಧಿ ಪತ್ರಿಕೆಗಳಿಗೆ ಪುಟಗಟ್ಟಲೇ ಜಾಹೀರಾತು ನೀಡಿ, ಹಣ ಪೋಲು ಮಾಡಿದ್ದಾರೆ, ಬೊಗಳೆ ರಗಳೆ ಪತ್ರಿಕೆಗೆ ಮಾತ್ರ ಒಂದು ಕವಡೆಕಾಸಿನ, ಒಂದು ಗೆರೆಯ ಜಾಹೀರಾತನ್ನೂ ನೀಡಿಲ್ಲ. ಇದರಿಂದ ತೀವ್ರ ಆಕ್ರೋಶಗೊಂಡಿರುವ ಬ್ಯುರೋದ ಸೊಂಪಾದ ಕರು, ಈ ಕಪೋಲ ಕಲ್ಪಿತ ಆದರೆ Exclusive ಸಂದರ್ಶನವನ್ನು ಪ್ರಕಟಿಸಲು ನಿರ್ಧರಿಸಿದ್ದಾರೆ. ಓದುಗರು ತಾಳ್ಮೆ ವಹಿಸಬೇಕೆಂದು ಕೋರಲಾಗಿದೆ.)

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಜೋ-ಕುಮಾರಸ್ವಾಮಿಗಳು ಚಡ್ಡಿವೀರಪ್ಪನವರ ಯಾವ ಕಾಲುಗಳನ್ನು ಎಳೆದಿದ್ದರೊ,ಅವೇ ಕಾಲುಗಳನ್ನು ಹಿಡಿದುಕೊಳ್ಳುತ್ತಿರುವ ಸಂದರ್ಭದ ವಿಶೇಷ ಸಂದರ್ಶನ ಕೇಳಲು ಉತ್ಸುಕರಾಗಿದ್ದೇವೆ. ಬೇಗನೆ ಪ್ರಕಟಿಸಿ ಪುಣ್ಯ ಕಟ್ಟಿಕೊಳ್ಳಿ

    ಪ್ರತ್ಯುತ್ತರಅಳಿಸಿ
  2. ಸುಧೀಂದ್ರರೇ,

    ಯಾರ ಯಾರ ಕಾಲುಗಳನ್ನು ಹಿಡ್ಕೊಂಡ್ರು ಅಂತಾನೇ ಗೊತ್ತಾಗ್ತಾ ಇಲ್ಲ... ನಮ್ಮ ಪಕ್ಷ ಒಡೆಯದಂತೆ ನೋಡ್ಕೊಳಿ ಅಂತ ಅವರು, ನನ್ನನ್ನು ಒಮ್ಮೆ ಮುಖ್ಯಮಂತ್ರಿ ಮಾಡಿಬಿಡಿ ಅಂತ ಇವರು... ಪರಸ್ಪರರ ಕಾಲುಗಳನ್ನು ಎಳೆದುಕೊಂಡಿದ್ದಾರಂತೆ...

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D