(ಬೊಗಳೂರು 'ಪಾಪ'ದ ಬ್ಯುರೋದಿಂದ)
ಬೊಗಳೂರು, ಅ.15- ಪಾಕಿಸ್ತಾನ ಸಂಸತ್ತಿನಲ್ಲಿ ವಿಶಿಷ್ಟ ಬಾಂಬ್ ಸ್ಫೋಟಗೊಂಡು ನೂರಾರು ಮಂದಿ ಸಂಸದರು ಚಿಂತಾಜನಕವಾಗಿ ನೊಂದು ಅರೆಬೆಂದಿದ್ದಾರೆ.ಜನಸಂಖ್ಯಾ ಸ್ಫೋಟವನ್ನು ತಡೆಗಟ್ಟುವ ನಿಟ್ಟಿನಲ್ಲಿ, ಪಾಕಿಸ್ತಾನದ ಸಂಸದರಿದ್ದ ತಾಣದಲ್ಲಿಯೇ ಈ ಕಾಂಡೋ ಬಾಂಬ್ ಸ್ಫೋಟಗೊಂಡಿರುವುದು ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.
ಪಾಪ ಮಾಡಿದರೆ ದೇಶಾದ್ಯಂತ ಸಾಕಷ್ಟು ಸಂಖ್ಯೆಯಲ್ಲಿ ಪಾಪು ಆಗುತ್ತವೆ ಎಂಬುದರ ಅರಿವಿದ್ದರೂ, ಈ ಪುರುಷ ಪುಂಗವರು ತಮಗೆ ನೀಡಲಾದ ಕಾಂಡೋಂಗಳನ್ನು ಹಿಡಿದುಕೊಂಡು ಸ್ಪೀಕರ್ ಕಚೇರಿಗೆ ಹೊಕ್ಕಿದ್ದಾರೆ. ಹಾಗಂತ ಸ್ಪೀಕರ್ ಅವರೂ ಪುರುಷಪುಂಗವರೇ. ಆದರೆ ಈ ಸಂಸದರೆಲ್ಲಾ ಹೋಗಿದ್ದು ದೂರು ನೀಡುವುದಕ್ಕಾಗಿಯೇ ಹೊರತು ಬೇರೆ ಯಾವುದೇ ದುರುದ್ದೇಶ ಹೊಂದಿಲ್ಲ ಅಥವಾ ಅನ್ಯಥಾ ಭಾವಿಸಬೇಕಾಗಿಲ್ಲ.
ಈ ಮಧ್ಯೆ, ಮಹಿಳಾ ಸಂಸದರಿಗೆ ಇದನ್ನು ಕೊಟ್ಟಿಲ್ಲದಿರುವುದರಿಂದ ಪುರುಷಪುಂಗವ ಸಂಸದರು ರೊಚ್ಚಿಗೆದ್ದಿದ್ದಾರೆ ಎಂದು ತಿಳಿದುಬಂದಿದ್ದರೂ, ಸರಕಾರವು "ಉನ್ನತ ಮಟ್ಟ"ದಲ್ಲೇ ಜನಸಂಖ್ಯಾ ಸ್ಫೋಟ ತಡೆಯುವ ನಿಟ್ಟಿನಲ್ಲಿ ಈ ಹೆಜ್ಜೆ ಇರಿಸಿದೆ ಎಂಬ ಸ್ಪಷ್ಟನೆ ನೀಡಿರುವುದು ಈ ಸಂಸದರ ನೈತಿಕತೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆ ಇರಿಸಿದಂತಾಗಿದೆ.
ಆದರೆ ಕೆಲವು ಸಂಸದರು ಮಾತ್ರ, ಈ ಕಾಂಡೋಂ ಇದ್ದರೆ ತಮಗಿನ್ನು ಕೆಟ್ಟ ಹೆಸರು ಬರಲಾರದು ಎಂದುಕೊಂಡು, ಅದನ್ನು ತೆಗೆದುಕೊಂಡು ಮನೆಗಳಿಗೆ ಹೊರಟಿದ್ದಾರೆ. ಯಾವ ಮನೆಗಳಿಗೆ, ಯಾರ ಮನೆಗಳಿಗೆ ಎಂಬ ಪ್ರಶ್ನೆ ಅಗತ್ಯವಿಲ್ಲ. ಆದರೆ ಕೆಲವರು ತಮ್ಮ ತಮ್ಮ ಮನೆಗಳಿಗೆ ಮಾತ್ರವೇ ಅವುಗಳನ್ನು ಕೊಂಡೊಯ್ದಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿದ್ದು, ಉಳಿದವರು ಎಲ್ಲಿಗೆ ಕೊಂಡೊಯ್ದರು ಎಂಬುದರ ಬಗ್ಗೆ ಏನನ್ನೂ ತಿಳಿಸಿಲ್ಲ.
ಮತ್ತೆ ಕೆಲವು ಸಂಸದರು ಎಲ್ಲಿ ಹೋದರೆಂಬುದೇ ಇನ್ನೂ ಪತ್ತೆಯಾಗಿಲ್ಲ ಎಂದು ಒಲ್ಲದ ಮೂಲಗಳು ಹೇಳಿವೆ.
4 ಕಾಮೆಂಟ್‌ಗಳು
ಕೇವಲ ಒಂದು ನೂರು? ತುಂಬಾ ಅನ್ಯಾಯ!ಬಹಳಾ ಅಂದರೂ ಕೇವಲ ಐವತ್ತು ದಿನಗಳಿಗೆ (ಅಥವಾ ರಾತ್ರಿಗಳಿಗೆ) ಆದೀತು. ಮುಷರಫ್‌ಗೆ ಹೇಳಿ ಕನಿಷ್ಠ ೭೩೦ ಇರುವ ಪ್ಯಾಕೆಟ್ ಬಾಂಬ್ ಕೊಡಿಸೋದು ಒಳ್ಳೇದು.
ಪ್ರತ್ಯುತ್ತರಅಳಿಸಿಅಂದ ಹಾಗೆ, ನಮ್ಮ ದುಶ್-ಶಾಸಕರಿಗೂ ಸಹ ಇಂಥಾ ಒಂದು ದಸರಾ ಗಿಫ್ಟ್ ಕೊಡೋದು ಅವಶ್ಯ ಅಲ್ವಾ?
'pungava' word hyage banthu?
ಪ್ರತ್ಯುತ್ತರಅಳಿಸಿsumne ondu samshaya.
thamk u.
ಸುಧೀಂದ್ರರೆ,
ಪ್ರತ್ಯುತ್ತರಅಳಿಸಿದಸರಾ ಗಿಫ್ಟ್ ಅಂತಾದ್ರೆ ಕೊಡಬಹುದು. ಆದ್ರೆ ದೀಪಾವಳಿ ಗಿಫ್ಟ್ ಅಂತ ಕೊಟ್ರೆ ಅದು ಸಿಡಿದು ಹೋದರೇನು ಗತಿ?
ಸುಧನ್ವರೆ
ಪ್ರತ್ಯುತ್ತರಅಳಿಸಿಅದ್ಯಾಕೆ ಪುಂಗವ ಅಂದ್ರೆ ಗೂಳಿ ಅನ್ನೋ ಅರ್ಥಾ ಇದೆ ಅನ್ನೋದು ಕೂಡ ಎಷ್ಟು ತಲೆ ಕೆರೆದರೂ ನಮ್ಮ ಮಂಡೆಗೆ ಹೊಳೆಯುತ್ತಲೇ ಇಲ್ಲ.!!!
ಏನಾದ್ರೂ ಹೇಳ್ರಪಾ :-D