(ಬೊಗಳೂರು ಸಡನ್ ಹೊಳೆಯುವ ಬ್ಯುರೋದಿಂದ)
ಬೊಗಳೂರು, ಸೆ.29- ವಿದೇಶೀ ಮಾಧ್ಯಮದಿಂದ ತೀವ್ರ ನಿರ್ಲಕ್ಷ್ಯಕ್ಕೊಳಗಾಗಿರುವ ಟ್ವೆಂಟಿ20 ಕ್ರಿಕೆಟ್ ಆರ್ಭಟದಲ್ಲಿ ಬ್ಯಾಟುಗಾರರು ಯದ್ವಾತದ್ವ ಬೀಸಿದಾಗ ಕಳೆದುಹೋಗಿದ್ದ ಚೆಂಡು ಪತ್ತೆಯಾಗಿದೆ. ಅದನ್ನು ಪತ್ತೆ ಮಾಡಿದವರು ಜಾತ್ಯತೀತ ತಂಡದ ಕೋಚ್ ವದಿಯೋಗೌಡರು.ನಾವೇನೂ ಬಾಲ್ ಕದ್ದಿಲ್ಲ, ಅದು "ಭಾರತೀಯ" ತಂಡದ ಅಂಗಣದಲ್ಲೇ ಇದೆ ಎಂದು ವದಿಯೋಗೌಡರು ಒತ್ತಿ ಒತ್ತಿ ಹೇಳಿದ್ದಾರೆ.
ಇದರೊಂದಿಗೆ ಯುವರಾಜ್ ಸಿಂಗ್ ಸಿಕ್ಸರ್‌ಗೆ ಸಿಲುಕಿ ನಾಪತ್ತೆಯಾಗಿದ್ದ ಚೆಂಡು ಎಲ್ಲಿ ಹೋಯಿತು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ.
ಇದೇ ವೇಳೆ, ಬೆಂಗಳೂರಿಗೆ ಬಂದಿರುವ ಆಸೀಸ್ ತಂಡದ ನಾಯಕ ಪಂಟರ್ ಕಿಂಗ್ ಅವರ ಜತೆ ನಿಗೂಢ ಮಾತುಕತೆ ನಡೆಸಿರುವ ವದಿಯೋಗೌಡರು, ಬಾಯಿಗೆ ಬಂದಂತೆ ಒದರುತ್ತಲೇ ಎದುರಾಳಿಗಳ ಧೃತಿಗೆಡಿಸುವುದು ಹೇಗೆ ಎಂಬ ಬಗ್ಗೆ ಸಮಾಲೋಚನೆ ನಡೆಸಿರುವುದಾಗಿ ವರದಿಯಾಗಿದೆ.
2 ಕಾಮೆಂಟ್‌ಗಳು
..........."ಕಪ್ತಾನ ಗಡಿವೀರಪ್ಪ ಪ್ರಲಾಪ"......
ಪ್ರತ್ಯುತ್ತರಅಳಿಸಿ"ಚೆಂಡು ಅಂಗಣದೊಳಿಲ್ಲ; ಓ ಕುವರ ಸ್ವಾಮಿ,
ಬರಿದೆ ಅಂಗಣವಾಯಿತಲ್ಲ!
ಸ್ವಾಮಿ ನಿನ್ನ ಮಾತು ಕೇಳಿ ಚಿಕ್ಕದೊಂದು ಚೆಂಡು ತಂದೆ,
ಸ್ವಾಮಿ ನೀನಿಲ್ಲದಾ ವೇಳೆ,ಗೌಡ ಕ್ಯಾಚ್ ಹಿಡಿದನಲ್ಲಾ!
ಚೆಂಡು ಅಂಗಣದೊಳಿಲ್ಲಾ,ಸ್ವಾಮೀ, ನಮ್ಮ ಚೆಂಡೇ ಹಾರಿತಲ್ಲ!"
ಸುಧೀಂದ್ರರೆ,
ಪ್ರತ್ಯುತ್ತರಅಳಿಸಿಈ ವೇದೇಗೌಡರು ಬರೇ ಕೋಚ್ ಆಗಿದ್ದಿದ್ದರೆ ಸಾಕಾಗಿತ್ತು. ಆದರೆ ಅವರೇ ಈ ಕರ್ನಾಟಕದ ದೇಶದ ಪ್ರಧಾನಿ ಅಂತ ಹೇಳಿಕೊಳ್ಳುತ್ತಾ, ಆಟ ಆಡುತ್ತಿದ್ದಾರೆ.... ಆಡಿಸುವಾತ ಶೀಘ್ರವೇ ಆಟ ಮುಗಿಸುತ್ತಿದ್ದಾನೆ.
ಏನಾದ್ರೂ ಹೇಳ್ರಪಾ :-D