ಬೊಗಳೆ ರಗಳೆ

header ads

ಹನಿಗಾಗಿ ಕಿತ್ತಾಟವೇ? ಪರಿಹಾರ ಲಭ್ಯ...

[ಬೊಗಳೆ ರಗಳೆ ಬ್ಯುರೋ Honey ಬಗ್ಗೆ ಮಾತನಾಡುತ್ತಿಲ್ಲ. ನೀರಿನ ಹನಿ ಬಗ್ಗೆ ಮಾತಾಡುತ್ತದೆ- ಸಂ]

ಭೂಮಿಯ ಶೇ.70 ಭಾಗ ಜಲದಿಂದಲೇ ಆವೃತವಾಗಿದ್ದರೂ, ನೀರು ನೀರು ಎಂದು ರಾಜ್ಯ ರಾಜ್ಯಗಳ ನಡುವೆ ಕಿತ್ತಾಟ ಏಕೆ? ಈ ಬಗ್ಗೆ ಗಂಭೀರ ಸಂಶೋಧನಾತ್ಮಕ ವರದಿಯೊಂದು ನಿಮ್ಮ ಬೊಗಳೆಯಲ್ಲಿ ಸೋಮವಾರ ಮೂಡಿಬರಲಿದೆ. ನಿಮ್ಮ ಪ್ರತಿಗಳನ್ನು ಇಂದೇ ಕಾದಿರಿಸಿ. ನಿಮಗೆ ಬೇಡವಾಗಿದ್ದರೂ ಪ್ರತಿಗಳನ್ನು ಕಾದಿರಿಸಿದವರನ್ನು ಇಲ್ಲಿ ಕುಳಿತುಕೊಂಡೇ ಯಾರ ಮತ್ತು ಯಾವ ಉಸಾಬರಿಯೂ ಇಲ್ಲದೆ ಪ್ರೋತ್ಸಾಹಿಸಲಾಗುವುದು.

ಸೂಚನೆ: ನೀವು ಕಾದಿರಿಸಿದ ಪ್ರತಿಗಳನ್ನು ಬೇರೆಯವರಿಗೆ ಮಾರುವುದನ್ನು ನಿಷೇಧಿಸಲಾಗಿದೆ. ಯಾರಾದರೂ ಮಾರುತ್ತಾರೆ ಎಂದು ಗೊತ್ತಾದಲ್ಲಿ, ನಮ್ಮಲ್ಲಿ ಮಾರಾಟವಾಗದೆ ಕೊಳೆಯುತ್ತಿರುವ ಪ್ರತಿಗಳೆಲ್ಲವನ್ನೂ ಅವರ ಕೈಗೇ ಕೊಟ್ಟು ಅವರ ಮೂಲಕವೇ ಮಾರಿಸಲಾಗುತ್ತದೆ. ಈ ಮೂಲಕ ಬೆರಳೆಣಿಕೆಯ ಅರ್ಧದಷ್ಟಿರುವ ಓದುಗರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಹುನ್ನಾರ ನಡೆಯುತ್ತಿದೆ. -ಸಂ

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಹನಿಯಾದರೇನು ಶಿವ
    ಮನಿಯಾದರೇನು ಶಿವ
    ಜಗವೆಲ್ಲಾ ನಿನದೇ ಶಿವ

    ಸಮುದ್ರದಲ್ಲಿ ಹನಿ ಎಷ್ಟಿದ್ದರೇನಂತೆ
    ಅದರ ಹನಿ ಕುಡಿಯಲಾದೀತೇ
    ಜಗವೆಲ್ಲಾ ಮನಿಯಾದರೇನಂತೆ
    ಎಲ್ಲೆಂದರಲ್ಲಿ ಮಲಗಲಾದೀತೇ
    ಅಕಟಕಟಾ ಶ್ರೀ ಚನ್ನ ಬೊಗಳೇಶ್ವರ

    ನಿಮ್ಮ ಪ್ರತಿಗಾಗಿ ಕಾದೂ ಕಾದೂ ಸುಸ್ತಾದವರು ಬಹಳ ಮಂದಿ. ಈಗಲಾದರೂ ಸಕಾಲದಲ್ಲಿ ನಿಮ್ಮ ಪ್ರತಿ ಅವರ ಬಳಿ ಬರುವದೇನೋ ನೋಡೋಣ. ನಾನು ಕಾಯುವೆ, ನೀವು ಕಾಯಿಸಬೇಡಿ.

    ಪ್ರತ್ಯುತ್ತರಅಳಿಸಿ
  2. ಹನಿಯು Honey ಆದಾಗ, ಶ್ರೀನಿವಾಸಾ!
    ಮನಿಯು Money ಆದಾಗ, ಶ್ರೀನಿವಾಸಾ!
    ಹನಿಯ ಬಿಡಲುಂಟೆ, ಮನಿಯ ಬಿಡಲುಂಟೆ?
    Honey, money ಗಳು ಕೊಡುವ
    Honeymoonಉ ಬಿಡಲುಂಟೆ, ಶ್ರೀನಿವಾಸಾ?

    ಪ್ರತ್ಯುತ್ತರಅಳಿಸಿ
  3. ಶ್ರೀನಿವಾಸರೆ,
    ಮುಂಬಯಿ ಸೆಂಟ್ರಲ್ ನಿಲ್ದಾಣದಲ್ಲಿ ಅಂಗಾತ ಮಲಗಿ ಪ್ರತಿಗಾಗಿ ಕಾಯುತ್ತಿದ್ದವರು ಹಲವಾರು ಮಂದಿ. ಓ ಭೈಯ್ಯಾ, ಓ ಮಾತಾಜಿ, ಓ ಬೆಹನ್ ಎಂಬಿತ್ಯಾದಿ ಅರಚಾಡುತ್ತಿದ್ದುದು ನಮ್ಮ ಗಮನಕ್ಕೆ ಬಂದಿದ್ದರೂ, ಅವರಿಗೆ ಪತ್ರಿಕೆ ಪೂರೈಸಲಾಗದುದಕ್ಕೆ ವಿಷಾದಿಸುತ್ತೇವೆ.

    ಪ್ರತ್ಯುತ್ತರಅಳಿಸಿ
  4. ಸುಧೀಂದ್ರರೆ,
    ನಿಮ್ಮ ಶ್ರೀನಿವಾಸ ನಾಮಸ್ಮರಣೆಯಿಂದ ತಿರುಪತಿ ತಿಮ್ಮಪ್ಪ ಸಂಪ್ರೀತರಾಗಿದ್ದಾನೆ.

    ಮನಿ ಇಲ್ಲದೆಯೇ ಹನಿ ಕೂಡಿದರೆ ಹಳ್ಳಕ್ಕೆ ಬಿದ್ದಂತೆ ಎಂಬ ಹೊಸ ಗಾದೆಯೂ ಇದೇ ಸಂದರ್ಭ ಹುಟ್ಟಿಕೊಂಡಿದ್ದು, 60, 90, 120 ಇವಕ್ಕೆಲ್ಲಾ ಹನಿಕೂಡಬೇಕಾದ ಅವಶ್ಯಕತೆಯಿದೆ ಎಂದು ಗೊತ್ತಾಗಿದೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D