(ಬೊಗಳೂರು ತಲೆ ಇಲ್ಲದ ಬ್ಯುರೋದಿಂದ)
ಬೊಗಳೂರು, ಜೂ.4- ತಲೆ ಇದ್ದವರಿಗೆ ಮಾತ್ರವೇ ಅಲ್ಲದೆ ತಲೆ ಇಲ್ಲದವರಿಗೂ hell-mate ಕಡ್ಡಾಯಗೊಳಿಸಿರುವ ತಮಿಳುನಾಡು ಸರಕಾರದ ಕ್ರಮವನ್ನು ಬೊಗಳೆ ರಗಳೆ ಬ್ಯುರೋ ಖಂಡಿಸುತ್ತದೆ.ಹೆಲ್-ಮೇಟ್ ಕಡ್ಡಾಯ ಎಂಬುದು ತಲೆ ಇದ್ದವರು ತಲೆ ಇಲ್ಲದವರಿಗಾಗಿ ಮತ್ತು ತಲೆ ಇಲ್ಲದವರು ತಲೆ ಇದ್ದವರಿಗಾಗಿ ಸರಿಯಾಗಿ ಕೂರುವ ಟೋಪಿ ಹಾಕಲು ರೂಪಿಸಿರುವ ತಂತ್ರ ಎಂದು ಬೊಗಳೂರು ಬ್ಯುರೋ ಆಕ್ರೋಶ ವ್ಯಕ್ತಪಡಿಸಿದೆ.
ತಲೆ ಇಲ್ಲದವರ ಜೇಬು ಸೇರಿದಂತೆ ತಲೆ ಬೋಳಿಸಲು ತಲೆ ಇದ್ದವರು (ಮಂಡೆ ಖರ್ಚು ಮಾಡಿ) ಹೂಡಿರುವ ತಂತ್ರವಿದು ಎಂದು ವಿಶ್ಲೇಷಿಸಲಾಗುತ್ತಿದೆ. ಮತ್ತೊಂದು ವ್ಯಾಖ್ಯಾನದ ಪ್ರಕಾರ, ಇದು ತಲೆ ಇಲ್ಲದವರು ಬೇರಾವುದೇ ಅಭಿವೃದ್ಧಿ ಕಾರ್ಯಗಳ ಗಮನ ಹರಿಸುವ ಬದಲು ತಲೆ ಇದ್ದವರ ತಲೆ ರಕ್ಷಿಸುತ್ತೇವೆ, ಮಹತ್ಕಾರ್ಯ ಮಾಡಿದ್ದೇವೆ ಎಂಬಂತೆ ಬಿಂಬಿಸಿಕೊಳ್ಳಲು ಈ ರಣನೀತಿ ರೂಪಿಸಿದ್ದಾರೆ ಎಂಬ ಶ್ಲಾಘನೆಗಳು ಕೇಳಿಬರುತ್ತಿದೆ.
ದ್ವಿಚಕ್ರ ಸವಾರರಿಗೆ hell- mate ಕಡ್ಡಾಯಗೊಳಿಸುವ ಸರಕಾರದ ನಿರ್ಧಾರದ ಹಿಂದೆ ನ್ಯಾಯಾಲಯದ ಆದೇಶದ ನೆರಳಿದೆ. ಆದರೆ ನ್ಯಾಯಾಲಯದ ಆದೇಶಕ್ಕೆ ನಾವು ತಲೆ ಕೆಡಿಸಿಕೊಳ್ಳದಿದ್ದರೂ ಬೊಗಳಿಗರ- ಅದಕ್ಕಿಂತಲೂ ಮಿಗಿಲಾಗಿ hell- mate ತಯಾರಿಕಾ ಕಂಪನಿಗಳ ತಲೆ ಕಾಯ್ದುಕೊಳ್ಳುವುದು ಸರಕು-ಕಾರದ ಆದ್ಯ ಕರ್ತವ್ಯವಲ್ಲವೆ ಎಂದು ರಾಜ್ಯದ ಅಮುಖ್ಯ ಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.
ದ್ವಿಚಕ್ರ ಸವಾರರೆಲ್ಲರೂ ತಾವು ನರಕದಲ್ಲಿ ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಕಳೆಯುತ್ತಿದ್ದಾಗ ಜೊತೆಗಾರರಾಗಿದ್ದ ನರಕ(hell)-ಮೇಟ್ (class-mate, school-mate ಥರಾ)ಗಳನ್ನು ಜೊತೆಗೇ ಕರೆದೊಯ್ಯಬೇಕು. ಇದು ಅವರ ಪೂರ್ವಜನ್ಮದ ಸುಕೃತ ಫಲ ಎಂಬ ಸಮರ್ಥನೆಯೂ ಕೇಳಿಬರುತ್ತಿದೆ.
ಬ್ಲಾಗಿಗರ ಸ್ವಾಗತ
ಆದರೆ ಬ್ಲಾಗು ಜಗತ್ತು ಮಾತ್ರ ಈ ಹೆಲ್-ಮೇಟ್ ಕಡ್ಡಾಯ ನೀತಿಯನ್ನು ಮನದುಂಬಿ ಸ್ವಾಗತಿಸಿದೆ. ಬ್ಲಾಗಿಗರ ತಲೆಯಲ್ಲಿ ನುಸುಳುವ ಬ್ಲಾಗ್ ಐಡಿಯಾಗಳು ತಲೆಯಿಂದ ಹೊರಗೆ ಹಾರಿ ಹೋಗದಂತೆ ಈ ಹೆಲ್-ಮೇಟ್ ತಡೆಯುತ್ತದೆ ಎಂಬ ಹರ್ಷ ಅವರದು.
ಬ್ಲಾಗಿಸುವ ಕುರಿತ ಏನೇ ಹೊಸ ಐಡಿಯಾಗಳಿದ್ದರೂ ತಲೆಯೊಳಗೆಯೇ ಸುಳಿದಾಡುತ್ತಾ ಇರುತ್ತದೆ, ಮನೆಯಿಂದ ಕಚೇರಿ ಮತ್ತು ಕಚೇರಿಯಿಂದ ಮನೆಗೆ ಬಂದು-ಹೋಗುವ ಹಾದಿಯಲ್ಲಿ ಫಳಕ್ಕನೆ ಹೊಳೆಯುವ ಈ ಐಡಿಯಾಗಳು ಹೆಲ್-ಮೇಟ್‌ನೊಳಗೆ ಸುರಕ್ಷಿತವಾಗಿರುತ್ತವೆ, ಗಮ್ಯ ಸ್ಥಾನ ತಲುಪಿದ ಕೂಡಲೇ ಆ ಐಡಿಯಾವನ್ನು ಬ್ಲಾಗಿಗಿಳಿಸಬಹುದು ಎಂದವರು ಸಂತಸ ವ್ಯಕ್ತಪಡಿಸಿದ್ದಾರೆ.
8 ಕಾಮೆಂಟ್‌ಗಳು
ನೀರು ಕೊಡಿ ಎಂದು ಅತ್ತೂ ಕರೆದು ಕಾವೇರಿ ಬಹುಪಾಲು ಕುಡಿದ ತಮಿಳು ಸೋದರರು ಈಗ ಕರ್ನಾಟಕದ ವೀರ ಕನ್ನಡಿಗರಂತೆ ಹೆಲ್-ಮೇಟ್ ತೊಟ್ಟು ಕಂಗೊಳಿಸಲಿ
ಪ್ರತ್ಯುತ್ತರಅಳಿಸಿhell-mateಗಳನ್ನು ಕಡ್ಡಾಯವಾಗಿ 'ತಲೆ'ಗೇ ತೊಟ್ಟಿಕೊಳ್ಳಬೇಕು ಎಂದು ಮಾಜಿ 'ಕವಿ' ಕನಿಧಿಯವರು ಹೊರಡಿಸಿರುವ ಅಪ್ಪಣೆಯನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಮಾನ್ಯ ವಾಟ್-ಆಳ್‍ರವರು ಹೆಲ್ಮೆಟ್ಟನ್ನು ತಲೆಗೇ ತೊಡಬೇಕು ಎಂದು ಹೇಳುವುದು ಸಾರ್ವಜನಿಕರ ಸ್ವಾತಂತ್ರ್ಯದ ಹರಣ ಎಂದು ಉದ್ಘೋಷಿಸಿ ಇದರ ಸಂಬಂಧ ಚರ್ಚೆ ನಡೆಸಿ ತಮಿಳುನಾಡಿನಲ್ಲಿ ಕತ್ತೆ ಸವಾರಿ ಮಾಡುವ ಮೂಲಕ ತಮ್ಮ ವಿರೋಧ ವ್ಯಕ್ತ ಪಡಿಸಲಿರುವುದು ವರದಿಯಾಗಿದೆ.
ಪ್ರತ್ಯುತ್ತರಅಳಿಸಿರೀ ಗುರೂ,ಬುರುಡೆ ಬಿಡಬೇಡಿ. ನಾನು ಬುರುಡೆ-ಕವಚ ಧರಿಸಿದ್ದರೂ ಸಹ ನೀವು ಈ ಪಾಟಿ ನನ್ನ ಬುರುಡೆಗೆ ಬಿಸಿ ನೀರು ಕಾಯಿಸ್ತಾ ಇದೀರಾ! ಏನೋ ಗಟ್ಟಿ ಬುರುಡೆ,ಉಳಕೊಂಡಿದೆ.
ಪ್ರತ್ಯುತ್ತರಅಳಿಸಿವೇಣು ವಿನೋದ್,
ಪ್ರತ್ಯುತ್ತರಅಳಿಸಿಕರ್ನಾಟಕದಲ್ಲೇ ತಯಾರಿಸಿದ ಹೆಲ್-ಮೇಟ್ ಅವರಿಗೂ ಬೇಕಂತೆ... ಹಾಗಾಗಿ ತರಿಸ್ಕೊಂಡು ಕಾನೂನು ಮಾಡ್ಕೊಂಡು ತಲೆಗೆ ಹಾಕ್ಕೋತಾ ಇದ್ದಾರೆ...
ಸುಪ್ರೀತರೆ,
ಪ್ರತ್ಯುತ್ತರಅಳಿಸಿಸುಪ್ರೀತರೆ,
ವಟವಟಾಳ್ ಅವರ ವಾದ ಒಪ್ಪತಕ್ಕದ್ದು. ಹೆಲ್-ಮೇಟ್ ತೊಟ್ಟರೆ ದಾರಿಹೋಕರನ್ನು ಸರಿಯಾಗಿ ನೋಡುವುದು ಕಷ್ಟವಾಗುತ್ತದೆ, ಹಾಗಾಗಿ ಅದನ್ನು ಬೈಕಿನ ಹಿಂದೆ ಸಿಕ್ಕಿಸಿಕೊಳ್ಳಬೇಕು ಎಂದು ನಾವು ಕೂಡ ಸಲಹೆ ಮಾಡುತ್ತೇವೆ.
ಸುನಾಥರೆ,
ಪ್ರತ್ಯುತ್ತರಅಳಿಸಿನಿಮ್ಮ ಬುರುಡೆಯನ್ನು ಖಂಡಿತಾ ಬಿಡುವುದಿಲ್ಲ...
ಅದನ್ನು ಕವಚ ತೊಡಿಸಿ ರಕ್ಷಿಸಿಡುತ್ತೇವೆ...
ನನಗೆ ಕೆಲಸವೇ ಇಲ್ಲದೇ ಈ ಕಡೆ ಬರೋಕ್ಕೇ ಆಗಿರ್ಲಿಲ್ಲ. ಇದೇನಿದು ಗಲಾಟೆ - ಹೇಲ್ ಮೆಟ್ಟು - ಹೇಲ್ ಮೇಟ್ - ಹೆಮ್ ಲೇಟು - ಹ್ಯಾಮ್ಲೆಟ್ಟು - ಆಮ್ಲೆಟ್ಟು ಅಂತ ಬೊಬ್ಬೆ ಇಡ್ತಿದ್ದೀರಾ? ಗಲಾಟೆ ಜಾಸ್ತಿ ಮಾಡಿದ್ರೆ ತಲೆ ಮೇಲೆ ಮೊಟುಕಬೇಕಾಗತ್ತೆ ಅಷ್ಟೆ.
ಪ್ರತ್ಯುತ್ತರಅಳಿಸಿಅರ್ರೇ!!! ಇದೇನಿದು ಅನ್ವೇಷಿಗಳ ತಲೆ ಬಹಳ ಗಟ್ಟಿ ಇದೆ. ತಲೆಗೆ ಏನು ಹಾಕಿದ್ರಿ ಸಾರ್ :)
ಶ್ರೀನಿವಾಸರೆ,
ಪ್ರತ್ಯುತ್ತರಅಳಿಸಿನೀವದನ್ನೆಲ್ಲಾ ತಲೆಗೆ ಹಚ್ಚಿಕೊಳ್ಳಬೇಡಿ... ನೀವಿಲ್ಲದಿದ್ದರೂ ಇಲ್ಲಿ ಗಲಾಟೆಗಳು ನಡೀತಾ ಇರತ್ವೆ.
ಅನ್ವೇಷಿಗೆ ತಲೆ ಇದೆ ಅಂತ ಯಾರು ಹೇಳಿದ್ದು ನಿಮಗೆ ಎಂಬುದನ್ನು ಕೂಡಲೇ ತಿಳಿಸುವುದು.....
ಏನಾದ್ರೂ ಹೇಳ್ರಪಾ :-D