ಬೊಗಳೆ ರಗಳೆ

header ads

Palm mistery ಯ ಹಿಸ್ಟೀರಿಯಾ

(ಬೊಗಳೂರು ಭವಿಷ್ಯವಿಲ್ಲದ ಬ್ಯುರೋದಿಂದ)
ಬೊಗಳೂರು, ಮೇ 11- ಕೈಯ ಕೊಟ್ಟು ಓಡಿ ಹೋದನೂ..... ನಮ್ಮ ಶಿವಾ.... ಅಂತ ಹಾಡುತ್ತಿದ್ದವರೆಲ್ಲಾ ಈಗ Palm mistery ಕೇಂದ್ರವನ್ನು ತೆರೆದಿರುವುದು ಲೋಕದ ಸಮಸ್ತ ಜನಗಳ ಕಾಕದೃಷ್ಟಿಗೆ ಬಿದ್ದಿರುವ ಹಿನ್ನೆಲೆಯಲ್ಲಿ ಶಂಕೆ ನಿವಾರಣೆಗಾಗಿ ಇಲ್ಲೊಂದು ಪುಟ್ಟ ಪ್ರಯತ್ನವನ್ನು ನಮ್ಮ ಬ್ಯುರೋ ಕೈಗೊಂಡಿದೆ.

Palm mistreryಗೂ Palm tree (ತಾಳೆ ಮರ)ದಿಂದ ಇಳಿಸುವ ಕಳ್ಳುವಿಗೂ ಸಂಬಂಧವಿಲ್ಲ ಎಂದು ಮೊತ್ತ ಮೊದಲಾಗಿ ಈ ಮೂಲಕ ನಮ್ಮ ಬ್ಯುರೋ ಸ್ಪಷ್ಟಪಡಿಸುತ್ತಿದೆ.

ಗ್ರಹ ಮಂಡಲದಿಂದ ಪ್ಲುಟೋ ಉದುರಿಬಿದ್ದ ಪರಿಣಾಮವಾಗಿ Palm misteryಯ ಹಿಸ್ಟರಿ ಕೂಡ ಬದಲಾಗಿದೆ. ಈ ಬದಲಾದ ವಿದ್ಯಮಾನದಲ್ಲಿ ನಿಮ್ಮ ನಿಮ್ಮ ಹಸ್ತ ರೇಖೆಗಳನ್ನು ಸ್ವಲ್ಪಮಟ್ಟಿಗೆ ಹಸ್ತ ಬದಲಿಸಿ ನೋಡಲಾಗುತ್ತದೆ. ಬಹುತೇಕವಾಗಿ ಯಾವ ಕೈ ಜೇಬಿನಿಂದ ಹೊರಬರುತ್ತದೆಯೋ ಅದನ್ನೇ ನಿಮ್ಮ ಭವಿಷ್ಯ ನಿರ್ಧಾರಕ್ಕಾಗಿ ಆಯ್ದುಕೊಳ್ಳಲಾಗುತ್ತದೆ. ನಡು ನಡುವೆ ನಿಮ್ಮ ಹಣೆಯಲ್ಲಿ ಮೂಡಿಬರುವ ಗೆರೆಗಳನ್ನೂ ರೇಖೆಗಳೆಂದೇ ಪರಿಗಣಿಸಿ ನೋಡಲಾಗುತ್ತದೆ.

ಅದಕ್ಕೆ ಕೆಲವೊಂದು ಸ್ಪಷ್ಟ ಕಾರಣಗಳನ್ನು ಹೇಳಬೇಕೆಂದರೆ 1) ಈ Palm mistery ಹೇಳುವಾತ ನಮ್ಮ lifeನ file ನಿಂದ ಒಂದು t ತೆಗೆದು misery ಮಾಡದಿದ್ದರೆ ಸಾಕು. 2) ಈ Palm mistery ಹೇಳುವವ ನಮ್ಮ Historyಗಳನ್ನೆಲ್ಲಾ ಹೇಳಿಬಿಟ್ಟು calm ಆಗಿದ್ದ ಲೈಫಿಗೆ ಆ-ಶಾಂತಿಯನ್ನು ತಂದು ಹಾಕದಿದ್ದರೆ ಸಾಕು. 3) ಏನೇನೆಲ್ಲಾ ಹೇಳಿ ಎಷ್ಟು ಹಣ ಕೀಳುತ್ತಾನೋ.... ಈ ಮೂರು default ಕಾರಣಗಳು ನಮ್ಮ ನಮ್ಮ ಹಣೆಯ ಬರಹದ ಮೇಲೆ ಗೆರೆಗಳಂತೆ ಮೂಡಿಬರಲು ಕಾರಣಗಳಾಗುತ್ತವೆ.

ಹಾಂ... ಒಂದ್ನಿಮಿಷ ನಿಲ್ಲಿ. ರೇಖೆ ಎಂಬ ಪದದ ಸ್ತ್ರೀಲಿಂಗವೇ ರೇಕಿ ಅಂತ ಯಾರು ಕೂಡ ತಪ್ಪು ತಿಳಿದುಕೊಳ್ಳಬೇಕಾಗಿಲ್ಲ. ಈ ಮಿಸ್ಟರಿ ಶಾಸ್ತ್ರವು ಮಿಸ್ಟರುಗಳಿಗೆ ಮಾತ್ರವಲ್ಲದೆ, mistressಗಳ Stress ನಿವಾರಣೆಗೂ ಸಹಾಯ ಮಾಡುತ್ತದೆ. ಈ ಮಿಸ್ಟರಿ ಶಾಸ್ತ್ರವು ಕೈ ಕೊಡುವವರಿಗೆ ಮತ್ತು ಕೈ ತೆಗೆದುಕೊಳ್ಳುವವರಿಗಾಗಿದ್ದು, ಕೈ ಕೊಟ್ಟವರು ಬೇರೆಯವರ ಕೈಹಿಡಿಯಲೇಬೇಕಾದ ಅನಿವಾರ್ಯತೆಗಳ ಕುರಿತು ಬೆಳಕು ಚೆಲ್ಲಲಾಗುತ್ತದೆ.

ಆದರೆ ಕೆಲವು ರಾಜಕಾರಣಿಗಳ ಮೃತ ಹಸ್ತದಿಂದಲೇ ಎಲ್ಲಾ ಕೆಲಸಗಳು ಆರಂಭವಾಗಿರಬೇಕಾಗುವಾಗ ಅವರ ಭವಿಷ್ಯ ನಿರ್ಣಯಕ್ಕೆ ಅವರ ಹಸ್ತವೇ ಬೇಕಾಗಿಲ್ಲ. ಅವರ ಹಿಂಬಾಲಕರ ಕೈಗಳು ಮಾತ್ರವೇ ಸಾಗುತ್ತದೆ.

ಇನ್ನು ಕೆಲವರು ಎಲ್ಲಾ ಕೆಲಸ ಕಾರ್ಯಕ್ಕೂ ಹಸ್ತಕ್ಷೇಪ ಮಾಡುವುದರಿಂದ ಇಂಥವರ ಹಸ್ತಗಳು ಕ್ಷೇಪ ಮಾಡುವುದಕ್ಕಾಗಿಯೇ ಮೀಸಲಾಗಿರಲಿ, ಅವರ ಮೂಗು ನೋಡಿ ಭವಿಷ್ಯ ಹೇಳಲಾಗುತ್ತದೆ. ಅಂದರೆ ಅವರೆಷ್ಟು ಪ್ರಮಾಣದಲ್ಲಿ ಮೂಗು ತೂರಿಸುತ್ತಾರೆ ಎಂಬುದನ್ನು ಅಳೆದು ಸುರಿದು ನೋಡಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. ಬೆರಳು ತೋರಿಸಿದರೆ ಸಾಕು, ಹಸ್ತ ನುಂಗುತ್ತಾರೆ ಎನ್ನುವ ರಾಜಕಾರಣಿಗಳ ಮೂಗು ನೋಡಿಯೇ ಭವಿಷ್ಯ ಹೇಳುವ ಪಾಮಿಷ್ಟರ ಬಗೆಗಿನ ನಿಮ್ಮ ವರದಿ ಬಹಳ ಕುತೂಹಲಕಾರಿಯಾಗಿದೆ.

    ಪ್ರತ್ಯುತ್ತರಅಳಿಸಿ
  2. ಅನಾಮಧೇಯಮೇ 11, 2007 11:24 PM

    ಜೇಬಿನಿಂದ ಹೊರ ಬರುವ ಕೈ ನೋಡುತ್ತಾರಾ??!! ಹಾಗಿದ್ರೆ ಹೆಂಗಸರಿಗೆ ಯಾವ ಕೈ ನೋಡುತ್ತಾರೋ??!!

    ಪ್ರತ್ಯುತ್ತರಅಳಿಸಿ
  3. @anonymous: "ಹಾಗಿದ್ರೆ ಹೆಂಗಸರಿಗೆ ಯಾವ ಕೈ ನೋಡುತ್ತಾರೋ??!!"-- ಹೆಂಗಸರೂ ಈಗ ಜೇಬುಗಳಿರುವ ದಿರಿಸು ಧರಿಸುತ್ತಾರಲ್ಲ ಎಂಬುದೇ ಇಲ್ಲಿಯ ಸಾರ್ವತ್ರಿಕ ಇಂಗಿತವಾಗಿದೆ, ಎಂದು ತಿಳಿಯಬೇಕೆ?

    ಪ್ರತ್ಯುತ್ತರಅಳಿಸಿ
  4. ಕೈಯೇ ಇಲ್ಲದವರಿಗೆ ಏನನ್ನು ನೋಡುವುದು? ಮಿಸ್ಟ್ರೆಸ್ ಬಂದಿದ್ದರೂ ಕೈ ಹಿಡಿಯದಿರುವವರ ಗತಿ ಏನು?

    ಇವತ್ತಿನ ನಿಮ್ಮ ವರದಿ ಉನ್ನತ ಮಟ್ಟದ್ದಾಗಿದ್ದು, ನನ್ನ ತಲೆಯ ಮೇಲೆ ಹಾಯ್ದು ಹೋಗಿದೆ. ಏನೂ ಅರ್ಥ ಆಗ್ಲಿಲ್ಲ. :(

    ಪ್ರತ್ಯುತ್ತರಅಳಿಸಿ
  5. ಸುನಾಥರೆ,
    ಎಲ್ಲದಕ್ಕೂ ಮೂಗು ತೂರಿಸಿ ರಾಜಕೀಯ ತಂದು ಅಧ್ವಾನ ಮಾಡುತ್ತಿರುವ ಜಾರಕಾರಣಿಗಳ ಭವಿಷ್ಯ ತಿಳಿಯಲು ಮೂಗೇ ಸೂಕ್ತ ಎಂಬುದು ನಿಜ.

    ಪ್ರತ್ಯುತ್ತರಅಳಿಸಿ
  6. ಅನಾನಿಮಸ್ಗಿರಿಯವರೆ,
    ಹೆಂಗಸರಿಗೆ ಲಟ್ಟಣಿಗೆ ಹಿಡಿಯುವ ಕೈಯನ್ನೂ ನೋಡಲಾಗುತ್ತದೆ ಎಂದು ತಿಳಿದುಬಂದಿದೆ. ನಿಜವೇ?

    ಪ್ರತ್ಯುತ್ತರಅಳಿಸಿ
  7. ಸುಪ್ತ ದೀಪ್ತಿಯವರೆ,
    ನಿಮಗೆ ಇನ್ನೊಂದು ವಿಷ್ಯ ಗೊತ್ತೇ? ಹೆಂಗಸರೂ ಈಗ ಜೇಬುಗಳಿಗೆ ಕೈ ಹಾಕುತ್ತಾರಲ್ಲಾ...

    ಮಹಿಳಾ ಪಿಕ್ ಪಾಕೆಟೀರ್ಸ್ ಅಂತ ಸಿಟಿಗಳಲ್ಲಿ ಕರೆಸಿಕೊಳ್ಳುವ ಅವರು, ತಮ್ಮ ತಮ್ಮ ಮನೆಗಳಲ್ಲಿ ಪತ್ನಿಯರು ಎಂದೂ ಕರೆಸಿಕೊಳ್ಳುತ್ತಾರಂತೆ!!!

    ಪ್ರತ್ಯುತ್ತರಅಳಿಸಿ
  8. ಶ್ರೀನಿವಾಸರೆ,
    ಕೈಯಿಲ್ಲದವರಿಗೆ ಕಾಲು ಇರುತ್ತದೆ.

    ಮಿಸ್ಟ್ರೆಸ್ ಬಂದಿದ್ದರೂ ಕೈ ಹಿಡಿದಿಲ್ಲ ಅನ್ನೋದು ನೋಡಿದ್ರೆ ಕನಿಷ್ಠಪಕ್ಷ ಕೈಕೊಡುವವರಾದರೂ ಇರುತ್ತಾರಲ್ಲ ಎಂದು ಸಮಾಧಾನಪಡಿ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D