(ಬೊಗಳೂರು ಗೊಂದಲದ ಗೂಡು ಬ್ಯುರೋದಿಂದ)
ಬೊಗಳೂರು, ಮೇ 24- ಆಕ್ಸ್‌ಫರ್ಡ್ ಡಿಕ್ಷ-ನರಿ ಸಂಸ್ಥೆಯವರು ಬೆಂಗಳೂರು ಮಂದಿಯ ಆಡುಭಾಷೆ ಬೆಂಗಾಳಿ ಎಂದು ಗಲೀಜು ಉಲ್ಲೇಖಿಸಿರುವುದರ ಹಿಂದೆ ಬೊಗಳೆ ರಗಳೆಯ ಕೈವಾಡವಿರುವ ಸಾಧ್ಯತೆಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.Ox-ಫರ್ಡ್ ಕಂಪನಿಯವರ Faux-pas ಗೆ ಕಾರಣವಾಗಿರುವುದು ಬೊಗಳೆ ರಗಳೆ ಎಂದು ಅದರ ಸೊಂಪಾದಕರು ಯಾರಲ್ಲೋ ಹೇಳಿಕೊಂಡಿರುವುದನ್ನು ನಮ್ಮ ವರದಿಗಾರರು ಕೇಳಿಸಿಕೊಂಡಿದ್ದಾರೆ. ಬೊಗಳೆ ಬಿಡುವವರಿಂದಾಗಿ ಬೊಗಳೂರು ಎಂಬ ಊರು ಸೃಷ್ಟಿಯಾಗಿದೆ, ಇದೇ ಕಾರಣಕ್ಕೆ ಬೆಂಗಳೂರು ಎಂಬುದು ಬೆಂಗಾಳಿಗಳಿಂದಾಗಿ ಬಂದಿರಬಹುದು ಎಂದವರು ಸ್ವಯಂತೀರ್ಮಾನಕ್ಕೆ ಬಂದಿರುವುದಾಗಿ ವರದಿಯಾಗಿದೆ.
ಆದರೆ ಈ ಕುರಿತು ಸಮರ್ಥವಾಗಿ ತನಿಖೆ ನಡೆಸಿರುವ ಬೊಗಳೂರಿನ ಬೊಗಳೆ ಬ್ಯುರೋ, ಹಲವು ಮಹತ್ವದ ಅಂಶಗಳನ್ನು ಬಯಲಿಗೆಳೆದಿದೆ. ಅದೆಂದರೆ, ಆಕ್ಸ್‌ಫರ್ಡ್ ಸಂಪಾದಕರಿಗೆ ಈ ಸಂದೇಹ ಉದ್ಭವಿಸಲು ಪ್ರಧಾನ ಕಾರಣವಾಗಿದ್ದು ಬೆಂಗಳೂರಿಗೆ ಭೇಟಿ ನೀಡಿದಾಗಲೇ!!!
ಅಂದರೆ ಅಲ್ಲೀಗ ಕನ್ನಡ ಮಾತನಾಡುವವರ ಸಂಖ್ಯೆ ತೀರಾ ಕುಸಿತವಾಗಿದೆ. ಇರುವ ಬಹುತೇಕ ಕನ್ನಡಿಗರು ಕನ್ನಡಾಂಗ್ಲ ಮಿಶ್ರಣವಾದ ಕಂಗ್ಲಿಷ್ ಮಾತನಾಡುತ್ತಿದ್ದರೆ, ವಲಸೆ ಬಂದವರೆಲ್ಲರೂ ರಾಜ್ಯದ ಭಾಷೆಯ ಬದಲು ತಮ್ಮ ತಮ್ಮದೇ ಭಾಷೆಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ ಮತ್ತು ಕನ್ನಡಕ್ಕೆ ತಮ್ಮ ಭಾಷೆಯನ್ನು ತೂರಿಸಿಕೊ"ಲ್ಲು"ತ್ತಿದ್ದಾರೆ. ಈ ಕಾರಣದಿಂದ ಬೆಂಗಳೂರಿಗೆ ಭೇಟಿ ನೀಡಿದಾಗ, ಯಾವ ಭಾಷೆ ಮಾತನಾಡಬೇಕು ಎಂಬುದರ ಬಗ್ಗೆ ಕಳವಳಕಾರಿಯಾಗಿ ಗೊಂದಲಕ್ಕೀಡಾದ ಈ ಸೊಂಪಾದಕರು, ಸಕಲ ಭಾಷೆಗಳ ಸಮ್ಮಿಶ್ರಣದಲ್ಲಿ ತೇಲಿ ಹೋಗಿ ತಲೆ ಚಚ್ಚಿಕೊಳ್ಳುವ ಹಂತಕ್ಕೆ ಬಂದಿದ್ದರು.
ಬೆಂಗಳೂರಿನಲ್ಲಿ ಜನ ಮಾತಾಡ್ತಿರೋದು ಯಾವ ಭಾಷೆಯಪ್ಪಾ ಎಂದು ಸಂದೇಹ ಪಟ್ಟುಕೊಂಡೇ, ಬೊಗಳೆಯಿಂದ ಬೊಗಳೂರು ಆಗಿದ್ದರೆ ಬೆಂಗಾಳದಿಂದ ಬೆಂಗಳೂರು ಇರಬಹುದು ಎಂಬ ತಾರ್ಕಿಕ ತೀರ್ಮಾನಕ್ಕೆ ಬಂದರು ಎಂಬುದನ್ನು ಪತ್ತೆ ಹಚ್ಚಲಾಗಿದೆ.
19 ಕಾಮೆಂಟ್‌ಗಳು
ಇದರ ಹಿಂದೆ ನಿಮ್ಮ ಕೈವಾಡ ಇರೋದನ್ನು ಸುಮ್ನೆ ಒಪ್ಪಿಕೊಂಡುಬಿಡಿ ಅನ್ವೇಷಿಗಳೇ!!!
ಪ್ರತ್ಯುತ್ತರಅಳಿಸಿಅಂದ ಹಾಗೆ ಅನ್ವೇಷಿ ಎನ್ನುವ ಹೆಸರು ಹೇಗೆ ಬಂತು :o ಯಾವುದೇ ವರದಿಯನ್ನು ನೋಡಿ, ಇದು ಇವರಿಗೆ ಅನ್ವಯ ಆಗತ್ತೆ ಅದು ಅವರಿಗೆ ಅನ್ವಯ ಆಗತ್ತೆ ಅಂತ ಊಹಾಪೋಹ ಹಬ್ಬಿಸೋದ್ರಿಂದ ತಾನೆ ನಿಮ್ಮ ಹೆಸರು ಅನ್ವೇಷಿ ಆಗಿರೋದು. ಅಥವಾ ಅವನೇ - ಷಿ ಎನ್ನುವುದು ಅನ್ವೇಷಿ ಆಗಿದೆಯೋ? :P
ಬಂಗಾಳಿಗಳ ಊರು ಬೆಂಗಳೂರು ಎಂಬುದನ್ನು ಐತಿಹಾಸಿಕ ದಾಖಲೆಗಳ ಮೂಲಕ some-ಶೋ-ಧನ-ಎ ಯ ಮೂಲಕ ಸಾಬೀತು ಪಡಿಸುವುದಾಗಿ ಲದ್ದಿಜೀವಿಗಳ ಸಂಘದ ಅಧಕ್ಷರು ಲಂಡನ್ನಿನ್ನ ಒಂದು ಟಿವಿ ಚಾನೆಲ್ಲಿಗೆ ಹೇಳಿಕೆ ನೀಡಿರುವುದಾಗಿ ಅಮೇರಿಕದ ಪತ್ರಿಕೆಯೊಂದು ತಿಳಿಸಿದೆ.
ಪ್ರತ್ಯುತ್ತರಅಳಿಸಿಬಂಗಾಳಿಗಳೇ ಬೆಂಗಳೂರಿನ ಪೂರ್ವಿಕರೆಂದೂ, ಬಂಗಾಳಿ ಮನೆತನವೇ ಬೆಂಗಳೂರನ್ನು ಆಳಿದ್ದೆಂದೂ, ತಾವೇ ಕೆಂಪು-ಗೌಡರ ನೇರ ಮರಿ ಮಗನೆಂದು ಯುವರಾಜ ಸೌರವ್ ಗಂಗೂಲಿ ಬಾಂಗ್ಲಾದಿಂದಲೇ ಗುಟುರುರು ಹಾಕಿರುವುದು ನಮ್ಮ ಕಿವಿಗೆ ಬಿದ್ದಿದೆ.
ತಮ್ಮ ಅಪರಿಮಿತ ಕನ್ನಡ ಪ್ರೇಮವನ್ನು ಸಾಬೀತುಪಡಿಸಿ ಅಪವಾದ ಹೊರಿಸಿದವರ ಬಾಯಿ ಮುಚ್ಚಿಸಲೆಂದು ಅನ್ವೇಷಿಯವರು ತಮಿಳುನಾಡಿನಿಂದಲೇ ಬಾರಿಸಿದ ಕನ್ನಡ ದುಂದುಭಿ ನಮಗೆ ಕೇಳಿಸಿ ಎದ್ದು ಬಿದ್ದು ಓಡಿ ಬಂದಿದ್ದೇವೆ.. ಇನ್ನೇನ್ಮಾಡ್ಲಿ???
ಪ್ರತ್ಯುತ್ತರಅಳಿಸಿಅನ್ವೇಷಿಗಳೇ,
ಪ್ರತ್ಯುತ್ತರಅಳಿಸಿಆಕ್ಸ್ಫರ್ಡ್ ಡಿಕ್ಷ-ನರಿ ಸಂಸ್ಥೆಯವರು ಬೆಂಗಳೂರು ಬೆಂಗಾಳಿಗಳದು ಎಂದು ಸಂಶೋಧನೆ ಮಾಡುವ ಅಗತ್ಯವೇ ಇರಲಿಲ್ಲ. ನಮ್ಮನ್ನು ಕೇಳಿದ್ರೆ ನಾವೇ ಕೊಡುತ್ತಿದ್ದೇವಲ್ಲ. ಬೆಂಗಳೂರು ನಮ್ಮದಂತೂ ಅಲ್ಲ,ಯಾರು ಬೇಕಾದರೂ ತೊಗೊಳ್ಳಿ ಅಂತ..
ಶ್ರೀನಿವಾಸರೆ,
ಪ್ರತ್ಯುತ್ತರಅಳಿಸಿಸುಮ್ ಸುಮ್ನೆ ಒಪ್ಪಿಕೊಂಡು ಬಿಡಲು ನಮ್ಮ ಅಭ್ಯಂತರವೇನೂ ಇಲ್ಲ.
ಅವನು She ಆಗೋದು ಹೇಗೆ ಎಂಬುದು ತಿಳೀತಿಲ್ಲ, ಅದು ಅವಳೇ-She ಆಗಬೇಕು.
ಸುಪ್ರೀತರೆ,
ಪ್ರತ್ಯುತ್ತರಅಳಿಸಿನಿಮ್ಮ ವರದಿಯ ಮಧ್ಯೆ, ಅಮೆರಿಕವು ಯೋಗದ ಪೇಟೆಂಟ್ ಪಡೆದುಕೊಳ್ಳುವ ಮಾದರಿಯಲ್ಲೇ ಬೆಂಗಳೂರು ಹೆಸರಿನ ಪೇಟೆಂಟ್ ಪಡೆದುಕೊಳ್ಳಲೂ ಹೆಣ-ಕಾಟ ನಡೆಸಿದೆ ಎಂಬುದು ಕೂಡ ತಿಳಿದುಬಂದಿರುವುದನ್ನು ನೀವು ಉದ್ದ-ದೇಶಪೂರ್ವಕವಾಗಿ ಮುಚ್ಚಿಡುತ್ತಿದ್ದೀರಿ ಎಂಬುದು ನಮಗೆ ಗೊತ್ತೇ ಆಗಿಲ್ಲ.
ಶ್ರೀಯವರೆ,
ಪ್ರತ್ಯುತ್ತರಅಳಿಸಿತಮಿಳುನಾಡಿನಲ್ಲೂ ಕನ್ನಡದಿಂದಲೇ ಬದುಕಬಲ್ಲೆವು ಎಂಬುದು ನಮ್ಮ ಅಗ್ಗ(ದಗ)ಳಿಕೆಯಾದರೂ, ಅಪರಿಮಿತ ಕನ್ನಡ ಪ್ರೇಮ ಎಂಬ ಅಪವಾದ ಹೇರುವಷ್ಟು ದೊಡ್ಡ ಗಳಿಕೆಯಲ್ಲ.
ಹೇಗೂ ಓಡಿ ಬಂದಿದ್ದೀರಿ. ಇನ್ನೇನ್ಮಾಡ್ಲಿ ಅಂತ ಕೇಳಿದ ಕಾರಣ ಹೇಳುತ್ತೇನೆ ಕೇಳಿ. ಬಾರಿಸಿ ಬಿಡಿ.... ಯದ್ವಾ ತದ್ವಾ...
ಯಾರ್ ಯಾರಿಗೋ ಅಲ್ಲ... ಕನ್ನಡ ಡಿಂಡಿಮವನ್ನು!!!!
ಶ್ರೀತ್ರಿ ಅವರೆ,
ಪ್ರತ್ಯುತ್ತರಅಳಿಸಿಕನ್ನಡಿಗರು ಉದಾರಿಗಳು ಅನ್ನೋದು ನಿಮ್ಮ ಮಾತಿನಿಂದಲೂ, ಬೆಂಗಳೂರಿನಲ್ಲಿರೋರ ವರ್ತನೆಯಿಂದಲೂ ಸಾಬೀತಾಗಿರುವುದರಿಂದ ನಮ್ಮ ಅನ್ಯಾಯಾಲಯವು ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡುತ್ತಿದೆ.
"ಅಮೆರಿಕವು ಯೋಗದ ಪೇಟೆಂಟ್ ಪಡೆದುಕೊಳ್ಳುವ ಮಾದರಿಯಲ್ಲೇ "-- ಇದಕ್ಕೂ ಮೊದಲು, ಯೋಗವು ಇಂಗ್ಲೀಷರ ಜೊತೆಗೆ ಭಾರತಕ್ಕೆ ಬಂದಿತೆಂದೂ, ಅದು ಬರೇ 150 ವರ್ಷಗಳಷ್ಟು ಹಳೆಯದೆಂದೂ, ಯೋಗವು ಫ್ರೆಂಚ್, ಜರ್ಮನ್, ಮತ್ತು ಇಂಗ್ಲಿಷ್ ವ್ಯಾಯಾಮ ಪದ್ಧತಿಗಳ ಭಾರತೀಯ FUSION ಎಂದೂ ಮೊನ್ನೆ ಮೊನ್ನೆ ಒಬ್ಬರು "ಬೊಗಳಿ"ದ್ದನ್ನು ಕೇಳಿ ನನಗೆ shock. Heart-attack ಆಗುವುದೊಂದು ಬಾಕಿ. ಸಧ್ಯ ಇನ್ನೂ ಬದುಕಿದ್ದೇನೆ. ಇಂಥವರಿಗೆ ನನ್ನ ಹತ್ರ ಉತ್ತರವಿಲ್ಲ.
ಪ್ರತ್ಯುತ್ತರಅಳಿಸಿಆಕ್ಸಫರ್ಡ್ ಡಿಕ್ಶನರಿಯಲ್ಲಿ ಹೇಳಿದ್ದು ಸರಿಯಾಗಿಯೇ ಇದೆ. ಬೆಂಗಾಲಿಗಳ ಊರು ಬೆಂಗಳೂರು; ಅದೇ ಪ್ರಕಾರವಾಗಿ ಮಂಗಗಳ ಊರು ಮಂಗಳೂರು.
ಪ್ರತ್ಯುತ್ತರಅಳಿಸಿಬಾರಿಸಿ ಬಾರಿಸಿ ಸುಸ್ತು ಸಾರ್. ಆದ್ರೂ ಬಾರಿಸೋದೇನು ಬಿಟ್ಟಿಲ್ಲ:)
ಪ್ರತ್ಯುತ್ತರಅಳಿಸಿಸುಸ್ತಾದರು "ಕನ್ನಡ" ಡಿಂಡಿಮವನ್ನ ಬಾರಿಸ್ತಾನೆ ಇರೋಣ.
ಪ್ರತ್ಯುತ್ತರಅಳಿಸಿಕೇವಲ ಬೆಂಗಳೂರು ಬೆಂಗಾಲಿಗಳದ್ದಲ್ಲವಂತೆ. ಇತ್ತೀಚಿನ ವರದಿ ಪ್ರಕಾರ 'ಬೊಗಳೆ ರಗಳೆ' ಕೂಡಾ ಬೆಂಗಾಲಿಗಳದ್ದೆಂದು ಪುರಾವೆ ಸಮೇತ ಸಾಧಿಸಿದ್ದಾರಂತೆ. ಕಲ್ಕತ್ತ ಕೋಲ್ಕತ್ತ ಆದಂತೆ ಬಗಳೆ ಬೊಗಳೆ ಆಗಿದೆಯಂತೆ. ಇನ್ನೂ ಒಂದು ಸೂತ್ರದ ಪ್ರಕಾರ ಕನ್ನಡವನ್ನು ಇಷ್ಟು ಚೆನ್ನಾಗಿ ಕನ್ನಡಿಗರು ಬರೆಯಲಾರರು. ಬೆಂಗಾಲಿಗಳೇ ಬರೆದಿರಬೇಕೆಂದು ಗೊತ್ತಾಗಿದೆಯಂತೆ. ಬೆಂಗಳೂರಿನಲ್ಲಿರುವುದರಿಂದ ನಮ್ಮನ್ನು ನಾವೂ ಬೆಂಗಾಲಿಗಳೆಂದು ಕರೆಯಬಹುದಂತೆ. ದ್ರಾವೀಡ್ ಆಗ ಬೆಂಗಾಲ್ ಟೈಗರ್ ಆಗ್ತಾನಂತೆ (ಮರಾಠಿ ಯಲ್ಲ)!
ಪ್ರತ್ಯುತ್ತರಅಳಿಸಿಸುಪ್ತದೀಪ್ತಿ ಅವರೆ
ಪ್ರತ್ಯುತ್ತರಅಳಿಸಿಅಮೆರಿಕದವರು ಎಲ್ಲವನ್ನೂ ಪೇಟೆಂಟ್ ಮಾಡಿಸಿಕೊಳ್ಳುತ್ತಿದ್ದಾರೆ... ಮುಂದಿನ ಸರದಿ ಭಾರತ ಎಂಬ ಹೆಸರಿನ ಮೇಲೆ ಅವರ ಕಣ್ಣು ಅಂತ ಪತ್ತೆ ಹಚ್ಚಿದ್ದೇವೆ. ಅದರ ನಡುವೆ ಬೊಗಳೋದನ್ನೂ ಪೇಟೆಂಟ್ ಮಾಡಿಸಿಕೊಳ್ತಾರಂತೆ...
ಸುನಾಥರೆ,
ಪ್ರತ್ಯುತ್ತರಅಳಿಸಿಮಂಗಗಳ ಊರು ಬೊಗಳೂರು ಕಣ್ರೀ..... ಮಂಗಳೂರು ಮಂಗಳೆಯ ಊರು!
ಶ್ರೀ ಅವರೆ,
ಪ್ರತ್ಯುತ್ತರಅಳಿಸಿಬಾರಿಸಿ ಬಾರಿಸಿ ಸುಸ್ತಾದರೂ ಬಿಡದೇ ಇರೋರು ನಿಜವಾದ ಕನ್ನಡಿಗರು. ನವೆಂಬರ್‌ನಲ್ಲಿ ಮಾತ್ರ ಬಾರಿಸೋರ ಬಗ್ಗೆ ನಾನು ಹೇಳೋದಿಲ್ಲ.
ನವೀ ಅವರೆ,
ಪ್ರತ್ಯುತ್ತರಅಳಿಸಿನೀವೂ ಬಾರಿಸೋಕೆ ಶುರು ಹಚ್ಚಿದ್ದು ಕೇಳಿ ಸಂತೋಷ ಆಯ್ತು.... ಬನ್ನಿ ಬನ್ನಿ.... ತಗೊಳ್ಳಿ... ಒಂದೊಂದು ಡಿಂಡಿಮ...
ಬಾನಾಡಿ ಅವರೆ,
ಪ್ರತ್ಯುತ್ತರಅಳಿಸಿನೀವು ಬೊಗಳೆ ಎಂಬ ಪದದಲ್ಲಿರೋ 'ಒ'ಕಾರವನ್ನು ನೋಡಿ ಇದು ಬೊಂಗಾಳಿಗಳದ್ದು ಎಂದಿದ್ದು ಸರಿಯಲ್ಲ.
ಮತ್ತೆ, ಕ್ರಿಕೆಟಿಗರು ಏನಿದ್ದರೂ ಬಾಂಗ್ಲಾದಲ್ಲಿ ಟೈಗರುಗಳು ಅಂದರೆ ಕಾಗದದ ಟೈಗರುಗಳು.
ಇದು ಹುಡುಕು ನೋಡಿ
ಪ್ರತ್ಯುತ್ತರಅಳಿಸಿhttp://www.yanthram.com/kn/
ಏನಾದ್ರೂ ಹೇಳ್ರಪಾ :-D