(ಬೊಗಳೂರು ಪಾಪಿ ಬ್ಯುರೋದಿಂದ)
ಬೊಗಳೂರು, ಏ.12- ಅತಿ ದೊಡ್ಡ "ಪಾಪ"ವನ್ನು ರೂಪಿಸಿದ್ದಕ್ಕಾಗಿ ಪಾಪಿಸ್ತಾನ ಎಂದೇ ಹೆಸರುಪಡೆದಿರುವ ರಾಷ್ಟ್ರದ ಮಹಿಳಾ ಮಂತ್ರಿಯ ವಿರುದ್ಧ ಫತ್ವಾ ಹೊರಡಿಸಿದ ಸಂಗತಿಯ ಬೆನ್ನು ಬಿದ್ದಿರುವ ಅನ್ವೇಷಿ, ಇದರ ಹಿಂದೆ hug-bug ಇದೆ ಎಂಬುದನ್ನು ಪತ್ತೆ ಹಚ್ಚಿದೆ.ಈ hug bug ತಗುಲಿದಲ್ಲಿ ಪಾಪ ಆಗುತ್ತದೆ ಎಂಬ ನಂಬಿಕೆಯೇ ಈ ರಾದ್ಧಾಂತಕ್ಕೆ ಕಾರಣ ಎಂಬುದನ್ನು ಪತ್ತೆ ಹಚ್ಚಲಾಗಿದ್ದು, ಈ ಕುರಿತು ಅಧ್ಯಕ್ಷ ಮೂಸಾ ರಫ್ ಅವರನ್ನು ಮಾತನಾಡಿಸಲಾಯಿತು.
ಬೊಗಳೆ ರಗಳೆ ಬ್ಯುರೋ ಎಂದ ತಕ್ಷಣವೇ ಬೆಚ್ಚಿ ಬಿದ್ದ ಅವರು ಸುಧಾರಿಸಿಕೊಂಡು, ದಯವಿಟ್ಟು ನನಗೇನೂ ಮಾಡಬೇಡಿ, ಖಂಡಿತವಾಗಿಯೂ ನಿಮಗೆ ಸಂದರ್ಶನ ಕೊಡುತ್ತೇನೆ ಎಂದು ಒಪ್ಪಿಕೊಂಡುಬಿಟ್ಟರು.
ಆದರೆ ಅವರು ಬೆಚ್ಚಿ ಬಿದ್ದುದರ ಹಿಂದಿನ ಸಂಗತಿ ಆ ಮೇಲೆ ಪತ್ತೆಯಾಗಿದೆ. ಬೊಗಳೆ ರಗಳೆ ಬ್ಯುರೋ ನಮ್ಮ ಬೆನ್ನ ಹಿಂದೆ ಬಿದ್ದಿದೆ ಎಂದಾದರೆ ಮಿಲಿಟರಿಯಲ್ಲಿ ಏನೋ ಪಾಪದ Coupಅ ನಡೆಯುತ್ತಿರಬಹುದು ಎಂಬ ಶಂಕೆಯೇ ಇದಕ್ಕೆ ಕಾರಣ ಎಂದು ತಿಳಿದುಕೊಳ್ಳಲಾಗಿದೆ.
ಒಟ್ಟಿನಲ್ಲಿ ಸಂದರ್ಶನ ನೀಡಲು ಒಪ್ಪಿದ ರಫ್ ಅವರು, ಅಟಲ್ ಬಿಹಾರಿ ವಾಜಪೇಯಿ ಮತ್ತು ಶರೀಫ್ ಅವರು ಪರಸ್ಪರ ಅಪ್ಪಿಕೊಂಡ ಪರಿಣಾಮವಾಗಿ ಕಾರ್ಗಿಲ್ ಯುದ್ಧವೇ ನಡೆಯಿತು. ಇನ್ನು ನಮ್ಮ ಮಂತ್ರಿಗಳೂ ಅಪ್ಪಿಕೊಳ್ಳಲು ಶುರು ಹಚ್ಚಿಕೊಂಡರೆ ಎಲ್ಲಿ ಯಾವಾಗ ಏನು ಆಗುತ್ತದೆ ಎಂಬುದು ನನಗೇ ತಿಳಿಯುವುದು ಕಷ್ಟಕರವಾಗುತ್ತದೆ ಎಂದು ಅಧಿಕಾರಭ್ರಷ್ಟರಾಗುವ ಕುರಿತು ತೀವ್ರ ಕಳಕಳಿ ವ್ಯಕ್ತಪಡಿಸಿದರು.
ಆದರೆ ಅಧಿಕಾರಭ್ರಷ್ಟನಾದರೂ ಪರವಾಗಿಲ್ಲ ಭ್ರಷ್ಟ ಅಧಿಕಾರಿಯಾಗಿ ಮುಂದುವರಿಯಲು ಯಾರೂ ಬಿಡದಿದ್ದರೆ ನಮ್ಮ ಪಾಪಿಸ್ತಾನದ ಗತಿ ಏನು? ಅದರ ಪ್ರ"ಗತಿ"ಯಾಗುವುದಾದರೂ ಹೇಗೆ ಎಂದೂ ಅವರು ದುಃಖಾತಿರೇಕದಿಂದ ಪ್ರಶ್ನಿಸಿದರು.
ಈ ಕಾರಣಕ್ಕೆ ಇನ್ನು ಯಾರೂ ಇಲ್ಲಿ ಅಪ್ಪಿಕೋ ಚಳವಳಿ ಮಾಡಬಾರದು. ಇದು ದೊಡ್ಡ ಪಾಪಕ್ಕೆ ಕಾರಣವಾಗುತ್ತದೆ ಎಂದು ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಿವುದಾಗಿ ಅವರು ಬೊಗಳೆ ರಗಳೆಗೆ ಮಾತ್ರವೇ ಹೇಳಿದ್ದಾರೆ.
2 ಕಾಮೆಂಟ್‌ಗಳು
ಹಗ್ ಅಂದ್ರೇನು? ಹಗ್ಗೀಸ್ ಅಂತ ಮಕ್ಕಳಿಗೆ (ಪಾಪಗಳಿಗೆ) ಹಾಕ್ತಾರಲ್ಲ ಅದೇನಾ? ದಾರವಿಲ್ಲದೆಯೇ ಅದು ಮಕ್ಕಳಿಗೆ ಅಂಟಿಕೊಳ್ಳತ್ತಂತೆ. ಬಗ್ ಕೂಡಾ ಹಾಗೆಯೇ ಅಂಟಿಕೊಳ್ಳತ್ತಾ?
ಪ್ರತ್ಯುತ್ತರಅಳಿಸಿಹಗ್ಗೀಸ್ ಅಂದ್ರೆ ಹಬ್ಬೀಗಳನ್ನು ವೈಬ್ಬೀಗಳು ಹಗ್ಗಿಸಿಕೊಳ್ಳುವುದು ಎಂದರ್ಥವೇ ಎಂದು ನಾನೇ ನಿಮ್ಮನ್ನು ಕೇಳುತ್ತಿದ್ದೇನೆ. ಆದರೆ ಬೊಗ್ಗೀಸ್ ಅನ್ನು ಹಗ್ಗೀಸ್ ಜತೆಗೆ ಮಿಕ್ಸ್ ಮಾಡಬಾರದು.
ಪ್ರತ್ಯುತ್ತರಅಳಿಸಿ*ಬೊಗ್ಗಿ= ಹೆಣ್ಣುನಾಯಿಗಳು (ತುಳು)
ಏನಾದ್ರೂ ಹೇಳ್ರಪಾ :-D