ಬೊಗಳೆ ರಗಳೆ

header ads

ವರ್ಷದ ಮಗುವಿಗೆ ರಜತಸಹಸ್ರ ಒದೆತ!

(ಬೊಗಳೆ ರಗಳೆಯ ಮಗು ಬ್ಯುರೋದಿಂದ)
ಬೊಗಳೂರು, ಏ.14- ಒಂದು ವರ್ಷದ ಮಗುವಿನ 250ಕ್ಕೂ ಹೆಚ್ಚು ಬೊಗಳೆಗಳಿಗೆ 25 ಸಾವಿರಕ್ಕೂ ಹೆಚ್ಚು ಮಂದಿ ಮನಬಂದಂತೆ ಒದೆಯುತ್ತಿರುವ ಹಾಸ್ಯಕ್ಕೆ ಆಸ್ಪದವಾದ ಕಥಾನಕವು ವರದಿಯಾಗಿದೆ.

ಒಂದು ವರ್ಷದ ಹಿಂದೆ ಏಪ್ರಿಲ್ 4ರಂದು ಅಚಾನಕ್ ಆಗಿ ಜನ್ಮತಾಳಿದ ಈ ಮಗು ಮಾನವೀಯ ಜಗತ್ತಿನಲ್ಲಿ ಅಮಾನವೀಯತೆಯನ್ನು ಪ್ರೋತ್ಸಾಹಿಸುತ್ತಾ, ಪ್ರಾಣಿಗಳ ಜಗತ್ತಿನಲ್ಲಿ ಮಾನವೀಯತೆಯನ್ನು ವಿರೋಧಿಸುತ್ತಾ ಬೆಳೆದು ಬರುತ್ತಿತ್ತು.
ಕಂಪ್ಯೂಟರ್ ಎಂದರೇನೆಂದು ಗೊತ್ತಿಲ್ಲದೆಯೇ ಬೊಗಳೆ ಬಿಡಲಾರಂಭಿಸಿದ ಈ ಮಗುವಿನ ಜನ್ಮ ದಿನ ಏಪ್ರಿಲ್ 1 ಎಂದು ಬಹುತೇಕ ಮಾನವ ಸಮುದಾಯ ವಾದಿಸಿದ್ದರೂ, ಬೊಗಳೆ ರಗಳೆ ಬ್ಯುರೋದ ಮೊದಲ ವರದಿಯಲ್ಲೇ ಈ ದಿನಾಂಕ ದಾಖಲಾಗಿರುವುದರಿಂದ, ಏಪ್ರಿಲ್ 4 ಈ ಮಗುವಿನ ಜನ್ಮ ದಿನ ಎಂಬುದನ್ನು ಅಧಿಕೃತವಾಗಿ ಸಾಬೀತುಪಡಿಸಲಾಗುತ್ತಿದೆ ಎಂದು ಬ್ಯುರೋ ವರದಿ ಮಾಡಿದೆ.

ನಾಲ್ಕು ತಿಂಗಳ ಮಗುವಾಗಿದ್ದಾಗಲೇ 10 ಸಾವಿರ ಒದೆತ ತಿಂದಿದ್ದ ಈ ಮಗು ಬ್ಲಾಗುವಿಕೆಗಿಂತನ್ಯ ತಪವು ಇಲ್ಲ ಎನ್ನುತ್ತಾ ತಪಸ್ಸು ಮಾಡಲು ಕಾಡಿಗೆ ಹೊರಟಾಗ ಓದುಗರೆಲ್ಲಾ ರಚ್ಚೆ ಹಿಡಿದವರಂತೆ ಒದೆ ಕೊಡಲಾರಂಭಿಸಿದ್ದರು. ಹೀಗಾಗಿ ಇದೀಗ 250ಕ್ಕೂ ಹೆಚ್ಚು ಸ್ಫೋಟಕ ವರದಿಗಳನ್ನು ಪ್ರಕಟಿಸಿ, ವಿಶ್ವಾದ್ಯಂತದ ಕುತೂಹಲಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿ 26 ಸಾವಿರಕ್ಕೂ ಹೆಚ್ಚು ಒದೆತ ತಿಂದ ಕಾರಣದಿಂದಾಗಿಯೇ ಜೀವಂತವಾಗಿರುವುದು ತುಂಬಲಾರದ ನಷ್ಟದಷ್ಟೇ ನಂಬಲಾರದ ಕಷ್ಟ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಪ್ರತಿ ವರದಿಗೂ ಕಾಮೆಂಟ್ ಮೂಲಕ ಬರುತ್ತಿದ್ದ ಬೆದರಿಕೆಗಳು, ಮಾನ ಹರಾಜು ಪ್ರಕ್ರಿಯೆಗಳು, ಅವಮಾನ ನಷ್ಟ ಮೊಕದ್ದಮೆಗಳು, ಛೀ ಥೂ ಮಾತ್ರೆಗಳು... ಇವುಗಳೆಲ್ಲದರ ಹೊರತಾಗಿಯೂ ಈ ಮಗು ಎದ್ದು ಹೋಗಲು ಪ್ರಯತ್ನಿಸಿದರೂ, ಅದನ್ನು ಎದ್ದು ಹೋಗದಂತೆ ತಡೆಯುವ ಪ್ರಯತ್ನಗಳೂ ಸಾಕಷ್ಟು ನಡೆದಿದ್ದವು. ಏಳುವ ಯತ್ನದಲ್ಲಿ ಬಿದ್ದಾಗ ಕೆಲವರು ಎರಡೇಟು ಬಿಗಿದು ಮತ್ತೆ ಜುಟ್ಟಿನಲ್ಲಿ ಹಿಡಿದೆತ್ತಿ ಸರಿಯಾಗಿ ನಿಲ್ಲಿಸಿರುವುದರಿಂದ ಈ ಮಗುವಿನ ಪರಿಸ್ಥಿತಿ ನೋಡಿ ವಿಶ್ವಾದ್ಯಂತದ ಸಹೃದಯಿಗಳು ಗಹಗಹಿಸಿ ನಗಲಾರಂಭಿಸಿದ್ದಾರೆಂಬ ಆತಂಕಕಾರಿ ಅಂಶವೊಂದನ್ನು ಕೂಡ ಇದೇ ಸಂದರ್ಭ ಪತ್ತೆ ಹಚ್ಚಲಾಗಿದೆ.

20 ಕಿಲೋ ಒದೆತಗಳ ಸಂಕ್ರಾಂತಿ ಆಚರಿಸಿದ್ದ ಈ ಮಗು, ಈ ಮಗು ಆಗಾಗ್ಗೆ ಬಾಯಿಗೆ ಬಂದದ್ದನ್ನು ಉಗುಳುತ್ತಿದ್ದರೂ ಇದರಿಂದಾಗಿ ಪೆಚ್ಚಾಗಿದ್ದರೆ ಹೊಟ್ಟೆಗೆ ಹಾಕಿಕೊಂಡು ಅರಗಿಸಿಕೊಳ್ಳುವಂತೆಯೂ, ಪೆಚ್ಚಾದ ಪ್ರಸಂಗಗಳ ಬಗ್ಗೆ ವಿವರಿಸುವಂತೆ ಕೋರಲಾಗಿದೆ.

ವಿಷು ಕಣಿ ನೋಡುವ ಬದಲು ಕಣಿ ಕೇಳಿದ ಬಳಿಕವೇ ಏ.4ರ ಬೊಗಳೆ ಜನ್ಮದಿನದ ಬದಲಾಗಿ 10 ದಿನದ ಬಳಿಕ ಇದನ್ನು ಪ್ರಕಟಿಸಲಾಗಿದ್ದು, ಏಕಸದಸ್ಯ ಬ್ಯುರೋದ ಸಮಸ್ಯ ಸಿಬ್ಬಂದಿಗಳ ಪರವಾಗಿ ಓದುಗರಿಗೆ ಸೌರಮಾನ ಯುಗಾದಿ ಶುಭಾಶಯಗಳನ್ನು ಕೋರಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

18 ಕಾಮೆಂಟ್‌ಗಳು

  1. ಹೇ ದೇವ ನಿನಗೆ ಇನ್ನೂ ಕರುಣೆ ಬಾರದೆ..

    ಸ್ವಗತ..
    ಇರಲಿ ಈ ಬೊಗಳೆಯ ರಗಳೆಯನ್ನು ಇಲ್ಲಿಯವರಿಗೆ ಸಂತೋಷದಿಂದ ಸಹಿಸಿಕೊಂಡದ್ದಾಗಿದೆ..ಮುಂದಿನ ನಿಲ್ದಾಣವಾದ ೫೦ ಸಹಸ್ರದವರೆಗೆ ಅಸತ್ಯಿಗಳು ಎನೇ ಬೊಗಳಿದರೂ ನಾವು ಛಲ ಬಿಡದ ವಿಕ್ರಮನಂತೆ ಮತ್ತೆ ಬೊಗಳೆ ತಾಣಕ್ಕೆ ಬರುವೆವು..

    ಅಸತ್ಯಿಗಳೇ,
    ನಿಮ್ಮ ಬೊಗಳೆಯ ರಗಳೆ ೨೫ ಸಹಸ್ರ ಹಿಟ್ ಆಗಿದ್ದು ಕೇಳಿ..
    ಭಾರತವನ್ನು ಸೋಲಿಸಿದ ಬಾಂಗ್ಲದೇಶದವರಿಗಾದ ಸಂತೋಷದಷ್ಟು ಸಂತೋಷವಾಯ್ತು !

    ಅಭಿನಂದನೆಗಳು..

    ನಿಮ್ಮ ೧೦ಸಹಸ್ರದ-೨೫ಸಹಸ್ರದ ಎರಡೂ ಸಂಭ್ರಮದಲ್ಲಿ ಕಾಮನ್ ಆಗಿರುವುದೇನು ??

    ನಿಮಗೆ ವಿಷುವಿನ ಶುಭಾಶಯಗಳು !

    ಪ್ರತ್ಯುತ್ತರಅಳಿಸಿ
  2. adbuta saadane asatyigaLe....
    25,000 saavir odetagaLannu taDedukoMda nimage A deva innusTu saavira odetagalannu taDedukoLLava shakti nidali aMta nimma asanKyata abhi-maanigaLa paravAgi nAnu beDikoMdiruve...
    250kkU hechchu bogaLe ...hmmmm1 aMdre almost divasakke oMdu bogaLe..asatyigaLa asAmanya sAdane.
    kaLeda varushadalli marina beechniMda hiDidu iMduvina jote sarasavADi,muMbia yavaDu bhia anno bhetiyaagi koda neevu bogaLe bidadanna oMchuru tappisalillva aMta halavAru janakke saMshaua BaMdu neevu ek-buero varadigaara alla anno anumaanakke eDe maadikodta ide....

    koneyadaagi april 4 nanna janumadina koDa.

    ಪ್ರತ್ಯುತ್ತರಅಳಿಸಿ
  3. ಅಭಿನಂದನೆಗಳು! ಅಬ್ಬಾ ಒಂದೇ ವರ್ಷದಲ್ಲಿ ಇಷ್ಟೋಂದು ಒದೆತಗಳಾ??!! ಹೀಗೆ ಒದೆತಗಳು ಬೀಳುತ್ತಿರಲಿ..ಹೆಚ್ಚು ಹೆಚ್ಚು ಅಸತ್ಯಗಳು ಹೊರಬರಲಿ ಎಂದು ಆಶಿಸುತ್ತೇನೆ!

    ವಿಷುವಿಗೆ ಒಬ್ಬರೇ ಹೋಳಿಗೆ ಹೊಡೆಯುವುದಾ??!! ಹೊಟ್ಟೆನೋವು ಬರುತ್ತೆ ಅನ್ವೇಷಿಗಳೇ ;-)

    ಪ್ರತ್ಯುತ್ತರಅಳಿಸಿ
  4. ಬೊಗಳೆ ರಗಳೆ ಶಿಶುವು ಚಿರಾಯುವಾಗಲಿ ಹಾಗು ಇನ್ನೂ ಸಾವಿರಾರು ಒದೆತಗಳು ಶಿಶುವಿಗೆ ಲಭಿಸಲಿ ಎಂದು ಹಾರೈಸುತ್ತೇನೆ

    ಪ್ರತ್ಯುತ್ತರಅಳಿಸಿ
  5. ೨೫೦೦೦ ಹಿಟ್ಟೇ? ಅಬ್ಬಬ್ಬಾ! ಅದರಿಂದ ಎಷ್ಟು ದೊಡ್ಡ ದೋಸೆ ಮಾಡುತ್ತೀರಾ? ಅದನ್ನು ಯಾರಿಗೆ ತಿನ್ನಿಸುತ್ತೀರಾ?

    ಪ್ರತ್ಯುತ್ತರಅಳಿಸಿ
  6. ವಿಷು ಶುಭಾಶಯಗಳೊಂದಿಗೆ ವರ್ಷದ ಕೂಸಿಗೆ ಶುಭಹಾರೈಕೆಗಳು. ಅಷ್ಟು ಒದೆತ ತಿಂದೂ ಆರೋಗ್ಯವಾಗಿರುವ ಈ ಮಗುವಿಗೆ ಇನ್ನಷ್ಟು ಆಯುರಾರೋಗ್ಯ ಭಾಗ್ಯ ದೊರಕಲಿ

    ಪ್ರತ್ಯುತ್ತರಅಳಿಸಿ
  7. ವಿಷು ಕಣಿಯ visual ನೋಡಲು ಬಂದು ಶುಭ ಹಾರೈಸಿದವರೆಲ್ಲರಿಗೂ ಶುಭಾಶಯಗಳು

    ಶಿವ್ ಅವರೆ,

    ನಾವು ಬೊಗಳೆ ಬಿಟ್ಟದ್ದಿರಲಿ, ಬೊಗಳೆ ಓದಿ ಸಹಿಸಿಕೊಂಡು ಇನ್ನೂ ಚೆನ್ನಾಗಿಯೇ ಇದ್ದೀರಿ ಎಂದು ತಿಳಿದ ಬಳಿಕ ನಮ್ಮೆಲ್ಲಾ ಶ್ರಮ ನೀರಲ್ಲಿಟ್ಟ ಹೋಮದಂತಾಯಿತೇ ಎಂಬ ಶಂಕೆ ನಮ್ಮ ಮನದಲ್ಲಿ ಮೂಡಿದೆ.

    ನಿಮ್ಮ ಸಂತೋಷವೇ ನಮ್ಮ ಸಂತೋಷ. ಹಾಗಾಗಿ ಬಾಂಗ್ಲಾಕ್ಕೆ ಕ್ರಿಕೆಟ್ ಅಭ್ಯಾಸಕ್ಕೆಂದು ಟೀಮ್ ಇಂಡಿಯಾ ಪ್ರವಾಸ ಹೋಗಲಿದೆ. ಆಗ ಎಷ್ಟು ಚೆನ್ನಾಗಿ ಅಭ್ಯಾಸ ಮಾಡುತ್ತಾರೆ ಎಂದು ನೋಡೋಣ.

    10 ಸಹಸ್ರ-25 ಸಹಸ್ರದಲ್ಲಿ ಕಾಮನ್ ಆಗಿರುವುದು?....
    --
    --
    --
    ಅದೇ...
    --
    --
    ಬೊಗಳೆ!!!!

    ಪ್ರತ್ಯುತ್ತರಅಳಿಸಿ
  8. ಮಹಾನ್‌ತೋಷರೆ
    ನಿಮ್ಮ ಅನುಮಾನಗಳೇ ನಮಗೆ ಶ್ರೀರಕ್ಷೆ ಮತ್ತು ಅವಮಾನವೂ ಕೂಡ ಆಗಿದೆ.
    ಬೊಗಳೆ ಬ್ಯುರೋ ವರದಿಗಾರ ಸರ್ವಾಂತರ್ಯಾಮಿ ಅನ್ನೋ ಸತ್ಯವನ್ನ ಇಲ್ಲಿ ಬಟಾಬಯಲು ಮಾಡಲು ಯತ್ನಿಸುತ್ತಿರುವ ಮತ್ತು ಅದನ್ನು ಸಾಧಿಸಿ ತೋರಿಸಲು ಶ್ರಮಿಸುತ್ತಿರುವ ನಿಮ್ಮ ಪ್ರಯತ್ನ ಸಫಲವಾಗಲಿ.

    ಮೂರುಖ'ರ ದಿನದ ಮೂರು ದಿನದ ಬಳಿಕ ನೀವು ಹುಟ್ಟಿದ್ದು ಕೇಳಿ ನಮಗೂ ಸಂತಸವಾಗಿದೆ. ಒಟ್ಟಿಗೇ ವರ್ಷದ ಹರ್ಷ ಆಚರಿಸಿದ್ರೆ ಹೇಗೆ?

    ಪ್ರತ್ಯುತ್ತರಅಳಿಸಿ
  9. ಅನಾನಿಮಸ್ಗಿರಿಯವರೆ,
    ಜೋಳಿಗೆ ತುಂಬಾ ಹೋಳಿಗೆ ಇಟ್ಟುಕೊಂಡಿದ್ದರೂ ಅದನ್ನು (ಮಂಗಗಳು ಉಪವಾಸ ಮಾಡಿದ್ಹಾಗೆ) ಹೊಡೆಯಲು ಆಗಾಗ್ಗೆ ಮನಸ್ಸಾಗಿದ್ದರಿಂದ ನಾವೇ ತಿಂದುಬಿಟ್ಟದ್ದಂತೂ ನಿಜ. ಇದಕ್ಕೆ ನಮ್ಮ ಹೊಟ್ಟೆಯ ಗಾತ್ರದಲ್ಲಿ ಏಳಿಗೆ ಆಗಿದ್ದೇ ಸಾಕ್ಷಿ.
    ನಾವು ತಿಂದಿದ್ದರಿಂದ ನಿಮಗೆ ಹೊಟ್ಟೆ ನೋವು ಬರುತ್ತೆ ಎಂದಾದರೆ ಇದು ನಿಜಕ್ಕೂ ಮಾಳಿಗೆ ಮನೆಯಲ್ಲಿ ಕುಳಿತುಕೊಂಡು ಚಿಂತಾಕ್ರಾಂತವಾಗಿ ಯೋಚಿಸಬೇಕಾದ ಸಂಗತಿಯೇ!

    ನೀವು ಕೊಟ್ಟ ಹಿಟ್ಟುಗಳಿಂದಲೇ ಹೋಳಿಗೆ ಮಾಡಿದ್ದು! ;)

    ಪ್ರತ್ಯುತ್ತರಅಳಿಸಿ
  10. ಸುನಾಥ್ ಅವರೆ,
    ನಿಮ್ಮ ಬೆದರಿಕೆಯುಕ್ತ ಹಾರೈಕೆಗೆ ಧನ್ಯವಾದ. ;)

    ಪ್ರತ್ಯುತ್ತರಅಳಿಸಿ
  11. ಪಬ್ಬಿಗರೇ,
    ನೀವು ಕೊಟ್ಟ ಪ್ರೋತ್ಸಾಹಕ ಹಿಟ್ಟಿನಿಂದಾಗಿಯೇ ನಾವು ಬದುಕಿದ್ದು ಅನ್ನೋದನ್ನು ನಿಮಗೇ ತಿಳಿಯದಂತೆ ನಾವು ಪ್ರಕಟಪಡಿಸುತ್ತಾ ಇದ್ದೇವೆ.

    ಹಿಟ್ಟೆಲ್ಲಾ ಸೇರಿಸಿ ನಿಮ್ಮ ಪಬ್ಬಿನಲ್ಲಿ ಖಾರ ಖಾರ ಕುರುಕುರು ತಿಂಡಿ ತಯಾರಿಸಿ ವಿತರಣೆಗೆ ರವಾನಿಸುತ್ತೇವೆ. :)

    ಪ್ರತ್ಯುತ್ತರಅಳಿಸಿ
  12. ಸುಪ್ತ ದೀಪ್ತಿಯವರೆ,
    ಮಗುವಿಗೆ ಭಾಗ್ಯ ದೊರಕಲಿ ಎಂದು ಹಾರೈಸಿದ್ದೀರಿ. ಆದಷ್ಟು ಬೇಗ ದೊರಕಲಿ ಎಂದು ಮಗುವೂ ಕಾಯುತ್ತಾ ಇದೆ!

    ಪ್ರತ್ಯುತ್ತರಅಳಿಸಿ
  13. abbA iShTu ode bidrU nagu naguttideyA - ee magu! haagidre ee maguvige Enu aahaara koDuttiruviri. kailaasam avaru hELidaMte - aaMjanEyanige avaramma horO liks koDtidlaMte, adakkE avanige hArO shakti baMdittu. haageyA shakunige bakuLa hoovina rasa koTTidraMte. nimma maguvige eMtha aahaara koDtiddIri?

    muMdina varShada hottige lakShakkU migilAda odetagaLu biddu, blog kShEtradalli no. 1 sthAna gaLisuva shaktiyanneeyali eMdu aa sarvaSaktanali bEDuvenu.

    idannu oMTi kainalli naDesikoMDu baruttiruva, cEtanake innU heccina shakti doreyali :)

    gurudEva dayaa karo deena jane

    ಪ್ರತ್ಯುತ್ತರಅಳಿಸಿ
  14. ಈ ಬಲಭೀಮ ಮಗು ನನ್ನ ಹಾರೈಕೆಯಿಂದ ಇನ್ನೂ ಗಟ್ಟಿಯಾಗಿ, ಜಟ್ಟಿಯಾಗಲಿ!

    ಪ್ರತ್ಯುತ್ತರಅಳಿಸಿ
  15. ಶ್ರೀನಿವಾಸರೆ
    ಆಂಜನೇಯನಿಗೆ ಹಾರೋ ಲಿಕ್ಸ್ ಕೊಟ್ಟಿದ್ದರೆ ಈ ಮಗುವಿಗೆ ಬೊಗಳೋಲಿಕ್ಸ್ ಕೊಡ್ತಾ ಇದ್ದೇವೆ. ಹಾಗೆಯೇ ನಿಮ್ಮ ಕಾಮೆಂಟ್ ಬರ್ನ್ ವಿಟಾ ಕೂಡ ಸಿಗುತ್ತಾ ಇದೆ.
    ನಿಮ್ಮ ಹಾರೋಕೈಗೆ ಧನ್ಯವಾದ. :)

    ಪ್ರತ್ಯುತ್ತರಅಳಿಸಿ
  16. ಶ್ರೀತ್ರೀ ಅವರೆ,
    ನಿಮ್ಮ ತುಳಸಿವನದಿಂದ ಆಗಾಗ್ಗೆ ತುಳಸಿ ರಸವನ್ನೂ ಕುಡಿದು ಈ ಮಗು ಜಟ್ಟಿಯಾಗುತ್ತಿದೆ.
    ಧನ್ಯವಾದ.

    ಪ್ರತ್ಯುತ್ತರಅಳಿಸಿ
  17. 10 ಸಹಸ್ರ-25 ಸಹಸ್ರದಲ್ಲಿ ಕಾಮನ್ ಆಗಿರುವುದು?....

    ಎರಡು ಸಂದರ್ಭದಲ್ಲಿ ಮೊದಲ ಕಾಮೆಂಟಿಸಿದ್ದು ಪಾತರಗಿತ್ತಿ :)

    ಪ್ರತ್ಯುತ್ತರಅಳಿಸಿ
  18. ಶಿವ್
    ಓಹ್! ಈ ಸತ್ಯದ ಬಗ್ಗೆ ಮತ್ತು ಇದರ ಹಿಂದಿನ ರಹಸ್ಯದ ಬಗ್ಗೆ ಸಂಶೋಧನೆ ನಡೆಸಿದಾಗ, ನಿಮ್ಮ ಪಾತರಗಿತ್ತಿಯಿಂದ ಬಿದ್ದ ಒದೆಗಳ ಸಂಖ್ಯೆ ಅಧಿಕವಾಗಿದೆಯೆಂದು ತಿಳಿಯಿತು.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D