ಬೊಗಳೆ ರಗಳೆ

header ads

ಟೀಂ ಇಂಡಿಯಾ ಕೆಬಿಸಿ ಕ್ವಿಜ್ !

11ನೇ ವಿಶ್ವಕಪ್ ಕ್ರಿಕೆಟ್ ಕೂಟವು ವೆಸ್ಟ್ ಇಂಡೀಸಿನಲ್ಲಿ ಇನ್ನೂ ಮುಂದುವರಿಯುತ್ತಿದ್ದರೂ, ಟೀಂ ಇಂಡಿಯಾವು ಇದನ್ನು ವೇಸ್ಟ್ ಇಂಡೀಸ್‌ ಎಂದು ತಿಳಿದುಕೊಂಡು ಆಡಿದ ಪರಿಣಾಮವಾಗಿ, ಇಡೀ ಭಾರತದಲ್ಲಿ ವಿಶ್ವ ಕಪ್ ಕ್ರಿಕೆಟ್ ಮುಕ್ತಾಯವಾಗಿದೆ. Aftershocks ಆಗಾಗ್ಗೆ ಢಮಾರ್, ಢಬ್ ಎಂದು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಕಿರಿಕೆಟ್ಟಾಭಿಮಾನಿಗಳ ಮೆದುಳಿಗೊಂದು ಕಸರತ್ತು ಪ್ರಕಟಿಸುವಂತೆ ತೀವ್ರ ಒತ್ತಡ ಬಂದ ಹಿನ್ನೆಲೆಯಲ್ಲಿ ಕೆಬಿಸಿಯ ಶಾರ್ಕ್ ಖಾನ್ ಜತೆಗೆ ಒಪ್ಪಂದ ಮಾಡಿಕೊಂಡು ಈ ಪ್ರಶ್ನಾವಳಿ.

ಪ್ರಶ್ನೆ 1:
ಕ್ರಿಕೆಟ್ ನೋಡುತ್ತಿದ್ದ ಪ್ರೇಕ್ಷಕ ಟಾಯ್ಲೆಟ್‌ಗೆಂದು ಎದ್ದು ಹೋದಾಗ ಆತ ಏನನ್ನು ಮಿಸ್ ಮಾಡಿಕೊಳ್ಳುತ್ತಾನೆ?
a) ಸೆಹವಾಗ್ ಬ್ಯಾಟಿಂಗ್ ಮಾತ್ರ b) ಟೀಂ ಇಂಡಿಯಾದ ಪೂರ್ಣ (ಬ್ಯಾಟಿಂಗ್) ಇನ್ನಿಂಗ್ಸ್ c) ಎದುರಾಳಿಗಳ ವಿಜಯೋತ್ಸವ ಆಚರಣೆ d) ಟೀಂ ಇಂಡಿಯಾ ಜಾಹೀರಾತು ಮಾತ್ರ (ಸಾಧ್ಯವೇ ಇಲ್ಲ!)

ಪ್ರಶ್ನೆ 2: ಕ್ರಿಕೆಟ್ ನೋಡುತ್ತಿದ್ದ ಪ್ರೇಕ್ಷಕ ಟಾಯ್ಲೆಟ್‌ಗೆಂದು ಎದ್ದು ಹೋದಾಗ ಆತ ಏನನ್ನು ಮಿಸ್ ಮಾಡಿಕೊಳ್ಳುವುದಿಲ್ಲ?
a) ಅಗರ್ಕರ್ ಬೌಲಿಂಗ್ b) ಟೀಂ ಇಂಡಿಯಾ ಬೌಲರುಗಳ ವೈಡ್-ನೋಬಾಲ್‌ಗಳಿಂದ ತುಂಬಿದ ಒಂದು ಓವರ್ c) ಎದುರಾಳಿಗಳ ವಿಜಯೋತ್ಸವ ಆಚರಣೆ

ಪ್ರಶ್ನೆ 3:
ಭಾರತೀಯ ದಾಂಡಿಗರು ಅತ್ಯುತ್ತಮ ಪ್ರದರ್ಶನ ತೋರುವುದು ಯಾವಾಗ?
a) ಶಾಲಾ ತಂಡಗಳೆದುರು b) ಬರ್ಮುಡಾ ಅಥವಾ ನೆದರ್ಲೆಂಡ್ c) ಯಾವುದೂ ಅಲ್ಲ d) ಜಾಹೀರಾತಿನಲ್ಲಿ

ಪ್ರಶ್ನೆ 4:
ಅಗರ್ಕರ್ ಹೆಸರಿನ ಮುಂದೆ 100 ರನ್ ಯಾವಾಗ ಗೋಚರಿಸುತ್ತದೆ?
a) ಬ್ಯಾಟಿಂಗ್ ಮಾಡುತ್ತಿದ್ದಾಗ ತಂಡದ ಮೊತ್ತ b) ಟೀಂ ಇಂಡಿಯಾದ extra ರನ್‍ಗಳ ಸಂಖ್ಯೆ c) ಬೌಲಿಂಗ್ ಮಾಡುತ್ತಿದ್ದಾಗ ಆತನ ಬೌಲಿಂಗ್ figures d) ಭಾರತ ತಂಡ ಇನ್ನಿಂಗ್ಸ್ ಮುಗಿಸಿದಾಗ

ಪ್ರಶ್ನೆ 5:
ಭಾರತೀಯ ದಾಂಡಿಗರು ಅತ್ಯುತ್ತಮ Footwork ಯಾವಾಗ ಪ್ರದರ್ಶಿಸುತ್ತಾರೆ?
a) ಪೆವಿಲಿಯನ್‌ಗೆ ಮರಳುವ ಸಂದರ್ಭ b) ಬೌನ್ಸರ್‌ಗಳಿಂದ ತಪ್ಪಿಸಿಕೊಳ್ಳುವ ಸಂದರ್ಭ c) ಅಂಗಣಕ್ಕೆ ಇಳಿಯುವ ಸಂದರ್ಭ d) ಯಾವುದೂ ಅಲ್ಲ

ಪ್ರಶ್ನೆ 6:
ಭಾರತೀಯ ದಾಂಡಿಗರು 50 ಓವರು ಪೂರ್ಣ ಆಡುವಂತೆ ಮಾಡುವುದು ಹೇಗೆ?
a) ಬೌಲರುಗಳನ್ನು ಸೆಂಚುರಿ ಸಮೀಪ ರನ್ ಮಾಡಿಸುವಂತೆ ಒತ್ತಾಯಿಸುವುದು b) ಕನಿಷ್ಠ 10 ರನ್ ಮಾಡದಿದ್ದರೆ ಜಾಹೀರಾತಿಗೆ ಅವಕಾಶವಿಲ್ಲ ಎಂದು ಬೆದರಿಸುವುದು c) ಮೊದಲು 2 ಇನ್ನಿಂಗ್ಸ್ ಆಡುವಂತೆ ಸೂಚಿಸುವುದು, ಆ ಬಳಿಕ ನಿಧಾನವಾಗಿ ಇನ್ನಿಂಗ್ಸ್ ಸಂಖ್ಯೆ ಹೆಚ್ಚಿಸುವುದು d) 'ಬರ್ಮುಡಾ' ಎಂದು ನೆನಪಿಸುವುದು

ಪ್ರಶ್ನೆ 7: ಹ್ಯಾಟ್ರಿಕ್ ಎಂಬುದರ ಭಾರತೀಯ ರೂಪ (Indian version) ಏನು?
a) ಮೂರು ವರ್ಷದಲ್ಲಿ 3 ಕೋಚ್‌ಗಳು b) ಮೂರು ಎಸೆತದಲ್ಲಿ 3 ವಿಕೆಟ್ ಒಪ್ಪಿಸುವುದು c) ಮೂರು ವಿಕೆಟ್ ಕಳೆದುಕೊಂಡು 3 ರನ್ d) ಮೊದಲ 3 ಓವರಿನಲ್ಲಿ 3 ವಿಕೆಟ್

ಪ್ರಶ್ನೆ 8: ಆಶಾವಾದ (optimism)ನ ಪರಮಾವಧಿ ಯಾವುದು?
a) ಆರಂಭಿಕ ಆಟಗಾರರು ಮುಖಕ್ಕೆ ಸನ್‌ಸ್ಕ್ರೀನ್ ಹಚ್ಚಿ ಬ್ಯಾಟಿಂಗ್‌ಗೆ ಬರುವುದು b) ಬರ್ಮುಡಾ ವಿರುದ್ಧ ಬಾಂಗ್ಲಾ ಸೋಲಲಿ ಎಂದು ಪ್ರಾರ್ಥಿಸುವುದು c) ಬಾಂಗ್ಲಾದವರು ಮಾದಕದ್ರವ್ಯ ಸೇವನೆಯಲ್ಲಿ ಸಿಕ್ಕಿಬಿದ್ದು ಭಾರತಕ್ಕೆ ಸೂಪರ್ 8ಕ್ಕೆ ಅವಕಾಶ ದೊರೆಯಲಿ ಎಂದುಕೊಳ್ಳುವುದು d) ಟೀಂ ಇಂಡಿಯಾ ಸದಸ್ಯರು ಜಾಹೀರಾತಿಗೆ ಸಹಿ ಹಾಕುವುದಿಲ್ಲ ಎಂದುಕೊಳ್ಳುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

10 ಕಾಮೆಂಟ್‌ಗಳು

  1. ಉತ್ತರ ೧ - ಇವು ಯಾವುವೂ ಅಲ್ಲ - ತನ್ನ ಪ್ಯಾಂತಿನ ಜಿಪ್ಪನ್ನು ಹಾಕಿಕೊಳ್ಳದೆಯೇ ವಾಪಸ್ಸಾಗುವನು

    ಉತ್ತರ ೨ - ತನ್ನ ಸುವರ್ಣ ಕ್ಷಣ್ಗಳು (ಏಕಾಂತ ವಾಸ)

    ಉತ್ತರ ೩ - ತಂತಮ್ಮ ಊಟದ ತಟ್ಟೆಯ ಮುಂದೆ

    ಉತ್ತರ ೪ - ಅವರ ಹೆಸರು ಲಾರಾ ಎಂದಾದಾಗ

    ಉತ್ತರ ೫ - ಕ್ಯಾಟ್ ವಾಕ್ ಮತ್ತು ಎಲಿಫೆಂಟ್ ವಾಕಿನಲ್ಲಿ

    ಉತ್ತರ ೬ - ಅಡ್ವರ್ಟೈಸ್ ಮೆಂಟ್ ಕರಾರಿನ ಪತವನ್ನು ತೋರಿಸಿ ಸಹಿ ಮಾಡಲು ಬಿಡದೇ ಇದ್ದಾಗ

    ಉತ್ತರ ೭ - ೩ ತಿಂಗಳುಗಳಲ್ಲಿ ೩ ಕೋಟಿ ರೂಪಾಯಿ ಹಣ ಸಂಪಾದನೆ

    ಉತ್ತರ ೮ - ನಾನು ಇನ್ನು ಮುಂದೆ ಕ್ರಿಕೆಟ್ ನೋಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದಾಗ

    ಬಹುಮಾನದ ಹಣವನ್ನು ಚೆಕ್ ಮೂಲಕ ಸ್ವೀಕರಿಸುವುದಿಲ್ಲ. ನಗದು ಹಣವನ್ನು ಬೇಗನೆ ರವಾನಿಸಿ, ಇಲ್ಲದಿದ್ದಲ್ಲಿ ನಿಮ್ಮ ...

    ಪ್ರತ್ಯುತ್ತರಅಳಿಸಿ
  2. ಕ್ರಿಕೆಟ್ ಅಂದ್ರೆ ಬೋರ್!

    ಪ್ರತ್ಯುತ್ತರಅಳಿಸಿ
  3. ನಿಮ್ಮ ಕೆಬಿ ಸಿಸಿ ಕ್ವಿಝ್‍ನಲ್ಲಿ ಭಾಗವಹಿಸಿ ಗೆದ್ದು ಬಹುಮಾನಪಡೆಯುವುದಕ್ಕಿಂತ ಮೊದಲೇ ಮ್ಯಾಚ್ ಫಿಕ್ಸ್ ಮಾಡಿಕೊಂಡು ಮಸ್ತ್ ಕಮಾಯಿ ಮಾಡಿಕೊಳ್ಳಬಹುದು ಎಂದು ಅರಿತ ನೀಲಿ ಪಟ್ಟೆ ಚಡ್ಡಿಯ ಹುಡುಗರು, ಬುಕ್ಕಿಗಳನ್ನು ಹೆಕ್ಕುತ್ತಿದ್ದುದು ವದರಿಯಾಗಿದೆ. ಪ್ರಸ್ತುತ ನೀಲಿ ಚಲ್ಲಣ ವೀರರು ನಿಮ್ಮ ಕಾರ್ಯಕ್ರಮದ ಮಧ್ಯೆ ಒಂದಷ್ಟು ಅಡ್ಡ ವರ್ಟ ಐಸಮೆಂಟುಗಳನ್ನು ತುರಿಕಿಸಿ ಕಮಾಯಿ ಮಾಡಿಕೊಳ್ಳಲು ಹೊಂಚು ಹಾಕುತ್ತಿದ್ದು ತಾವು ಎಚ್ಚರವಾಗಿರಬೇಕೆಂದು ಇಂಟಿಲ್ಲಿ ಜೆನ್ಸಿ ಬ್ಯೂರೋ ವದರಿ ಬೌಂಡರಿಗೆ ಚಿಮ್ಮುತ್ತಿದೆ.

    ಪ್ರತ್ಯುತ್ತರಅಳಿಸಿ
  4. ಸಕತ್ ಕಷ್ಟದ ಪ್ರಶ್ನೆಗಳು ಅಸತ್ಯಿಗಳೇ..

    ನಾನು ಪೋನ್-ಎ-ಕೋಚ್ ಸೌಲಭ್ಯ ಉಪಯೋಗಿಸಬೇಕೆಂದಿದ್ದೇನೆ.

    ಚಪ್ಪಲ್‍ರ ಪೋನ್ ರಿಂಗ್ ಆಗ್ತಾ ಇದೆ..ನೋಡೋಣ ಎನು ಹೇಳ್ತಾರೋ ಅವರು..

    ಅಸತ್ಯಿಗಳು:'ಚಪ್ಪಲ್ರೇ ನಿಮ್ಮ ಸಹಾಯ ಕೇಳಿ ನಮ್ಮ ಕೆಬಿಸಿಯಿಂದ ಕರೆ ಒಂದು ಬಂದಿದೆ.'
    ಚಪ್ಪಲ್: 'ನನಗೂ ಟೀಂ ಇಂಡೀಯಾ ಸೋಲಿಗೂ ಯಾವುದೇ ಸಂಬಂಧವಿಲ್ಲ.ನನಗೂ ಕ್ರಿಕೆಟ್‍ಗೂ ಎನೂ ಸಂಬಂಧವೇ ಇಲ್ಲ'

    ಪೋನ್ ಕಟ್..

    ಪ್ರತ್ಯುತ್ತರಅಳಿಸಿ
  5. ಕೋಚ್‌ಗೆ ಕೋಚ್ ಕೊಡುವ ಯಾವುದೇ ಪ್ರಯತ್ನವನ್ನು ನಿಮ್ಮ ಬ್ಯೂರೋದ ಪ್ರತಿನಿಧಿಗಳು ಮಾಡದೇ ವೆಸ್ಟ್ ಇಂಡೀಸಿನ ಬೀಚುಗಳಲ್ಲಿ ಮಿಂದು, ಮಲಗಿ, ಪುಳಕವಾಗಿ ಖಾಲಿ ಕೈಯಲ್ಲಿ ಬಂದಿದ್ದನ್ನು ಪ್ರತಿಭಟಿಸಿ ನಿಮ್ಮ ಯಾವ ಪ್ರಶ್ನೆಗಳಿಗೂ ಉತ್ತರ ಕೊಡದಿರುವ ನಿರ್ಧಾರ ನಮ್ಮದು!

    ಪ್ರತ್ಯುತ್ತರಅಳಿಸಿ
  6. ಶ್ರೀನಿವಾಸರೆ,

    ಬೊಗಳೆ ರಗಳೆ ಬ್ಯುರೋ ನೀಡಿದ optionಗಳನ್ನೇ ತಿರುಚಿ ತಿರುಚಿ ಕಸದ ಬುಟ್ಟಿಗೆ ಎಸೆದು ನಿಮಗೆ ಮನಬಂದಂತ ಉತ್ತರಿಸಿದ್ದರಿಂದ ಬ್ಯುರೋ ತತ್ತರಿಸಿದೆ.

    ಅದಕ್ಕಾಗಿ ನಗದು ರವಾನಿಸಿದರೂ ನಿಮ್ಮ ಮನೆಯ ಗೇಟ್ ಕೀಪರ್ ನಗದೇ ಇದ್ದ ಕಾರಣ ಅದು ನಮಗೆ ರಿಬೌಂಡ್ ಆಗಿದೆ.

    ಪ್ರತ್ಯುತ್ತರಅಳಿಸಿ
  7. ಅನಾನಿಮಸ್ಗಿರಿಯವರೆ,
    ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಕೂಡ ಈಗ ನಿಮ್ಮಂತೆಯೇ BCCI ಅಂದರೆ Bored of cricket control in India ಅಂತಾ ಇದ್ದಾರೆ.

    ಪ್ರತ್ಯುತ್ತರಅಳಿಸಿ
  8. ಸುಪ್ರೀತರೆ,
    ನಾವು ಕೂಡ ಕ್ರಿಕೆಟಿಗರ ಅಡ್ಡ ವರ್ಟಿ ರೈಸು ಮೆಂಟು ಮೇಲೆ ಕಣ್ಣಿಟ್ಟಿದ್ದು, ಯಾವಾಗ ಸಿಗುತ್ತದೋ ಎಂದು ಕಾಯುತ್ತಿದ್ದೇವೆ. ಶ್ರೀನಿವಾಸರ ಉತ್ತರದಂತೆ ಮೂರು ವರ್ಷದಲ್ಲಿ ಮೂರು ಕೋಟಿ ತಂದರೆ ನಮಗೆ ಕ್ರಿಕೆಟ್ಟೇ ಬೇಡ!

    ಪ್ರತ್ಯುತ್ತರಅಳಿಸಿ
  9. ಶಿವ್ ಅವರೆ,
    ಚಪ್ಪಲ್ ಅವರು ಕ್ರಿಕೆಟ್ ಅಂದರೆ ಏನು ಅಂತ ಕೇಳಿ ನಿಮ್ಮ ಇದ್ದ ಮರ್ಯಾದೆ ತೆಗೆಯದೇ ಇದ್ದದ್ದು ನಿಮ್ಮ ಪುಣ್ಯ ಅಂತ ನಮ್ಮ ಒದರಿಗಾರರು ಒದರಿದ್ದಾರೆ!

    ಪ್ರತ್ಯುತ್ತರಅಳಿಸಿ
  10. ಸತೀಶ್ ಅವರೆ,
    ಖಾಲಿ ಕೈಯಲ್ಲಿ ಬಂದ ಕ್ರಿಕೆಟಿಗರ ವಿರುದ್ಧ ಕತ್ತೆಗಳನ್ನು ಉಪಯೋಗಿಸಿ ಚೆನ್ನೈಯಲ್ಲಿ ಪಿಎಂಕೆ ಮಂದಿ ಮಾಡಿರುವ ಪ್ರತಿಭಟನೆಯಿಂದ ಗಾರ್ದಭ ಸಮುದಾಯವಿಡೀ ತಮ್ಮ ಹಿಂಗಾಲನ್ನು ತೀವ್ರವಾಗಿ ಅತ್ತಿತ್ತ ಅಲ್ಲಾಡಿಸುತ್ತಿದ್ದು, ಕ್ರಿಕೆಟಿಗರಿಗೆ ತಮ್ಮನ್ನು ಹೋಲಿಸುವುದರ ವಿರುದ್ಧ ಲತ್ತೆ ಕೊಡಲು ಸಿದ್ಧತೆ ನಡೆಸುತ್ತಿದೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D