ಬೊಗಳೆ ರಗಳೆ

header ads

ಕಾಂ-guessನ Midnight Masalaಕ್ಕೆ ತಡೆ

(ಬೊಗಳೂರು Poly-Tricks ಬ್ಯುರೋದಿಂದ)
ಬೊಗಳೂರು, ಫೆ.19- ತತ್ತರ ಪ್ರದೇಶದಲ್ಲಿ ಕಾನೂನು ಮತ್ತು ಅವ್ಯವಸ್ಥೆಗಳು ಸುಸ್ಥಿತಿಯಲ್ಲಿರುವುದರಿಂದ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಉತ್ಸುಕತೆಯಲ್ಲಿರುವ calm-guessಗೆ ಎಡಪಕ್ಷಗಳು ಚೇಳಿನಿಂದ ಕುಟುಕತೊಡಗಿವೆ.

ಇದಕ್ಕೆ ಕಾರಣವೆಂದರೆ ಕೇಂದ್ರದ Unprecedented Price Agenda ಇರುವ ಸರಕಾರದ ನೀತಿಗಳಿಂದಾಗಿ ಈಗಾಗಲೇ ತತ್ತರಗೊಂಡಿರುವ ನಾಗರಿಕರು ಮುಂದಿನ ಚುನಾವಣೆಗಳಲ್ಲಿ ತಮ್ಮ ಮತ್ತು ಕಾಂಗ್ರೆಸ್‌ನ duet ಸಂಗೀತಕ್ಕೆ ತಡೆಯೊಡ್ಡುವರು ಎಂಬ ಭೀತಿ ಕಾರಣವಾಗಿದೆ ಎಂದು Common Price Maximum ಪೋಲೀಸ್ ಬ್ಯುರೋದ ಅಪ್ರಧಾನ ಕಾರ್ಯದರ್ಶಿಗಳು ಬೊಗಳೆ ರಗಳೆಗೆ ಗುಟ್ಟಾಗಿ ಫ್ಯಾಕ್ಸ್ ಮಾಡಿದ್ದಾರೆ.

ಇದಲ್ಲದೆ ತಮ್ಮ ಡ್ಯುಯೆಟ್ ಈವೆಂಟ್‌ಗೆ ಮಿಡ್‌ನೈಟ್ ಮಸಾಲಾ ಹಚ್ಚಬಾರದು ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಬಿಹಾರದಲ್ಲಿ ಮಿಡ್‌ನೈಟ್ ಮಸಾಲಾ ಏರ್ಪಡಿಸಿದ ಕಾರಣದಿಂದಾಗಿ ಮತ್ತು ಜಾರ್ಖಂಡ್ ಹಾಗೂ ಗೋವಾಗಳಲ್ಲೂ ಪ್ರತಿಪಕ್ಷಗಳು ಇನ್ನೇನು ಅಧಿಕಾರದ ಸಿಂಹಾಸನವನ್ನೇರುತ್ತಿವೆ ಎಂದಾದಾಗ ಕಾಲಡಿಯ ರತ್ನಗಂಬಳಿಯನ್ನು ಎಳೆದು ಸಂವಿಧಾನದ 356ನೇ ವಿಧಿಯನ್ನು ಸಮರ್ಪಕವಾಗಿ ಪ್ರಯೋಗಿಸಿದ ಕಾರಣದಿಂದಾಗಿ ಇಡೀ ವಿಶ್ವವೇ Calm-guess ನ ಕ್ರಮವನ್ನು ಕ್ಯಾಕರಿಸಿ ಕೊಂಡಾಡಿದ್ದವು.

ಆದರೆ ಈ ಬಾರಿ ಈ ರೀತಿ ಮಾಡಿದರೆ ನಿಮ್ಮ ಪಕ್ಷಾಧ್ಯಕ್ಷರು ಹೋದೆಡೆಯಲ್ಲೆಲ್ಲಾ ಕೈಬೀಸುತ್ತಿರುವಂತೆ ಮುಂಬರುವ ಚುನಾವಣೆಗಳಲ್ಲಿ ನಮಗೂ ಮತದಾರರು ಕೈಬೀಸಿ ಕೃತಜ್ಞತೆ ವ್ಯಕ್ತಪಡಿಸಲಿದ್ದಾರೆ ಎಂದು Common Price Maximum ಪಕ್ಷವು ಆತ್ಮೀಯವಾಗಿ ಜ್ಞಾಪಿಸಿದೆ.

ಆದರೆ ತಮಗೆ ಬೇಡವಾಗಿರುವುದನ್ನು ನಿವಾರಿಸಲು ಸಂವಿಧಾನದ 356ನೇ ವಿಧಿಯೇ ಒಂದು ಮುಲಾಮು ಆಗಿದ್ದು, ಈಗ ತತ್ತರ ಪ್ರದೇಶದ ಮುಲಾಮಿಗೆ ಈ ಮುಲಾಮೇ ಮದ್ದು ಅಲ್ಲವೇ ಎಂದು ಕಾಂ-guess ಏನೂ ಅರಿಯದ ಮುಗ್ಧನಂತೆ ಇನ್ನೂ ಪ್ರಶ್ನಿಸುತ್ತಿದೆ. ಇದು ಏಕೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಅಪ್ರಧಾನ ಕಾರ್ಯದರ್ಶಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ೩೫೬ ಅನ್ನೋದು ಕೆಟ್ಟದಾಗಿ ಬ್ಯಾಟ್ ಮಾಡುತ್ತಿರೋ ಬ್ಯಾಟ್ಸ್ ಮನ್‍ಗೆ ಬಾಲ್ ಹಾಕೋದಿಕ್ಕಿಂತ ಮುಂಚೆನೇ ಅಂಪೈರ್‍ ಔಟ್ ಕೊಟ್ಟಾಗೆ !

    ಪ್ರತ್ಯುತ್ತರಅಳಿಸಿ
  2. ಈ ಮಿಡ್‌ನೈಟ್ ಮಸಲಾ ಎಂದರೇನು? ನಮ್ಮೂರಲ್ಲಿ ಡಿಮ್ ಲೈಟ್ ಸಲಾಮು ಎಂದು ರಾತ್ರಿಯಾಟ ಆಡ್ತಾರೆ (ಬಯಲಾಟ ಅಲ್ಲ - ಗುದ್ದಾಟ). ಅದಕ್ಕೂ ಇದಕ್ಕೂ ಏನಾದ್ರೂ ಸಾಮ್ಯತೆ ಇದೆಯಾ?

    ನಾವು ಹೇಳುತ್ತಿರುವ ಆಟವನ್ನೂ ಜಾರಕಾರಣೀಗಳೇ ಆಡೋದು.

    ಪ್ರತ್ಯುತ್ತರಅಳಿಸಿ
  3. ಉತ್ತರ ಪ್ರದೇಶ, ದಿಲ್ಲಿಯ ಮಾತು ಒತ್ತಟ್ಟಿಗಿರಲಿ. ಈ ನಮ್ಮ ಕರ್‌-ನಾಟಕದ ಕಾಂಗ್-ಐ(ಐಲ್!) ಗಳಿಗೆ ಬಂದಿರುವ ರೋಗವೇನು ಎಂದು ಖ್ಯಾತ ವಾರ ಪತ್ರಿಕೆಯ ಸಾರಥಿಯೊಬ್ಬರು ಎಷ್ಟು ಗಡ್ಡ `ಗೆರೆ'ದರೂ ತಿಳಿಯಲಿಲ್ಲವಂತೆ.

    ಗಂಟೆಯೊಂದಕ್ಕೆ ಒಂದು ಲಕ್ಷ, ಎರೆಡು ಲಕ್ಷ ಖರ್ಚು ಮಾಡುವಂಥಾದ್ದೇನಿರುತ್ತೆ ಈ ವಿಧಾನ ಸಭೆ, ಪರಿಷತ್ತುಗಳಲ್ಲಿ ಎಂಬುದನ್ನು ಸಕಲ ಪಾಮರರಿಗೆ ತಿಳಿಸುವೆನೆಂದು ಟೊಂಕ ಕಟ್ಟಿ ನಿಂತ ಮಂಡ್ಯದ ಗಂಡೊಬ್ಬರನ್ನು ಕಾವೇರಿಯ ಪ್ರವಾಹಕ್ಕೆ ಯಾರೋ ಹಿಂದಿನಿಂದ ನೂಕಿ `ಹುತಾತ್ಮ' ಮಾಡಿಬಿಟ್ಟಿದ್ದಾರಲ್ಲಾ!

    ಪ್ರತ್ಯುತ್ತರಅಳಿಸಿ
  4. ಆ ಗಂಡು ಬಹಿರಂಗವಾಗಿ ಮೇಡಮ್ಮರಿಗೆ ಬರೆದ ಪತ್ರದಲ್ಲಿ ನಮ್ಮ ರಾಜೀನಾಮೆಯಿಂದ ಪಕ್ಷದ ಮೂಲ ಬೆಳೆಯುತ್ತದೆ, ವರ್ಚಸ್ಸು ವೃದ್ಧಿಸುತ್ತದೆ ಎಂದೆಲ್ಲಾ ತಿಳಿಸಿರುವುದು ನಮಗೆ ನಾಚಿಕೆಗೇಡು ಅಂತ ಅನ್ನಿಸಿಲ್ಲ. :)

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D