(ಬೊಗಳೂರು ಬಾರ್ ಬಾರ್ ಬ್ಯುರೋದಿಂದ)
ಬೊಗಳೂರು, ಜ.27- ಇತ್ತೀಚೆಗೆ ನ್ಯಾಯವಾದಿಗಳೇ ಕಾನೂನನ್ನು ಕೈಗೆತ್ತಿಕೊಳ್ಳುತ್ತಿರುವ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿರುವಂತೆಯೇ, ಅವರು ಕಾನೂನು ರಕ್ಷಕರಾಗಿಯೂ ಕಾರ್ಯ ನಿರ್ವಹಿಸುತ್ತಿರುವ ಪ್ರಕರಣವೂ ವರದಿಯಾಗುತ್ತಿದೆ.ಬಾರ್ ಡ್ಯಾನ್ಸರ್‌ಗಳಂತೆ ನರ್ತನ ಮಾಡುತ್ತಾ ತಮ್ಮದೇ ಆದ ಅಭಿಮಾನಿ ವಲಯವನ್ನು ಸೃಷ್ಟಿಸಿಕೊಂಡಿರುವ ಬಿಚ್ಚೋಲೆ ಮಲ್ಲಮ್ಮನ ವಿರುದ್ಧ ವೇಶ್ಯಾವಾಟಿಕೆಯ ಕೇಸು (ಬಿಯರ್ ಕೇಸ್ ಅಲ್ಲ ಎಂಬುದುಖಚಿತವಾಗಿದೆ) ಹಾಕಿರುವ ಬಾರ್ ಅಸೋಸಿಯೇಶನ್ ಅಧ್ಯಕ್ಷರೊಬ್ಬರು, ತಾವು ಕಾನೂನು ರಕ್ಷಣೆಯ ಸಾಮಾಜಿಕ ಕಳಕಳಿ ಹೊಂದಿರುವುದಾಗಿ ಸಾಬೀತುಪಡಿಸಿದ್ದಾರೆ.
ಆದರೆ ಅವರು ನ್ಯಾಯಾಲಯದಲ್ಲಿ ಹಾಜರುಪಡಿಸಿದ ಭಾವಚಿತ್ರಗಳು, ಆಕೆಯ ಮೇಲೆ ಮತ್ತೊಂದು ಕೇಸು ಹಾಕಲು ವೇದಿಕೆ ಹಾಕಿಕೊಟ್ಟಿದೆ. ಆಕೆಯ ವಿರುದ್ಧ ಪುರುಷರ ಮೇಲೆ ಅತ್ಯಾಚಾರ ಯತ್ನ ಕೇಸು ದಾಖಲಿಸುವುದಾಗಿ ಪಕ್ಕದಲ್ಲೇ ಇದ್ದ ಬಾರ್‌ನ ಮುಖ್ಯಸ್ಥರೊಬ್ಬರು ಸಾರಿದ್ದಾರೆ.
ಈ ಮಧ್ಯೆ ಮ್ಯಾಕ್ಸಿಮ್ ಪತ್ರಿಕೆಯ ಮುಖಪುಟದಲ್ಲಿ ಮ್ಯಾಕ್ಸಿಮಮ್ ಆಗಿ ತೋರಿಸಲು ಪ್ರಯತ್ನಿಸಿದಳಾದರೂ, ಸಂಪಾದಕರು ಕತ್ತರಿ ಪ್ರಯೋಗ ಮಾಡಿರುವ ಮೂಲಕ ಅದು ಕೇವಲ ಮಿನಿಮಮ್ ಆಗಿತ್ತು ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಸ್ಟಾರ್‌ಗಳ ವಿರುದ್ಧ ಕೇಸು ದಾಖಲಿಸಿದಲ್ಲಿ ತಾವೂ ಅಂತಾರಾಷ್ಟ್ರೀಯ ಸ್ಟಾರ್ ಆಗಬಹುದು ಎಂಬ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಬೊಗಳೆ ರಗಳೆ ಬ್ಯುರೋ ಕೂಡ ಯಾರ ಮೇಲೆ ಯಾವ ಕೇಸು ಹಾಕಬಹುದು ಎಂದು ಹೊಂಚು ಹಾಕುತ್ತಿರುವುದಾಗಿ ವರದಿಯಾಗಿದೆ.
7 ಕಾಮೆಂಟ್‌ಗಳು
ಅಲ್ರೀ, ನೀವ್ಯಾಕ್ರೀ ಮಲ್ಲಿಕಾಳ ಇಲ್ಲದಿರೋ ಬಟ್ಟೆಗೆ ಕೈಹಾಕ್ತಿದ್ದೀರಾ?
ಪ್ರತ್ಯುತ್ತರಅಳಿಸಿನಿನ್ನೊಳು ಮಾಯೆಯೋ ಮಾಯೆಯೊಳು ನೀನೋ ??
ಪ್ರತ್ಯುತ್ತರಅಳಿಸಿನಮ್ಮ ದೇಶದಲ್ಲಿ ಒಬ್ಬರೂ ತಾವು ಇಷ್ಟಬಂದಹಾಗೆ ಬಟ್ಟೆ(?)ಉಟ್ಟುಕೊಂಡು, ತಮ್ಮ 'ಕಲೆ' ಪ್ರದರ್ಶಿಸಲು ಹಕ್ಕಿಲ್ಲವೇ?
ಅಭಿವ್ಯಕ್ತಿ ಸ್ಚಾತಂತ್ರ್ಯ ಅನ್ನೋದು ಇಲ್ಲವೇ..
ಮಲ್ಲಿಕಾಳ ಬಟ್ಟೆಗಳಿಗೆ ನ್ಯಾಯ ದೊರಕಲಿ
ನಿಮ್ಮ ಬ್ಲಾಗ್ ಒಳ್ಳೆಯ ಪ್ರಯತ್ನ.. ಹೀಗೇ ಮು೦ದುವರೀರಿ, ನಾ ಆಗಾಗ ಇಲ್ಲಿ ಬರ್ತಿರ್ತೀನಿ..!!
ಪ್ರತ್ಯುತ್ತರಅಳಿಸಿಶ್ರೀನಿವಾಸರೆ,
ಪ್ರತ್ಯುತ್ತರಅಳಿಸಿಹಿಂದಿನ ಕಾಲದಲ್ಲಿ ಓಲೆಗರಿ, ತಾಳೆಗರಿಗಳನ್ನಾದರೂ ಮೈ ಮುಚ್ಚಿಕೊಳ್ಳಲು ಬಳಸಿಕೊಳ್ಳುತ್ತಿದ್ದರು ಎಂದು ಊಹಿಸಿಕೊಂಡರೆ ಬಿಚ್ಚೋಲೆ ಎಂಬ ಪದದ ಅರ್ಥ ಸಿಗಬಹುದು ನೋಡಿ.
ನೀವು ಎಚ್ಚರಿಸಿದಂತೆ, ಹೋಳು ಹೆಚ್ಚಾದರೆ ಉಪ್ಪು ಮತ್ತು ಮೆಣಸಿನ ಪುಡಿ ಹಾಕಿದರೆ ಉಪ್ಪಿನಕಾಯಿಯಾಗಿ ಚಪ್ಪರಿಸಬಹುದು. ಕೂಡಲೇ ಕಳುಹಿಸಿಕೊಡುವುದು.
ಪಬ್ಬಿಗರೇ,
ಪ್ರತ್ಯುತ್ತರಅಳಿಸಿಇರುವುದೆಲ್ಲವ ಬಿಟ್ಟು
ಇರದುದರೆಡೆಗೆ
ತುಡಿವುದೇ ಜೀವನ
ಅಂತ ಕವಿಗಳು ಹೇಳಿದ್ದಾರೆ. ಹಾಗಾಗಿ ಈ ಕ್ರಮ ಕೈಗೊಳ್ಳಬೇಕಾಯಿತು!
ಶಿವ್ ಅವರೆ,
ಪ್ರತ್ಯುತ್ತರಅಳಿಸಿನಿಮ್ಮ ಕಾಳಜ, ಕಳಕಳಿ ವೇದನೆ, ರೋದನೆಗಳು ನಮಗೆ ಅರ್ಥವಾಗುತ್ತದೆ.
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಮ್ಮ ಬೆಂಬಲವೂ ಇದೆ. ಎಲ್ಲವನ್ನೂ ಅಭಿವ್ಯಕ್ತಿಸಲಿ!! ಅಭಿವ್ಯಕ್ತಿಸುವವರಿಗೆ ಜೈಲಾಗಲಿ !!
ಬೊಗಳೆಯ ರಗಳೆ ಕೇಳಲು ಬಂದ ಶ್ರೀ ಅವರಿಗೆ ಸ್ವಾಗತ.
ಪ್ರತ್ಯುತ್ತರಅಳಿಸಿಒಳ್ಳೆಯ ಪ್ರಯತ್ನ ಅಂತ ನೀವು ನೀಡಿದ ಎಚ್ಚರಿಕೆಯನ್ನು ಸದ್ಯಕ್ಕೆ ನಮ್ಮ ಬ್ಯುರೋ ಮನ್ನಿಸಿದೆ. ಇನ್ನು ಮುಂದೆ ಹಾಗಾಗದಂತೆ ಎಚ್ಚರ ವಹಿಸುತ್ತೇವೆ.
ಏನಾದ್ರೂ ಹೇಳ್ರಪಾ :-D