(ಬೊಗಳೂರು some-ಶೋಧನೆ ಬ್ಯುರೋದಿಂದ)
ಬೊಗಳೂರು, ಜ.25- ಉಪಗ್ರಹಗಳನ್ನು ಕೊಲ್ಲುವ ಆಯುಧವೊಂದನ್ನು ಪತ್ತೆ ಹಚ್ಚಿರುವುದಾಗಿ ಚೀನಾ ಕೊನೆಗೂ ಒಪ್ಪಿಕೊಂಡಿರುವುದು ಇಡೀ ವಿಶ್ವದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಕೆಲವರು ಹರ್ಷಚಿತ್ತರಾಗಿದ್ದರೆ, ಮತ್ತೆ ಕೆಲವರು ರೋಷಾಕುಲರಾಗಿದ್ದಾರೆ.ಚೀನಾದ ಈ ಆಯುಧವು ಹೊಸದಾದ ಆಯುಧ ಸಂಶೋಧನೆಗೆ ಹೇತುವಾಗಿದೆ. ಅದುವೇ ಆಂಟಿ-ಉಪದ್ರವ ಆಯುಧ.
ಹತಾಶ ಮತ್ತು ಪೀಡಿತ ಸಂಶೋಧಕರು ಕಂಡುಹುಡುಕಿರುವ ಆಂಟಿ-ಉಪದ್ರವ (ನಿವಾರಣೆ) ಆಯುಧ (ಆಉಆ)ಕ್ಕೆ ಈಗಾಗಲೇ ಭಾರತದಲ್ಲಿ ಭರ್ಜರಿ ಮಾರುಕಟ್ಟೆ ಸೃಷ್ಟಿಯಾಗಿದ್ದು, ಮೇಡ್ ಇನ್ ಚೀನಾ ಲೇಬಲ್ ಇರುವ ಈ ಉಪಕರಣ ಯಾವಾಗ ಭಾರತಕ್ಕೆ ಕಾಲಿಡುತ್ತದೆ ಎಂದು ಕುಕ್ಕುರುಗಾಲಿನಲ್ಲಿ ಕೂತು ಕಾಯುತ್ತಿದ್ದಾರೆ.
ಪಕ್ಕದ ಮನೆಯಲ್ಲಿದ್ದುಕೊಂಡು ನಮ್ಮ ಮನೆ ವಿಷಯಗಳಿಗೆ ಮೂಗು ತೂರಿಸುತ್ತಾ ಧರ್ಮಕ್ಷೇತ್ರವಾಗಿರುವ ಮನೆಯನ್ನು ಯುದ್ಧಕ್ಷೇತ್ರವಾಗಿಸುವ ಮಾದರಿಯ ಉಪದ್ರವಗಳನ್ನು ನೀಡುತ್ತಿರುವವರನ್ನು ಹದ್ದುಬಸ್ತಿನಲ್ಲಿರಿಸಲು ಈ ಉಪಕರಣ ಸೂಕ್ತ ಪ್ರಯೋಜನಕ್ಕೆ ಬರಲಿದೆ ಎಂದು ಬೊಗಳೆ ರಗಳೆ ಬ್ಯುರೋ ಜಾಹೀರಾತು ಪ್ರಕಟಿಸಲು ನಿರ್ಧಸಿರಿಸಿರುವುದು ಚೀನಾಕ್ಕೆ ಹರ್ಷ ತಂದಿದೆ ಎಂದು ಚೀನಾದ ಅಧಿಕಾರಿ ಚಿನ್ ಮಿನ್ ಕುನ್ ಕೈಂಯ್ಯ (ಅಕ್ಷರಗಳನ್ನು ಬರೆಯುವುದು ಇಲ್ಲಿ ಸರಿಯಾಗುತ್ತಿಲ್ಲವಾದುದರಿಂದ ಮೈಕ್ರೋಸಾಫ್ಟ್‌ನ ಬಿಲ್ ಗೇಟ್ಸ್‌ಗೆ ಕೈಯಲ್ಲಿ ಪತ್ರ ಬರೆದು ರವಾನಿಸಲಾಗಿದೆ) ಎಂಬವರು ಹೇಳಿದ್ದಾರೆ.
ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಆಧುನೀಕರಣದ ಪ್ರಭಾವಕ್ಕೆ ಸಿಲುಕಿಕೊಂಡಿರುವ ಆಂಟಿ-ಉಪದ್ರವಗಳು ಜಾಸ್ತಿಯಾಗುತ್ತಿರುವುದರಿಂದ ಮನೆ ಮನೆಗಳಲ್ಲಿ "ಇಲ್ಲಿ ಆಂಟಿ-ಉಪದ್ರವ ಆಯುಧವಿದೆ, ಎಚ್ಚರಿಕೆ" ಎಂಬ ಬೋರ್ಡ್‌ಗಳನ್ನು ತೂಗುಹಾಕಲಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಿರುವ ಬ್ಯುರೋ ಒದರಿಗಾರರು, ಆ ಬೋರ್ಡನ್ನು ಕದಿಯುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ.
ಇದರ ಹಿಂದೆ ಉಪದ್ರವ ನೀಡುವವರ ಕೈವಾಡವಿದೆಯೇ ಅಥವಾ ಉಪದ್ರವ ಸಹಿಸಲಾರದೆ ಹೇಗಾದರೂ ಮಾಡಿ ತಮ್ಮ ಮನೆಗೂ ಈ ಬೋರ್ಡ್ ತಗುಲಿಸಬೇಕು ಎಂದುಕೊಂಡಿರುವ ಅವಿವಾಹಿತರ ಕೈವಾಡವಿದೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ.
10 ಕಾಮೆಂಟ್‌ಗಳು
ಅಸತ್ಯಿಗಳೇ,
ಪ್ರತ್ಯುತ್ತರಅಳಿಸಿಇನ್ಮೇಲೆ ಉಪಗ್ರಹಗಳಿಗೆ 'ಗ್ರಹಗತಿ' ಕಾದಿದೆ ಅನಿಸುತ್ತೆ!
ಪಾಪ ಯಾರ ತಂಟೆ ಇಲ್ಲದೆ ಅಲ್ಲಿ ಕಕ್ಷೆಯಲ್ಲಿ ಹೋಗಿ ಕೂತು ಆರಾಮವಾಗಿದ್ದವು.
ಇನ್ನು ಆಂಟಿ-ಉಪದ್ರವದ ಲಕ್ಷಣಗಳೇನು?
ಅನ್ವೇಷಿಗಳೆ,
ಪ್ರತ್ಯುತ್ತರಅಳಿಸಿನಮ್ಮಂಥ ಬ್ಯಾಚುಲರಗಳಿಗೆ ಈ ಅಂಟಿ-ಉಪದ್ರವ ಅತೀ ಅವಶ್ಯವಾಗಿ ಬೇಕು.
ನಾವೆಲ್ಲ ಅವಿವಾಹಿತರು ಈಗ "ಯಂಟಿ"-ಅಂಟಿ-ಉಪದ್ರವ ಯಾರೂ ಕಂಡುಹಿಡಿಯಬಾರದು ಮತ್ತು ಅದಕ್ಕೆ ಪ್ರೋತ್ಸಾಹ ನೀಡಬಾರದು ಎಂದು ಸಧ್ಯದಲ್ಲೆ ಮೆರವಣಿಗೆ ಹೊರದಲಿದ್ದೇವೆ. ನೀವು ಬರ್ತೀರಾ (ನೀವೇನೂ ಬ್ಯಾಚುಲರಲ್ಲ ನಮಗೆ ಗೊತ್ತು. ನಿಮ್ಮ ಬೊಗಳೆ ಪತ್ರಿಕೆಯಲ್ಲಿ ಇದರ ಬಗ್ಗೆ ಹಾಕಿಸೋಕೆ ಈ ಆಮಿಷೆ) !!!
ಚೀನಾ ಮೇಡ್ ಅಉಅ ಅಂದ್ರೆ ಸ್ವಲ್ಪ ನಂಬೋಕ್ ಕಷ್ಟಾ, ಪಾಕಿಗಳು ಏನಾದ್ರೂ ಮೂಗ್ ತೂರಿಸಿರ್‌ಬೋದಾ...ಇತ್ತೀಚೆಗೆ ಎಲ್ಲಾರ್ ಮನೆ ಮುಂದೂ ಪಾರ್ಕಿಂಗ್ ಮಾಡ್‌ಬೇಡ್ರಿ ಅಂತಾ ಸೈನ್ ನೋಡ್‌ಕೊಂಡ್ ಬಂದಿದೀನಿ, ಇನ್ನು ಇದೊಂದು ಬೋರ್ಡ್ ಕಡಿಮೆ ಆಗಿತ್ತು ಗೇಟಿಗೆ...
ಪ್ರತ್ಯುತ್ತರಅಳಿಸಿನಮ್ಮನೇಲಿ ಒಬ್ಬರು ಆಂಟಿ ಇರೋದ್ರಿಂದ ನಮಗೆ ಮೇಲುಗೈ ಆಗುವ ಸಾಧ್ಯತೆ ಹೆಚ್ಚಲ್ಲವೇ?
ಪ್ರತ್ಯುತ್ತರಅಳಿಸಿಆಂಟಿ ಯಾರ ತಂಟೆಗೂ ಬರಬಾರದಂದ್ರೆ, ನನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅಸತ್ಯರೇ, ಈ ವಿಷಯವನ್ನು ನಮ್ಮ ಮನೆಯ ಕಡೆ ಬರುವ ಎಲ್ಲರಿಗೂ ಮನದಟ್ಟು ಮಾಡಿಕೊಡಿ.
yavado auntyyinda prabhava aagi e lekhana iLisibaradu eMba saMdeha barta ide :)
ಪ್ರತ್ಯುತ್ತರಅಳಿಸಿಶಿವ್ ಅವರೆ,
ಪ್ರತ್ಯುತ್ತರಅಳಿಸಿಇನ್ನು ಉಪಗ್ರಹಗಳು ಕೂಡ ಬಾಹ್ಯಾಕಾಶದಿಂದ ದಿಲೀಟ್ ಆಗಲಿವೆ.
ಆಂಟಿ ಉಪದ್ರವದ ಲಕ್ಷಣ ವಿವರಿಸಲು ಅನುಭವಿಗಳು ಯಾರೂ ಸಿಕ್ಕಿಲ್ಲ :)
Md ಅವರೆ,
ಪ್ರತ್ಯುತ್ತರಅಳಿಸಿಬ್ಯಾಚುಲರ್ ಡಿಗ್ರಿ ಇದ್ದವರೆಲ್ಲರೂ ಬ್ಯಾಚುಲರ್‌ಗಳೇ ಎಂಬ ಕುರಿತು ಅನ್ವೇಷಣೆ ಮಾಡಬೇಕಿದೆ.
ಓಹ್ ನೀವು ಆಂಟಿ-ಉಪದ್ರವಕ್ಕೆ ಪ್ರತಿಯಾಗಿ ಬಾಂಬ್ ತಯಾರಿಸುವ ಸಿದ್ಧತೆಯಲ್ಲಿರುವಂತಿದೆಯಲ್ಲಾ?
ಹೌದು ಸತೀಶ್,
ಪ್ರತ್ಯುತ್ತರಅಳಿಸಿPar-King ಮಾಡಬಾರದು ಅಂತ ಬೋರ್ಡ್ ಹಾಕಿರೋದು ಕಾರುಬಾಂಬ್, ಸ್ಕೂಟರ್ ಬಾಂಬ್‌ಗಳಿಂದಾನೇ ಇರಬೇಕು. ಹಾಗಾಗಿ ಇದರಲ್ಲಿ ಪಾಕಿ ಕೈವಾಡ ತಳ್ಳಿ ಹಾಕಲಾಗುವುದಿಲ್ಲ.
ಹಿಂದೀ-ಚೀನೀ ಭಾಯಿ ಭಾಯಿ ಅಂತ ಬೊಗಳೆ ಬಿಡುತ್ತಿದ್ದರೂ ನಿಜಕ್ಕಾದರೆ ಹಿಂದೀ-ಚೀನೀ ಕೈ-ಬಾಯಿ, ಪಾಕಿ-ಚೀನೀ ಭಾಯಿ ಭಾಯಿ!
ಶ್ರೀನಿವಾಸ್ ಅವರೆ,
ಪ್ರತ್ಯುತ್ತರಅಳಿಸಿನಿಮ್ಮನ್ನು "ಚೆನ್ನಾಗಿ" ನೋಡಿಕೊಳ್ಳಲು ಬೇರೆಯವರನ್ನು ನೇಮಿಸಿದ್ದಾಗಿ ವರದಿಯಾಗಿದೆ.
Auntyಗೆ anti ಆಗಿ ಆಯುಧವಿದೆ ಎಂಬುದನ್ನು ಘಂಟಾಘೋಷವಾಗಿ ಸಾರುತ್ತೇವೆ.
ಮಹಾಂತೇಶರೇ,
ಪ್ರತ್ಯುತ್ತರಅಳಿಸಿನಿಮ್ಮ ಅನುಭವಜನ್ಯ ಸಂದೇಹ ಒಪ್ಪತಕ್ಕದ್ದೇ!!!!
ಏನಾದ್ರೂ ಹೇಳ್ರಪಾ :-D