(ಬೊಗಳೂರು ಗುಟ್ರಟ್ಟು ಬ್ಯುರೋದಿಂದ)
ಬೊಗಳೂರು, ಜ.3- ಮನುಷ್ಯ ಪ್ರಾಣಿಯ ನಿಷ್ಠಾವಂತ ಮಿತ್ರ ಎಂಬ ಸ್ಥಾನಕ್ಕೆ ನೈಜ ಪ್ರಾಣಿ ವಲಯದಲ್ಲಿ ಪೈಪೋಟಿ ಶುರುವಾಗಿದ್ದು, ನಾಯಿ ಬೆಕ್ಕುಗಳ ಕಾದಾಟಕ್ಕೆ ಚಾಲನೆ ದೊರೆತ ಲಕ್ಷಣಗಳು ಗೋಚರಿಸತೊಡಗಿವೆ.
ಮನೆಗೆ ಬೆಂಕಿ ಬಿದ್ದಿದ್ದನ್ನು ಯಜಮಾನನಿಗೆ ಬೆಕ್ಕೊಂದು ತಿಳಿಸಿ ಯಜಮಾನ ನಿಷ್ಠೆ ಮೆರೆದಿದೆ ಎಂದು ಇಲ್ಲಿ ವರದಿಯಾಗಿದ್ದು, ಇದರಿಂದ ಬೆದರಿರುವ ಶ್ವಾನ ಸಮೂಹವು ಬೊಗಳೆ ರಗಳೆ ಬ್ಯುರೋಗೆ ಮೊರೆ ಹೊಕ್ಕಿದೆ.
ತತ್ಪರಿಣಾಮವಾಗಿ ಕತ್ತೆ-ಮಂಗಗಳೊಂದಿಗೆ ಈ ಪ್ರಕರಣದ ಕುರಿತು ಪತ್ತೆದಾರಿಕೆಗೆ ಇಳಿದ ಬ್ಯುರೋ, ಈ ಆಘ್ರಾಣ ಸಾಮರ್ಥ್ಯದ ಹಿಂದಿನ ರಹಸ್ಯ ಭೇದಿಸಲು ಹೋಗಿ ಮಹತ್ವದ ಸಂಗತಿಯನ್ನು ಪತ್ತೆ ಹಚ್ಚಿದೆ.
ಇದರ ಪ್ರಕಾರ, ಬೆಕ್ಕು ತನ್ನ ಯಜಮಾನನನ್ನು ಎಚ್ಚರಿಸಿದ್ದರ ಹಿಂದಿನ ಕಾರಣ ಗೊತ್ತಾಗಿದೆ. ಅದೆಂದರೆ ಈ ಬೆಕ್ಕಿನ ಮೂಗಿಗೆ ತುಪ್ಪ ಸವರಲಾಗಿತ್ತಾದರೂ, ಅದರ ಮೂಗಿಗೆ ವಾಸನೆ ಬಡಿದಿದ್ದು ಸುಟ್ಟ ಹಾಲಿನದ್ದು! ಅದರ ಎಲ್ಲ ಗಮನ ಹಾಲಿನ ಮೇಲೇ ಇದ್ದುದರಿಂದ, ಸದಾಶಿವನಿಗೆ ಅದೇ ಧ್ಯಾನ ಎಂಬಂತೆ ಈ ಮಾರ್ಜಾಲ ಸನ್ಯಾಸಿಗೂ ಹಾಲಿನದ್ದೇ ಧ್ಯಾನ ಇತ್ತು.

ಪ್ರತಿಭಟನೆಗೆ ಬೆದರಿ ಬೊಗಳೆ ರಗಳೆ ಬ್ಯುರೋಗೆ ರಜೆ
ಹಾಲನ್ನು ಉಳಿಸುವ ನಿಟ್ಟಿನಲ್ಲಿ ಅದು ಯಜಮಾನನ ಮೈಗೆ ಪರಚಿ ಎಬ್ಬಿಸಿತ್ತು ಎಂಬುದನ್ನು ಪತ್ತೆ ಹಚ್ಚಿ ವರದಿ ಮಾಡಿರುವ ಬೊಗಳೆ ರಗಳೆ ಬ್ಯುರೋ ವಿರುದ್ಧ ಮಾರ್ಜಾಲ ಸಂದೋಹವು ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದು ನಮಗೆ ಈಗಾಗಲೇ ಮಾಹಿತಿ ದೊರೆತಿದ್ದು, ಇದಕ್ಕಾಗಿ ಕೆಲವು ದಿನಗಳ ಕಾಲ ಬ್ಯುರೋಗೆ ರಜೆ ಸಾರಲು ನಿರ್ಧರಿಸಲಾಗಿದೆ.
ಈ ರಜೆಯ ಅವಧಿಯಲ್ಲಿ ಅಪ್ಪಿ ತಪ್ಪಿ ಪತ್ರಿಕೆ ಪ್ರಕಟವಾಗುವ ಸಾಧ್ಯತೆಗಳಿವುದರಿಂದ ಎಚ್ಚರ ವಹಿಸಲು ಸೂಚಿಸಲಾಗಿದೆ.
8 ಕಾಮೆಂಟ್‌ಗಳು
ಅಯ್ಯಯ್ಯೋ..! ಅಗತ್ಯವಾಗಿ ರಜೆ ತಗೊಳ್ಳಿ ಸ್ವಾಮೀ.. ಮಾರ್ಜಾಲಗಳೆಲ್ಲ ಸೇರಿ ನಮ್ಮ ಕೋತೀನ ಪರಚಿಬಿಟ್ರೆ ಕಷ್ಟ...!
ಪ್ರತ್ಯುತ್ತರಅಳಿಸಿಬರಿ ಮಾರ್ಜಾಲ ಮಾತ್ರ ಹಾಲು ಕುಡಿಯತ್ತಾ? ಕುನ್ನಿ ಮರಿ ಕುಡಿಯೋಲ್ವಾ? ಅದರೊಂದಿಗೆ ಬೊ-ರಣ್ಣನವರು ಜಗಳ ಮಾಡೋಕ್ಕೆ ಹೆದರಿಕೆಯಾ?
ಪ್ರತ್ಯುತ್ತರಅಳಿಸಿರಜೆಯಲ್ಲಿ ಎಲ್ಲರ ಮನೆಯ ಗುಟ್ಟುಗಳನ್ನೂ ಒಟ್ಟು ಮಾಡಿ, ನಂತರ ನಮ್ಮೆಲ್ಲರ ಮುಂದೆ ರಟ್ಟು ಮಾಡಿ. ಇದು ಮಹದಾಜ್ಞೆ.
bogale buro ge raje
ಪ್ರತ್ಯುತ್ತರಅಳಿಸಿbogale buro ge raje
bogale buro ge raje
enree anvEshigaLe eshte badkomdru yaaroo naMbtaane ilvallri.
adeshTu bogale bittoo bittoo neevoo readers gaLige bad habit haakiddeera aMdre, nijavannoo kooda naMbolla.
nimma raje majavaagirali
hosa varushada shubhashayagaLu
--md
ಅಸತ್ಯಿಗಳೇ,
ಪ್ರತ್ಯುತ್ತರಅಳಿಸಿಇದರ ಬಗ್ಗೆ ನಮ್ಮ ಮೂಷಿಕ ಸಮೂಹ ಎನು ಕಾಮೆಂಟಿಸಿದೆ?
ಮಾರ್ಜಾಲ ಸಮೂಹಕ್ಕೆ ನೀವು ಇನ್ನೊಂದು ಪತ್ರ ಬರೆದು ನಿಮ್ಮ ಲೇಖನವನ್ನು 'out of context' ಓದಲಾಗಿದೆ ಅಂತಾ ತಿಳಿಸಿ.
ಅಂದಾಗೆ ನಿಮ್ಮ ರಜೆ ಚೆನ್ನಾಗಲಿ ಸಾಗಲಿ..
ಪ್ರೀತಿಯೊಂದಿಗೆ
ಸುಶ್ರುತ ಅವರೆ,
ಪ್ರತ್ಯುತ್ತರಅಳಿಸಿಮಾರೋಜಾಲಗಳು ಕೋತೀನ ಮಾರಿಬಿಟ್ರೆ ಮತ್ತೂ ಕಷ್ಟ ಕಣ್ರೀ...
ಶ್ರೀನಿವಾಸರೆ,
ಪ್ರತ್ಯುತ್ತರಅಳಿಸಿಜಗಳ ಮಾಡಿ ಮಾಡಿ ಅವರೆಲ್ಲಾ ನಮಗೆ ಜಳಕ ಮಾಡಿಸಿಬಿಟ್ರೆ... ಅಂದ್ರೆ ನಮ್ಮನ್ನು ಚೆನ್ನಾಗಿ ತೊಳೆದುಬಿಟ್ರೆ... ಅಂತ ಹೆದ್ರಿಕೆ!
MD ಅವರೆ,
ಪ್ರತ್ಯುತ್ತರಅಳಿಸಿನಿಮ್ಮ ಕಾಳಜಿಯ ಅರಿವಾಗುತ್ತಿದೆ. ಓದುಗರೇ ಬ್ಯುರೋಗೆ good habits ಬರುವಂತೆ ಮಾಡಿರುವುದರಿಂದ ನಿಮ್ಮ ಆರೋಪ ಅಲ್ಲಲ್ಲಿಗೇ ಸರಿಯಾಯಿತು.
ನಿಮಗೂ ಹೊಸ ವರ್ಷದ ಶುಭಾಶಯಗಳು.
ಶಿವ್ ಅವರೆ,
ಪ್ರತ್ಯುತ್ತರಅಳಿಸಿಮೂಷಿಕ ಸಮೂಹವು ನಮ್ಮ ಬ್ಯುರೋದ ಮೂಲೆ ಮೂಲೆಯಲ್ಲಿ ಬಿಲ ಮಾಡಿಕೊಂಡಿವೆ. ಹಾಗಾಗಿ ಇಲ್ಲಿನ ಫೈಲುಗಳೆಲ್ಲಾ ಸೇಫ್ ಆಗಿಬಿಟ್ಟಿವೆ.
ಮಾರ್ಜಾಲ ಸಮೂಹದ ಮನವೊಲಿಸಲು ಒಂದು ಮೂಷಿಕವನ್ನು ಅದಕ್ಕೆ ದಯಪಾಲಿಸಲಾಗಿದೆ.
ಏನಾದ್ರೂ ಹೇಳ್ರಪಾ :-D