ಬೊಗಳೆ ರಗಳೆ

header ads

ಜ್ವರ ಇಳಿಸುವ ಫ್ರೀಜರ್ ಸಂಶೋಧನೆ

(ಬೊಗಳೂರು some-ಶೋಧನಾ ಬ್ಯುರೋದಿಂದ)
ಬೊಗಳೂರು, ಡಿ.7- ಜ್ವರ ಬಂದರೆ ಮೈ ಬಿಸಿಯಾಗುತ್ತೆ. ಅದನ್ನು ತಣಿಸಲು ಏನು ಮಾಡಬೇಕು ಎಂದು ಯೋಚಿಸುತ್ತಿದ್ದವರಿಗೆ ಹೊಸ ಉಪಕರಣವನ್ನು ಇಲ್ಲಿ ಸಂಶೋಧನೆ ಮಾಡಲಾಗಿದೆ.

ಸಿಕ್ಕಾ ಬಟ್ಟೆ ಜ್ವರ ಏರಿ ಮೈ ಬಿಸಿಯಾದರೆ ನಿಮ್ಮ ದೇಹವನ್ನು ಮಾತ್ರ Freezer ನಲ್ಲಿಟ್ಟರಾಯಿತು. ಆದರೆ ಅದನ್ನು ಶಾಶ್ವತವಾಗಿ ತಣಿಯದಂತೆ ನೋಡಿಕೊಳ್ಳಬೇಕು ಎಂಬುದು ತಜ್ಞರು ಸಲಹೆ ನೀಡಿದ್ದಾರೆ !

ಹಾಗಾಗಿ ಫ್ರೀಜರ್ ಅನ್ನುವುದು ಕೇವಲ ತಂಗಳನ್ನ ಪೆಟ್ಟಿಗೆಯಾಗಿ, ಅನಾರೋಗ್ಯಕ್ಕೆ ಪೂರಕವಾಗಿ ಮಾತ್ರವೇ ಅಲ್ಲ, ಆರೋಗ್ಯವನ್ನೂ ರಿಪೇರಿ ಮಾಡಬಹುದಾಗಿದೆ ಎಂಬುದನ್ನು ಈ ಸಂಶೋಧಕ ಮಹಾಶಯ ತೋರಿಸಿಕೊಟ್ಟಿದ್ದಾನೆ.

ಆದರೆ ಜ್ವರ ಬಂದ ಮಗುವಿನ ಮೈ ಬಿಸಿ ಇಳಿಸಲು ಆತ ಮಾಡಿದ ಪ್ರಯತ್ನಗಳು ಮಾತ್ರ ಸಂಶೋಧನೆಗೆ ತಕ್ಕುದಾದಂತಿತ್ತು. ಯಾವುದೇ ಸಂಶೋಧನೆಗಳು accident ನಿಂದಲೇ ಆಗುತ್ತವೆ ಎಂಬ ವೇದವಾಕ್ಯವನ್ನು ಇಲ್ಲಿ ಸ್ಮರಿಸಬಹುದು.

ಮೊದಲಿಗೆ ಆತ ಮಗುವಿಗೆ ಚಂಡಿ ಬಟ್ಟೆ ಕಟ್ಟಿದ, ಅದನ್ನು ಒಣಗಿಸಲು ಮಗುವನ್ನು ಗಾಳಿಯಲ್ಲಿರಿಸಿದ. ಮಗು ಒಣಗಿದ್ದು ಜಾಸ್ತಿಯಾದ ಕಾರಣ, ಸ್ವಲ್ಪ humidity ಬರಲಿ ಅಂತ ಮತ್ತೆ ಫ್ರಿಜ್‌ನಲ್ಲಿಟ್ಟ.

ಇದೀಗ ಈ ಸಂಶೋಧನೆ ಮಾಡಿದ ವ್ಯಕ್ತಿಯೇ ಫ್ರೀಜರ್‌ನಂತಹ ಕೊಠಡಿಯಲ್ಲಿ ಕಾಲ ಕಳೆಯುತ್ತಿದ್ದಾನೆ ಅಂತ ತಿಳಿದುಬಂದಿದೆ. ಆದರೆ ಇಲ್ಲಿ ಆತನಿಗೆ ಎಣಿಸುವುದಕ್ಕೆ ಎದುರಿಗೆ ಕಂಬಿಗಳನ್ನು ಇರಿಸಲಾಗಿದೆ ಎಂದೂ ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. ಈ ಚಿತ್ರದಲ್ಲಿ ಅಝಾರುದ್ದೀನ್ ಹಿಂದೆ ಟೋಪಿ ಹಾಕ್ಕೊಂಡು ನಿಂತಿರುವುದು ನೀವೇನಾ? - http://in.rediff.com/cricket/2006/dec/07celeb.htm

    ಪ್ರತ್ಯುತ್ತರಅಳಿಸಿ
  2. ಪಬ್ಬಿಗರೇ,

    ನಾವು ಅಜರುದ್ದೀನ್‌ಗೇ ಟೋಪಿ ಹಾಕಲು ಹಿಂದೆ ನಿಂತಿದ್ದೇವೆ ಅಂತ ಹೇಳಿ ನಮ್ಮ ಇಲ್ಲದ ಮರ್ಯಾದೆಯನ್ನು ನಿವಾರಿಸಿದ್ದೀರಿ.

    ಅಜರ್ ನಮ್ಮ ಇಂದುವಿನ ಊರಿಗೆ ಬಂದಾಗ ತಮ್ಮ ಸಂದರ್ಶನ ನಡೆಸಿ ಅಂತ ಅವರು ಗೋಗರೆಯಲೇ ಇಲ್ಲದ ಕಾರಣ ನಾವು ಆ ಕಡೆ ತಲೆ ಹಾಕಿಲ್ಲ.

    ಪ್ರತ್ಯುತ್ತರಅಳಿಸಿ
  3. ಓ 'ಬೀರು'ಬಲ್ಲವ್ರೇ, ನೆಟ್'ನ್ಯಾಗ ಎಟ್ಟ (ನಾಟ್ ಕೆಟ್ಟ) ಕನ್ನಡ ಬೊಗಳೆಗಳಾದವೆಂದು ಲೆಕ್ಕಾ ಕೊಡ'ಬಲ್ಲಿರಾ?

    ಕುಟ್ಟುವುದಕ್ಕೆ ಉದಾಸೀನ ಅಂತ ಹೇಳ್ಕೋತ ಅನ್ವೇಷಪ್ಪಗೋಳ ದಿನಕ್ಕೊಂದ ಪೋಸ್ಟ ಒಗಿತಾರು. ಆದ್ರ ಮಜಾವಾಣಿಯಂತ ಉಳಿಕಾದು ಕನ್ನಡ ಬೊಗಳೆಗಳು ಬಂದ್ ಬಿದ್ದಾವಲ್ಲ.

    ಪ್ರತ್ಯುತ್ತರಅಳಿಸಿ
  4. ಓಹ್ ಫ್ರಿಜ್‍ನಲ್ಲಿ ದೇಹವನ್ನಿಟ್ಟರೆ ಶಾಶ್ವತವಾಗಿ ಜ್ವರ ಬರೋಲ್ಲ, ಜೀವ ತಣಿಯುತ್ತದೆ, ಎಂಬುದು ಕೇಳಿ ಬಹಳ ಸಂತೋಷವಾಗುತ್ತಿದೆ. ನನಗೇ ಬೇಕಾದವರು ತಣ್ಣಗಿರಬೇಕೆಂಬಾಸೆ. ಅದಕ್ಕೆ ಎಷ್ಟೇ ಹಾರೈಕೆಗಳನ್ನು ತಿಳಿಸಿದರೂ ಅವರು ತಣಿವಾಗ್ತಿಲ್ಲ, ಈಗ ಏನು ಮಾಡಬೇಕೆಂಬುದು ಗೊತ್ತಾಯ್ತು. ಇನ್ಮೇಲೆ ಹಾಗೆಯೇ ಮಾಡುವೆ.

    ಪ್ರತ್ಯುತ್ತರಅಳಿಸಿ
  5. ಜಮಖಂಡಿಯವರೆ,
    ನೆಟ್ಟಗೆ ಕನ್ನಡದ ಕಂಪು ಬೀರುವವರ ಸಂಖ್ಯೆ ತಿಳಿದಿಲ್ಲರೀ ಜಮಖಂಡಿಯವರೆ, ಕನ್ನಡದ ಬ್ಲಾಗುಗಳು ದಿನಕ್ಕೊಂದು ಹುಟ್ಟಾಕತ್ತಾವೆ. ಕನ್ನಡ ಕೂಡ ನೆಟ್ಟಗೆ ಏರುತ್ತಾ ಇದೆ.

    ಆ ಮೇಲೆ ಮಜಾವಾಣಿಯೇ ನಮಗ್ ಪ್ರೇರಣೆರೀಯಪಾ! ಆದ್ರೂ ಯಾರು ಕುಟ್ಟೋದು ಅಂತ ಹಿಂದೆ ಮುಂದೆ ನೋಡೋದು !

    ಪ್ರತ್ಯುತ್ತರಅಳಿಸಿ
  6. ಮಾವಿನಯನಸರೆ
    ಫ್ರಿಜ್‌ನಲ್ಲಿ ಯಾವುದೇ ದೇಹ ಇಡಬೇಕಿದ್ರೆ ಅದಕ್ಕೆ ಜೀವ ಇರ್ಬೇಕಾಗುತ್ತೆ ಅಂತ ಮನಸ್ಸಿನಲ್ಲಿರಲಿ ಅನ್ನೋದು ಬ್ಯುರೋದ ಕಳಕಳಿಯ ವಿನಂತಿ.

    ಪ್ರತ್ಯುತ್ತರಅಳಿಸಿ
  7. ಓಹೋ! ಜ್ವರ ವಾಸಿ ಆಗೋದು ಇಷ್ಟು ಸುಲಭನಾ?!!

    ಪ್ರತ್ಯುತ್ತರಅಳಿಸಿ
  8. ಶ್ರೀ ತ್ರೀ ಅವರೆ,

    ಜ್ವರ ಇಳಿಸಿದವರ ಗಣಿತ ಜ್ಞಾನ ಹೆಚ್ಚಾಗುತ್ತದೆಯಂತೆ.
    ಅಂದರೆ ಕಂಬಿಗಳನ್ನು ಎಣಿಸಿ ಎಣಿಸಿ ಅವರು ಲೆಕ್ಕದಲ್ಲಿ ಪಕ್ಕಾ ಆಗಿರುತ್ತಾರೆ !

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D