(ಬೊಗಳೂರು ಅನಾರೋಗ್ಯ ಬ್ಯುರೋದಿಂದ)
ಬೊಗಳೂರು, ಅ.6- ಎಲ್ಲೆಡೆ ಚಿಕನ್ ಗುನ್ಯಾ, ಮಲೇರಿಯಾ, ಡೆಂಗ್ ಮತ್ತು ಇತರ ಟುಂಯ್‌ಗುಟ್ಟುವ ಮಹಾನ್ ಕೀಟಗಳಿಂದ ಹರಡುವ ರೋಗಗಳ ಬಗ್ಗೆ ಎಲ್ಲಾ ಮುಗಿದ ಬಳಿಕ ಸೊಳ್ಳೆ ಕಚ್ಚಿದಂತೆ ಧಡಕ್ಕನೆ ಎದ್ದು ಕುಳಿತಿರುವ ಸರಕಾರವು, ಈ ಸೊಳ್ಳೆಗಳಿಗೆ 'No Entry' ಬೋರ್ಡ್ ತಗುಲಿಸುವಂತೆ ಪ್ರಜೆಗಳಿಗೆ ಕರೆ ನೀಡಿದೆ.
ಆದರೆ, ಚಿಕುನ್ ಗುನ್ಯಾದಿಂದಾಗಿ ಯಾರೂ ಸಾಯುವುದಿಲ್ಲ, ಹೆದರಬೇಕಾದ್ದಿಲ್ಲ ಅಂದ ನಮ್ಮ ಘನ ಸರಕಾರದ ಅನಾರೋಗ್ಯ ಮಂತ್ರಿಗಳ ಹೇಳಿಕೆಯ ಹಿಂದಿರುವ ತಥ್ಯವೇನು ಎಂಬುದು ಪತ್ತೆಯಾಗಿದೆ. ಜನತೆ ಸಾಯುವುದು ಚಿಕುನ್ ಗುನ್ಯಾ ಅಥವಾ ಡೆಂಗ್ ಜ್ವರದಿಂದಾಗಿ ಅಲ್ಲ, ಸರಕಾರದ ನೀತಿಗಳು, ಆಸ್ಪತ್ರೆಯಲ್ಲಿ ದೊರೆಯದ ಸೌಲಭ್ಯ, ಮತ್ತು ಸರಕಾರವು ಇಂಥ ರೋಗಗಳ ತಡೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಎಂದು ಬಾಯಿಬಿಟ್ಟು ಹೇಳಲಾರದೆ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ನಮಗೆ ಗೊತ್ತಾಗಿದೆ.
ಆದರೂ, ಚಿಕನ್ ಗುನ್ಯಾ, ಮಲೇರಿಯಾ, ಜಾಂಡೀಸ್, ಏಡ್ಸ್ ಮುಂತಾದ ರೋಗಗಳಿಂದ ಪ್ರಜೆಗಳು ಈ ಭೌತಿಕಲೋಕದಿಂದ ನಾಪತ್ತೆಯಾಗಿ ಅಲೌಕಿಕರಾಗಿಬಿಡುತ್ತಿರುವ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಲಾಗಿದೆ.
ಈ ಮೊದಲು ಬೊಗಳೆ ರಗಳೆ ವರದಿ ಮಾಡಿದ್ದಂತೆ, ಸೊಳ್ಳೆಗಳು ಆಂಟಿಗಳಿಗೆ ಮಾತ್ರವೇ ಅಂಟುತ್ತವೆ ಎಂದುಕೊಂಡು ಸರಕಾರವು ಸುಮ್ಮನಿತ್ತು. ಇದಲ್ಲದೆ ಇದೇ ಬ್ಯುರೋ ಅದಕ್ಕಾಗಿ Anty-mosquito ಸಾಫ್ಟ್‌ವೇರ್ ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದೂ ವರದಿ ಮಾಡಿದ ಹಿನ್ನೆಲೆಯಲ್ಲಿ ಹೇಗೂ ಪರಿಹಾರವಿದೆಯಲ್ಲ ಎಂದು ಸರಕಾರ ಸುಮ್ಮನಿತ್ತು.
ಇದೀಗ ಮಸ್ಕಿಟಾಸುರರ ಹಾವಳಿ ಹೆಚ್ಚಾಗಿ, ಸರಕಾರದ ಕಿವಿಯ ಬಳಿಯಲ್ಲೇ ಕಿವಿಗಡಚಿಕ್ಕುವ ಠುಂಯ್‌ಕಾರ ಕೇಳಿಸತೊಡಗಿದ್ದು, ಪ್ರಜೆಗಳಲ್ಲಿ ಹಾಹಾಕಾರವೂ ಹೆಚ್ಚಾಗಿದೆ. ಈ ಪರಿಸ್ಥಿತಿಯ ಲಾಭ ಪಡೆದುಕೊಳ್ಳಬೇಕಲ್ಲ ಎಂದುಕೊಂಡಿರುವ ಸರಕಾರವು ಚೀನಾ, ಜಪಾನ್, ಅಮೆರಿಕ ಇತ್ಯಾದಿ ದೇಶಗಳಿಗೆ ಪ್ರವಾಸ ಏರ್ಪಡಿಸಿ, ಅಲ್ಲಿ ಇಂಥ ರೋಗಗಳಿಗೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅಧ್ಯಯನ ಮಾಡಿಬರಲು ತನ್ನ ಸಚಿವರು, ಶಾಸಕರನ್ನೆಲ್ಲಾ ಕಳುಹಿಸಲು ಸಿದ್ಧತೆ ನಡೆಸಿದೆ.
6 ಕಾಮೆಂಟ್‌ಗಳು
maanavarE soLLegaLannu kacci, avugaLige cikan tinnisi, gunya rOga haraDidre AgOlvA?
ಪ್ರತ್ಯುತ್ತರಅಳಿಸಿidakkAgi ella ok aadare sarkaara yaake?
ಹೌದು ತಲೆಮರೆಸಿಕೊಂಡಿರುವ ತವಿಶ್ರೀಗಳೆ (ಈಗ ನೀವು ಇಂಗ್ಲಿಷರಾಗಿದ್ದೀರಲ್ಲಾ ಅದ್ಕೆ!)
ಪ್ರತ್ಯುತ್ತರಅಳಿಸಿಮಾನವರು ಸೊಳ್ಳೆಗಳಿಗೆ ಅಂತ ಸಿದ್ಧಪಡಿಸಿದ ಚಿಕನನ್ನು ಗುಳುಂಕರಿಸಿದ ಬಳಿಕವಷ್ಟೇ ಅಳಿದುಳಿದುದನ್ನು ಅವುಗಳಿಗೆ ನೀಡುತ್ತಾರೆ.
ಹಾಗಾಗಿ ಸೊಳ್ಳೆಗಳಿಗೆ ಏನೂ ಆಗುವುದಿಲ್ಲ.
ಆದರೆ ನಮ್ಮ ಘನ ಮಂತ್ರಿಗಳಾದ ಚೊಂಬುಮಣಿ ರಾಮದೋಸೆ ಅವರು 'ಏನೂ ಭಯಪಡಬೇಡಿ, ಏನೂ ಭಯಪಡಬೇಡಿ' ಅಂತ ಅರಚಾಡುತ್ತಿದ್ದಾರಲ್ಲಾ...!
ಪ್ರಧಾನಿ ಮೊಮ್ಮಕ್ಕಳಿಗೇ ಡೆಂಗ್ ಜ್ವರ ಬಂದ್ರೂ ಕೇಂದ್ರ ಸರಕಾರ ಮಾತ್ರ ಎಚ್ಚೆತ್ತುಕೊಳ್ಳುತ್ತಲೇ ಇಲ್ಲ.
"ಡೆಂಗ್ ಡಾಂಗ್ ಬೆಲ್...
ಪ್ರತ್ಯುತ್ತರಅಳಿಸಿನುಸಿ is in the well"
ಕೊಚ್ಚೆನೀರು ಹರಿಯಲು ಒಳಚರಂಡಿ ವ್ಯವಸ್ಥೆಯಿಲ್ಲದೆ ಅದು ನಿಂತಲ್ಲೇ ನಿಂತು ಆ ಬಾವಿಗಳಲ್ಲಿ ನುಸಿ ಸೊಳ್ಳೆ ಮತ್ತಿತರ massಕೀಟ ಗಳೆಲ್ಲ ಹುಟ್ಟಿಕೊಳ್ಳುವ ಬಗ್ಗೆ ಇದೊಂದು ನರ್ಸರಿ ರೈಮು!
Ps: "ನುಸಿ is in the well" ಲೈನಿಗೆ ಪ್ರಾಸಬೇಕಾದರೆ
"PM's grandchildren not well" ಅಂತನೂ ಸೇರಿಸಬಹುದು.
ಜೋಷಿ ಅವರೆ,
ಪ್ರತ್ಯುತ್ತರಅಳಿಸಿಉಳಿದವರೆಲ್ಲಾ ಜನರಲ್ ವಾರ್ಡಿನ wellನಲ್ಲಿ ಬಿದ್ದಿದ್ದರೆ, PM's grandchildren not in the well... ಅವರಿಗೆ ಸ್ಪೆಶಲ್ ವಾರ್ಡಂತೆ. ಮತ್ತು ಪ್ರಧಾನಿ ಮನೆ ಬಳಿಯಲ್ಲೇ ಸೊಳ್ಳೆ ಗುಂಯ್ಯಿಯ್ಯಿಯ್ಯಿಯಿ... ಅಂದ ಕಾರಣ ಅದೊಂದು ರಾಷ್ಟ್ರೀಯ ದುರಂತ ಎಂದು ಘೋಷಿಸಲು ತಯಾರಿ ನಡೆಯುತ್ತಿದೆ.
ಅಲ್ಲಾ... ನಮ್ಮ ಅನಾರೋಗ್ಯ ಮಂತ್ರಿಗಳು ಹೆದರಬೇಡಿ ಹೆದರಬೇಡಿ ಅಂತ ಅಭಯ ನೀಡುತ್ತಾರಲ್ಲಾ...!
ಅನ್ವೇಷಿಗಳೇ , ನೀವು ಹೀಗೆ ಬಣ್ಣ ಬದಲಿಸುವವರು ಅಂತ ತಿಳಿದಿರಲಿಲ್ಲ ನನಗೆ.
ಪ್ರತ್ಯುತ್ತರಅಳಿಸಿಹಾಂ... ಹಾಂ.... ಶ್ರೀ ತ್ರೀ ಅವರೆ
ಪ್ರತ್ಯುತ್ತರಅಳಿಸಿಕತ್ತೆಯನ್ನು ಕಿತ್ತು ಹಾಕಿ ಮಂಗನನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಖಾಲಿ ಬಿದ್ದ ಸ್ಥಾನಕ್ಕೆ ಅದೃಶ್ಯವಾಗಿರುವ ಗೋಸುಂಬೆಯನ್ನು ಸೇರಿಸಿದ್ದೇವೆ.
ಏನಾದ್ರೂ ಹೇಳ್ರಪಾ :-D