(ಬೊಗಳೂರು .... ಬ್ಯುರೋದಿಂದ)
ಬೊಗಳೂರು, ಅ.27- ಹೆಚ್ಚುತ್ತಿರುವ ಅತ್ಯಾಚಾರಕ್ಕೆ ಕಾರಣವನ್ನು ಸಂಶೋಧನೆ ಮಾಡಿರುವ ವ್ಯಕ್ತಿಯೊಬ್ಬರಿಗೆ ಅತ್ಯಾಚಾರ ರತ್ನ ಬಿರುದು ನೀಡಲು ನಿರ್ಧರಿಸಲಾಗಿದೆ.ಮಾಂಸವನ್ನು ಹೊರಗಿಟ್ಟರೆ ಬೆಕ್ಕುಗಳು ದಾಳಿ ಮಾಡಿ ತಿನ್ನದಿರುತ್ತವೆಯೇ ಎಂಬ ಸಿದ್ಧಾಂತವನ್ನು ಮೂಲವಾಗಿಟ್ಟುಕೊಂಡು ಅತ್ಯಂತ ಆಚಾರ ಹೆಚ್ಚುತ್ತಿರುವುದರ ಹಿನ್ನೆಲೆ ಕುರಿತು ಹಗಲು ರಾತ್ರಿ ಯೋಚಿಸಿ ಯೋಚಿಸಿ ಈ ಸಂಶೋಧನೆ ಮಾಡಿರುವುದಾಗಿ ಸಂಶೋಧಕರು ಇಲ್ಲಿ ಹೇಳಿಕೊಂಡಿದ್ದಾರೆ.
ಆದರೆ ಇತ್ತೀಚಿನ ಚಲನವಲನಚಿತ್ರಗಳನ್ನು ನೋಡಿದವರು ಈ ಕಾರಣವನ್ನು ಮೊದಲೇ ಪತ್ತೆ ಹಚ್ಚಿದ್ದರಾದರೂ ಯಾರೂ ಕೂಡ ಬಹಿರಂಗಪಡಿಸಿರಲಿಲ್ಲ. ಇನ್ನು ಕೆಲವರು ಈ ಸಂಶೋಧನೆ ಕುರಿತು ಪೇಟೆಂಟ್‌ಗೆ ಅರ್ಜಿ ಸಲ್ಲಿಸಿದ್ದು, ಪೇಟೆಂಟ್ ಲಭ್ಯವಾದ ಬಳಿಕವಷ್ಟೇ ಬಹಿರಂಗಪಡಿಸಲು ತೀರ್ಮಾನಿಸಿದ್ದರು.ಆದರೆ ಈ ಮಹಾತ್ಮರು ಅಷ್ಟು ಬೇಗ Spilled the beans!. ಇದಕ್ಕಾಗಿ ಅವರಿಗೆ ಬಿದಿರುಪ್ರದಾನ ಮಾಡಲು ಅಖಿಲ ವಿಶ್ವ ಸಕಲ ಮಹಿಳಾ ಸಂಘವು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
10 ಕಾಮೆಂಟ್‌ಗಳು
ಸಂಶೋಧನೆಯೇ ಅತ್ಯಾಚಾರಕ್ಕೆ ಕಾರಣ - ಸಂಶೋಧನೆ ಮಾಡದೇ ಇದ್ದಿದ್ರೆ ಆಗ್ತಿತ್ತು. ಅಲ್ಲ ಒಬ್ಬರಿಗೆ ಅತ್ಯಾಚಾರ ಅನ್ನಿಸಿದರೂ ಇನ್ನೊಬ್ಬರಿಗೆ ಅದು ಸಂತಸದ ಸಮಾಚಾರ ಅಲ್ವಾ? ಇದೂ ಜಗದ ನಿಯಮ. ಅತ್ಯಾಚಾರ ಹೇಗೆ ಸಹಿಸೋಲ್ವೋ ಸಂತಸವನ್ನೂ ಸಹಿಸಬಾರದು. ಇಲ್ಲಾಂದ್ರೆ ಅತ್ಯಾಚಾರವನ್ನು ಸಹಿಸಬೇಕು.
ಪ್ರತ್ಯುತ್ತರಅಳಿಸಿಈ ಸಂಶೋಧನೆ ಮಾಡಿದವರು ಅನ್ವೇಷಿಗಳು. ಅಂದ್ರೆ ಅವರು ಅತ್ಯಾಚಾರಿ ಎಂದು ಅರ್ಥವೇ? ಶಾಂತಮ್ಮ ಪಾಪಮ್ಮ ಈ ಬಾಯಲ್ಲಿ ಹೇಳೋಕ್ಕೇ ನಾಚಿಕೆ ಆಗತ್ತೆ, ಕಿವಿಯಲ್ಲಿ ಕೇಳೋಕ್ಕೆ ಹೆದರಿಕೆ ಆಗತ್ತೆ, ಕಣ್ಣಲ್ಲಿ ನೋಡೋಕ್ಕೆ ದುಃಖ ಆಗತ್ತೆ.
ಶ್ರೀ ಶ್ರೀ ಶ್ರೀಗಳೆ,
ಪ್ರತ್ಯುತ್ತರಅಳಿಸಿಅತ್ಯಾಚಾರ ಮಾಡಿದ್ದು ಅನ್ವೇಷಿ ಅಲ್ಲ, ಅತ್ಯಾಚಾರದ ವರದಿ ಮಾಡಿದ್ದು ಮಾತ್ರ ಅನ್ವೇಷಿ. ಹಾಗಾಗಿ ನಮ್ಮ ತಲೆಯ ಮೇಲೊಂದು ಗೂಬೆಯನ್ನು ತಂದು ಇರಿಸುವುದು ಸೂಕ್ತವಲ್ಲ ಎಂದು ಸಂಶೋಧಿಸಲಾಗಿದೆ.
ಆದ್ರೂ... ನೀವು ಜಗದ ನಿಯಮವನ್ನು ನಮ್ಮ ಮೇಲೆ ಹೇರುವುದರ ಹಿಂದಿನ ಸಂಚನ್ನು ಶೀಘ್ರವೇ ಬಯಲಿಗೆಳೆಯಲಾಗುವುದು. ನಿಮ್ಮ ನಾಚಿಕೆ, ಹೆದರಿಕೆ, ದುಃಖ ಎಲ್ಲವನ್ನೂ ಕಟ್ಟಿಟ್ಟುಕೊಳ್ಳಿ.
someಶೋಧನೆಯೇ ಅತ್ಯಾಚಾರಕ್ಕೆ ಕಾರಣ ಎಂಬುದನ್ನು ಒಪ್ಪುವುದೇ ಬಿಡುವುದೇ ಎಂಬ ಡಿಲೆಮ್ಮದಲ್ಲಿದ್ದೇನೆ. someಶೋಧನೆ ಮಾಡುವುದನ್ನೇ ಮುಂದುವರಿಸಿ ಅದುವೇ ಅತ್ಯಾಚಾರವಾಗುವುದು ಎನ್ನುವುದು ಒಂದು ವಾದ. someಶೋಧನೆ ಮಾಡುವ ಅಗತ್ಯವಿಲ್ಲದೆ ಎಲ್ಲ ಬಿಚ್ಚಮ್ಮಗಳೇ ತುಂಬಿರುವಾಗ someಶೋಧನೆ ಮಾಡುವುದಾದರೂ ಹೇಗೆ? ಆಗ ನೇರ ನುಗ್ಗಿದರೆ ಅದು ಅತ್ಯಾಚಾರವಾಗುವುದೇ?
ಪ್ರತ್ಯುತ್ತರಅಳಿಸಿ-ಪಬ್
"ಆಚಾರವಿಲ್ಲದ ನಾಲಿಗೆ ನಿನ್ನ ನೀಚಬುದ್ಧಿಯ ಬಿಡು ನಾಲಿಗೆ..." - ಪುರಂದರದಾಸರ ಹಾಡು. ಜನರೆಲ್ಲರೂ, ನಾಲಿಗೆಗೆ ಮಾತ್ರವಲ್ಲ ಎಲ್ಲದಕ್ಕೂ ಆಚಾರವಿರಬೇಕು ಎಂದು ಹಿತಮಿತವಾಗಿ ತಿಳಿದುಕೊಳ್ಳಬೇಕಿತ್ತು; ಹೆಚ್ಚಿನವರು ಹಾಗೆಯೇ ತಿಳಿದುಕೊಂಡರು; ಸಜ್ಜನರಾದರು.
ಪ್ರತ್ಯುತ್ತರಅಳಿಸಿಆದರೆ ಕೆಲವರು ಮಾತ್ರ ಅದನ್ನು ಅತಿಯಾಗಿಯೇ ತಿಳಿದುಕೊಂಡು ಅತಿ ಆಚಾರ ಮಾಡಲು ಹೋಗಿ ಯೇನ್ ಹೇಳಿದ್ರೂ ಕೇಳದೆ ಸಂದಿಗೊಂದಿಗಳಲ್ಲೂ ಅತಿ ಆಚಾರ ಮಾಡಿ ಯಣ್ ಸಂಧಿಯಾಗಿ ಅತ್ಯಾಚಾರಿಗಳಾದರು.
ಪಬ್ಬಿಗರೇ,
ಪ್ರತ್ಯುತ್ತರಅಳಿಸಿನಿಮ್ಮ ಪ್ರಶ್ನೆ ಭಾರಿ ಕುತೂಹಲ ಕೆರಳಿಸಿದೆ ಮತ್ತು ಇನ್ನೊಂದು someಶೋಧನೆಗೆ ಅವಕಾಶವಿಲ್ಲದಿದ್ದರೂ ಹೊಸ ಸಾಧ್ಯತೆಯನ್ನು ಎತ್ತಿ ತೋರಿಸಿದೆ. ಹಾಗಿರುವಾಗ ಆ ಸಾಹಸಕ್ಕೆ ಮುಂದಾಗಿ ಪೇಟೆಂಟ್ ಪಡೆಯಲು ಯತ್ನಿಸಬಾರದೆಂದು ನಮ್ಮ ಬ್ಯುರೋಗೆ ಎಚ್ಚರಿಸಿದ್ದೇವೆ.
ಜೋಷಿಯವರೆ
ಪ್ರತ್ಯುತ್ತರಅಳಿಸಿದಾಸರು ಹೇಳಿದ್ದು ಆಚಾರವಿಲ್ಲದ ನಾಲಿಗೆ, ಆಚಾರ ಅಂದರೆ ಉಪ್ಪಿನಕಾಯಿ ಅಂತ ಹಿಂದಿ-ಮರಾಠಿಯಲ್ಲಿ ಹೇಳುತ್ತಾರಲ್ಲ. ಉಪ್ಪಿನಕಾಯಿ ತಿನ್ನದವರು ಏನೇನೋ ಮಾತನಾಡುತ್ತಾರೆ ಅಂತ ಅರ್ಥವೇ?
ನಿಮ್ಮ ವಿವರಣೆಯು ಮತ್ತೊಂದು someಶಯಕ್ಕೆ ಕಾರಣವಾಗಿದೆ. ಅತಿ ಆಚಾರ ಎನ್ನುವುದು ಪೆಣ್ ಸಂಧಿಯೇ ಯಾಕಾಗಬೇಕು? ಆಚಾರ ಮಾಡದವರು (un ಆಚಾರ) ಅನಾಚಾರಿಗಳೇ?
ಅದೂ ಅಲ್ಲದೆ, ಉಪ್ಪಿನಕಾಯಿ ತಿನ್ನದವರೂ ಅನಾಚಾರಿಗಳೇ ಅಲ್ಲವೇ?
chennagi ಸಂಶೋಧನೆ maadiddiri...:)
ಪ್ರತ್ಯುತ್ತರಅಳಿಸಿಅತ್ಯಾಚಾರಕ್ಕೆ ಕಾರಣ ಸಂಶೋಧಿಸಿದಂತೆಯೇ ಬೆಕ್ಕು ಮಾಂಸ ತಿನ್ನುವ ಕಾರಣವನ್ನೂ ಸಂಶೋಧಿಸಿದ್ದರೆ ಒಳ್ಳೆಯದಿತ್ತು. ನಮ್ಮ ಕಾಶ್ಮೀರದಲ್ಲಿ ನಿತ್ಯವೂ (ಮಾನವರ) ಮಾಂಸ ಕುಯ್ಯುವ 'ಸಂಶೋಧಕ'ನ ಗೆಳೆಯರನ್ನು ಬಗ್ಗು ಬಡಿಯುವ ಬಗ್ಗೆ ಸಂಶೋಧನೆಯನ್ನೂ ನಡೆಸುವುದು ಅಗತ್ಯವೆನಿಸುತ್ತಿದೆ.
ಪ್ರತ್ಯುತ್ತರಅಳಿಸಿಅನ್ವೇಶಿಗಳೆ,
ಬಲೆ(net)ಯಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿರುವ ನಿಮ್ಮ ಗೆಳೆಯರ ಬಳಗಕ್ಕೆ ನನ್ನನ್ನೂ ಸೇರಿಸುವಾಸೆ. ನನ್ನ ಮನೆ(ಬ್ಲಾಗು)ಗೊಮ್ಮೆ ಭೇಟಿಕೊಟ್ಟು ಹರಸಬೇಕೆಂದು ವಿನಂತಿ. ಯಾವದೇ ಬಗೆಯ ಸಲಹೆ-ಸೂಚನೆಗಳಿಗೆ ಸ್ವಾಗತ.
ಸತೀಶರೇ,
ಪ್ರತ್ಯುತ್ತರಅಳಿಸಿಅತ್ಯಾಚಾರ (ಸಂಶೋಧನೆ) ಮಾಡಿದ್ದು ನಾನಲ್ಲಾ....!!!!
ಮಾಟ ಮಂತ್ರದಂತೆ ಕಾಟ ಕಂತ್ರವನ್ನು ನೆಟ್ಟಿನಲ್ಲಿ ಹರಡಲು ಬಂದಿರುವ ನಿಮಗೆ ಸ್ವಾಗತ ಮಾನ್ಯ ಕಂತ್ರಿವರ್ಯರೇ,
ಪ್ರತ್ಯುತ್ತರಅಳಿಸಿಬೆಕ್ಕು ಮಾಂಸ ತಿನ್ನುವ ಕಾರಣವನ್ನು ಶೋಧಿಸಲು ಹೊರಟ ನಮಗೆ ಸಂಶೋಧನೆಗೆ ಅವಕಾಶವೇ ಸಿಗದಷ್ಟು ಬೆಕ್ಕುಗಳು ಅಲ್ಲಿದ್ದುದರಿಂದ ಅದನ್ನು ಕೈಬಿಡಲಾಗಿದೆ.
ಆದ್ರೂ ನಿಮ್ಮ ಮತ್ತೊಂದು ಸಲಹೆ ಬಗ್ಗೆ ಪರಿಶೋಧಿಸಲಾಗುತ್ತದೆ. ಎಚ್ಚರಿಕೆ!!!!
ಏನಾದ್ರೂ ಹೇಳ್ರಪಾ :-D