(ಬೊಗಳೂರು ರಿಮೋಟ್ ಬ್ಯುರೋದಿಂದ)
ಬೊಗಳೂರು, ಅ.25- ಚೀನಾದಲ್ಲಿ ಇತ್ತೀಚೆಗೆ ಫಿಂಗ್ ಕಿಶರ್, ತ್ರಿಬಲ್ ಝಡ್ ಮುಂತಾದ ಮಾರ್ಕಿನ ಕಿಕ್ ಕೊಡಲಾರದ ದ್ರವಗಳು ಭಾರಿ ಬೇಡಿಕೆ ಪಡೆದುಕೊಂಡಿದ್ದು, ಯಾಕಿರಬಹುದು ಎಂಬ ಸಂಶಯ ಕಂಡುಬಂದ ಹಿನ್ನೆಲೆಯಲ್ಲಿ ಪರಲೋಕ ಯಾತ್ರೆ ಕೈಗೊಳ್ಳಲಾಯಿತು.ಪರಲೋಕ ಯಾತ್ರೆಗೆ ಮೊದಲೇ 'ತೀರ್ಥ' ಯಾತ್ರೆಯನ್ನೂ ಕೈಗೊಂಡ ಕಾರಣದಿಂದಾಗಿ ಕೆಲವು ದಿನಗಳಿಂದ ಬೊಗಳೆ ರಗಳೆ ತಲೆಮರೆಸಿಕೊಳ್ಳಬೇಕಾಗಿತ್ತು.
ತನಿಖೆ ವೇಳೆ ಮತ್ತೊಂದು ವಿಷಯ ಬಯಲಾಗಿದ್ದು, ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ವಿಶೇಷವಾಗಿ ಹುಡುಗಿಯರು ಓದಿನಲ್ಲಿ, ಕಲಿಯುವಿಕೆಯಲ್ಲಿ ಹಿಂದೆ ಬಿದ್ದಿದ್ದಾದರಾದರೂ, ಇಂತಹಾ ಮದ್ಯೋದ್ಯೋಗ ಕಲಿಯುವಿಕೆಯಲ್ಲಿ ಮುನ್ನಡೆ ಸಾಧಿಸುತ್ತಾ, ಮದ್ಯಾರ್ಥಿಗಳಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ಶಿಕ್ಷಕರು ಕೊಡುವ ಶಿಕ್ಷೆ ಹೆಚ್ಚಾದಂತೆ ಬಾಲ-ಕರುಗಳು ಕೂಡ ಓದಿನಲ್ಲಿ ಹೆಚ್ಚು ಹೆಚ್ಚು ಹಿಂದೆ ಬೀಳತೊಡಗಿದ್ದಾರೆ. ವಿದ್ಯಾರ್ಥಿನಿಯರು ಮದ್ಯಾರ್ಥಿನಿಯಾಗುತ್ತಿರುವುದರಿಂದ ಕಂಗೆಟ್ಟ ವಿದ್ಯಾರ್ಥಿಗಳೂ ಕಾರು- ಮತ್ತು ಬಾರು ಹೆಚ್ಚಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ Studyಯಲ್ಲಿ concentrate ಮಾಡದವರೆಲ್ಲರೂ ಹೆಚ್ಚು ಹೆಚ್ಚು concentrated ಆಗಿರುವ ಮದ್ಯಕ್ಕೆ ಮೊರೆ ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಈ ಕಾರಣಕ್ಕೆ ಅವರನ್ನು ಮಾತನಾಡಿಸಿದಾಗ, ಕಲಿಯುವುದಕ್ಕಿಂತ ಕಲಿಯದೆ ದೊರೆಯುವ ಕಿಕ್ಕೇ ಉತ್ತಮ ಎಂದು ತಾವು ತಿಳಿದುಕೊಂಡಿರುವುದಾಗಿ ಮದ್ಯಾರ್ಥಿನಿಯರು ಹೇಳಿದ್ದಾರೆ.
ಸೂಚನೆ
[ಕಲಿಯುವುದಕ್ಕಿಂತ ಕಲಿಯದಿರುವುದೇ ಉತ್ತಮ ಎಂದು ತಿಳಿದುಕೊಂಡ ಕಾರಣದಿಂದಾಗಿ ಮತ್ತು ಈಗ ಅಜ್ಞಾತ ವಾಸದಲ್ಲಿರುವುದರಿಂದಾಗಿ ಬೊಗಳೆ ರಗಳೆ ಬ್ಯುರೋವು ಲೋಕದ ಸಮಸ್ತ ಸಂಪರ್ಕ ಕಡ್ಡಾಯವಾಗಿ ಕಡಿದುಕೊಂಡಿದೆ. ಸದ್ಯಕ್ಕೆ ಜಿ-ಮೇಲ್, ಯಾಹೂ, ರೆಡಿಫ್, ಹಾಟ್ ಮೇಲ್ ಇತ್ಯಾದಿಗಳು ನೆಟ್ಟಿನಲ್ಲಿ ಎಷ್ಟು ಸರ್ಚ್ ಮಾಡಿದರೂ ಸಿಗುತ್ತಿಲ್ಲ. ಕೀಳಧಿಕಾರಿಗಳ ಕೈವಾಡ ಖಚಿತವಾಗಿದ್ದು, ರಾತೋರಾತ್ರಿ ಯಾರಿಗೂ ತಿಳಿಯದಂತೆ ಪತ್ರಿಕೆ ಪ್ರಕಟವಾಗುತ್ತಿದೆ. -ಸಂ]
6 ಕಾಮೆಂಟ್‌ಗಳು
ಪತ್ರಿಕೆ ಎಲ್ಲಿಂದಲಾಗಲೀ, ಹೇಗಾದರಾಗಲೀ ಪ್ರಕಟವಾದರೆ ಸಾಕಷ್ಟೆ. ಓದುಗರಿಗೆ ಗ್ರಾಸ ಸಿಗದೇ ಎಷ್ಟು ಒದ್ದಾಡುತ್ತಿದ್ದಾರೆ ಅಂತ ಓದುಗರಿಗೇ ಗೊತ್ತು. ಅಲ್ಲೊಂದು ಮನೆಯ ಬಾಗಿಲು ತೆರೆಯುತ್ತಲೇ ಇಲ್ಲ. ಸೇಸಮ್ಮ ಸೇಸಮ್ಮ ಎಂದರೂ ಬಾಗಿಲು ತೆರೆಯುತ್ತಿಲ್ಲ. ಇಲ್ಲಾದರೂ ಒಂದು ಹನಿ ನೀರು, ಒಂದಗುಳು ಅನ್ನ ಸಿಕ್ಕರೆ ಅದೇ ಸೌಭಾಗ್ಯ.
ಪ್ರತ್ಯುತ್ತರಅಳಿಸಿಅಂದ ಹಾಗೆ ಹಿಂದುಳಿದ ಊರು ಹೇಗಿದೆ? ಛಳಿ ಹೆಚ್ಚಾಗುತ್ತಿರಬೇಕು.
sakath... haha :)
ಪ್ರತ್ಯುತ್ತರಅಳಿಸಿಯಾವ ಊರಿಗೆ ರವಾನೆ ತಾವು?
ಪ್ರತ್ಯುತ್ತರಅಳಿಸಿಶ್ರೀಗಳೇ,
ಪ್ರತ್ಯುತ್ತರಅಳಿಸಿಇಲ್ಲಿ ಚಳಿ ಇದೆ... ಆದರೆ ನಮಗಂತೂ ಬದುಕಲು ಬೇಕಾದ ಮೂಲಸೌಕರ್ಯಗಳೇ ಇಲ್ಲ... ಆದರೂ ದಿನ ದೂಡಲಾಗುತ್ತಿದೆ.
ಇ-ಮೇಲ್ ಸಂಪರ್ಕಕ್ಕೂ ಕಡಿವಾಣ....
ಹಾಗಾಗಿ survival of the fittest ಎಂಬ ಸಿದ್ಧಾಂತದ ಮೇಲೆ ನಂಬಿಕೆ ಇರಿಸಿದ್ದೇವೆ.
ಸತೀಶರೇ,
ಪ್ರತ್ಯುತ್ತರಅಳಿಸಿನಕ್ಕೀರಿ ಜೋಕೆ!!!!
ಪಕ್ಕದ ಮನೆಯವರು ಅಥವಾ ಪಕ್ಕದಲ್ಲಿ ಕೂತವರು ಬೆಚ್ಚಿ ಬಿದ್ರೆ ನೀವೇ ಜವಾಬ್ದಾರರು.!
ಮನಸ್ವಿನಿ
ಪ್ರತ್ಯುತ್ತರಅಳಿಸಿಸದ್ಯಕ್ಕೆ ನಮ್ಮ ಬ್ಯುರೋ Indoreನಿಂದ ಕದ್ದುಮುಚ್ಚಿ ಕಾರ್ಯಾಚರಿಸುತ್ತಿದೆ. ಅಲ್ಲಿಂದ Out-doorಗೆ ಯಾವಾಗ ಬರುತ್ತೇವೋ ಎಂದು ಕಾಯಲಾಗುತ್ತಿದೆ.
ಬಹುಶಃ ಬೊಗಳೆ ಬಗ್ಗೆ ಇಲ್ಲಿನವರು ಯೋಚನೆಯನ್ನೂ ಮಾಡಿಲ್ಲದ ಕಾರಣ blog block ಆಗಿಲ್ಲ, ಉಸಿರಾಡಲು ಅಷ್ಟೇ ಸಾಕು!
ಏನಾದ್ರೂ ಹೇಳ್ರಪಾ :-D