ಬೊಗಳೆ ರಗಳೆ

header ads

ಹಾಕೋ ಬಟ್ಟೆಗೂ ಕತ್ರೀನಾ?

(ಬೊಗಳೂರು ಬಟ್ಟೆಗೆ ಕತ್ತರಿ ಬ್ಯುರೋದಿಂದ )
ಬೊಗಳೂರು, ಅ.10- ಬಟ್ಟೆಗಳಿಗೆಲ್ಲಾ ಕತ್ತರಿ ಹಾಕುತ್ತಲೇ ಬಾಲಿವುಡ್ ರಂಗದಲ್ಲಿ ಕತ್ರಿನಾ ಎಂದೇ ಹೆಸರುವಾಸಿಯಾಗಿರುವ ಈ ಐಟಂ ಗರ್ಲ್ ಹೋದಲ್ಲೆಲ್ಲಾ ಆಕೆಯ ಬಟ್ಟೆ ಮೇಲಕ್ಕೆ ಹೋದಂತೆ ನೆರೆದಿದ್ದವರ ಹುಬ್ಬುಗಳೂ ಮೇಲಕ್ಕೇರುವುದು ಸಹಜ ಎಂಬುದು ಜ್ಞಾನೋದಯವಾದಾಗ ಎಚ್ಚೆತ್ತ ಬೊಗಳೆ ರಗಳೆ ಬ್ಯುರೋ ಅಜ್ಮೇರಿಗೆ ಹೊರಟಾಗ ಸಿಕ್ಕಿದ ಸುದ್ದಿಯಿದು.
 
ಇದೀಗ ಆಕೆ ತೊಟ್ಟ ಬಟ್ಟೆಗಾಗಿ ಕಿತ್ತಾಟ ನಡೆಯುತ್ತಿರುವುದರಿಂದ ಛತ್ರೀನಾ ನೇರವಾಗಿ ಮಾತನಾಡಿಸಲಾಯಿತು. ಯಾಕೇ ಹೀಗಾಯ್ತೋ.... ಎಂದು ಕೇಳಿದಾಗ ಆಕೆ ನೀಡಿದ ಉತ್ತರ 'ಸಂಪ್ರದಾಯದ ಪ್ರಕಾರ, ಅಲ್ಲಿಗೆ ಭೇಟಿ ನೀಡುವ ಮಹಿಳೆಯರ ತಲೆ, ಕೈ ಮತ್ತು ಕಾಲುಗಳು ಸಂಪೂರ್ಣವಾಗಿ ಮುಚ್ಚಿಕೊಂಡಿರಬೇಕು. ನಾನು ಕೂಡ ಈ ಸಂಪ್ರದಾಯ ಪಾಲಿಸಿದ್ದೇನೆ. ಯಾಕೆಂದರೆ... ಎಲ್ಲರ ದೃಷ್ಟಿ ನನ್ನ ತಲೆ, ಕೈ, ಕಾಲುಗಳ ಮೇಲೆಯೇ ಇದ್ದುದರಿಂದಾಗಿ ನನ್ನ ದೇಹದ ಈ ಭಾಗಗಳು ಸಂಪೂರ್ಣವಾಗಿ cover ಆಗಿದ್ದವು. ಅಲ್ಲಿ ಅದನ್ನೇ ತದೇಕಚಿತ್ತದಿಂದ ನೋಡುತ್ತಿರುವವರಿಗೆ ಬಿಟ್ಟು, ಬೇರೆಯವರಿಗೆ ಕಾಣಿಸುತ್ತಿರಲಿಲ್ಲ' ಎಂಬುದು ಆಕೆಯ ಸಮರ್ಥನೆ.
 
ಕೊನೆಯ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಆಕೆ... "ಛೆ,,, ಅಲ್ಲಿಗೂ ಬಟ್ಟೆ ತೊಟ್ಟುಕೊಂಡೇ ಹೋಗಬೇಕೆಂಬುದು ನನಗೆ ಗೊತ್ತೇ ಇರಲಿಲ್ಲ" ಎಂಬ ರಾಗದೊಂದಿಗೆ ಸಂದರ್ಶನಕ್ಕೆ ಅಂತ್ಯ ಹಾಡಿದಳು.
 
ತನಿಖೆ ವೇಳೆ ತಿಳಿದುಬಂದ ಅಂಶವೆಂದರೆ, ಆಕೆ ಬಟ್ಟೆ ತೊಟ್ಟು ಅಲ್ಲಿಗೆ ಪ್ರವೇಶಿಸಿದ್ದೇಕೆ ಎಂಬುದೇ ಚರ್ಚೆಗೆ ಪ್ರಮುಖ ವಿಷಯವಾಗಿತ್ತು. (ಯಾವ ಬಟ್ಟೆ- ಪಾಶ್ಚಾತ್ಯವೋ ಪೌರ್ವಾತ್ಯವೋ ಎಂಬುದು ಆಮೇಲಿನ ಸಂಗತಿ!).
 
ಕೈಕಾಲುಗಳನ್ನು ಮಾತ್ರವೇ ಮುಚ್ಚಿಕೊಳ್ಳಬೇಕೇಕೆ? ಮಾನ ಮುಚ್ಚಿಕೊಳ್ಳುವಂತೆ ಅಲ್ಲಿ ಬೋರ್ಡ್ ತಗುಲಿಸಿರಲಿಲ್ಲವೇಕೆ ಎಂಬ ಆಕೆಯ ಪ್ರಶ್ನೆಯಿನ್ನೂ ಬೊಗಳೆ ರಗಳೆ ಬ್ಯುರೋವನ್ನು ಕೊರೆಯುತ್ತಿದೆ.
 
"I could not see the dress worn by Katrina," said Chisti. "I was at a distance and it looked to me as if she was wearing a full dress," he added ಎಂಬುದಾಗಿ ಪ್ರಾರ್ಥನಾಸ್ಥಳದ ಮುಖ್ಯಸ್ಥರು ಹೇಳಿದ್ದಾರೆಂದು ವರದಿಯಾಗಿರುವುದು ಮಾತ್ರ ಕತ್ರಿನಾ ಎಂಬ "ಮಾಯಾಂಗನೆ"ಯ ಮೋಡಿಯ ತೀವ್ರತೆಗೆ ಸಾಕ್ಷಿಯಾಗಿತ್ತು ಎಂದು ಬೊಗಳೆ ರಗಳೆ ಬ್ಯುರೋ ವಿಶ್ಲೇಷಿಸಿದೆ. ಅಂದರೆ ಬಟ್ಟೆಯೇ ಇರಲಿಲ್ಲವೇ? ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಹಲೋ ಅನ್ವೇಷಿ...

    ಚೆನ್ನಾಗಿ ಕತ್ರಿ ಹಾಕ್ತೀರಿ...

    ಸ್ವಲ್ಪ ಆಕಡೆ ಈಕಡೆ ನೋಡಿಕೊಳ್ಳಿ ಸ್ವಾಮೀ...!

    ಪ್ರತ್ಯುತ್ತರಅಳಿಸಿ
  2. ಲಿಂಕಿಲ್ಲದ ಮಾಯಾಂಗನೆಯೇ...

    ನಿಮ್ಮ ಹೆಸರು ಅಂಗಿ ಮಾಯ ಎಂದೇ? ಅಂದರೆ ಕತ್ರಿನಾ ಸಂತಾನವೇ ನಿಮ್ಮದು?

    ಪ್ರತ್ಯುತ್ತರಅಳಿಸಿ
  3. ಮುಸುಕು ತೆಗೆಯೇ ಮಾಯಾಂಗನೆ ಎನ್ನುವ ಮಾತನ್ನು ಬದಲಿಸಿ ಮುಸುಕು ಹಾಕಿಕೊಳ್ಳೇ ಮಾಯಾಂಗನೆ ಎಂದು ಬದಲಿಸುವ ಕಾಲ ಬಂದಿದೆ.

    ಕಲಿಗಾಲವಯ್ಯ ಕಲಿಗಾಲ ...

    ಅವರಿಗೆ ಡ್ರೆಸೆಸ್ ಸಪ್ಲೈ ಮಾಡುವವರು ಸದ್ಯದಲ್ಲಿಯೇ ಬರುವವರಿದ್ದಾರೆ. ನಿರೀಕ್ಷಿಸಿ.

    ಪ್ರತ್ಯುತ್ತರಅಳಿಸಿ
  4. ಮಾವಿನ ಅರಸರೆ,
    ಹೇಗಿದ್ದರೂ ಮುಂಬಯಿಯಲ್ಲಿದ್ದೀರಿ... ಅಲ್ಲಿದ್ದವರಿಗೆಲ್ಲಾ ಮುಸುಕು ಹಾಕಿಬಿಡಿ...
    ಆದ್ರೆ ಈ ಡ್ರೆಸ್ ಮಾಡಿಕೊಡುವವರು ಆಧುನಿಕ ಡ್ರೆಸ್ ಮಾಡಿಕೊಟ್ಟರೆ?

    ಪ್ರತ್ಯುತ್ತರಅಳಿಸಿ
  5. ಎಲ್ಲಿ ಯಾವುದನ್ನು (ಡ್ರೆಸ್) ಹಾಕಿಕೊಳ್ಳಬಹುದು ಅಥವಾ ಹಾಕಿಕೊಳ್ಳಬೇಕು ಮತ್ತು ಹಾಕಿಕೊಳ್ಳಬಾರದು ಎನ್ನುವ ಬಗ್ಗೆ compare and contrast ಮಾಡುತ್ತೀರಾದರೆ ಇಲ್ಲಿ ಮತ್ತು ಇಲ್ಲಿ ಇರುವ ಎರಡು ಚಿತ್ರಗಳನ್ನು ನೋಡಿ.

    ಮೊದಲನೆಯದು ಕೇರಳದಲ್ಲಿ ಒಂದು 'ಡೆಂಬಲ್'ನಲ್ಲಿರುವ ಬೋರ್ಡ್. ಎರಡನೆಯದು ಅಮೆರಿಕದಲ್ಲಿ ಒಂದು ರೆಸ್ಟೊರೆಂಟ್‍ನಲ್ಲಿರುವ ಬೋರ್ಡ್.

    ಪ್ರತ್ಯುತ್ತರಅಳಿಸಿ
  6. ಜೋಷಿಯವರೆ,

    ಎರಡರಲ್ಲೂ ಯಾವುದನ್ನು ಹಾಕಿಕೊಳ್ಳಬಾರದು ಎಂಬ ಆಯ್ಕೆ ಇರುವುದರಿಂದ "ಎಲ್ಲವನ್ನೂ" ಎಂದುಕೊಂಡುಬಿಟ್ಟರಾಯಿತು.

    ಆದರೆ, ತಿನ್ನಬಾರದು, ಕುಡಿಯಬಾರದು ಎಂದೆಲ್ಲಾ ಹೇಳಬಾರದು!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D