ಬೊಗಳೆ ರಗಳೆ

header ads

ಚಳ್ಳೆಹಣ್ಣು ಚತುರನ ಬೆನ್ನು ಬಿದ್ದ ಪೊಲೀಸರು

(ಬೊಗಳೂರು ಚಳ್ಳೆಹಣ್ಣು ಬ್ಯುರೋದಿಂದ)
ಬೊಗಳೂರು, ಸೆ.15- ಮಂತ್ರಕ್ಕೆ ಮಾವಿನ ಕಾಯಿ ಉದುರುತ್ತದೆಯೇ ಎಂದು ಅನಾದಿಕಾಲದಿಂದಲೂ ನಾಸ್ತಿಕರು ಕೇಳುತ್ತಾ ಬಂದಿದ್ದಾರೆ. ಈ ನಾಸ್ತಿಕರನ್ನೆಲ್ಲಾ ಆಸ್ತಿಕರನ್ನಾಗಿಸ ಹೊರಟ ಎಸ್ಕೇಪ್ ನಾಗ ಎಂಬಾತ, ಮಂತ್ರ ಹೇಳುತ್ತಲೇ ಮಂಗಮಾಯವಾಗುತ್ತಾ ಪೊಲೀಸರಿಗೆ ಅತ್ಯಂತ ಪ್ರಿಯವಾಗಿರುವ ಚಳ್ಳೆಹಣ್ಣುಗಳನ್ನು ವಿತರಿಸುತ್ತಿರುವ ಪ್ರಕರಣ ಭಾರಿ ಕುತೂಹಲ ಮೂಡಿಸಿದೆ.

ಮಂತ್ರ ಹೇಳಿದರೆ ಗುಡಿಯಲ್ಲಿದ್ದ ದೇವರ ಮೈಮೇಲಿನ ಆಭರಣಗಳು ಆತನ ಜೋಳಿಗೆಯಲ್ಲಿ ಬಂದು ಬೀಳುತ್ತಿದ್ದವು ಎಂಬುದು ಬೊಗಳೆ ರಗಳೆ ಬ್ಯುರೋದ ಗಮನಕ್ಕೆ ಬಂದಿದೆ.

ಈಗಾಗಲೇ ಕಂಡಕಂಡವರಿಗೆ ರುಚಿ ರುಚಿಯಾಗಿರುವ ಚಳ್ಳೆಹಣ್ಣುಗಳನ್ನು 37 ಬಾರಿ ಉದಾರವಾಗಿ ದಾನ ಮಾಡಿರುವ ಆತ, ಪ್ರೀತಿಯ ಪೊಲೀಸರಿಗೆ ಚಳ್ಳೆ ಹಣ್ಣುಗಳನ್ನು ಉಡುಗೊರೆಯಾಗಿ ತಿನ್ನಿಸುವುದರಲ್ಲಿ ಶತಕ ಸಾಧಿಸಲು ಹೊರಟಿದ್ದಾನೆ ಎಂದು ತಿಳಿದುಬಂದಿದೆ.

ಮಂತ್ರ ಹೇಳಿ ಮಂಗಮಾಯ ಎಂಬ ಸುದ್ದಿ ಕೇಳಿ ಬೆಂಗಳೂರಿನ ಹುಲಸೂರು ಗೇಟಿಗೆ ಧಾವಿಸಿದಾಗ ಅಲ್ಲಿ ಗೇಟಿಗೆ ಬೀಗ ಹಾಕಿತ್ತು. ತಕ್ಷಣವೇ ನಾಗನನ್ನು ಮೊಬೈಲ್‌ನಲ್ಲಿ ಸಂಪರ್ಕಿಸಲಾಗಿ, ಮಂತ್ರವೊಂದನ್ನು ಉದುರಿಸುವಂತೆ ಕೋರಿಕೊಳ್ಳಲಾಯಿತು. ಆತ ಹೇಳಿದ ಮಂತ್ರ ಒದರಿದ ತಕ್ಷಣ ಗೇಟ್ ತೆರೆದುಕೊಂಡಿತು.

ನಿಜಕ್ಕೂ ಮಂಗ ಮಾಯ ಅಂದರೆ ಮಂಗನೇ ಮಾಯವಾಗುತ್ತಿದ್ದ ಎಂಬ ಅನ್ಅರ್ಥವೂ ಬರುವುದರಿಂದ ಈತನೂ ಮಂಗನೇ ಎಂಬುದು ಬಹುತೇಕ ಖಚಿತವಾದಾಗ ಆತನೆದುರು ಬಾಲ ಬಿಚ್ಚೋದು ಕಷ್ಟದ ಕೆಲಸ ಎಂದು ಅರಿವಾಯಿತು.

ಆದರೂ ಪ್ರಶ್ನೆ ಎಸೆದರೆ ಎಲ್ಲಿ ಮಂಗಮಾಯವಾಗುತ್ತಾನೋ ಎಂಬ ಭೀತಿಯಿಂದಲೇ, ದೇವರ ಆಭರಣಗಳೇ ನಿನಗೇಕೆ ಬೇಕು ಅಂತ ಕೇಳಿದಾಗ ಆತನ ಬಾಯಿಯಿಂದ ನಿರರ್ಗಳವಾಗಿ ಮಂತ್ರ ಉದುರಿತು.

ಮನುಷ್ಯರ ಮೈಮೇಲೆ ಆಭರಣಕ್ಕಾಗಿ ಕೈ ಹಾಕಿದರೆ, ಅವರೇ ನನ್ನ ಕೈ ಕಿತ್ತು ಕೈಯೇ ಇಲ್ಲದಂತಾಗದೇ? ಹಾಗೇನಾದರೂ ಆದರೆ ನಾನು ಪೊಲೀಸರಿಗೆ ಕೈ ಕೊಡುವುದಾದರೂ ಹೇಗೆ ಎಂದು ಪ್ರಶ್ನಿಸಿದ ಆತ, ದೇವರಿಗೆ ಆಭರಣ ಹಾಕಿದರೆ ಅವರೇನೂ ಅದನ್ನು ತೊಟ್ಟುಕೊಂಡು ಬಂದ-ಹೋದಲ್ಲೆಲ್ಲಾ ಪ್ರದರ್ಶಿಸುವುದಿಲ್ಲ. ಹಾಗಾಗಿ ಅದು ಸ್ಥಿರ ಆಗಿರಬಾರದು, ಚರ ಆಗಿರಲಿ ಎಂಬುದೇ ನನ್ನ ಉದ್ದೇಶ ಎಂದು ಸ್ಪಷ್ಟಪಡಿಸಿದ್ದಾನೆ.

ಈ ಮಧ್ಯೆ, ಪೊಲೀಸರು ಆತನ ಬೆನ್ನು ಬಿದ್ದಿದ್ದಾರೆ ಎಂಬ ಮಾಹಿತಿ ಬೊಗಳೆ ರಗಳೆ ಬ್ಯುರೋಗೆ ತಲುಪಿದೆ. ಆದರೆ ಆತನನ್ನು ಹಿಡಿಯಲು ಅಲ್ಲ, ಆತ ನೀಡುವ ಚಳ್ಳೆ ಹಣ್ಣುಗಳು ಅತ್ಯಂತ ರುಚಿಕರವಾಗಿರುವುದೇ ಇದರ ಹಿಂದಿರುವ ನಿಗೂಢ ಕಾರಣ ಎಂಬುದು ಗೊತ್ತಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

17 ಕಾಮೆಂಟ್‌ಗಳು

  1. ಯಾವುದೇ ಹಣ್ಣನ್ನು ಕೊಳೆಸಿದರೆ ಅದು ಹೆಂಡವಾಗುತ್ತದೆ ಎಂದು ಸ್ಕೂಲಲ್ಲಿ ಓದಿದ ನೆನಪು. ಈ ಚಳ್ಳೆಹಣ್ಣನ್ನು ಸ್ವಲ್ಪ ಈ ಕಡೆ ತಳ್ಳುತ್ತೀರಾ? ಅದನ್ನು ಕೊಳೆಸಿ ಹೊಸ ಹೆಂಡ ಮಾಡಿ ಅದಕ್ಕೆ ಪೇ-ಟೆಂಟ್ ಕೊಳ್ಳಬೇಕಾಗಿದೆ.

    -ಪಬ್ಬಿಗ

    ಪ್ರತ್ಯುತ್ತರಅಳಿಸಿ
  2. ಅರ್ಜಂಟಾಗಿ ನನಗೆ ಚತುರನ ವಿಳಾಸ ಕಳುಹಿಸಿ. ನಾನು ಬಹಳಷ್ಟು ಜನಗಳಿಗೆ ಚಳ್ಳೆ ಹಣ್ಣು ತಿನ್ನಿಸಬೇಕಿರುವುದರಿಂದ, ಅವನೊಟ್ಟಿಗೆ ಜಾಯಿಂಟ್ ವೆಂಚರ್ ಮಾಡೋಣ ಎಂಬ ಉದ್ದೇಶವಿದೆ. ಅಂದ ಹಾಗೆ ನೀವೂ ನನ್ನೊಟ್ಟಿಗೆ ಸೇರಿವಿರಾ?

    ಪ್ರತ್ಯುತ್ತರಅಳಿಸಿ
  3. re pubbigare!!!!
    challehaNNaniMda oLLe heMda aagodu nanagenu doubt!!! adeniddaru kaLLabaTTige layakku...:)

    ಪ್ರತ್ಯುತ್ತರಅಳಿಸಿ
  4. ಕಳ್ಳಭಟ್ಟಿ ಒಳ್ಳೆ ಹೆಂಡ ಯಾಕಾಗಬಾರದು?

    -ಪಬ್

    ಪ್ರತ್ಯುತ್ತರಅಳಿಸಿ
  5. ಪಬ್ಬಿಗರೇ,
    ಚಳ್ಳೆ ಹಣ್ಣು ಈಗಾಗಲೇ ಪೊಲೀಸರು ಭಾರಿ ಪ್ರಮಾಣದಲ್ಲಿ ವಶಪಡಿಸಿಕೊಳ್ಳುತ್ತಿರುವುದರಿಂದ ನಿಮ್ಮ ಪಬ್ಬಿನಲ್ಲಿ ನಕಲಿ ಹೆಂಡ ತಯಾರಿಕೆಗೆ ಅವಕಾಶ ದೊರೆಯುತ್ತಿಲ್ಲ.

    ಮತ್ತು ಅವರಿಗೇ pay ಮಾಡಿದ್ರೆ ಮಾತ್ರವೇ ಟೆಂಟ್ ಸಿಗುತ್ತೆ.

    ಪ್ರತ್ಯುತ್ತರಅಳಿಸಿ
  6. ಮಾವಿನಯನಸರೆ,
    ಪಬ್ಬಿಗರು ಈಗಾಗಲೇ ಚಳ್ಳೆ ಹಣ್ಣಿನಿಂದ ಹೆಂಡ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಹಾಗಾಗಿ ನಾವು ಜಾಯಿಂಟ್ ವೆಂಚರ್ ಮಾಡಿದ್ರೆ... ತೂರಾಡುತ್ತಾ ಹೋಗೋವಾಗ ನಮ್ಮ ನಮ್ಮ hand and leg ಜಾಯಿಂಟ್‌‌ಗಳು ಪಂಕ್ಚರ್ ಆಗಬಹುದು.

    ಪ್ರತ್ಯುತ್ತರಅಳಿಸಿ
  7. ಮಹಾಂತೇಶರೇ,
    ನೀವು ಚಳ್ಳೆ ಹಣ್ಣು ಬೇಕಾದ್ರೆ ತಿನ್ನಿ... ಅಮೆರಿಕಕ್ಕೆ ಹೋಗೋವಾಗ ನಿಮ್ಮನ್ನು ಹೆಂಡ'ತಿರುವು ಮುರುವು' ಮಾಡೀತು.

    ಪ್ರತ್ಯುತ್ತರಅಳಿಸಿ
  8. oLLe prasne....adre adanna test mADuru yAru?? adella oLLeyade agiddare king (fisher) etc e reti hesru maDatiddara?
    innu sheMdi anni oppabahudu..kaLLabhatti innu doubte?

    ಪ್ರತ್ಯುತ್ತರಅಳಿಸಿ
  9. ಅಸತ್ಯಿಗಳೇ, ತೆಲಗಿ ಮಂಪರು ಪರೀಕ್ಷೆ ಬಗ್ಗೆ ನಿಮ್ಮ ಪತ್ರಿಕೆ ಯಾಕೋ ಏನು ವರದಿ ಮಾಡಿಲ್ಲವಲ್ಲಾ ಯಾಕೆ? ನಿಮ್ಮ ಹೆಸರನ್ನೂ ತೆಲಗಿ ಬಾಯಿಬಿಟ್ಟಿರಬಹುದು ಎಂಬ ಭಯವೇ?

    ನಿದ್ದೆಗೆ ಜಾರುತ್ತಿದ್ದ ತೆಲಗಿಗೆ ಹೊಡೆದು ಹೊಡೆದು ಎಬ್ಬಿಸಿ,ಪ್ರಶ್ನೆ ಕೇಳುತ್ತಿರುವ ದೃಶ್ಯ ಟೀವಿಯಲ್ಲಿ ನೋಡಿ (ಅದೂ ಸತತವಾಗಿ) , ಬಹಳಷ್ಟು ಜನ ಭ್ರಷ್ಟರ ಮನಪರಿವರ್ತನೆಯಾಗಿದೆಯಂತೆ. ಹೌದೇ?

    ಪ್ರತ್ಯುತ್ತರಅಳಿಸಿ
  10. "ಅವರೇನೂ ಅದನ್ನು ತೊಟ್ಟುಕೊಂಡು ಬಂದ-ಹೋದಲ್ಲೆಲ್ಲಾ ಪ್ರದರ್ಶಿಸುವುದಿಲ್ಲ"
    ಮಹಿಳಾ ಮಣಿ ಯರ ಸಂಘಗಳು ಚುರುಕಾಗಿವೆಯಂತೆ ನಿಮ್ಮ
    ಗೂಸಾ ಕ್ಕೆ ಪ್ರತಿ ಗೂಸಾ ಕೊಡಲು..
    ಆ ಗಂಗೆ-ಪಾರ್ವತಿ-ಭಾಗೀರಥಿ ಯರು ನಿಮ್ಮ ಬ್ಯೂರೋದ `ಚಿಳ್ಳೆ-ಪಿಳ್ಳೆ'ವರದಿಗಾರರನ್ನು ಕಾಪಾಡಲೀ ಅಂತ ಆಶಿಸುವೆ

    ಪ್ರತ್ಯುತ್ತರಅಳಿಸಿ
  11. ಮಹಾಂತೇಶರೇ,
    ಬೇಕಿದ್ದರೆ ಕಳ್ಳಭಟ್ಟಿಯನ್ನೇ ಶೇಂದಿ ಅಂತ ತಿಳ್ಕೊಂಡು ಸೇವಿಸಿ ಪುನೀತರಾಗಿಬಿಡಿ. ನಾವು ಟೆಸ್ಟ್ ಮಾಡಿದ್ಹಾಗಾಗುತ್ತೆ. :)

    ಪ್ರತ್ಯುತ್ತರಅಳಿಸಿ
  12. ಶ್ರೀ ತ್ರೀ ಅವರೆ,
    ತೆಲಗಿ ನಮಗೂ ಅಲ್ಪ ಸ್ವಲ್ಪ ಕೊಟ್ಟಿರೋದ್ರಿಂದ ಸ್ವಲ್ಪ ಮಂಪರು ಬಂದಿತ್ತು....

    ನೀವು ನಮ್ಮನ್ನು ಬಡಿದೆಬ್ಬಿಸಿದ್ದು ಒಳ್ಳೇದೇ ಆಯ್ತು...

    ಆ ಮಂಪರಿನಲ್ಲೇ ಹೋಗಿ ಏನಾದ್ರೂ ಸಿಗುತ್ತೋ ಅಂತ ನೋಡ್ತೀವಿ...

    ಪ್ರತ್ಯುತ್ತರಅಳಿಸಿ
  13. ಮಾಲಾ ರಾವ್ ಅವರೆ,

    ನಮ್ಮ ಏಕಸದಸ್ಯ ಬ್ಯುರೋದ ಎಲ್ಲಾ ಚಿಳ್ಳೆ ಪಿಳ್ಳೆ ವರದಿಗಾರರ ಗಡಣವು ಕಂಬಿಯ ಹಿಂದೆಯೇ ಅಡಗಿ ಕೂತಿರುತ್ತೆ ಅಂತ ದಯವಿಟ್ಟು ಮಣಿಗಳಿಗೆ ಹೇಳಬೇಡಿ..

    ಆದ್ರೂ ಅವರು ಕೊಡೋ ಗೂಸಾಗಳನ್ನೆಲ್ಲಾ ಸಂಗ್ರಹಿಸಿ ನಿಮ್ಮ ಸಕ್ಕರೆ ಡಬ್ಬೇಶ್ವರರ ಹೊಟ್ಟೆಯಲ್ಲಿಟ್ಟು ಸಂಗ್ರಹಿಸಿಡಿ... ಯಾವಾತ್ತಾದ್ರೂ ಬೇಕಾಗುತ್ತೆ.

    ಪ್ರತ್ಯುತ್ತರಅಳಿಸಿ
  14. ಅನ್ವೇಷಿಗಳೇ
    ನಿಮ್ಮ ವರದಿಗಾರರು ಸದಾ ಅಡಗಿಕೊಂಡು ಸುರಕ್ಷಿತರಾಗಿರುತ್ತಾರೆಂದು
    ತಿಳಿದು ನೆಮ್ಮದಿಯಾಯಿತು.ನಮ್ಮ ಸುದ್ದಿ-ಸಂತೋಷಗಳಿಗೆ
    ಎಲ್ಲಿ ವ್ಯತ್ಯಯ ಬರುತ್ತೋ ಅಂತ ಹೆದರಿದ್ದೆ ಗಾಡ್ ಈಸ್ ಗ್ರೇಟ್!

    ತಮ್ಮ ಆಹ್ವಾನವನ್ನು ಶ್ರೀ ಸಕ್ಕರೇಡಬ್ಬೇಶ್ವರರು ಬಲೇ ಖುಷಿಯಿಂದ ಸ್ವೀಕರಿಸಿ ತತ್ ಕ್ಷಣ ಬ್ಯೂರೋ ಕಛೇರಿ ಕಡೆಗೆ
    ಪ್ರಯಾಣ ಪ್ರಾರಂಭಿಸಿ ಬಿಟ್ಟರು ನಮ್ಮ ಸಂಸ್ಥಾನದ ಪ್ರಜೆಗಳಿಗೂ
    ನೆಮ್ಮದಿ.ರಿಟೆರ್ಡ್ ಆಗಿ ತಿಪ್ಪೆಯಲ್ಲಿ ಬಿದ್ದಿದ್ದ ಶ್ರೀ ಸ.ಡ ಇನ್ನೇನು
    ಕಿತಾಪತಿ ಎಬ್ಬಿಸುತ್ತಾರೋ ಅಂತ ಪ್ರಜೆಗಳೆಲ್ಲಾ ಹೆದರುತ್ತಿದ್ದರು.
    ನಿಮ್ಮ ಸಂಸ್ಥಾನದ `ರಾಜ್ಯಪಾಲ' ಹುದ್ದೆಗೆ ನೇಮಕ ದೊರೆತದ್ದಕ್ಕೆ ಶ್ರೀಸ.ಡರನ್ನು ಅಭಿನಂದಿಸಿ ದೊಡ್ಡ ಬೀಳ್ಕೊಡುಗೆ
    ಕೊಟ್ಟು ಸಾಗ ಹಾಕಿ ಕೈ ತೊಳೆದುಕೊಂಡರು
    ಇನ್ನು ನೀವುಂಟು ಅವರುಂಟು ಮುಂದಿನ ಅವರ ಯಾವುದೇ ಕಿತಾಪತಿಗಳಿಗೆ ನಮ್ಮ ಸಂಸ್ಥಾನದ ಪ್ರಜೆಗಳು ಯಾವರೀತಿಯಲ್ಲೂ
    ಜವಾಬ್ದಾರರಲ್ಲಾ ಎಂದು ಈ ಮೂಲಕ ಸರ್ವರಿಗೂ ಸ್ಪಷ್ಟ ಪಡಿಸಿದೆ

    ಪ್ರತ್ಯುತ್ತರಅಳಿಸಿ
  15. ಮಾಲಾ ರಾವ್ ಅವರೆ,

    ನಿಮ್ಮ ದೂ(ದು)ರಾಲೋಚನೆ ಏನೆಂಬುದು ನಮಗರ್ಥವಾಗಿದೆ.
    ವಯಸ್ಸಾದಂತೆ ಸಕ್ಕರೆ ಡಬ್ಬೇಶ್ವರರು ಸಿಹಿಯಾದ ಕಾಯಿಲೆಯೊಂದನ್ನು ದಯಪಾಲಿಸಲು ಕಾತುರತೆಯಿಂದಿರುತ್ತಾರೆ ಎಂಬುದು ಕೂಡ ನಮಗೆ ಗೊತ್ತಿದೆ.

    ಅದಕ್ಕಾಗಿ ನೀವು ಅವರನ್ನು ನಿಮ್ಮ ದುರ್ಗದಿಂದ ಗಡೀಪಾರು ಮಾಡಿ ನಮ್ಮ ಬೊಗಳೆ ರಗಳೆ ಬ್ಯುರೋದತ್ತ ತಳ್ಳಿ ಬಿಡುತ್ತಿದ್ದೀರಾ?

    ನಿಮ್ಮ ಸಕ್ಕರೆ ಡಬ್ಬೇಶ್ವರರಿಗೆ ನೀರು ಕುಡಿಸುತ್ತೇವೆ... ಇದರಿಂದ ಅವರ ಮನಸ್ಸು ಕರಗಬಹುದೇನೋ...

    ಪ್ರತ್ಯುತ್ತರಅಳಿಸಿ
  16. ಬೊಗಳಾನ್ವೇಶಿ ಗಳೇ,
    ನೀವು ಭಾರೀ ಭಯಸ್ಥರು! ಸಕ್ಕರೇ ಡಬ್ಬೇಶ್ವರರು ನಮ್ಮ ಸಂಸ್ಥಾನದಲ್ಲಿ ನೀವು ಯೋಚಿಸುತ್ತಿರುವಷ್ಟು ದೊಡ್ಡ ಸ್ಕ್ಯಾಮ್
    ಏನೂ ಮಾಡಿಕೊಂಡಿಲ್ಲಾ ಪಾಪ!ಸಲ್ಪ ತೂಕ-ಅಳತೆಯ
    ಸ್ಕ್ಯಾಮ್ ಮಾಡಿಕೊಂಡು ಬಿಟ್ಟಿದ್ದರು ಅಷ್ಟೇ...
    ಇನ್ನೆಲ್ಲಾ ವಿಶ್ಯ ದಲ್ಲಿ ಅವರಿಗೆ ನಮ್ಮ ಪ್ರಜೆಗಳಿಂದ`ಕ್ಲೀನ್ ಚಿಟ್' ಸಿಕ್ಕಿದೆ ಸೋ ಡೋಂಟ್ ವರೀ....
    ಅವರನ್ನು ಹಾಲಲ್ಲಾದರೂ ಹಾಕಿ ನೀರಲ್ಲಾದರೂ ಹಾಕಿ ಕಾಫೀಲಾದರೂ ಹಾಕಿ ರಾಘವೇಂದ್ರಾ....
    ಈಗ ಅವರು ನಿಮ್ಮ ರಾಜ್ಯ ಪಾಲರು!

    ಪ್ರತ್ಯುತ್ತರಅಳಿಸಿ
  17. ಆಯಿತು ಮಾಲಾ ರಾವ್ ಅವರೆ,
    ಸಕ್ಕರೆ ಡಬ್ಬೇಶ್ವರರನ್ನು ನಾವು ರಾಜ್ಯ-ಹಾಲರು ಆಗಿ ಹಾಲಿನಲ್ಲಿ ಹಾಕಿ ಸ್ವೀಕರಿಸುತ್ತೇವೆ. ಆದರೆ ಹಾಲಾಹಲ ಆಗದಿದ್ದರೆ ಸಾಕು!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D